ನಿನ್ನ ನೆನಪೊಂದೇ ಶಾಶ್ವತ !

ನಿನ್ನ ನೆನಪೊಂದೇ ಶಾಶ್ವತ !

ನಿನ್ನೆಗಳ ಸವಿ ನೆನಪಿನೊಂದಿಗೆ
ನಾಳೆಯ ನಿರೀಕ್ಷೆಗಳೆಲ್ಲ
ಮೌನದಾಳಕ್ಕೆ ಜಾರತೊಡಗಿದಾಗ...
ಬರಡೆನಿಸುವ ಬದುಕಲ್ಲಿ
ಬರಿಯ ಕಂಬನಿ ಧಾರೆ!
ಸುತ್ತ ನಿರ್ಮಲತೆ ಹರಡಿದ್ದರೂ
ಮತ್ತೆ ಕುರೂಪತೆ ಕಾಡಿ,
ಮರುಕಳಿಸುವ ನೋವಿಗೆ
ಒಂದಾಗಿ ನಾಂದಿ ಹಾಡಿ,
ಕೃಶವಾಗಿಸುವುದು  ಕನಸ!

ತೂರಿ ಬಂದ ತಂಗಾಳಿಯಲ್ಲಿ
ಅಳಿದೋಗುತ್ತೆ ನಗುವ ರಂಗವಲ್ಲಿ
ದಿಗಂತದಾಚೆಯೆಲ್ಲೋ...
ಮೌನವಾಗುತ್ತೆ   ಉಸಿರ ಚಿಲಿಪಿಲಿ ..
ಒಮ್ಮೊಮ್ಮೆ ಅರೆತೆರೆದ ನೋಟಕ್ಕೆ
ನಿಲುಕೋದು ಬರೀ ಶೂನ್ಯ
ಮತ್ತೊಮ್ಮೆ ಅನಿಸಿಬಿಡುವುದು
ಕಾಡುವ ಆ ನೆನಪುಗಳಷ್ಟೇ ಅನನ್ಯ!
ನನ್ನೊಳಗೆ ಇತ್ತು ನಿನ್ನೆ ತನಕ
ತುಂಬಿಸಿಕೊಂಡ ಭಾವುಕತೆಯಲ್ಲವೂ
ಅಳಿಸಲಾಗಿರಲಿಲ್ಲ ನನ್ನ  
ಕಣ್ಣಂಚಿನ ಯಾವ ಬಿಂದುವಿಗೂ ..
ಎಲ್ಲ ಮರೆತಂತೆ ಭಾಸವಾಗಿ
ಮತ್ತೆ ನೆನಪಾಗಿಸುತ್ತಾ
ಸಾರಿ ಸಾರಿ ಹೇಳುವುದು
ನಿನ್ನ  ನೆನಪೊಂದೇ ಶಾಶ್ವತ !
 

Rating
No votes yet

Comments