ಲಿನಕ್ಸಾಯಣ: ಉದ್ಯಮದಲ್ಲಿ ಲಿನಕ್ಸ್ ನ ದಾಪುಗಾಲು

Submitted by omshivaprakash on Fri, 10/22/2010 - 19:03

ಗ್ನು/ಲಿನಕ್ಸ್ ಅನ್ನು ಉದ್ಯಮಗಳು ಬಹಳ ವೇಗವಾಗಿ ಅಳವಡಿಸಿಕೊಂಡು ಬರುತ್ತಿವೆ. ಇತ್ತೀಚಿನ ಲಿನಕ್ಸ್ ಫೌಂಡೇಷನ್ ನೆಡೆಸಿದ ಅಧ್ಯಯನದ ಪ್ರಕಾರ ಲಿನಕ್ಸ್ ರಾಜನಂತೆ ಮೆರೆಯುತ್ತಿದೆ, ಅದೂ ಮೈಕ್ರೋಸಾಪ್ಟ್ ನ ಪ್ಯಾಟೆ ಶೇರುಗಳನ್ನು ಕೂಡ ತನ್ನದಾಗಿಸಿಕೊಳ್ಳುತ್ತ.

 

ಇಯೋಮಾನ್ ಟೆಕ್ನಾಲಜಿ ಗೂಪ್ ನೆಡೆಸಿದ ಈ ಅಧ್ಯಯನದಲ್ಲಿ ೨೦೦೦ ಕ್ಕೂ ಹೆಚ್ಚು ಬಳಕೆದಾರರನ್ನು ಲಿನಕ್ಸ್ ಫೌಂಡೇಶನ್ ನ ಬಳಕೆದಾರರ ಸಂಘ ಆಯ್ಕೆ ಮಾಡಿತ್ತು. ೫೦೦ಕ್ಕೂ ಹೆಚ್ಚು ಕೆಲಸಗಾರರಿರುವ, ಅಥವಾ ೫೦೦ ಮಿಲಿಯಕ್ಕೂ ಹೆಚ್ಚಿನ ವ್ಯಾಪಾರ ವಹಿವಾಟಿರುವ ೩೮೭ ಕ್ಕೂ ಹೆಚ್ಚು ಬೃಹತ್ ಕಂಪೆನಿಗಳು, ಸಂಘಟನೆಗಳು ಈ ಅಧ್ಯಯನದಲ್ಲಿ ಭಾಗವಹಿಸಿದ್ದವು. ೭೫.೪% ನಷ್ತು ಕಂಪೆನಿಗಳು ಇನ್ನೂ ಹೆಚ್ಚಿನ ಲಿನಕ್ಸ್ ಸರ್ವರುಗಳನ್ನು ತಾವು ಅಳವಡಿಸಿಕೊಳ್ಳುವ ಮಾತನ್ನಾಡಿವೆ. ಅದರಲ್ಲೂ ಅರ್ಥಕ್ಕಿಂತ ಕಡಿಮೆ ಅಂದರೆ ೪೧.೨% ನಷ್ಟು ಕಂಪೆನಿಗಳು ವಿಂಡೋಸ್ ಸರ್ವರ್ ಗಳ ಸಂಖ್ಯೆ ಹೆಚ್ಚಿಸುವ ಇರಾದೆ ಇರಿಸಿಕೊಂಡಿವೆ. ಇದಕ್ಕಿಂತಲೂ ಆಶ್ಚರ್ಯಕರ ವಿಷಯವೆಂದರೆ ೪೩.೬% ನಷ್ಟು ಕಂಪೆನಿಗಳು ಮುಂದಿನ ವರ್ಷ ವಿಂಡೋಸ್ ಸರ್ವರ್ ಗಳ ಸಂಖ್ಯೆ ಕಡಿಮೆ ಮಾಡುವುದಾಗಿ ತಿಳಿಸಿವೆ.

 

ಲಿನಕ್ಸ್ ಉಚಿತ, ಮುಕ್ತ ಸ್ವತಂತ್ರ ಎಂದು ಮಾತ್ರ ಕಂಪೆನಿಗಳು ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಬರೀ ವೆಬ್ ಸರ್ವರ್ ಇತ್ಯಾದಿಗಳಷ್ಟೇ ಅಲ್ಲದೇ, ಇಂದು ಲಿನಕ್ಸ್ ಅನ್ನು ಹೆಚ್ಚು ಕ್ಲಿಷ್ಟಕರ ತಂತ್ರಾಂಶಗಳನ್ನು ಸಂಸ್ಥಾಪಿಸಲು ಯೋಗ್ಯ, ಸದೃಡ, ಖರ್ಚು ಕಡಿಮೆ, ಕೊನೆಗೆ ತಂತ್ರಾಂಶದ ಮೇಲಿನ ಹೆಚ್ಚಿನ ಹಿಡಿತ ಸಿಗುತ್ತದೆ ಎಂಬೆಲ್ಲ ವಿಷಯಗಳನ್ನು ಉದ್ಯಮದ ಎಲ್ಲರೂ ಅರಿತುಕೊಂಡಿರುವುದರಿಂದ ಲಿನಕ್ಸ್ ನ ಬಳಕೆ ಹೆಚ್ಚುತ್ತಿದೆ.

 

ಗ್ನು/ಲಿನಕ್ಸ್ ಅನ್ನು ಅನೇಕರ ಕೊಡುಗೆಗಳು ಸಮೃದ್ದವನ್ನಾಗಿ ಮಾಡಿದೆ. ರೆಡ್ ಹ್ಯಾಟ್, ನಾವೆಲ್ , ಕೆನಾನಿಕಲ್ ಡೆಬಿಯನ್ ಇತ್ಯಾದಿ ಕಂಪೆನಿ, ಸಮುದಾಯಗಳು ಮಾತ್ರವೇ ಅಲ್ಲದೆ, ಬಳಕೆದಾರರು, ಕಂಪೆನಿಗಳು ಇತ್ಯಾದಿ ಲಿನಕ್ಸ್ ಬಳಸುವುದರ ಜೊತೆಗೆ ತಮ್ಮ ಕೊಡುಗೆಯನ್ನೂ ನೀಡುತ್ತಿದ್ದಾರೆ ಜೊತೆಗೆ ಮುಂದೆಯೂ ನೀಡಬೇಕಿದೆ. ಇವೆಲ್ಲವನ್ನೂ ನೋಡುತ್ತಿದ್ದರೆ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು ಹೇಗೆ ನಮ್ಮ ಕಂಪ್ಯೂಟರೀಕೃತ ಬದುಕಿನಲ್ಲಿ ಇನ್ನೂ ಹೆಚ್ಚಿನ ಭಾಗವನ್ನು ಆವರಿಸಿಕೊಳ್ಳುತ್ತಿವೆ ಎಂದು ನೀವು ಅರಿಯಬಹುದು.

ಲಿನಕ್ಸ್ ಫೌಂಡೇಷನ್ ನ ಅಧ್ಯಯನದ ಫಲಿತಾಂಶ ನಿಮಗಾಗಿ ಇಲ್ಲಿದೆ.

Rating
No votes yet

Comments