ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಾಸನ, ಸಕಲೇಶಪುರದಲ್ಲಿ ‘ನವಿಲಾದವರು’ ಚಿತ್ರಪ್ರದರ್ಶನ - ಸಂವಾದ

ಮೂವತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸಣ್ಣ ಹವ್ಯಾಸಿ ತಂಡವೊಂದನ್ನು ಬಳಸಿಕೊಂಡು  ಸೃಷ್ಟಿಸಿದ  1 ಗಂಟೆ 15 ನಿಮಿಷದ ಅವಧಿಯ ದೃಶ್ಯಾಭಿವ್ಯಕ್ತಿ "ನವಿಲಾದವರು" ಚಿತ್ರ ಪ್ರದರ್ಶನವನ್ನು ಸಂವಾದ ಡಾಟ್ ಕಾಂ ಮತ್ತು ರೋಟರಿ ಜೊತೆಯಾಗಿ ಶ್ರೀ ಸಾಯಿ ಮೂವಿಲ್ಯಾಂಡ್ ಥಿಯೇಟರ್‌ನಲ್ಲಿ ಏರ್ಪಡಿಸಿವೆ.

 

ಹಾಸನದಲ್ಲಿ ‘ನವಿಲಾದವರು’

ವಿವರಗಳು ಕೆಳಕಂಡಂತಿವೆ:

ಗೌಡಪ್ಪನ ದುಬೈ ಟೂರ್...

ಮೊದಲ ಬಾರಿಗೆ ಕೋಮಲ್ ಅವರ ಕೂಸಾದ ಗೌಡಪ್ಪನ ಬಗ್ಗೆ ಬರೀತಾ ಇದ್ದೀನಿ..ಕೋಮಲ್ ಹಾಗೂ ಮಂಜಣ್ಣನ ಅಷ್ಟು ಹಾಸ್ಯ ಪ್ರಜ್ಞೆ ನನಗಿಲ್ಲ...ತಕ್ಕಮಟ್ಟಿಗೆ ಬರೆದು ಖೊಕ್


ಕೊಡುತ್ತಿದ್ದೇನೆ...ಮುಂದುವರೆಸುವ ಇಷ್ಟ ಇದ್ದರೆ ಯಾರಾದರೂ ಮುಂದುವರಿಸಬಹುದು...ಹಾಗೆ ಸಂಪದಿಗರ ಹೆಸರುಗಳನ್ನೂ ಬಳಸಿದ್ದೇನೆ..ಯಾರಿಗಾದರೂ ತಪ್ಪು


ಎನಿಸಿದಲ್ಲಿ ತೆಗೆದುಬಿದುತ್ತೇನೆ. ದಯವಿಟ್ಟು ತಿಳಿಸಿ


 


ಏ ಸುಬ್ಬ, ಸೀನ, ಸೀತು, ಕೋಮಲ್,ಕಿಸ್ನ ಇಸ್ಮಾಯಿಲ್ಲು ಎಲ್ರು ಸಾಯಂಕಾಲ ನಿಂಗನ್ ಚಾ ಅಂಗಡಿ ತಾವ ಬರ್ರಲಾ ಅಂದ ಗೌಡಪ್ಪ... ಯಾಕ್ರಿ ಅಂತ ಸುಬ್ಬ ಕೇಳಿದ್ದಕ್ಕೆ


ಏ ಥೂ ಬರ್ರಲಾ ನಿಮ್ ತಾವ ಒಂದು ವಿಸ್ಯ ಮಾತಾಡ್ಬೇಕು ಅಂದ. ಸರಿ ಸಂಜೆ ಎಲ್ರು ಸಂಜೆ ನಿಂಗನ್ ಅಂಗಡಿ ತಾವ ಸೇರಿದ್ರು..ಏ ನಿಂಗ ಟು ಬೈ ಸಿಕ್ಸ್ ಚಾ ಹಾಕಲ


ಅಂದ ಗೌಡಪ್ಪ...ನಿಮ್ ಮಕ್ಕೆ ಚಾ ಚಲ್ಟ ಹುಯ್ಯ ಅನ್ಕೊಂಡು ನಿಂಗ ಎಲ್ರಿಗೂ ಆ ಕಲಗಚ್ಚು ಕೊಟ್ಟ..ಗೌಡ್ರೆ ಈಗ ಹೇಳ್ರಿ ಅದೇನ್ ವಿಸ್ಯ ಅಂತ..


 

ಮತ್ತೆ ’ಆಸು’; ಈ ಸಲ ’ಸಿಲ್‌ಸಿಲಾ’


  ಮಿತ್ರ ಆಸು ಹೆಗ್ಡೆ ಮತ್ತೆ ನಮಗೊಂದು ಭಾವಪೂರ್ಣ ಭಾವಾನುವಾದ ನೀಡಿದ್ದಾರೆ. ’ಕಭೀ ಕಭೀ’ ನಂತರ ಇದೀಗ ’ಸಿಲ್‌ಸಿಲಾ’ ಹಿಂದಿ ಚಿತ್ರದ ಚಂಪೂರೂಪದ ಗೀತೆಯೊಂದನ್ನು ಕನ್ನಡಕ್ಕೆ ಭಾವಾನುವಾದ ಮಾಡಿ ಇದೇ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ನೋಡಿ:

http://sampada.net/blog/asuhegde/20/10/2010/28592

’ವಿರಾಟ’ನೇ ಏಕಾಗಬೇಕು?


  ವಿಶಾಖಪಟ್ಟಣದಲ್ಲಿ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಭಾರತದ ಗೆಲುವಿನ ಮುಖ್ಯ ರೂವಾರಿ ವಿರಾಟ್ ಕೊಹ್ಲಿ. ನಿರೀಕ್ಷೆಯಂತೆ ಕನ್ನಡದ ಆರೂ ಪ್ರಮುಖ ದಿನಪತ್ರಿಕೆಗಳೂ ಈ ಸುದ್ದಿಯ ಶೀರ್ಷಿಕೆ/ಉಪಶೀರ್ಷಿಕೆ/ಫೋಟೋ ಶೀರ್ಷಿಕೆಯಲ್ಲಿ ’ವಿರಾಟ್/ವಿರಾಟ’ ಪದವನ್ನು ಯಥಾರ್ಥದಲ್ಲಿ ಬಳಸಿದವು. ಈ ಬಳಕೆ ಅರ್ಥಪೂರ್ಣವೇನೋ ಹೌದು, ಆದರೆ, ಹೊಸತನ ಬಯಸಿದ್ದ ನನಗೆ ಎಲ್ಲ ಪತ್ರಿಕೆಗಳಲ್ಲೂ ಅದೇ ಶಬ್ದದ ಬಳಕೆ ಕಂಡು ಪಿಚ್ಚೆನ್ನಿಸಿತು (ಕ್ರಿಕೆಟ್ ಪಿಚ್ ಅಲ್ಲ).
  ಆ ಶಬ್ದವನ್ನು ಟಚ್ಚೇ ಮಾಡದೆ, ’ಅನ್ವರ್ಥನಾಮ; ಆಸೀಸ್‌ಗೆ ನಾಮ’, ’ಕೊಹಿಲಿ ಕಹಳೆ’ ಇಂತಹ ಯಾವುದಾದರೂ ಹೊಸಬಗೆಯ ಶೀರ್ಷಿಕೆ ಕೊಟ್ಟು, ಸುದ್ದಿ ವಿವರದಲ್ಲಿ ಪತ್ರಿಕೆಗಳು ವಿರಾಟನ ವಿರಾಡ್ರೂಪದ ದರ್ಶನ ಮಾಡಿಸಬಹುದಿತ್ತು.

ಕಮಲ ’ಸಂಭವ’

ಸಮುದ್ರ ಭೊಗ೯ರೆಯುತ್ತಿತ್ತು, ಆಕಾಶ ಕಪ್ಪಾದ ಮೋಡದಿಂದ ಕೂಡಿತ್ತು. ಪ್ರಾಣಿ ಪಕ್ಷಿ ಸಂಕುಲ
ಹೆದರಿ ತಮ್ಮ ಸ್ಥಾನದಲ್ಲಿತ್ತು.ಸಮುದ್ರ ಮಧ್ಯದಲ್ಲಿ ಸುಂದರ ದ್ವೀಪ ’ಗರುಡಧ್ವಜ’ ಕಮಲಾಕ್ಷಸರರಿಂದ
ಕೂಡಿತ್ತು. ಇತ್ತ ಗರುಡಧ್ವಜವನ್ನು ಆಕ್ರಮಣ ಮಾಡುವ ಉದ್ದೇಶ ’ಹಸ್ತ’ನಾಪುರ ಮತ್ತು
’ಮದ’ನಾರಿ ರಾಜ್ಯಗಳು ಸಂಚುನಡೆಸುತ್ತಿತ್ತು. ತಮ್ಮ ತಮ್ಮ ರಾಜ್ಯದ ಮುಖ್ಯ ನಾಯಕರನ್ನು ಕೆಲವು
ಅಮಿಶ ಒಡ್ದಿ, ಕಮಲಾಕ್ಷಸರು ಅವರನ್ನು ಅಪಹರಣ ಮಾಡಿದ್ದರು. ಹಿಂದೆ ಕಡು ವೈರಿಗಳಾಗಿದ್ದ ಹಸ್ತನಾಪುರ
ಮದನಾರಿ ಈಗ ಒಂದಾಗಿದ್ದರು, ಅವರ ಉದ್ದೇಶ್ಯ ಕಮಲಾಕ್ಷಸರ ಸವ೯ನಾಶ.

ಸಾವಿರಾರು ಯೋಜನೆಗಳ ವಿಸ್ತೀರಣ೯ ಉಳ್ಳ ಶರಧಿಯನ್ನು ಧಿಕ್ಕರಿಸಿ ಹಾರ ಬಲ್ಲ ಶೂರನಿಗಾಗಿ ಹುಡುಕಾಟ

ಭಗ್ನ

ಮುರಿದ ಮಂಟಪ
ಕಮರಿದ ಕನಸು
ಹೊಸತನ್ನು ಕಟ್ಟುತ್ತೇನೆಂದು
ತನ್ನೊಡಲನು ಭಗ್ನಗೊಳಿಸಿ
ಹೊಸತು ಮತ್ತು
ಹಳೆಯದರ ಮಧ್ಯೆ
ಕಳೆದು ಹೋದ ತ್ರಿಶಂಕು
ಮನದ ಅಪರಿಮಿತ ನೋವಿಗೆ
ಕವನವೊಂದೇ ಸಾಟಿ ಎಂದು
ಪಾಳು ದೇಗುಲದ ನಡುವೆ
ಮನೆ ಮಾಡಿ
ಜೀರ್ಣೋದ್ಧಾರದ
ಕನಸು ಕಾಣುತ್ತಾ  
ಕವಿತೆಯೆಂಬ ಭ್ರಮೆಯಲ್ಲಿ
ಕಳೆದು ಹೋಗುತ್ತಾ
ಭಗ್ನತೆಯ ಅರಿವಾಗುತ್ತಿದ್ದರೂ
ಪುನಃ ಒಂದು ಕವಿತೆ ಬರೆದು
ನಗುತ್ತಿರುವ ಕವಿ!