ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅರಿವಳಿಕೆಗೆ ತಿಳಿವಳಿಕೆ ಪರ್ಯಾಯವಾಗಬಹುದೇ?

ನನಗೆ ಈ ಕೆಳಗಿನ ಒ೦ದು ಸ೦ದೇಹವಿದೆ. ಬಲ್ಲವರು ತಿಳಿಹೇಳಬೇಕೆ೦ದು ವಿನ೦ತಿಸುತ್ತೇನೆ.


 

ಅಂಗಿ

ಅಂಗಿ

ಇಷ್ಟೂ ದಿನ ತೊಟ್ಟು, ಬಣ್ಣ ಮಾಸಿರುವ
ಮೇಲಂಗಿಯನ್ನು ಕಳಚಿ ಹ್ಯಾಂಗರಿಗೆ ಹಾಕುವಾಗ
ಅಥವ
ಹಾಗೇ ಅಲ್ಲಿಂದ ತೆಗೆದು ತೊಟ್ಟುಕೊಳ್ಳುವಾಗ
ಮೂಗಿಗಡರುವ ಬೆವರ ವಾಸನೆ
ಮತ್ಯಾವುದೋ ಸ್ಮೃತಿಗೆ ದಬ್ಬುತ್ತದೆ
ಯಾವ ಯಾವುದೋ ಘಟನೆಗಳನ್ನು ತಬ್ಬುತ್ತದೆ.

ಹಾಗೆ ನೋಡಿದರೆ
ಹೊಸ ಅಂಗಿಗಳಿಗೆ ವಾಸನೆ
ಅಷ್ಟು ಸುಲಭಕ್ಕೆ ಹತ್ತಿಕೊಳ್ಳುವುದಿಲ್ಲ
ವಾದರೂ,
ತೊಟ್ಟು, ಕೊಳೆಯಾಗಿ ಮಡಿಮಾಡುವ ಹೊತ್ತಲ್ಲಿ
ಎಲ್ಲಿ ಬಣ್ಣ ಬಿಡುತ್ತದೋ ಎಂಬ ಜಿಜ್ಞಾಸೆ
ಯ ಜೊತೆ ಜೊತೆಗೇ ತೊಳೆಯುವ ಕಾಲಕ್ಕೆಲ್ಲಿ
ಉಳಿದ ಬಟ್ಟೆಗಳಿಗೂ
ಬಣ್ಣವಂಟಿಸಿಬಿಡುತ್ತದೋ ಎಂಬ ಆತಂಕ.

ಅಜ್ಜನ ಕಾಲವೇ ವಾಸಿ,
ಅಂಗಿ ತೊಡದೇ ಹಾಗೇ ತೆರೆದೆದೆಯಲ್ಲಿ

ಸಿನೆಮ ವ್ಯಸನವು ಬದುಕನ್ನು ಜಾಹಿರಾತಿನ ವಿರಾಮವನ್ನಾಗಿಸಿಬಿಡುತ್ತದೆ: ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೬

(೨೩೬) ವಿಚ್ಛೇದಿತ/ತೆ ಉವಾಚ: ಸ್ವರ್ಗದಲ್ಲಿ ವಿವಾಹವು ನಡೆದರೂ ನರಕದಲ್ಲಿ ಅದು ಸಾಕಾರಗೊಳ್ಳುತ್ತದೆ. ಆದರೆ ಅದನ್ನು ಭೂಮಿ ಎಂದು ತಪ್ಪಾಗಿ ಭಾವಿಸಲಾಗುತ್ತದೆಯಷ್ಟೇ!


(೨೩೭) ನೀವು ಸಿನೆಮ-ವ್ಯಸನಿಗಳಾಗಿದ್ದಲ್ಲಿ (ಫಿಲ್ಮೊಹಾಲಿಕ್)--ಎಷ್ಟೊಂದು ಚಲನಚಿತ್ರಗಳು ಸೃಷ್ಟಿಯಾಗಿವೆಯೆಂದರೆ--ದೈನಂದಿನ ಬದುಕೆಂಬುದು ಒಂದು ಜಾಹಿರಾತಿನ ವಿರಾಮವಷ್ಟೇ ಆಗಿಬಿಡುತ್ತದೆ!


(೨೩೮) ವೃದ್ಧರಾಗುವುದೆಂಬುದು ಯೌವ್ವನದ ’ನಂತರ’ದ ಸ್ಥಿತಿಯಲ್ಲ. ಬದಲಿಗೆ ಯೌವ್ವನದ ಸೋಂಬೇರಿತನವನ್ನು ಸರಿಪಡಿಸಿಕೊಳ್ಳಲಿರುವ ಸುದೀರ್ಘ ’ಅವಕಾಶ’.


(೨೩೯) ನಶ್ವರವಾದಿ: ದೇವರಾಣೆಗೂ ಆತನನ್ನೇ ಕುರಿತು ನನ್ನಲ್ಲಿ ಸಾಕಷ್ಟು ’ಗೊಂದಲ’ವಿದೆ; ಹಾಗೂ ಈ ಅನಿರ್ದಿಷ್ಟತೆಯನ್ನು ನಶ್ವರತೆ ಎಂದು ’ನಿರ್ದಿಷ್ಟ’ವಾಗಿ ವರ್ಗೀಕರಿಸ ಬಯಸುತ್ತೇನೆ!

ಯಶಸ್ಸಿಗಾಗಿ ಆಲ್ಬರ್ಟ್ ಐನ್ ಸ್ಟೈನ್ ರ ೧೦ ಸೂತ್ರಗಳು

ಅಲ್ಬರ್ಟ್ ಐನ್ಸ್ ಟೈನ್ ಲೋಕ ಕಂಡ ಅಪ್ರತಿಮ ವಿಜ್ನಾನಿಗಳಲ್ಲೊಬ್ಬರು. ಅವರ ಸಾಪೇಕ್ಷತಾ ಸಿದ್ದಾಂತದ ತಿರುಳನ್ನರಿತವರು ಇಂದಿಗೂ ಬಹು ಕಡಿಮೆ ಮಂದಿ. ಸೈದ್ದಾಂತಿಕ ಭೌತವಿಜ್ಞಾನಿ, ತತ್ವಜ್ಞಾನಿ ಮತ್ತು ಲೇಖಕ ಎಂದವರು ಪ್ರಸಿದ್ದರು. ತಮ್ಮ ದ್ಯ್ತುತಿ ವಿದ್ಯುತ್ ಪರಿಣಾಮದ ಸಂಶೋಧನೆಗಾಗಿ ೧೯೨೧ ರಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾದವರು .

 

೩೦೦ಕ್ಕೂ ಮಿಕ್ಕ ವೈಜ್ಞಾನಿಕ ಲೇಖನಗಳನ್ನು ೧೫೦ ಇತರ ಲೇಖನಗಳನ್ನು ಬರೆದ ಅವರು ಜಗತ್ತು ಕಂಡ ಅತೀ ಯಶಸ್ವಿ ವಿಜ್ಞಾನಿ ಎನ್ನಬಹುದು. ಅವರ ಬರಹಗಳಲ್ಲಿ ಕಾಣುವ ವಾಕ್ಯಗಳನ್ನು ಹಿಡಿದೇ ಬದುಕಿನ ಹತ್ತು ಮುಖ್ಯವಾದ ಪಾಠಗಳನ್ನು ನಾವಿಲ್ಲಿ ನೋಡೋಣ.

 

೧. ನನಗೆ ವಿಶೇಷ ಪ್ರತಿಭೆಯಿಲ್ಲ. ಆದರೆ ತೀವ್ರ ಆಸಕ್ತಿ ಇದೆ.

 

ನನ್ನ ಅಂದಿನ ಸಮಸ್ಯೆಗೆ ಇಂದು ಸಿಕ್ಕಿತು ಉತ್ತರ

ತುಂಬಾ ಹಿಂದೆ ನೆಟ್ಗೆ ಕನೆಕ್ಟ್ ಆಗಿರುವ ಸಿಸ್ಟಮ್‌ಗೆ ಮತ್ತೊಂದು ಸಿಸ್ಟಮ್‌ಗೆ ಲಾಗ್  ಆನ್  ಆಗೋದು ಹೇಗೆ ಎಂದು ಕೇಳಿದ್ದೆ. ಅದಕ್ಕೆ ಉತ್ತರ ಸಿಕ್ಕಿರಲಿಲ್ಲ.

ಅದಕ್ಕೆ ಒಂದು ವಾರದ ಹಿಂದೆ ಉತ್ತರವನ್ನು ಕಂಡುಕೊಂಡೆ

ಅದನ್ನ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳೋಣ ಎಂದು ಇದನ್ನ ಇಲ್ಲಿ ಪೋಸ್ಟ್ ಮಾಡುತ್ತಿದ್ದೇನೆ

ಬಹುಶ:  ಬಹಳ ಜನರಿಗೆ ಇದು ಈಗಾಗಲೇ ತಿಳಿದಿರುತ್ತದೆ . ಆ ತಿಳಿದಿಲ್ಲದ ಜನಕ್ಕಾಗಿ ಇದು.

 

ನಿಮ್ಮ ಕಂಪ್ಯೂಟರ್ ಆಫೀಸಿನಲ್ಲಿದೆ ಎಂದಿಟ್ಟುಕೊಳ್ಳಿ ಮತ್ತು ಆನ್ ಆಗಿದೆ ಹಾಗು ಅಂತರ್ಜಾಲದ ಸಂಪರ್ಕ ಹೊಂದಿದೆ

ಆತಂಕವಾದಿಗಳೂ... ಮಾದಕವಸ್ತುಗಳೂ...

ಹೊಸ ಹೊಸ ರೀತಿಯಲ್ಲಿ ನಮ್ಮ ದೇಶದ ಮೇಲೆ ಆಕ್ರಮಣ ಮಾಡುವುದು ಆತಂಕವಾದಿಗಳಿಗೆ ಒಂದು ಆಟವೇ ಆಗಿ ಹೋಗಿದೆ. ಮುಂಬೈ, ಪುಣೆ, ದೆಹಲಿ, ಬೆಂಗಳೂರು, ಹೈದರಾಬಾದ್, ಹೀಗೆ ಯಾವುದೇ ನಗರದಲ್ಲಿ ಸಂಭವಿಸಿರುವ ಉಗ್ರವಾದಿ ದಾಳಿಗಳನ್ನೇ ತೆಗೆದುಕೊಂಡರೂ ಇವುಗಳಲ್ಲಿ ಎದ್ದು ಕಾಣುವುದು ಈ ಮಂದಿಗೆ ಇಷ್ಟೆಲ್ಲಾ ಸಂಪನ್ಮೂಲಗಳು ಹೇಗೆ ಒದಗಿಬರುತ್ತವೆ ಎಂಬುದು. ನಮ್ಮದೇ ದೇಶದ ಕೆಲವರು ಇದಕ್ಕೆ ಸಹಕಾರಿಯಾಗಿಯೇ ಇದ್ದಾರೆಂದೇ ತಿಳಿದರೂ, ಇಷ್ಟೆಲ್ಲಾ ಕಾರ್ಯಾಚರಣೆಗಳನ್ನು ನಡೆಸಲು ತಗಲುವ ಸಮಯ, ಮಾನವ ಸಂಪನ್ಮೂಲಗಳನ್ನು ಹೊರತುಪಡಿಸಿ ಬಹುಮುಖ್ಯವಾದ “ಹಣ” ಎಂಬ ಸಂಪನ್ಮೂಲ ಎಲ್ಲಿಂದ ಬರುತ್ತಿದೆ ಎಂಬದರ ಬಗ್ಗೆ ನನಗೆ ಬಹಳ ಕುತೂಹಲವಿತ್ತು. ಇತ್ತೀಚೆಗೆ ಆಕಸ್ಮಿಕವಾಗಿ ಬಿ.ಬಿ.ಸಿ.

ಮಹಾ ಧರ್ಮಾತ್ಮ ಕಟ್ಟಾ ನಾಯ್ಡು


  ಕಟ್ಟಾ ಸುಬ್ರಹ್ಮಣ್ಯ ನಾಯ್ಡುರವರ ಕುಟುಂಬದ ವಿರುದ್ಧ ಆರೋಪಗಳನ್ನು ಮಾಡುವುದು ತರವಲ್ಲ. ಕುಟುಂಬದ ಯಜಮಾನರಾಗಿರುವ ಕಸುನಾ ಅವರು ಮಹಾನ್ ದೇಶಭಕ್ತ, ಧರ್ಮಾಸಕ್ತ ಮತ್ತು ಸರ್ವಧರ್ಮ ಸಾಮರಸ್ಯಭಾವ ಹೊಂದಿರುವ ಮಹಾತ್ಮ. ೨೦೦೪ರ ವಿಧಾನಸಭಾ ಚುನಾವಣೆಯಲ್ಲಿ ನಾನಿದನ್ನು ಕಣ್ಣಾರೆ ಕಂಡಿದ್ದೇನೆ.

ರಾಮ ವಿರಾಜಮಾನ, ರಾಮಾನುಭೂತಿ ಮತ್ತು ರಾಜಕೀಯ

 


       ಶ್ರೀ ರಾಮಚಂದ್ರ ಪರಮಾತ್ಮ, ನರಮಾನವ ರಾಜಶಿಶುವಾಗಿ “ಗರ್ಭಾವತಾರ” ಪಡೆದೆನೆಂದು ಹಿಂದೂ ಜನತೆ ಆರ್ಷೇಯ ಕಾಲದಿಂದ ನಂಬಿಕೊಂಡು ಬಂದಿರುವ ಜಾಗದಲ್ಲಿನ ಸದ್ಯ ವಿರಾಜಮಾನ ಲೋಹದೆರಕದ ರಾಮಮೂರ್ತಿಯನ್ನು ಕದಲಿಸಬಾರದೆಂದು ನ್ಯಾಯಾಂಗ ಹೇಳಿರುವುದು ಆಸ್ತಿಕರಿಗೆ ರೋಮಾಂಚನ ತಂದಿದೆ; ಅಲ್ಲದವರೂ ತಲೆತೂಗಿದ್ದಾರೆ. ಶತಮಾನಗಳ ಐತಿಹಾಸಿಕ ಕಟ್ಟು-ಕುಟ್ಟು-ಕೆಡಹುಗಳಿಂದಾದ ದಶಕಗಳ ನ್ಯಾಯಾಂಗೀಯ ಗೊಜ್ಜು-ಗೋಜಲುಗಳಲ್ಲೂ, ಕೋರ್ಟು,  ಆ ಸ್ಥಳ ವಿಶೇಷವನ್ನು “ಹಿಂದೂ ವಾರಸುದಾರರಿಗೆ” ಸಂದಾಯ ಮಾಡಿರುವುದು ಅತ್ಯದ್ಭುತ “ಲೌಕಿಕ” ಪ್ರಕ್ರಿಯೆ.

ಗೌಡರ ಪಟಾಲಮ್ಮೂ, ಡಬ್ಬಾ ಕಾರೂ, ಕೆರೆಯ ದಾರಿಯೂ.......!

"ಢಮಾರ್" ಅನ್ನೋ ಸವು೦ಡಿನ ಜೊತೆಗೆ ಕಾರು ನಿ೦ತಿದ್ದರಿ೦ದ ಒಳ್ಳೆ ನಿದ್ದೇಲಿದ್ದ ಗಣೇಸಣ್ಣ ಧಡಾರ೦ತ ಎದ್ದು ಕು೦ತಿದ್ರು, ಗೋಪಿನಾಥ ರಾಯ್ರು ’ಯಾಕ್ರೀ, ಹೆಗ್ಡೆರೇ, ಏನಾತು," ಅ೦ದ್ರೆ ಕಾರು ಓಡುಸ್ತಿದ್ದ ಸುರೇಶ್ ಹೆಗ್ಡೆರು ಬುಸು ಬುಸು ಉಸ್ರು ಬುಡ್ತಾ ಮು೦ದ್ಗಡೆಗೆ ಕೈ ತೋರ್ಸುದ್ರು!  ಅಲ್ಲಿ ನೋಡುದ್ರೆ ರಸ್ತೆ ಮಧ್ಯದಾಗೆ ಸೊ೦ಟದ ಮೇಲೆ ಕೈ ಮಡಿಕ್ಕೊ೦ಡು ಶೋಲೆ ಪಿಚ್ಚರ್ ಗಬ್ಬರ್ ಸಿ೦ಗ್ ಥರಾ ಪೋಸ್ ಕೊಡ್ತಾ ದುಬೈ ಮ೦ಜಣ್ಣ ನಿ೦ತಿದ್ರು!  ಅದೇನು ಕ್ವಾಪಾ ಬ೦ದಿತ್ತೋ, ಇಲ್ಲಾ ರಾತ್ರೇದು ಇನ್ನಾ ಇಳ್ದಿರ್ಲಿಲ್ವೋ, ಪಾಪ, ಕಣ್ಣೆಲ್ಲಾ ಕೆ೦ಡದು೦ಡೆ ಥರಾ ಕೆ೦ಪಾಗಿದ್ವು, ಸಿಟ್ಟಿನಿ೦ದ ಹೂ೦ಕರುಸ್ತಾ ಬ೦ದು ಕಾರಿನ್ ಬಾನೆಟ್ ಮೇಲೆ ಒ೦ದೇಟು ಸರ್ಯಾಗಿ ಬುಟ್ರು, ಬಾನೆಟ್ ಪಕ್ಕದ್ ತಗಡು ಟಪ್ಪ೦ತ ಕಳ್ಚ್ಕೊ೦ಡು ರಸ್ತೇಗ್ ಬಿತ್ತು.  ಹೆಗ್ಡೇವ್ರು ಅದೇನೋ ಹೇಳಕ್ಕೋ

ಶಾಸ್ತ್ರಿಗಳಿಗೊಂದು ಸಲಾಂ ಹೇಳೋಣ ಬನ್ನಿ!

ಶಾಲೆ ಮುಗಿಸಿ ಮನೆಗೆ ಹೊರಟ ಕೆಲ ಮಕ್ಕಳು ದಾರಿಯಲ್ಲಿ ಸಿಕ್ಕ ಮಾವಿನ ತೋಟಕ್ಕೆ ಲಗ್ಗೆಯಿಟ್ಟರು.ಕೆಲ ಹುಡುಗರು ಮರ ಹತ್ತಿ ಮಾವಿನ ಹಣ್ಣು ಕೀಳುತಿದ್ದರೆ, ಒಬ್ಬ ಬಾಲಕ ಮಾತ್ರ ಕೆಳಗೆ ನಿಂತು ನೋಡುತಿದ್ದ.ಮಾಲಿ ಅಲ್ಲಿಗೆ ಬಂದ ಕೂಡಲೇ ಮರ ಹತ್ತಿದ್ದ ಹುಡುಗರು ಕಾಲ್ಕಿತ್ತರೆ, ಆ ಬಾಲಕ ಸಿಕ್ಕಿಬಿದ್ದ.ಮಾಲಿ ಹುಡುಗನಿಗೆ ಬೈದು,ಥಳಿಸಲಾರಂಭಿಸಿದ ಆ ಬಾಲಕ ‘ನನ್ನನ್ನು ಬಿಟ್ಟು ಬಿಡಿ,ನಾನು ಅಪ್ಪ ಇಲ್ಲದ ಹುಡುಗ’ ಎಂದು ಅಂಗಲಾಚಿದ.ಕರಗಿದ ಮಾಲಿ,’ಅಪ್ಪ ಇಲ್ಲದವನು ಇನ್ನು ಮೇಲೆ  ಜವಾಬ್ದಾರಿಯುತವಾಗಿ ಇರುವುದನ್ನು ಕಲಿ’ ಎಂದು ಹೇಳಿ ಬಿಟ್ಟುಬಿಟ್ಟ.ಅಲ್ಲಿಂದ ಇನ್ನೆಂದು ಇಂತ ಕೆಲಸ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿ ಹೊರಟ ಆ ಹುಡುಗನಿಗೆ ಆಗ ೬-೭ ವರ್ಷವಿದ್ದಿರಬೇಕು.ಬಹುಷಃ ಅಂದೇ ಆತ ತನ್ನ ನಡೆ-ನುಡಿ ಆದರ್ಶಪ್ರಾಯವಾಗಿರಬೇಕು ಅಂತ ನಿರ್ಧರಿಸಿಬ