ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಪೇಸ್ ಸುದ್ದಿ – ಸ೦ಚಿಕೆ ೪ - ಅ೦ತರಿಕ್ಷ ಗ್ರಹಣದ ಅತ್ಯದ್ಭುತ ಚಿತ್ರ

Eclipse

. ಕ್ಷುದ್ರಗ್ರಹಗಳ ಸುತ್ತ ಡಾನ್ ನೌಕೆ: ಮ೦ಗಳ ಹಾಗೂ ಗುರು ಗ್ರಹಗಳ ನಡುವೆ ಸಾವಿರಾರು ಕ್ಷುದ್ರ ಗ್ರಹಗಳಿವೆ. ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಾಸಾದ ಡಾನ್ ನೌಕೆಯನ್ನು ಬಳಸಲಾಗುತ್ತಿದೆ. ಇತ್ತೀಚೆಗಷ್ಟೇ ಹಬಲ್ ಟೆಲಿಸ್ಕೋಪಿನ ಸಹಾಯದಿ೦ದ ಕ್ಷುದ್ರಗ್ರಹಗಳಲ್ಲಿ ಎರಡನೆ ಅತಿ ದೊಡ್ಡ ಗ್ರಹವನ್ನು ಚಿತ್ರಿಸಲಾಗಿದೆ. ಹಲವಾರು ಚಿತ್ರಗಳನ್ನು ಜೋಡಿಸಿ ಒ೦ದು ವೀಡಿಯೋವನ್ನು ನಾಸಾದವರು ತಯಾರು ಮಾಡಿದ್ದಾರೆ. 

ಮಲಗಿ ಎದ್ದಿತು ಕೂಸು..!

ರವಿ ಓಡುತ್ತಿಹನು ಪಡುವಣ ಮನೆಗೆ,

ಧರಣಿ ಅಪ್ಪುತ್ತಿಹಳು ರಾತ್ರಿಯನ್ನ.

ಏಕೆ೦ದರೆ, ನನ್ ಮಡಿಲ ಸಿರಿಯು

ಸವಿ ನಿದ್ದೆಗೆ ಜಾರುತ್ತಲಿಹುದು!

ಚಿಕ್ಕೆಗಣ, ಗ್ರಹ-ಚ೦ದ್ರರೆಲ್ಲರೂ

ಕಾಯುತ್ತಲಿಹರು ನಿಶೆಯನ್ನ ಸಿ೦ಗರಿಸಿ.

ನನ್ ಒಡಲ ಮರಿಯ,

ಮಳ್ಳೀ ನಗುವಿಗೆ ಸಾಕ್ಷಿಯಾಗಲು!

ಎರೆಮಣ್ಣ ಗರ್ಭದ ಕಾವಿಗೆ

ಬೀಜ ಹವಣಿಸುತ್ತಿದೆ ಮೊಳೆಯಲು.

ಇದು ನನ್ ಎಳೆಮಗುವಿನ

ಸಂವೇದನ ಅಕ್ಟೋಬರ್ ತಿಂಗಳ ಕಾರ್ಯಕ್ರಮ - " ಎಚ್ಚೆಸ್ವಿ ಅನಾತ್ಮ ಕಥನ" ಪುಸ್ತಕ ಬಿಡುಗಡೆ ಸಮಾರಂಭ

ಸ್ನೇಹಿತರೆ,

ಇದೇ ಭಾನುವಾರ, 24 ಅಕ್ಟೋಬರ್ ರಂದು  ಬೆಳಗ್ಗೆ 10.30ಕ್ಕೆ "ಸಂವೇದನ" ಸಾಂಸ್ಕೃತಿಕ ವೇದಿಕೆ  ಹಾಗು ಶ್ರೀ G N ಮೋಹನ್ ಅವರ "ಮೇ ಫ್ಲೋವೆರ್ ಮೀಡಿಯಾ" ವತಿಯಿಂದ ಡಾ. ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಆತ್ಮ ಚರಿತ್ರೆಯನ್ನೊಳಗೊಂಡ " ಎಚ್ಚೆಸ್ವಿ ಅನಾತ್ಮ ಕಥನ" ಪುಸ್ತಕ ಬಿಡುಗಡೆ ಸಮಾರಂಭವನ್ನು ಇಟ್ಟು ಕೊಂಡಿದ್ದೇವೆ. ಈ ಸಮಾರಂಭದಲ್ಲಿ B R ಲಕ್ಶ್ಮಣ ರಾವ್, ರವಿ ಬೆಳಗೆರೆ, ವಸುಧೇಂದ್ರ, ಜೋಗಿ ಹಾಗು G N ಮೋಹನ್ ಇರುತ್ತಾರೆ.

ಕೊಂಚ ಬಿಡುವು ಮಾಡಿಕೊಂಡು ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಕಡೆ ಬನ್ನಿ.  

ಅವಧಿ ಬ್ಲಾಗ್ ನಲ್ಲಿ ಈ ಪುಸ್ತಕದ ಬಗ್ಗೆ ಬಂದಂತಹ ಒನ್ದು ಒಳ್ಳೆಯ ಲೇಖನ ಇಲ್ಲಿದೆ.

ಸಂವೇದನ ಅಕ್ಟೋಬರ್ ತಿಂಗಳ ಕಾರ್ಯಕ್ರಮ - " ಎಚ್ಚೆಸ್ವಿ ಅನಾತ್ಮ ಕಥನ" ಪುಸ್ತಕ ಬಿಡುಗಡೆ ಸಮಾರಂಭ

ಸ್ನೇಹಿತರೆ,

ಇದೇ ಭಾನುವಾರ, 24 ಅಕ್ಟೋಬರ್ ರಂದು  ಬೆಳಗ್ಗೆ 10.30ಕ್ಕೆ "ಸಂವೇದನ" ಸಾಂಸ್ಕೃತಿಕ ವೇದಿಕೆ  ಹಾಗು ಶ್ರೀ G N ಮೋಹನ್ ಅವರ "ಮೇ ಫ್ಲೋವೆರ್ ಮೀಡಿಯಾ" ವತಿಯಿಂದ ಡಾ. ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಆತ್ಮ ಚರಿತ್ರೆಯನ್ನೊಳಗೊಂಡ " ಎಚ್ಚೆಸ್ವಿ ಅನಾತ್ಮ ಕಥನ" ಪುಸ್ತಕ ಬಿಡುಗಡೆ ಸಮಾರಂಭವನ್ನು ಇಟ್ಟು ಕೊಂಡಿದ್ದೇವೆ. ಈ ಸಮಾರಂಭದಲ್ಲಿ B R ಲಕ್ಶ್ಮಣ ರಾವ್, ರವಿ ಬೆಳಗೆರೆ, ವಸುಧೇಂದ್ರ, ಜೋಗಿ ಹಾಗು G N ಮೋಹನ್ ಇರುತ್ತಾರೆ.

 ಕೊಂಚ ಬಿಡುವು ಮಾಡಿಕೊಂಡು ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಕಡೆ ಬನ್ನಿ.  

ಲಿನಕ್ಸಾಯಣ: ಉದ್ಯಮದಲ್ಲಿ ಲಿನಕ್ಸ್ ನ ದಾಪುಗಾಲು

ಗ್ನು/ಲಿನಕ್ಸ್ ಅನ್ನು ಉದ್ಯಮಗಳು ಬಹಳ ವೇಗವಾಗಿ ಅಳವಡಿಸಿಕೊಂಡು ಬರುತ್ತಿವೆ. ಇತ್ತೀಚಿನ ಲಿನಕ್ಸ್ ಫೌಂಡೇಷನ್ ನೆಡೆಸಿದ ಅಧ್ಯಯನದ ಪ್ರಕಾರ ಲಿನಕ್ಸ್ ರಾಜನಂತೆ ಮೆರೆಯುತ್ತಿದೆ, ಅದೂ ಮೈಕ್ರೋಸಾಪ್ಟ್ ನ ಪ್ಯಾಟೆ ಶೇರುಗಳನ್ನು ಕೂಡ ತನ್ನದಾಗಿಸಿಕೊಳ್ಳುತ್ತ.

ಮುದುಡಿ ಮಲಗಿದ ನಗು ಮತ್ತೆ ಬರುವುದೇ??

ಮನದ ಮ೦ದಾರ ಮ೦ಥನವಿ೦ದು ಅದೇಕೋ ಬಾಡಿ ಸೊರಗಿದೆ
ಮು೦ಜಾವಿನ  ಸೂರ್ಯ ಆ ಕಾರ್ಮೋಡದಡಿಯಲಿ ಮರೆಯಾಗಿದೆ

ಹರುಷವೆ೦ಬ  ಅಮೃತಧಾರೆ  ಇ೦ದೇಕೋ ಅರಿಯೆ ವಿಷವಾಗಿದೆ
ಗೃಹಲಕ್ಷ್ಮಿಯ  ಮೊಗದಲಿದ್ದ   ನಗು  ಅದೇಕೋ  ಮಾಯವಾಗಿದೆ

ಸುಖ ಸಮೃದ್ಧಿಯ ಐರಾವತ ಬಾಡಿ ಇ೦ದು ಬೇಗೆಯಲಿ ಬಸವಳಿದಿದೆ
ನಲಿಯುತ ಸಾಗುತಲಿದ್ದ ಜೀವನರಥದ ಗಾಲಿ ಏಕೋ ಸ್ತಬ್ಧವಾಗಿದೆ

ಅರಿಯದ ಮಾಯೆಯ ಮುಸುಕು ಮನವ ಕವಿದು ಕಾಡುತಲಿದೆ
ಪರಿಹರಿಸುವ ದಾರಿ ಕಾಣದೆ ಮನ ನೊ೦ದು ಇ೦ದು ಮೂಕವಾಗಿದೆ

ಮಧುರ ದೈನ೦ದಿನ ಮ೦ದಸ್ಮಿತ ಕಮಲ  ಮತ್ತೆ ಅರಳುವುದೇ??
ವಿಷಾದದ ಛಾಯೆಯಡಿ ಮುದುಡಿ ಮಲಗಿದ ನಗು ಮತ್ತೆ ಬರುವುದೇ??