ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬರಲಿ ರಾಮದೇವರ ಪಕ್ಷ ಆದರೆ....

        ರಾಜಕೀಯ ಪಕ್ಷವೊಂದನ್ನು ಕಟ್ಟುವುದಾಗಿ ಬಾಬಾ ರಾಮದೇವ್ ಮತ್ತೊಮ್ಮೆ ಹೇಳಿದ್ದಾರೆ.


        ಅಂತಹ ನಂಬಿಕೆಗೆ ಅರ್ಹವಾದ ಹೊಸ ಭರವಸೆಯ ಪಕ್ಷವೊಂದು ಬರುವುದಾದರೆ, ಪ್ರಸಕ್ತ ಹೇಯ ರಾಜಕೀಯದಿಂದ ಬೇಸತ್ತಿರುವ ಜನತೆ ಅದನ್ನು ತುಂಬು ಹೃದಯದಿಂದ ಸ್ವಾಗತಿಸೀತು!


ದೇಶದ ಉದ್ದ, ಅಗಲ, ಆಳದ ಪೂರ್ತಿ ಹಬ್ಬಿ ಹರಡಿರುವ ಭ್ರಷ್ಟಾಚಾರದ ಬಗ್ಗೆ ಯೋಗ ವೈದ್ಯರು ಚೇತೋಹಾರಕವಾದ ಸಿಡಿ-ಮಿಡಿ ಹಾರಿಸಿದ್ದಾರೆ. ಒಳ್ಳೆಯದು ಜತೆಗೆ, ಭ್ರಷ್ಟಾಚಾರದ “ಮೂಲವ್ಯಾಧಿ” ಮತ್ತು “ವ್ಯಾಧಿಯ ಮೂಲ”ದ ಪರಿಚಯವೂ ಅವರಿಗಿದೆ ಎಂದು ಭಾವಿಸೋಣ!

ನೀವ್ ಏನ್ ಹೇಳ್ತೀರ ?

ರಾಮಾಯಣದ ನಾಯಕ ಶ್ರೀರಾಮನಿಲ್ಲಿ ಅನಾಥ



'ನಾಯಿ'ಕರು ಕೇಳ್ತಾರೆ ರಾಮನವಮಿಗೇಕೆ ರಜಾ?



ರಾಮಯಣ ಬರೆದ ರಾಮಭಕ್ತ ವಾಲ್ಮೀಕಿಗಿಲ್ಲಿ ಜಾಥ


ಅವರೇ ಹೇಳ್ತಾರೆ ಈ ದಿನ 'ಸರ್ಕಾರಿ ರಜಾ'




 



ನಲವತ್ತು ಸಾವಿರ ಕೋಟಿಗೆ ಎಷ್ಟು ಸೊನ್ನೆ...

ನಾನು ದಿನಪತ್ರಿಕೆಯಲ್ಲಿ ಕೇವಲ ಓದುವುದು ಸಿನೆಮಾ ಹಾಗು ಆಟೋಟ ಹಾಗೂ ಕೆಲವೊಮ್ಮೆ ವಿಶೇಷ ಅಂಕಣಗಳು ಅಷ್ಟೇ...ಈ ದಿನ ಬೆಳಿಗ್ಗೆ ಉದಯವಾಣಿ (ಶುಕ್ರವಾರ ಮಾತ್ರ, ಪ್ರತಿದಿನ ವಿ.ಕ) ಓದುತ್ತಿದ್ದಾಗ ಹಾಗೆ ಮಡಚುತ್ತಿದ್ದಾಗ ಮುಖಪುಟದಲ್ಲಿ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭ್ರಷ್ಟಾಚಾರ ಎಂಬ ಸುದ್ದಿ ಕಣ್ಣಿಗೆ ಬಿತ್ತು. ಕುತೂಹಲದಿಂದ ಅದೇನು ಎಂದು ಓದಿ ಕ್ಷಣ ಕಾಲ ಬೆಚ್ಚಿ ಬಿದ್ದೆ..ಇಡೀ ಕಾಮನ್ವೆಲ್ತ್ ಗೇಮ್ಸ್ ಗೆ ತಗುಲಿರುವ ವೆಚ್ಚ ೭೭ ಸಾವಿರ ಕೋಟಿ ಎಂದು ಆಯೋಜಕರು ಹೇಳಿದ್ದಾರೆ...ಅದರ ಬಗ್ಗೆ ತನಿಖೆ ನಡೆಸಿದ ನಂತರ ಕೇಂದ್ರ ಸರ್ಕಾರ ಕೇವಲ ೩೪ ಸಾವಿರ ಕೋಟಿ ಖರ್ಚಾಗಿದೆ ಎಂದು ಒಪ್ಪಿಕೊಂಡಿದೆ...ಹಾಗಿದ್ದಲ್ಲಿ ಉಳಿದ ೪೦ ಸಾವಿರ ಕೋಟಿ ಏನಾಯಿತು???

ನಾಳೆಯ ಬೆಳಗು...

ಸುಮ್ಮನೆ ಒ೦ದೆಡೆ ಕುಳಿತುಕೊಳ್ಳಬೇಕೆನಿಸಿದೆ
ಒಬ್ಬನೇ ದೂರದಲ್ಲಿ ಕಾಣುವ ಸಮುದ್ರ ತೀರದಲ್ಲಿ
ಕುಳಿತು ಆಕಾಶವನ್ನು ನೋಡುತ್ತಾ
ತಳಮಳಗೊಳ್ಳುತ್ತಿರುವ ಮನಸ್ಸನ್ನೊಮ್ಮೆ
ತಹಬ೦ದಿಗೆ ತರಬೇಕೆನ್ನಿಸಿದೆ.


ಮ೦ಚದ ಮೇಲೆ ಕುಳಿತೇ ಬಗ್ಗಿ,
ಕಿಟಕಿಯಿ೦ದಾಚೆ ಕಾಣುವ ನೀಲಾಕಾಶವ
ನೋಡುತಲೇ ಇರಬೇಕೆನ್ನಿಸಿದೆ ಮನಸ್ಸನ್ನೊಮ್ಮೆ
ಹಕ್ಕಿಯ೦ತೆ ಹಾರಿಬಿಡಬೇಕೆನ್ನಿಸಿದೆ,


ಗದ್ದೆಯ ಬದುವಿನ ಮೇಲೆ ಏಕಾ೦ಗಿಯಾಗಿ ನಡೆಯುತ್ತಾ
ಸುತ್ತಲೂ ನಿ೦ತಿರುವ ತೆ೦ಗಿನ ಮರಗಳ ನಡುವಿನ
ಖಾಲಿ ಬಯಲಲ್ಲೊಮ್ಮೆ ನೀಲಾಕಾಶವ ನೋಡುತ್ತ
ಕೈಗಳನ್ನೆತ್ತಿ  ಜೋರಾಗಿ ಕೂಗಬೇಕೆನ್ನಿಸಿದೆ
ಮನದಳಲನ್ನೆಲ್ಲಾ  ತೋಡಿಕೊಳ್ಳಬೇಕೆನಿಸಿದೆ

ಸುದ್ದಿ ಚುಟುಕಗಳು - ನಾಲ್ಕು

ಕುಮಾರ ಗೌಡ ಪತ್ರಿಕಾಗೋಷ್ಟಿಯಲ್ಲಿ ಸಿಡಿಯನ್ನು ಬಿಡುಗಡೆಮಾಡಿ
ಭಾಜಪದ ಮೇಲೆ ಹಣದಾಮಿಷದ ಆರೋಪ ಹೊರಿಸಿಬಿಟ್ಟಿದ್ದಾರಂತೆ,

ಕರಾವಳಿಯ ಆ ಎರಡನೇ ಮನೆಯ ಹೆಣ್ಣು, ನಂದೂ ಕೆಲವು ಸಿಡಿಗಳು
ಬಿದ್ದಿದಾವೆ, ಬಿಡುಗಡೆ ಮಾಡ್ರೀ, ಅಂತ ದುಂಬಾಲು ಬಿದ್ದಿದ್ದಾಳಂತೆ!

****

ಕುಮಾರ ಗೌಡನದ್ದು, ನಕಲಿ ಸಿಡಿ ನಕಲಿ ಸಿಡಿ ಅಂತ, ಅಶೋಕ, ರವಿ,
ಸುರೇಶ ಗೌಡ ಮತ್ತು ಈಶ್ವರಪ್ಪ ಸೇರಿ, ಬಾಯಿ ಬಡ್ಕೊಳ್ತಾ ಇದಾರೆ,

ನಕಲಿ ಸಿಡಿ ಕಾನೂನಿನನ್ವಯ "ರೈಡ್" ಮಾಡಬಹುದೇನೋ ನೋಡ್ರೀ
ಅಂತ ಸುರೇಶ್ ಕುಮಾರ್, ಶಂಕರ್ ಬಿದರಿ ಜೊತೆ ಚರ್ಚಿಸುತ್ತಿದ್ದಾರೆ!

****

ಬೋಪಯ್ಯ ಮತ್ತು ಯಡಿಯೂರಪ್ಪನವರಿಗೆ ಮರ್ಯಾದೆ ಅನ್ನೋದೇ
ಇಲ್ಲ ಅಂತ ಗಂಭೀರ ಆರೋಪ ಮಾಡಿದ್ದಾರಂತೆ ಕುಮಾರ ಗೌಡಪ್ಪ,

ಸಂಪದದ ಮಿತ್ರರಿಗೆ ಸನ್ಮಾನ

ನೋಡ್ರಲಾ ನಮ್ಮ ಹಳ್ಳಿ ಬರೀ ಚಂಗೂಲಿ ಬುದ್ದಿಗೆ ಪೇಮಸ್ ಆಗೈತೆ. ನಾವು ಒಂದಿಷ್ಟು ಒಳ್ಳೆ ಕೆಲಸ ಮಾಡಿ, ರಾಜ್ಯದಾಗೆ ವರ್ಲ್ಡ್ ಪೇಮಸ್ ಆಗಬೇಕು. ಯಾರಾದರೂ ಉತ್ತಮ ವ್ಯಕ್ತಿಗಳನ್ನ ಸನ್ಮಾನ ಮಾಡಬೇಕು. ಆದ ನಮ್ಮನ್ನ ಜನಾ ಗುರುತಿಸುತ್ತಾರೆ ಅಂದ. ಸರಿ ಪಟ್ಟಿ ನೀವೆ ರೆಡಿ ಮಾಡಿ ಅಂದ ಸುಬ್ಬ, ನೋಡಿದ್ರೆ ಎಲ್ಲಾ ಅವರ ಮನೆಯೋರದೆ ಹೆಸರು ಐತೆ. ಇದೇನ್ರೀ ಗೌಡ್ರೆ. ಇವರೆಲ್ಲಾ ಸ್ವಾತಂತ್ರ್ಯಕ್ಕೆ ಸಾನೇ ದುಡಿದಾವ್ರೆ ಕಲಾ ಅಂದ. ನಿಮ್ಮ ಹೆಂಡರು, ನಿಮ್ಮ ಮಗ ಯಾವುದಕ್ಕೆ ದುಡಿದಿದಾರೆ ಅಂದ ಸುಬ್ಬ. ಲೇ ನಮ್ಮ ಪಕ್ಕದ ಮನೆ ಬಾಡಿಗೆಯೋರನ್ನ ಬಿಡಿಸೋಕ್ಕೆ ಸಾನೇ ಕಷ್ಟಪಟ್ಟಿದಾರಲ್ಲಾ ಅಂದ. ಏ ಥೂ. ಸಮಾಜಕ್ಕೆ ದುಡಿದೋರ ಹೆಸರು ಹೇಳ್ರಿ. ಅಂದ್ರೆ ಮುನ್ಸಿಪಾಲಿಟಿ ರಾಮ ಕಲಾ ಅಂತಾನೆ ದರ್ಬೇಸಿ. ಕಡೆಗೆ ಸಾನು ಸುಬ್ಬ ಪಟ್ಟಿ ರೆಡಿ ಮಾಡಿದ್ವಿ.

ಕಚ್ಚಾಟ ಒಳ್ಳೆಯದು


  ನಮ್ಮ ನಾಯಕರು ನಾಯಿಗಳಹಾಗೆ ಕಚ್ಚಾಡುತ್ತಿರುವುದರಿಂದ ನಾಡಿನ ಪ್ರಜೆಗಳಿಗೆ ಒಳ್ಳೆಯದೇ ಆಗಿದೆ. ’ಕ್ಷಣಕ್ಷಣದ ಸುದ್ದಿಗಾಗಿ ನೋಡ್ತಾ ಇರ್ತೀವಿ ಟಿವಿ ನ್ಯೂಸ್’ ಅಂತ ಅಹರ್ನಿಶಿ ವಾರ್ತಾಲಾಪ ನೋಡುವುದರಲ್ಲೇ ಪ್ರಜೆಗಳು ತಲ್ಲೀನರಾಗಿದ್ದಾರೆ. ಸೆಕೆಂಡಿಗೆರಡರಂತೆ ಕಾಣಿಸಿಕೊಳ್ಳುವ ಬ್ರೇಕಿಂಗ್ ನ್ಯೂಸ್‌ಗಳಂತೂ ಪ್ರಜೆಗಳನ್ನು ರೋಮಾಂಚನಗೊಳಿಸುತ್ತಿವೆ. ಒಟ್ಟಾರೆಯಾಗಿ, ಕಾಸು ಖರ್ಚಿಲ್ಲದೆ ಮನೆಯಲ್ಲಿಯೇ ಪ್ರಜೆಗಳಿಗೆ ಭರ್ಜರಿ ಮನೋರಂಜನೆ ದೊರಕುತ್ತಿದೆ.