ಕಾರಣ ಕೇಳಬೇಡ
ಉಲ್ಕೆಯ೦ತಿದ್ದ
ನನ್ನ ಪ್ರೀತಿ
ಈಗ
ಬೂದಿಯಾಗಿ
ಭೂಗತವಾಗಿದೆ
ಪ್ರಿಯೆ..
ಕಾರಣ ಕೇಳಬೇಡ
ನೀನು
ಅ೦ದುಕೊ೦ಡಷ್ಟು
ಮೂರ್ಖನಲ್ಲ ನಾನು!
ಜೊತೆಗೆ ಜಾಣನೂ ಅಲ್ಲ!!
- Read more about ಕಾರಣ ಕೇಳಬೇಡ
- 1 comment
- Log in or register to post comments
ಉಲ್ಕೆಯ೦ತಿದ್ದ
ನನ್ನ ಪ್ರೀತಿ
ಈಗ
ಬೂದಿಯಾಗಿ
ಭೂಗತವಾಗಿದೆ
ಪ್ರಿಯೆ..
ಕಾರಣ ಕೇಳಬೇಡ
ನೀನು
ಅ೦ದುಕೊ೦ಡಷ್ಟು
ಮೂರ್ಖನಲ್ಲ ನಾನು!
ಜೊತೆಗೆ ಜಾಣನೂ ಅಲ್ಲ!!
'ಲೇ ಈರಾs..
ನೋಡೊ ಆ ದೀಪದ ಕೆಳಗ ಕತ್ತಲಾs..'
'ವ್ಯವಸ್ಥಾ ಮಾಡೆನಿ ಗೌಡ್ರ,ಹಚ್ಚೆನಿ ಅದರಡಿಗೆ ಇನ್ನೊಂದ್ ದೀಪಾ..'
'ಮತ್ತದರಡಿಗೆ?'
'ಚಿಂತೀ ಬ್ಯಾಡ್ರಿ,ಒಂದರ ಅಡಿಗೆ ಒಂದು,
ಅದರ ಕೆಳಗ ಮತ್ತೊಂದು,ಮಗದೊಂದು...ಹಿಂಗs..
ನಿಮ್ಮಂಗಳದ ತುಂಬ ದೀಪದ ಸಾಲs..ಥೇಟ್ ಬೆಳದಿಂಗಳs..'
'ಹಂಗಾದ್ರ ಹೊಡಿ ಢಂಗೂರ ಊರಿಗೆ
ಲಕ್ಷದೀಪೋತ್ಸವ ಗೌಡರಿಂದ...'
'ಲೇ ಈರಾs..
ವಸೂಲಿ ಮಾಡಿದ್ಯೇನೋ ಎಲ್ಲಾರ ಸಾಲಾs..'
'ಇರೋಬಾರೋ ನೆಲಕ್ಕೆಲ್ಲ ನಿಮ್ಹೆಸರ ಬರ್ದನ್ರಿ..'
'ಮತ್ತೇನ ಬಳಕೊಂಡ್ಯೋ..'
'ಅದರ ಉಸಾಬರಿನ ಬಿಡ್ರಿ,ಬಡ್ಡಿಗೆ ರೊಕ್ಕಾ,
ಚಕ್ರಬಡ್ಡಿಗೆ ಮನಿ ಮಠಾ..ಬರೋಬ್ಬರಿ ಹಸನ ಹಿಂಗs..
ಅವ್ರ ಮಾಂಸಾ,ಎಲುವು ಯಾರೊ ಕೊಟ್ಟಿದ್ದಂತ,ದೇವ್ರ!
ತಿರುಪತಿ ಹುಂಡಿ ನಿಮ್ ಭಂಡಾರ..'
'ಹಂಗಾರ ಕೂಗಿ ಹೇಳ ಊರಿಗೆ
ತುಲಾಭಾರ ಗೌಡ್ರಿಗೆ..!'
ತಿಳಿ ನೀರಿನಲ್ಲಿ ಕಲ್ಲು ಜಾರಿ
ನೀರು ಕದಡಿದ ಹಾಗೆ
ಮಾತಾಡಿದೆ ಕಲ್ಲಿನ ಹಾಗೆ .
ತಿಳಿದೋ ತಿಳಿಯದೆ ಮಾಡಿದ
ತಪ್ಪಿಗೆ , ಕಣ್ಣಿರು ಇಟ್ಟು ಪರಿತಪಿಸಿದೆ
ಮೌನದಿಂದಲೇ ತಿಳಿಸಿತು ನಿನ್ನ ಹೃದಯದ
ಭಾವನೆಗಳು . ನನ್ನಲ್ಲಿ ಮೋಹವೋ ,
ಪ್ರೇಮವೋ , ಸ್ನೇಹವೋ ನಾ ಅರಿಯೆನು
ಬಿಡಸಿ ಹೇಳಲು ಬಾ ,
ನಿನಗಾಗಿ ಕಾಯುತ್ತಿರುವ ನಿನ್ನ ಗೆಳತಿ......
ಲಿನಕ್ಸ್ ಬಳಸೋದು ಸುಲಭ ಎಂದು ಬಹಳ ಸಾರಿ ಲಿನಕ್ಸಾಯಣದಲ್ಲಿ ಓದಿದ್ದೀರಿ. ಆದ್ರೂ ಅದನ್ನ ತಗೊಂಡು ಒಂದು ಟೆಸ್ಟ್ ಡ್ರೈವ್ ಮಾಡ್ಲಿಕ್ಕೆ ಕಷ್ಟ ಆಗ್ತಿರ್ಬೇಕಲ್ಲಾ? ಅದಕ್ಕೂ ನಾಲ್ಕು ಬೇರೆ ಹಾದಿಗಳಿವೆ ಗೊತ್ತೇ? ಲಿನಕ್ಸ್ ಇನ್ಸ್ಟಾಲ್ ಮಾಡದೇನೆ ಅದನ್ನು ಬಳಸಿ ನೋಡಬಹುದು. ಅದಕ್ಕೆ ಈ ಲೇಖನ. ಒಮ್ಮೆ ಓದಿ, ಲಿನಕ್ಸ್ ಬಳಸಿ ನೋಡಿ.
ಲೈವ್ ಸಿ.ಡಿ
ಸಾಮಾನ್ಯವಾಗಿ ಲಿನಕ್ಸ್ ಸಿ.ಡಿ ಕೈಗೆ ಸಿಕ್ಕ ತಕ್ಷಣ ಅದನ್ನು ಉಪಯೋಗಿಸಿ ನಿಮ್ಮ ಕಂಪ್ಯೂಟರ್ ಬೂಟ್ ಮಾಡಿ ಲಿನಕ್ಸ್ ನಲ್ಲಿ ಕೆಲಸ ಮಾಡಬಹುದು. ಹೌದು, ಇನ್ಸ್ಟಾಲ್ ಮಾಡದೆಯೇ ಲಿನಕ್ಸ್ ಡೆಸ್ಕ್ಟಾಪ್ ನಿಮ್ಮ ಪರದೆಯ ಮುಂದೆ ಬರುತ್ತದೆ. ಲಿನಕ್ಸ್ ನ ಎಲ್ಲ ಮುಖ್ಯ ಡಿಸ್ಟ್ರಿಬ್ಯೂಷನ್ಗಳು ಇಂದು ಲೈವ್ ಸಿ.ಡಿ ಆವೃತ್ತಿಯಲ್ಲಿ ಸಿಗುತ್ತವೆ.
ಅಯೋಧ್ಯಾ ರಾಮಜನ್ಮಭೂಮಿಯಲ್ಲಿ “ಒಂದಿಂಚೂ ಜಾಗ ಬಿಟ್ಟುಕೊಡುವುದಿಲ್ಲ” ಎಂದು ವಿಶ್ವ ಹಿಂದೂ ಪರಿಷತ್ ಒಳಗೊಂಡಂತೆ ಧರ್ಮಮುಖಂಡರ ಸಭೆ ’ಪಣ’ತೊಟ್ಟಿರುವುದಾಗಿ ಪ್ರಜಾವಾಣಿ (ಅ.21) ವರದಿ ಮಾಡಿದೆ. ಮುಸ್ಲಿಂ ಸಂಘಟನೆ, ವಿವಾದವನ್ನು ಸುಪ್ರೀಂ ಕೋರ್ಟಿಗೆ ಒಯ್ಯುವುದಾಗಿ ಈಗಾಗಲೇ ಪ್ರಕಟಿಸಿದೆ. ಅಲ್ಲಿಗೆ ಅಲಹಾಬಾದ್ ಹೈಕೋರ್ಟಿನ “ಕೃಷ್ಣ ಸಂಧಾನ” ಎಷ್ಟರಮಟ್ಟಿಗೆ ಊರ್ಜಿತವಾಯಿತೆನ್ನುವುದು ಗೊತ್ತಾಯಿತಲ್ಲಾ!
ಬೆಳಗ್ಗೆನೇ ಗೌಡಪ್ಪ ನಮ್ಮನೇಗೆ ಏದುಸಿರು ಬಿಡಕಂಡು ಬಂದ. ಏನ್ರೀ. ಲೇ ಪೂರ್ಣಿಮಾ ಎಂಟರ್ ಪ್ರೈಸಸ್ ನಿಂದ ಪೋನ್ ಬಂದಿತ್ತು ಕಲಾ ಅಂದ. ಯಾವುದು ಊದಬತ್ತಿ, ಕರಪೂರ ಕಂಪೆನಿನಾ ಅಂದೆ. ಅದಲ್ಲಲಾ. ರಾಜ್ಕುಮಾರ್ ಮನೆಯೋರದು ಕಲಾ. ನಮ್ಮೂರ್ನಾಗೆ ಸೂಟಿಂಗ್ ಮಾಡ್ತಾರಂತೆ. ಅದಕ್ಕೆ ಸ್ವಲ್ಪ ಉಪಕಾರ ಮಾಡಿ ಅಂತ ಹೇಳವ್ರೆ ಕಲಾ. ಪಿಚ್ಚರ್ ಯಾವದಂತೆ ಜಾಕಿ ಭಾಗ 2, ಪಾಕಿ ಅಂತ. ಅಂಗಾರೆ ಪುನೀತ್ ಗಡ್ಡ ಅಂಗೇ ಕುರ್ತಾ ಜುಬ್ಬಾ ಹಾಕಬೇಕು ಅಂದೆ. ಅಲ್ಲಲಾ. ಪಾಕಿ ಅಂದ್ರೆ ಪಾರುಗೆ ಕೀಟಲೆ ಅಂತ ಅರ್ಥ ಇರಬೇಕು ಕಲಾ ಅಂದ. ಸರಿ ನಾನೇನು ಮಾಡ್ಬೇಕು ಅದ್ಹೇಳಿ. ನೋಡಲಾ ನನ್ನ ಜೊತೆಗೆ ಇರು ಸಾಕು ಅಂದು ಅಂಗೇ ಕುಂತಿದ್ದ. ಲೇ ಬೈಟು ಚಾ ತಗೊಂಡು ಬಾರೇ ಇಲ್ಲಾ ಅಂದ್ರೆ ಇವನು ಎದ್ದು ಹೋಗಕ್ಕಿಲ್ಲಾ ಅಂದೆ.
ಎಂತಹ ಕಾನೂನುಗಳು ಬೇಕು ನಮಗೆ
’ಸಂಬಂಧ್’ ಹಿಂದಿ ಚಲನಚಿತ್ರಕ್ಕಾಗಿ ಕವಿ ಪ್ರದೀಪ್ ರಚಿಸಿ ಮುಖೇಶ್ ಹಾಡಿರುವ ’ಚಲ್ ಅಕೇಲಾ’ ಗೀತೆ ನನ್ನ ಮೆಚ್ಚಿನ ಗೀತೆ. ಈ ಗೀತೆಯ ಭಾವಾನುವಾದ ಇಲ್ಲಿದೆ. ಇದು ಯಥಾನುವಾದ ಅಲ್ಲ. ಮೂಲ ಗೀತೆಯ ಮುಖ್ಯ ಭಾವಕ್ಕೆ ಧಕ್ಕೆ ಬರದಂತೆ, ನನ್ನ ಭಾವಲಹರಿಯನ್ನೂ ಬೆರಸಿ, ಮಾತ್ರೆ, ಪ್ರಾಸ, ಲಯ, ಗೇಯಗುಣ, ಕಾವ್ಯಭಾಷೆ ಇವುಗಳನ್ನೂ ಗಮನದಲ್ಲಿಟ್ಟುಕೊಂಡು ನಾನು ಭಾವಾನುವಾದ ಮಾಡಿರುವ ಗೀತೆಯಿದು.
-0-