ಸುದ್ದಿ ಚುಟುಕಗಳು - ನಾಲ್ಕು
ಕುಮಾರ ಗೌಡ ಪತ್ರಿಕಾಗೋಷ್ಟಿಯಲ್ಲಿ ಸಿಡಿಯನ್ನು ಬಿಡುಗಡೆಮಾಡಿ
ಭಾಜಪದ ಮೇಲೆ ಹಣದಾಮಿಷದ ಆರೋಪ ಹೊರಿಸಿಬಿಟ್ಟಿದ್ದಾರಂತೆ,
ಕರಾವಳಿಯ ಆ ಎರಡನೇ ಮನೆಯ ಹೆಣ್ಣು, ನಂದೂ ಕೆಲವು ಸಿಡಿಗಳು
ಬಿದ್ದಿದಾವೆ, ಬಿಡುಗಡೆ ಮಾಡ್ರೀ, ಅಂತ ದುಂಬಾಲು ಬಿದ್ದಿದ್ದಾಳಂತೆ!
****
ಕುಮಾರ ಗೌಡನದ್ದು, ನಕಲಿ ಸಿಡಿ ನಕಲಿ ಸಿಡಿ ಅಂತ, ಅಶೋಕ, ರವಿ,
ಸುರೇಶ ಗೌಡ ಮತ್ತು ಈಶ್ವರಪ್ಪ ಸೇರಿ, ಬಾಯಿ ಬಡ್ಕೊಳ್ತಾ ಇದಾರೆ,
ನಕಲಿ ಸಿಡಿ ಕಾನೂನಿನನ್ವಯ "ರೈಡ್" ಮಾಡಬಹುದೇನೋ ನೋಡ್ರೀ
ಅಂತ ಸುರೇಶ್ ಕುಮಾರ್, ಶಂಕರ್ ಬಿದರಿ ಜೊತೆ ಚರ್ಚಿಸುತ್ತಿದ್ದಾರೆ!
****
ಬೋಪಯ್ಯ ಮತ್ತು ಯಡಿಯೂರಪ್ಪನವರಿಗೆ ಮರ್ಯಾದೆ ಅನ್ನೋದೇ
ಇಲ್ಲ ಅಂತ ಗಂಭೀರ ಆರೋಪ ಮಾಡಿದ್ದಾರಂತೆ ಕುಮಾರ ಗೌಡಪ್ಪ,
ಮೊದಲನೆಯ ಮನೆಯೊಡತಿ, ಅದ್ಯಾಕೋ ಎರಡನೇ ಮನೆಯೊಡತಿಯ
ನೆನೆಸಿಕೊಳ್ಳುತ್ತಾ ಕೇಳುತ್ತಾ ಇದ್ದಳಂತೆ "ಮರ್ಯಾದೆ ಅಂದ್ರೆ ಏನಪ್ಪಾ?"
****
ಇನ್ನು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡದಿದ್ರೆ ತಮಗೆ ಉಳಿಗಾಲ
ಇಲ್ಲ ಅಂತ ಕೈ ಕಮಾಂಡಿನವರು ಮರುಚಿಂತನೆ ನಡೆಸುತ್ತಿದ್ದಾರೆ ಅಲ್ಲಿ,
ಎರಡನೇ ಬಾರಿ ಬಹುಮತ ಸಾಬೀತು ಪಡಿಸಲು ಹೇಳಿದ್ದು ನೀವೇ ಅಲ್ವೇ
ಅಂತ ಭಾಜಪ ನಾಯಕರುಗಳು ಒಳಗೊಳಗೇ ನಗುತ್ತಿದ್ದಾರಂತೆ ಇಲ್ಲಿ!
****
ಬಿಸಿಸಿಐ-ಮೋದಿ ಸಂಧಾನ ಮಾಡಿಕೊಳ್ಳಲು ನ್ಯಾಯಾಲಯ ಇನ್ನೂ
ಕಾಲಾವಕಾಶ ನೀಡಿ ಹೊಸ ಸೂಚನೆ ಹೊರಡಿಸಿದೆ ಅಂತ ಸುದ್ದಿ ಇದೆ,
ದಾಲ್ಮಿಯಾ ಜೊತೆ ಸಂಧಾನ ಮಾಡಿಕೊಂಡವರಿಗೆ ಮೋದಿ ಜೊತೆಗೆ
ಯಾಕಾಗೋದಿಲ್ಲ ಅನ್ನುವ ತರ್ಕವೂ ಹೊಸ ಸೂಚನೆಯಲ್ಲಿ ಅಡಗಿದೆ!
****
ಕಾಂಗ್ರೇಸ್ ಶಾಸಕರಿಂದ ತಾಯಿ ದ್ರೋಹ ಆಗಿದೆಯೆಂದು
ಕಾಂಗ್ರೇಸು ಅಧ್ಯಕ್ಷ ದೇಶಪಾಂಡೆ ಬಾಯ್ಬಿಟ್ಟು ಅಳುತ್ತಿದ್ದರು
ನಕಲಿ ವಿದೇಶೀ ಗಾಂಧಿಯ ಮನೆಯಲ್ಲಿ ಕಾಂಗ್ರೇಸನ್ನು ಅಡವಿಟ್ಟು
ತಾಯ್ನಾಡಿಗೇ ದ್ರೋಹ ಮಾಡಿರುವುದನ್ನು ಅವರೇ ಮರೆತಿಹರು
***
ಆತ್ರಾಡಿ ಸುರೇಶ ಹೆಗ್ಡೆ
Comments
ಉ: ಸುದ್ದಿ ಚುಟುಕಗಳು - ನಾಲ್ಕು
In reply to ಉ: ಸುದ್ದಿ ಚುಟುಕಗಳು - ನಾಲ್ಕು by vinayak.mdesai
ಉ: ಸುದ್ದಿ ಚುಟುಕಗಳು - ನಾಲ್ಕು
ಉ: ಸುದ್ದಿ ಚುಟುಕಗಳು - ನಾಲ್ಕು
ಉ: ಸುದ್ದಿ ಚುಟುಕಗಳು - ನಾಲ್ಕು
ಉ: ಸುದ್ದಿ ಚುಟುಕಗಳು - ನಾಲ್ಕು
ಉ: ಸುದ್ದಿ ಚುಟುಕಗಳು - ನಾಲ್ಕು