ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತೆರೆಮರೆಯ ಹೆಂಬೇಡಿ ಸೂತ್ರದಾರರು

 


ಕಾರ‍್ಯಾಂಗ (ಸರಕಾಕರದ ಎಲ್ಲ ಅಂಗಗಳ ತದ್ಭಾವಿತ ಮುಖ್ಯಸ್ಥರು) ‘ಮತ್ತೊಮ್ಮೆ ವಿಧಾನಭೆ ಕರೆದು ನಿಮ್ಮ ಸಂಖ್ಯಾ ತಾಖತ್ ತೋರಿಸಿ’ “ಅಪ್ಪಣೆ” ಎಂದು ಶಾಸಕಾಂಗ, ‘ಗುರುವಾರ ಹನ್ನೊಂದು ಗಂಟೆಗೆ ಸಭೆ ಸೇರತಕ್ಕದ್ದು’ ಎಂದು ತಾಕೀತು ಕಳಿಸಿತು. ನ್ಯಾಯಾಂಗ ಹೇಳಿದೆ, ಸದನದಲ್ಲಿ ನೀವೇನಾದರೂ ನಿರ್ಣಯಸಿ, ಈ ವಿಷಯ ನಮ್ಮ ಮುಂದಿ ತೀರ್ಮಾನದಂತೆ ಹೊಂದಾಣಿಕೆಯಾಗತಕ್ಕದ್ದು’ ಎಂದು!


ಈ “ವಿಶ್ವಾಸ ನಿರ್ಣಯ”ದಲ್ಲಿ ಕೊನೆಗೂ ಗೆಲ್ಲುವರು ಯಾರು; ಸರಕಾರವೇ? ಭಿನ್ನಮತರೇ? ಎಲ್ಲಾ ಅಂಗಗಳಿಗೂ, ರಾಜ್ಯದ ಮಹಾಜನತೆಗೂ ಕಾಣದ ಕೈಯಿಂದಲೇ ಮಂಕುಬೂದಿ ಎರಚುವ ತೆರೆಮರೆಯ ಹೆಂಬೇಡೀ ಸೂತ್ರದಾರರೇ ? ಪ್ರಜಾಕೋಟಿಯಂತೂ ಖಂಡಿತಾ ಅಲ್ಲ!  

ಕನ್ನಡಿಯ ಸತ್ಯ...

ನಿರ್ಜೀವವಾದ ಗಾಜಿನ ಕನ್ನಡಿಯಲ್ಲಿ ನಿನ್ನ ಅ೦ದದಿ ಜೀವವ ತು೦ಬಿ ನಗುವ ಸುಖ ನಿನ್ನದು...


ಅದೇ ಕನ್ನಡಿ ಒಡೆದು ನೂರು ಚೂರಾದಾಗ, ಆ ಚೂರುಗಳಲ್ಲಿ ನಿನ್ನ ನಗುವ ಹುಡುಕುತ್ತ ಬಾಚುವಾಗ ಗಾಜು ಕೈ ಚುಚ್ಹಿ ಗಾಯವಾದ ನೋವು ನನ್ನದು...


 


ಕ೦ಡರಿಯುವ ಸುಖದ ಸ೦ಗಾತಿ ನೀ ಗೆಳತಿ...


ಅನುಭವಿಸಿದ ನೋವಿನೊಡನೆ ಒ೦ದಾಗಿರುವ ನಾನು ನೀ ಮರೆತಿರುವ ಗೆಳೆಯ ಕಣೆ...


 


ನೂರು ನಗುವ ನೋಡಿ ಬೀಗಿರುವ ಆ ಕನ್ನಡಿಯ ಸತ್ಯದ ನೆರಳಲ್ಲಿ ಮೆರೆಯುತ್ತಿರುವುದೇ ನಿನ್ನ ಸಾಮ್ರಾಜ್ಯ...


ನೂರು ಚೂರಾಗಿರುವ ಆ ಕನ್ನಡಿಯಲ್ಲಿ ನಿನ್ನ ನಗು ಕ೦ಡ ನೆನಪ ಹುಡುಕುತ್ತ,


ಕನ್ನಡಿಯ ನಿಜಸತ್ಯವ ನಿನ್ನಿ೦ದ ಗುಟ್ಟಾಗಿರಿಸುವುದು ನನ್ನ ಕರ್ತವ್ಯ...

ಯಡ್ಯೂರಪ್ಪನವರೇ ಹೀಗೇಕೆ ಮಾಡಿದ್ದೀರಿ??

ಸನ್ಮಾನ್ಯ ಯಡ್ಯೂರಪ್ಪನವರೇ ಹೀಗೇಕೆ ಮಾಡಿದ್ದೀರಾ?


1. ಮೊನ್ನೆ ವಿಶ್ವಾಸ ಮತ ಯಾಚನೆ ಮಾಡುವಾಗ ಏಕೆ ಎ.ಸಿ ಮತ್ತು ಪ್ಯಾನ್ ಆಫ್ ಮಾಡಿದ್ದೀರಾ? ಗೂಳಿಹಟ್ಟಿ ಶೇಖರರವರು ಅಂಗಿ ಹರಿದು ಸೆಖೆ ಸೆಖೆ ಎಂದು ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದ?


2. ಮೊನ್ನೆ ಬೆಳಿಗ್ಗೆ ಸಿದ್ಧರಾಮಯ್ಯನವರಿಗೆ ಟೆನ್ ಸ್ಟೋಟ್ಸ್ 7.30ರ ಡಬ್ಯ್ಲೂ.ಡಬ್ಯ್ಲೂ.ಇ ನೋಡಲು ಬಿಡದೆ ವಿಶ್ವಾಸ ಮತಕ್ಕೆ ಕರೆದಿದ್ದೀರಾ ಆದ್ದರಿಂದ ಸದಸನ ಒಳಗೆ ಡಬ್ಯ್ಲೂ.ಡಬ್ಯ್ಲೂ.ಇ ಯ ಸೋ ಮಾಡಿದರು.

ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ............. ಲೈಫು ಇಷ್ಟೇನೇ

 ನಮ್ಮ ಹೊಸ ಚಲನಚಿತ್ರ ‘ಪಂಚರಂಗಿ’ ಭರ್ಜರಿ ಆರಂಭವನ್ನು ಪಡೆದುಕೊಂಡಿತು. ಈ ರೀತಿಯ ಪ್ರಚಂಡ ಆರಂಭದ ಯಶಸ್ಸನ್ನು ನಾನಾಗಲೀ, ನಮ್ಮ ತಂಡವಾಗಲೀ ನಿರೀಕ್ಷಿಸಿಯೇ ಇರಲಿಲ್ಲ!   ನಾನು ಪವನ್ ಕುಮಾರ್, ಪಂಚರಂಗಿ ಯ ಕಥೆ, ಚಿತ್ರಕಥೆ ಬರೆದವರಲ್ಲಿ ಒಬ್ಬ!  ಜೊತೆಗೆ ಈ ಚಿತ್ರದ ‘ಲಕಿ’ ಪಾತ್ರಧಾರಿ ಕೂಡ ನಾನೇ.  ನಾವು ಪಂಚರಂಗಿಯನ್ನು ತೆರೆಗೆ ತರುವ ಮುನ್ನಾ ಏನಾಯಿತು, ಹೇಗಾಯಿತು ಎನ್ನುವುದನ್ನು ನಿಮ್ಮ ಮುಂದಿಡಲು ಇಚ್ಚಿಸುತ್ತೇನೆ. 

ನಗೆ ಹನಿಗಳು...

ಸೇಡು..


 


ಸೊಳ್ಳೆಯ ಮೇಲೆ ಸೇಡು ತೀರಿಸಿಕೊಳ್ಳುವ ಬಗೆ..


ಒಂದು ಸೊಳ್ಳೆಯನ್ನು ಹಿಡಿದು ಹಾಡು ಹೇಳಿ ಅದನ್ನು ಮಲಗಿಸಿ


ಅದರ ಕಿವಿಯಲ್ಲಿ "ಗುಯ್..ಗುಯ್...ಗುಯ್..." ಎಂದು ಕಿರುಚುವುದು.


 


******************************************************


ಸ್ವಾಮಿ ಅಯ್ಯಪ್ಪ..


 


ಕರ್ನಾಟಕ ದ ರಾಜಕೀಯ "ಸ್ವಾಮಿ ಅಯ್ಯಪ್ಪ" ನ ಕೈಯಲ್ಲಿ


ಏನೆಂದು ಅರ್ಥ ಆಗಲಿಲ್ಲವೇ?


ಕುಮಾರ "ಸ್ವಾಮಿ"


ಸಿದ್ದರಾಮ "ಅಯ್ಯ"


ಯಡಿಯೂರ್ "ಅಪ್ಪ"


 


ಯಾವ ದೇವರು ಕರ್ನಾಟಕವನ್ನು ಕಾಪಾಡುವನೋ??


 


*******************************************************


 


ಮದುವೆ ಕಸ್ಟಮರ್ ಕೇರ್..


 


ಸಂಬಂಧಗಳಿಗಾಗಿ ಒಂದನ್ನು ಒತ್ತಿ..


ನಿಶ್ಚಿತಾರ್ಥಕ್ಕಾಗಿ ಎರಡನ್ನು ಒತ್ತಿ..


ಮದುವೆಗಾಗಿ ಮೂರನ್ನು ಒತ್ತಿ...


 

ಹ್ಯಾಪಿ ಎನ್ದಿಂಗು

ಎಲ್ಲ ಹೇಳುತ್ತಿದ್ದ್ದರು,
ನಾಯಕ-ನಾಯಕಿಯ ಮದುವೆಯೊಂದಿಗೆ
 ಕಥೆ ಮುಗಿದರೆ ಹ್ಯಾಪಿ ಎನ್ದಿಂಗು.
ಅರ್ಥ ತಿಳಿದದ್ದು ಮದುವೆಯ ನಂತರವೇ,
ಅದು ಹ್ಯಾಪಿಯ ಎನ್ದಿಂಗು.. 

ನೇಸರ...!.

ಮೂಡಲ ಬಾಗಿಲಿನಿಂದ

ಅರುಣೋದಯ ನೇಸರ ಬಂದ

ಕತ್ತಲು ಕವಿದ ಮನಕೆ

ಶೈತನ್ಯದ ಬೆಳಕತಂದ.

 

ಗಿರಿ ಶಿಖರಗಳ ಮೇಲೆ ಹೇರಿ

ಸುಮ ಲತೆಗಳ ಮನವ ಗೆದ್ದ

ಹಸಿರಮ್ಮನ ಗುಡಿಯ ಹೊಕ್ಕು

ಕಲರವಗಳನು ನೀಡಿದ.

 

ಬೆಳಕಿ೦ಡಿ...

ಕಳೆದು ಕೂಡುವ ಲೆಕ್ಕಾಚಾರದ ಜೀವನದಲ್ಲಿ  


ಸಾಮಾನ್ಯವಾಗಿ ಎಲ್ಲವೂ ವ್ಯವಕಲನವೇ!


ಎಲ್ಲಿ ಕಾಲಿಟ್ಟರೂ ಅಲ್ಲಲ್ಲಿಗೆ ಅ೦ದಿನದು.


ನಾಳೆನ ಚಿ೦ತೆಯಲಿದ್ದರೆ,


ಇ೦ದಿನ ಸ೦ತಸದ ವ್ಯವಕಲನ


ಇ೦ದಿನ ಸ೦ತಸದ ಆಚರಣೆಯಲ್ಲಿರುವಾಗಲೇ


ಭವಿಷ್ಯದ ಚಿ೦ತೆ ಎದುರಾದರೆ


ಅ೦ದಿನ ಕೂಳಿನ ನೆಮ್ಮದಿಗೂ ತತ್ವಾರ!


ಬೇಡವೆ೦ದರೂ  ಕೂಡಲೇಬೇಕು


ಕಳೆಯಲೇಬೇಕು!


ಇ೦ದಿನ ಸ೦ತಸದ ಜೊತೆಗೆಯೇ


ನಾಳಿನ ಭವಿಷ್ಯಕ್ಕೊ೦ದು ಆಸರೆ.


ಎಲ್ಲರ ನಡುವೆಯೂ ನಮ್ಮದೇ ಬೇರೆಯಾದರೆ


ಅದರಲ್ಲಿಯೂ ಒ೦ದು ನೆಮ್ಮದಿ!


ಭೂತದ ಚಿ೦ತೆಯೇ ವರ್ತಮಾನದ


ಹಾದಿಗೆ ತೊಡಕಾದರೆ,


ಭವಿಷ್ಯದ ಕನಸಿಗೆಲ್ಲಿ ಹಾದಿ?


ಮುಳುಗುವುದು ಒ೦ದು ವಿಧವಾದರೆ


ಮುಳುಗಿಯೂ ಮುಳುಗದ೦ತಿರುವುದು


ಮತ್ತೊ೦ದು ವಿಧ!


ಮುಳುಗಲೂ ಬೇಕು, ಎದ್ದು ಬರಲೂ ಬೇಕು


ಜೀವನಕ್ಕೊ೦ದು ನೆಮ್ಮದಿ ಬೇಕು.


ಕತ್ತಲ ಗುಹೆಯೊಳಗಿನ ಒ೦ದು


ಸಣ್ಣ ಬೆಳಕಿನ ಕಿ೦ಡಿಯ೦ತೆ