ಬಿಡಿಸದಿರು ರಂಗೋಲಿ ಕನಸಿನಲಿ

Submitted by mdnprabhakar on Wed, 06/17/2009 - 12:06

ಬಿಡಿಸದಿರು ರಂಗೋಲಿ ಕನಸಿನಲಿ
ಚಿತ್ತ ಚಿತ್ತಾರದ ರೇಖೆಗಳ ಕೊರೆದು
ಬಣ್ಣ ಬಣ್ಣದ ರಂಗು ತುಂಬಿ
ಬಿಡಿಸದಿರು ರಂಗೋಲಿ ಕನಸಿನಲಿ.

ಬಯಸದಿರು ಅವಳನ್ನು ಬಾಳಿನಲಿ
ಸವೆಸದಿರು ದಿನವೆಲ್ಲ ಕನಸಿನಲಿ
ಬತ್ತದಿರು ನೀರಿಕ್ಷೆಯ ಮಾಯೆಯಲಿ
ಬಿತ್ತದಿರು ನಿರಾಶೆಯ ಜೀವನದಲಿ
ಈಜದಿರು ಕನಸೆಂಬ ಕಡಲಿನಲಿ
ಕೊಲ್ಲದಿರು ವಾಸ್ತವವ ಕನಸಿನಲಿ.

ಬೇಡದಿರು ಚಂದಿರನ ಕೈಯಲ್ಲಿ
ಸುಮ್ಮನೆ ಕಣ್ಬಿಟ್ಟು ನೋಡಲ್ಲಿ
'ಅವನಲ್ಲಿ' 'ನೀನಿಲ್ಲಿ'
ಬಯಸದಿರು ಅವಳನ್ನ ಬಾಳಿನಲಿ.

ಕೂಡದಿರು,ಕಳೆಯದಿರು,ಗುಣಿಸಿ ಭಾಗಿಸದಿರು
ಏನಾದರೂ "ಸೊನ್ನೆ"
ಯಾಕೆಂದರೆ ಅವಳು ನಿನ್ನ ಪಾಲಿಗೆ "ಶೂನ್ಯ "

Rating
No votes yet

Comments