ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹನಿ ಕವನಗಳು

*ಕಾವಲು
ವಸುದೆಯ ಮೇಲೆ
ಯಾರೂ ಹಾಕದಂತೆ
ಕಣ್ಣು
ಕಾವಲಿಟ್ಟಿದ್ದಾನೆ
ವರುಣ
ಹಗಲಿಗೆ ಸನ್ (SUN)
ಇರುಳಿಗೆ ಮೂನ್ (MOON)
* ಸೆಕ್ಯುರಿಟಿ
ವಸುದೆಯ ಯಾರೂ
ಕದ್ದೊಯ್ಯ ದಿರಲೆಂದು
ಮೇಘರಾಜ ಕಾವಲಿಟ್ಟ
ಹಗಲಿಗೆ ಸೂರ್ಯ
ಇರುಳಿಗೆ ಚಂದ್ರ
*ನಾನು- ಅವಳು
ಅವಳು ನನಗೆ
ಬಳುಕುವಾ
ಕೋಮಲೆ (ಕಮಲೆ)
ನಾನು ಅವಳಿಗೆ
ಕಬ್ಬಿಣದ
ಕಡಲೆ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಏಕೆ ಬ೦ದೆ ಇಲ್ಲಿಗೆ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಏಕೆ ಬ೦ದೆ ಇಲ್ಲಿಗೆ
ನನ್ನ ಬರಡು ಬಾಳಿಗೊ೦ದು ಪ್ರೀತಿ ಕೊಟ್ಟ ಮಲ್ಲಿಗೆ
ಶ್ರಮವನಿತ್ತು ನಿದ್ದೆ ತೊರೆದೆ ನನ್ನ ಬಾಳ ಗೆಲುವಿಗೆ
ನಿನ್ನ ನೂರು ನೋವುಗಳನು ಮರೆತು ಕೂತೆ ಮೆಲ್ಲಗೆ

ಇನಿತು ಮುನಿಸು ಇನಿತು ಪ್ರೀತಿ ಎಲ್ಲ ಮೀರಿ ನಸುನಗೆ
ಮೊಗದ ತು೦ಬ ಧರಿಸಿ ಬ೦ದೆ ನಗುವ ಕೆ೦ಡಸ೦ಪಿಗೆ
ಒಲವುಗೆಲುವು ಎ೦ತೊ ಎನಿತೋ ನಾನರಿಯೆ ಇ೦ದಿರೆ

ಪರಿಸರ ವಿಜ್ನಾನಿಯ ಗೊಂದಲಮಯ ಮನಸ್ಸಿನೊಳಗೆ ಪರಿಸರ ಸೇವೆಯ ದೊಬ್ಬರಾಟ!

ನನ್ನ ಹಿಂದಿನ ಬರವಣಿಗೆ ನನಗೆ ಅಷ್ಟು ಸಮಧಾನ ಕೊಡಲಿಲ್ಲವೆಂದು ಇದನ್ನು ಮುಂದುವರೆಸುತಿದ್ದೇನೆ. ದಯವಿಟ್ಟು ಇವನ ಕಥೆ ಇನ್ನು ಮುಗಿಯಲಿಲ್ಲವೇ ಎಂಬ ಕೊರಗನ್ನು ಕ್ಷಣಿಕ ಮಾತ್ರಕ್ಕೆ ಮುಂದೂಡಿ ಇದೊಂದನ್ನು ಓದಿ ನಿಮ್ಮ ಅನಿಸಿಕೆ ತಿಳಿಸಲೇಬೇಕು. ಮೊದಲನೆಯದಾಗಿ, ಪರಿಸರ ಸಂರಕ್ಷಣೆ ಅಥವಾ ಪರಿಸರ ಆಚರಣೆಯ ವಿಷಯ.

ತೋರಿಕೆಯ ಬದುಕಿಗೆ ಬುನಾದಿಯಾದ ಪರಿಸರ ಪ್ರೇಮವೆಂಬ ಸೋಗು!

ಬಹಳ ದಿನಗಳಿಂದಲೂ ಭಾವನೆಗಳು, ಸಂಭಂಧಗಳು, ಪ್ರೀತಿ, ಪ್ರೇಮ, ಮೋಸ ಅದು ಇದು ಅಂತಾ ಅದೇ ಗುಂಗಿನಲ್ಲಿ ನನ್ನ ಬರಹವನ್ನು ನಿಮ್ಮನ್ನು ಸುತ್ತಾಡಿಸಿ ಬೇಸರ ಮಾಡಿಸಿದ್ದಕ್ಕಾಗಿ ಇಂದು ಬೇರೆಯ ವಿಷಯದ ಬಗ್ಗೆ ಬರೆಯುವುದಕ್ಕೆ ಕುಳಿತಿದ್ದೇನೆ. ಬೇರೆ ವಿಷಯ ಎಂದ ತಕ್ಷಣ ಗಾಬರಿಪಡುವಂತದ್ದೇನು ಇಲ್ಲ.

ತಲೆ ನವೆ...

ತಲೆ ನವೆ...

ಮೊನ್ನೆ ಭಾನುವಾರ ರಾಮನಗರಕ್ಕೆ ಹೋಗಿದ್ದಾಗ ರಾಮದೇವರ ಬೆಟ್ಟದ ಬಳಿ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ.

ಇನ್ನಷ್ಟು ಚಿತ್ರಗಳನ್ನು ರಾತ್ರಿ ಅಪ್ಲೋಡ್ ಮಾಡುವೆ.

ಇಬ್ಬನಿ...

ಮೊನ್ನೆ ಭಾನುವಾರ ರಾಮನಗರಕ್ಕೆ ಹೋಗಿದ್ದಾಗ ರಾಮದೇವರ ಬೆಟ್ಟದ ಬಳಿ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ.

ಇನ್ನಷ್ಟು ಚಿತ್ರಗಳನ್ನು ರಾತ್ರಿ ಅಪ್ಲೋಡ್ ಮಾಡುವೆ.

ಬಿಡಿಸದಿರು ರಂಗೋಲಿ ಕನಸಿನಲಿ

ಬಿಡಿಸದಿರು ರಂಗೋಲಿ ಕನಸಿನಲಿ
ಚಿತ್ತ ಚಿತ್ತಾರದ ರೇಖೆಗಳ ಕೊರೆದು
ಬಣ್ಣ ಬಣ್ಣದ ರಂಗು ತುಂಬಿ
ಬಿಡಿಸದಿರು ರಂಗೋಲಿ ಕನಸಿನಲಿ.

ಬಯಸದಿರು ಅವಳನ್ನು ಬಾಳಿನಲಿ
ಸವೆಸದಿರು ದಿನವೆಲ್ಲ ಕನಸಿನಲಿ
ಬತ್ತದಿರು ನೀರಿಕ್ಷೆಯ ಮಾಯೆಯಲಿ
ಬಿತ್ತದಿರು ನಿರಾಶೆಯ ಜೀವನದಲಿ
ಈಜದಿರು ಕನಸೆಂಬ ಕಡಲಿನಲಿ
ಕೊಲ್ಲದಿರು ವಾಸ್ತವವ ಕನಸಿನಲಿ.

ಬೇಡದಿರು ಚಂದಿರನ ಕೈಯಲ್ಲಿ

ಚಾರ್ ಧಾಮ್ ಪ್ರವಾಸದ ಚಿತ್ರಗಳು

ಕೇದಾರದ ಅನುಭವಗಳನ್ನು ಬರೆಯುವ ಮೊದಲು ಚಿತ್ರಗಳ ಕೊಂಡಿ ಹಾಕಿದ್ದೇನೆ.... ಬರಹದಲ್ಲೂ ಕೆಲವು ಚಿತ್ರಗಳನ್ನು ಹಾಕಲು ಪ್ರಯತ್ನಿಸುತ್ತೇನೆ. ಪ್ರಕೃತಿ ಸೌಂದರ್ಯ ನೋಡಿ ಆನಂದಿಸಿ......

http://picasaweb.google.co.in/shamalajanardhanan/Upload2#

ಶ್ಯಾಮಲ