ನಾವು ಅದೆಲ್ಲಿಗೆ ಬಂದು ತಲುಪಿದ್ದೇವೆ ಇಂದು ...?!
೧೯೮೦ರ ದಶಕದ ಆದಿಯಲ್ಲಿ ಅಮಿತಾಭ್ ಬಚ್ಚನ್ ಮತ್ತು ರೇಖಾ ನಟಿಸಿರುವ ಸಿಲ್‍ಸಿಲಾ ಚಿತ್ರದ, ಬಹು ಪ್ರಸಿದ್ಧಿಗೊಂಡಿದ್ದ, ಸಂಭಾಷಣೆಗಳನ್ನೊಳಗೊಂಡ ಒಂದು ಹಾಡಿನ ಭಾವಾನುವಾದದ ಒಂದು ಪ್ರಯತ್ನ ಇಲ್ಲಿದೆ:
ನಾಯಕ:
ನನ್ನೀ ಏಕಾಂತ ಮತ್ತು ನಾನು ಸತತ ಸಂಭಾಷಣೆಯಲ್ಲಿ ನಿರತವಾಗಿರುತ್ತೇವೆ...
ನೀನು ಇದ್ದಿದ್ದರೆ ಹೇಗಿರುತ್ತಿತ್ತು, ನೀನು ಆ ಮಾತಾಡುತ್ತಿದ್ದೀ, ನೀನು ಈ ಮಾತಾಡುತ್ತಿದ್ದೀ...,
ನೀನೀ ಮಾತಿನಿಂದ ಎಷ್ಟು ನೊಂದಿರುತ್ತಿದ್ದೀ, ನೀನಾ ಮಾತಿನಿಂದ ಎಷ್ಟೊಂದು ನಕ್ಕಿರುತ್ತಿದ್ದೀ...,
ನೀನು ಇದ್ದಿದ್ದರೆ ಹೀಗಾಗುತ್ತಿತ್ತು, ನೀನು ಇದ್ದಿದ್ದರೆ ಹಾಗಾಗುತ್ತಿತ್ತು...,
ನನ್ನೀ ಏಕಾಂತ ಹಾಗೂ ನಾನು ಸತತ ಸಂಭಾಷಣೆಯಲ್ಲಿ ನಿರತವಾಗಿರುತ್ತೇವೆ...
- Read more about ನಾವು ಅದೆಲ್ಲಿಗೆ ಬಂದು ತಲುಪಿದ್ದೇವೆ ಇಂದು ...?!
- 16 comments
- Log in or register to post comments