ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ಹುಂಬ ಮನಸ್ಸು
ಮನದ ನೋವ ಹೇಳಬೇಕು ಎಂಬ ಮಹದಾಸೆಗೆ
ಮುಳ್ಳಿನ ಬೇಲಿ ಕಟ್ಟಿ ಹೊರಗಿಟ್ಟವಳು ನೀನೇನಾ,
ಆದರೂ ಈಗಲೂ ಹೇಳಲೋ ಬೇಡವೋ
ಎಂಬ ಹುನ್ನಾರದ ನಡುವೆ
ನೀನ್ನೊಂದು ಕಗ್ಗಲ್ಲು ಎಂಬ ಅರಿವೇ ಬರದಾಯ್ತೆ.............
ಬೇಲಿ ದಾಟಿ ಹೊರಬರುವ ಮನಸ್ಸಂತೂ ನಿನಗಿಲ್ಲ,
ಹೇಳಿದ್ದನ್ನು ಕೇಳಿ ಸಂತೈಸುವ ಮನಸ್ಸಂತೂ ನಿನಗಿಲ್ಲ...............
ಕಟ್ಟ ಕಡೆ ಒಂದೇ ಪ್ರಶ್ನೆ ಕಣ್ಣೆದುರಿಗೆ ಕಾಡುತ್ತಿದೆ.
"ಅರ್ಥ ಮಾಡಿಕೊಂಡೆ, ಮಾಡಿಕೊಳ್ಳುವೆ"
ಎಂಬ ಹುಂಬ ಮನಸ್ಸೇಕೆ... ?????????
- Read more about ಹುಂಬ ಮನಸ್ಸು
- 2 comments
- Log in or register to post comments
ಎಡಕ್ಕೆ ಸಿದ್ರಾಮ ಬಲಕ್ಕೆ ಇಬ್ರಾಹಿಮ....!
ಎಡಕ್ಕೆ ಸಿದ್ರಾಮ ಬಲಕ್ಕೆ ಇಬ್ರಾಹಿಮ
ಮುಖ್ಯಮ೦ತ್ರಿಯ ಮನೆ ಮು೦ದೆ
ದೇಶಪಾ೦ಡೆಯ ಲಬೊ ಲಬೋ
ಆಪರೇಷನ್ ಕಮಲ ಅ೦ತ ಬ೦ಬಡಾ
ಆದರೆ ಆತ ಮರೆತ! ಆ ಎಡ ಬಲಕ್ಕಿದ್ದವರು
ಯಾರು? ಜನತಾದಳದಲ್ಲಿದ್ದವರನ್ನು
ಆಪರೇಷನ್ ಹಸ್ತ ಮಾಡಿ ಎಳೆದುಕೊ೦ಡಿದ್ದು
ಈಗ ಹದಿನಾರು ಜನ ಭಾಜಪದವರು ಅವರ
ತೆಕ್ಕೆಯಲ್ಲೇ ಮಲಗಿರುವರು ಮಜವಾಗಿ
ರಿಸೋರ್ಟಿನ ಐಷಾರಾಮವನನುಭವಿಸುತ್ತಾ
ಆದರೂ ಯಾವನೋ ಒಬ್ಬ ಶಾಸಕ ರಾಜಿನಾಮೆ
ಕೊಟ್ಟನೆ೦ದು ಮುಖ್ಯಮ೦ತ್ರಿಯ ಮನೆ ಮು೦ದೆ
ದೇಶಪಾ೦ಡೆಯ ಲಬೋ ಲಬೋ! ನಮ್ಮ ಜನರ
ಮರೆವು ತು೦ಬಾ ಜಾಸ್ತಿ ಈವಯ್ಯ ನು೦ಗಿ ನೀರು
ಕುಡಿದ ಪ್ರವಾಹ ಸ೦ತ್ರಸ್ತರ ಪರಿಹಾರ ನಿಧಿಯ
ವಿಷಯ ಮರೆತೇ ಬಿಟ್ಟರು ಎಲ್ಲರೂ ಈಗ ತೊಗೊಳ್ಳಿ
ದೇಶಪಾ೦ಡೆಯ ಲಬೋ ಲಬೋ ಯಡ್ಯೂರಪ್ಪನ
- Read more about ಎಡಕ್ಕೆ ಸಿದ್ರಾಮ ಬಲಕ್ಕೆ ಇಬ್ರಾಹಿಮ....!
- 19 comments
- Log in or register to post comments
ಹರಿಪ್ರಸಾದ್ ನಾಡಿಗರಿಗೆ ಜೈ
ನೋಡ್ರಲಾ ಈ ಬಾರಿ ನಮ್ಮ ದಸರಾ ನೋಡೋದಿಕ್ಕೆ ಸಂಪದದ ಹರಿ ಪ್ರಸಾದ್ ನಾಡಿಗರು ಬತ್ತಾವ್ರೆ, ಸಂದಾಕಿ ಮಾಡ್ ಬೇಕ್ರಲಾ ಅಂದ ಗೌಡಪ್ಪ.ಸಂದಾಕಿ ಅಂದ್ರೆ ಆನೆಗೆ ಲದ್ದಿ ಹಾಕಕ್ಕೆ ಬಿಡಬಾರದು ಅಂದ ಸುಬ್ಬ. ಲೇ ಅದು ಹಾಕಲಿ ಹಿಂದುಗಡೆ ನೀನು ಬುಟ್ಟಿ ಹಿಡಿಯಲಾ ಅಂದಾ ಗೌಡಪ್ಪ. ನಮ್ಮ ಹೆಣ್ಣು ಐಕ್ಳು ಸಾನೇ ಖುಸಿಯಿಂದ ಓಡಾಡಿದ್ದೇ ಓಡಾಡಿದ್ದು. ರಂಗೋಲಿ ಹಾಕಿದ್ದೇ ಹಾಕಿದ್ದು. ಸಾಕವ್ವನ ಮಗಳು ಸುಂದರಿ ಸಂಪದ ಅಂತ ಬರೆದು ಒಳಗಡೆ ನಾಡಿಗರ ಚಿತ್ರ ಬರೆದಿದ್ಲು. ಯಾಕವ್ವಾ, ನಾಡಿಗರು ಇಂಪ್ರಸ್ ಆಯ್ತಾರೆ ಅಂಗೇ ನನಗೊಂದು ಐಡಿ ಕೊತ್ತಾರೆ ಅಂದ್ಲು. ನೀನು ಏನು ಬರೀತಿಯವ್ವಾ ಅಂದ್ರು ಮೇಸ್ಟ್ರು. "ನಮ್ಮ ಸಾಲೇಯಲ್ಲಿ ಪೆದ್ದ ಮಾಸ್ಟರು" ಅಂತ ಲೇಖನ ಬರೀತೀನಿ ಅಂದ್ಲು. ಸರಿ ದಸರಾ ಬಂತು.
- Read more about ಹರಿಪ್ರಸಾದ್ ನಾಡಿಗರಿಗೆ ಜೈ
- 27 comments
- Log in or register to post comments
ಗೌಡಪ್ಪನ ಮನೆಯಲ್ಲಿ ಸೋನಿಯಾ
ಬೆಳಗ್ಗೆ ಎಲ್ಲಾ ನಿಂಗನ ಅಂಗಡಿ ತಾವ ಸೇರಿದ್ವಿ. ಚಾ ಕುಡೀತಾ ಇದ್ದ ಗೌಡಪ್ಪ. ಒಂದೇ ಸಾರಿ ಫಿಟ್ಸ್ ಬಂದಂಗೆ ಮೈಯೆಲ್ಲಾ ಅಲುಗಾಡಿಸಿದ. ಚಾನ್ನ ಸುಬ್ಬನ ಮೈ ಮ್ಯಾಕೆ ಸುರಿದಿದ್ದ. ಯಾಕ್ರೀ ಗೌಡ್ರೆ. ಲೇ ಮೊಬೈಲ್ ವೈಬ್ರೇಟಿಂಗ್ ಮೋಡಿಗೆ ಹಾಕಿದ್ದೆ ಅದಕ್ಕೆ ಕಲಾ ಅಂದ. ಏ ಥೂ. ಯಾರದ್ದು ಅಂತಾ ನೋಡ್ರಿ. ಲೇ ಸಿದ್ದರಾಮಯ್ಯ ಕಲಾ ಅಂದೋನೆ ಸ್ಪೀಕರ್ ಆನ್ ಮಾಡ್ದ,. ಹಲೋ ಹೇಳಿ ಸಾ. ನಾನು ಕಲಾ ಸಿದ್ದು. ನೋಡಲಾ ಮುಂದಿನ ವಾರ ನಿಮ್ಮ ಹಳ್ಳಿಗೆ ಸೋನಿಯಾ ಗಾಂಧಿ ಬತ್ತಾವ್ರೆ. ಸ್ವಲ್ಪ ಹಳ್ಳೀನಾ ಅಂಗೇ ಕೆರೆತಾವ ಕಿಲೀನ್ ಆಗಿ ಮಡುಗು. ನಿನ್ನ ಫ್ರೆಂಡ್ಸ್ ಗೆ ಚಂಗೂಲಿ ಬುದ್ದಿ ತೋರಿಸ್ಬೇಡ ಅಂತ ಹೇಳಲಾ. ನೀವೇನಾದ್ರೂ ಹೆಚ್ಚು ಕಮ್ಮಿ ಮಾಡಿದ್ರೆ.
- Read more about ಗೌಡಪ್ಪನ ಮನೆಯಲ್ಲಿ ಸೋನಿಯಾ
- 20 comments
- Log in or register to post comments
ಹತ್ತೇ ದಿನಗಳಲ್ಲಿ ನಿಮ್ಮ ಮುಖಸೌಂದರ್ಯ ವರ್ಧಿಸಿಕೊಳ್ಳಿ
ಆಕೆ ಅಮ್ಮಳಾಗಿಹಳು!
ನನ್ನ ಕಣ್ಮುಂದೆ ನುಡಿ ನಡೆಯ ಕಲಿತಿದ್ದವಳು,
ಚಿತ್ರ ಬಿಡಿಸಿ ತಂದು ನನಗೆ ಒಪ್ಪಿಸುತ್ತಿದ್ದವಳು,
ನನ್ನಿಂದ ಕೈಹಿಡಿಸಿಕೊಂಡು ಬರೆಯ ಕಲಿತ್ತಿದ್ದವಳು,
ತನ್ನ ನೃತ್ಯಕ್ಕೆ ನನ್ನನ್ನು ಸಾಕ್ಷಿಯಾಗಿಸುತ್ತಿದ್ದವಳು,
ಅಕ್ಕರೆಯಿಂದ ತೊಡೆಗಳನೇರಿ ಕೂರುತ್ತಿದ್ದವಳು,
ನನ್ನೆಲ್ಲಾ ಕತೆಗಳಿಗೆ ಕಿವಿಯಾಗಿ ಆಲಿಸುತ್ತಿದ್ದವಳು,
ಇಂದು ತನ್ನದೇ ಕಂದಮ್ಮನಿಗೆ ತಾಯಿಯಾಗಿ,
ಅಲ್ಲಿ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿಹಳು;
ಅಬ್ಬಬ್ಬಾ ಕಾಲದ ಮಹಿಮೆಯೇ!
ಅಬ್ಬಬ್ಬಾ ಈ ಕಾಲದ ವೇಗವೇ!
ವಾಯುಸೇನೆಯಲ್ಲಿ ನನ್ನ ಜೊತೆಗಿದ್ದ,
ನಮ್ಮ ಆತ್ಮೀಯ ಸ್ನೇಹಿತರಾದ
ನಾಣಯ್ಯ-ಹೇಮಕ್ಕನವರ ಮಗಳು,
ನಮ್ಮ ಪಾಲಿಗೂ ಆಕೆ ಮಗಳೇ ಆಗಿರುವವಳು,
- Read more about ಆಕೆ ಅಮ್ಮಳಾಗಿಹಳು!
- 17 comments
- Log in or register to post comments
ಬೇಲಿನೇ ಎದ್ದು ಹೊಲ ಮೇಯೊದು ಅಂದ್ರೆ ಇದೇನಾ?
- Read more about ಬೇಲಿನೇ ಎದ್ದು ಹೊಲ ಮೇಯೊದು ಅಂದ್ರೆ ಇದೇನಾ?
- 2 comments
- Log in or register to post comments
ಯೋಗಾಸನ ಪೈಶಾಚಿಕವಂತೆ
ಯೋಗಾಸನ ಪೈಶಾಚಿಕವಂತೆ, ಹೀಗಂತ decree ಹೊರಡಿಸಿದವರು ಅಮೆರಿಕೆಯ ಪಾದ್ರಿಯೊಬ್ಬರು.
ಸಿಯಾಟ್ಲ್ ರಾಜ್ಯದ ಆ ಪಾದ್ರಿಗೆ ಯೋಗಾಸನವು ಪದ್ಮಾಸನ ಹಾಕಿ ಕೂತ ಪಿಶಾಚಿಯಂತೆ ತೋರುತ್ತದಂತೆ. ಯೋಗ ತರಗತಿಗೆ ನೊಂದಾಯಿಸಿ ಕೊಳ್ಳುವುದರ ಮೂಲಕ ಒಂದು ಪುಟ್ಟ ಪೈಶಾಚಿಕ ತರಗತಿಗೂ ಸೇರುತ್ತಿದ್ದೀರಿ ಎಂದು ಕ್ರೈಸ್ತ ಧರ್ಮೀಯರಿಗೆ ಕಿವಿ ಮಾತು ಹೇಳಿದ R Albert Mohler Jr, ಕೆಂಟಕಿಯ ದಕ್ಷಿಣ ಬ್ಯಾಪ್ಟಿಸ್ಟ್ ಧಾರ್ಮಿಕ ಸಂಸ್ಥೆಯೊಂದರ ಅಧ್ಯಕ್ಷ. ಯೋಗದ ವೇಳೆ ಪಠಿಸಲ್ಪಡುವ ಮಂತ್ರಗಳು ಸಂಸ್ಕೃತ ದ್ದೂ ಮತ್ತು ಕ್ರೈಸ್ತ ಧರ್ಮದ ಆದರ್ಶಗಳಿಗೆ ವಿರೋಧಿಯೆಂದೂ ಹೇಳಿಕೆ ನೀಡಿದ ಈ ಪಾದ್ರಿ ಅಮೇರಿಕಾ ಹೇಗೆ ದಿನೇ ದಿನೇ ಕ್ರೈಸ್ತ ಮೂಲಭೂತವಾದದ ತನಗರಿವಿಲ್ಲದಂತೆ ಜಾರುತ್ತಿದೆ ಎನ್ನುವುದಕ್ಕೆ ನಿದರ್ಶನವಾದರು. ಕೆಲ ವಾರಗಳ ಹಿಂದೆ ಪವಿತ್ರ “ಕುರ್’ ಆನ್” ಗ್ರಂಥವನ್ನು ಬಹಿರಂಗವಾಗಿ ಸುಡಲು ಕರೆ ನೀಡಿದ್ದ ಪಾದ್ರಿಯೊಬ್ಬ ವಿಶ್ವದಾದ್ಯಂತ ಕೇಳಿ ಬಂದ ಪ್ರತಿಭಟನೆಗೆ ಮಣಿದು ಹಿಂಜರಿದ.
- Read more about ಯೋಗಾಸನ ಪೈಶಾಚಿಕವಂತೆ
- 30 comments
- Log in or register to post comments
ಮುನಿಸೇಕೆ ವರುಣದೇವ???
- Read more about ಮುನಿಸೇಕೆ ವರುಣದೇವ???
- Log in or register to post comments