ಯಾವುದನ್ನು ನಂಬೋಣ?
ಜೋಗ ಜಲಪಾತಕ್ಕೆ ತೆರಳುವ ದಾರಿಹೋಕರಿಗೆ ರಾಷ್ಟ್ರೀಯ ಹೆದ್ದಾರಿ ೨೦೬ ರಲ್ಲಿ ಇನ್ನೇನು ಜೋಗಕ್ಕೆ ಬಂದೇಬಿಟ್ಟೆವು ಎಂದಾಗ ಕಾಣುವ ರಸ್ತೆಫಲಕವಿದು. ಹತ್ತು ಅಡಿ ವ್ಯತ್ಯಾಸದಲ್ಲಿ ಒಂದರ ಹಿಂದೆ ಒಂದು ನಿಲ್ಲಿಸಿರುವ ಈ ಫಲಕ ಎರಡು ಕಿಲೋಮೀಟರ್ ವ್ಯತ್ಯಾಸವನ್ನು ತೋರಿಸುತ್ತದೆ. ಇಲ್ಲ ಜೋಗಫಾಲ್ಸ್ ಗೆ ೮ ಕಿಲೋಮೀಟರ್ ಜೋಗಕ್ಕೆ ೬ ಕಿಲೋಮೀಟರ್ ಇರಬಹುದು ಎಂದು ಲೆಕ್ಕಹಾಕಿ ಸಮಾಧಾನ ಹೊಂದೋಣವೆಂದರೆ ಈ ಮಾರ್ಗದಲ್ಲಿ ಸಾಗಿದರೆ ಮೊದಲು ಸಿಗುವುದೇ ಜೋಗಜಲಪಾತ, ಅಲ್ಲಿಂದ ೨ ಕಿಲೋಮೀಟರ್ ನಂತರ ಸಿಗುವುದು ಜೋಗ, ಹಾಗಾಗಿ ಅದೂ ಅಲ್ಲ. ಇದೂ ಸಲ್ಲ. ಮಲವಳ್ಳಿ ಎಂಬ ಊರಿನ ರಸ್ತೆಬದಿಯಲ್ಲಿ ನಿಲ್ಲಿಸಲಾಗಿರುವ ಈ ಫಲಕ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಪ್ರಕಾರ ೮ ಕಿಲೋಮೀಟರ್, ರಸ್ತೆ ಪ್ರಾಧಿಕಾರದ ಪ್ರಕಾರ ೬ ಕಿ,ಮಿ. ದೂರದಲ್ಲಿದೆ. ಎರಡೂ ಇಲಾಖೆಯ ಹೊಂದಾಣಿಕೆ ಇಲ್ಲದಿದ್ದರೆ ಹೋಗಲಿ ನಾಮಫಲಕ ಬರೆಯುವರಾದರು ತುಸು ರಾಜಿಮಾಡಿಕೊಳ್ಳಬಹುದಿತ್ತು ಅವರೂ ಹಠಕ್ಕೆ ಬಿದ್ದಂತಿದೆ. ಸದ್ಯ ನಾಮಫಲಕದ ಹಂಗಿಲ್ಲದೆಯೂ ಜೋಗ ತಲುಪಬಹುದಾದಷ್ಟು ದುರದಲ್ಲಿರುವ ಈ ವ್ಯತ್ಯಾಸ ಬೆಂಗಳೂರಿನ ಬಳಿ ಇದ್ದಿದ್ದರೆ ನೂರಿನ್ನೂರು ಕಿ.ಮಿ ವ್ಯತ್ಯಯವಾಗಬಹುದಿತ್ತು, ಸದ್ಯ ಹಾಗಾಲಿಲ್ಲವಲ್ಲ ಅದೇ ನಮ್ಮ ಪುಣ್ಯ ಎಂದಿರಾ?, ಓಕೆ ಮತ್ತೆ ತಂಟೆ ಯಾಕೆ?.
Comments
ಉ: ಯಾವುದನ್ನು ನಂಬೋಣ?
ಉ: ಯಾವುದನ್ನು ನಂಬೋಣ?