ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬದುಕು

ಹುಟ್ಟೆಂಬ ದೋಣಿಯನೇರಿ
ಹುಟ್ಟು ಹಾಕುತ್ತಾ
ಹೊರಟಿದೆ ಈ ಬಾಳ ಪಯಣ

ಇರುವುದು ಕೆಲವೆಡೆ
ಶಾಂತ ಸಾಗರದಂತೆ ಸುಖದ ಅಲೆಗಳು
ಮತ್ತೆ ಕೆಲವೆಡೆ ಇರುವುದು
ಬಿರುಗಾಳಿ ಪೀಡಿತ ಕಷ್ಟದಲೆಗಳು

ಹೇಳಲಾಗದು ಇಲ್ಲಿ ಎಂದು ಮಗುಚುವುದೆಂದು
ಬದುಕೆಂಬ ದೋಣಿಯು
ಕೆಲವೊಮ್ಮೆ ಬೇಕಾಗಿಲ್ಲ ಅದಕ್ಕೆ
ಬರಸಿಡಿಲ ಪೆಟ್ಟು
ಸಾಕಾಗಲುಬಹುದು ತಿಳಿ ನೀರ ಸುಳಿಯು

ಜನುಮ ದಿನದ ಶುಭಾಶಯಗಳು

ಸಂಪದ ಬಳಗದಲ್ಲೊಬ್ಬರಾದ ಜಯಲಕ್ಷ್ಮಿ ಪಾಟೀಲ್ ರವರ ಹುಟ್ಟು ಹಬ್ಬ ಇಂದು .ಅವರಿಗೆ ಸಂಪದ ಬಳಗದವರ ಪರವಾಗಿ ಜನ್ಮ ದಿನದ ಹಾರ್ದಿಕ ಶುಭಾಶಯಗಳು .

 

ಹೊಟ್ಟೆನೋವು ಮತ್ತು ಲೇಮನ್ ಸೋಡಾ: ಹೀಗೂ ಒಂದು ಪ್ರೇಮಕಥೆ

“ನೀನು ಬರ್ತೀಯೋ ಇಲ್ವೋ? ಏನೋ ಅನ್ನೋದನ್ನ ನನಗೆ ಹತ್ತೇ ಹತ್ತು ನಿಮಿಷದಲ್ಲಿ ಹೇಳು, ನಾನು ಹೊರಗಡೆ ನಿನಗೋಸ್ಕರ ಕಾಯ್ತಾ ಇರ್ತೀನಿ”, ಎಂದು ಭೂಸುಗೂಡುತ್ತಾ ಹರ್ಷ ಲೈಬ್ರರಿಯಿಂದ ಹೊರಗಡೆ ಬಂದು ಗಿಡದ ನೆರಳಿಗೆ ನಿಂತ.

‘ಏನೋ ಇವಳೊಬ್ಬಳಿಗೆ ಮಾತ್ರ ಇಂಟರ್ನಲ್ ಇರೋ ಹಾಗೆ ಮಾಡ್ತಳೆ, ಬೇರೆಯವರಿಗೇನು ಇಲ್ವಾ’. ಯಾವತ್ತೂ ತನ್ನ ಬೈಕ ಮುಟ್ಟಿಸೋಕೆ ಬಿಡದೆ ಇರೋ ಪಕ್ಯಾ (ಪ್ರಕಾಶ) ಇವತ್ತು ನನ್ಮಗ ಯಾವ ಮೂಡಲ್ಲಿದ್ನೊ, “ಮಾಮಾ, ನನ್ನ ಹುಡಿಗಿನ ಎಲ್ಲಾದ್ರೂ ಸುತ್ತಾಡಿಸ್ಕೊಂಡು ಬರ್ತೀನಿ ಬೈಕ ಕೊಡೋ” ಎಂದ ಕೂಡಲೇ ಕೊಟ್ಟೆ ಬಿಟ್ಟ, ಪೆಟ್ರೋಲ್ ಟ್ಯಾಂಕ ಬೇರೆ ಫೂಲ ತುಂಬಿಸಿದ್ದಾನೆ. ಇವಳು ನೋಡಿದ್ರೆ ‘ಇವತ್ತು ಬ್ಯಾಡಾ, ಮತ್ಯಾವತ್ತರ ಹೋಗೋಣೂ’ ಅನ್ನುತ್ತಿದ್ದಾಳೆ.

ನಗುತಿರುವ ಚಂದಿರ

ಈಗೀಗಂತೂ ವಾತಾವರಣ ತುಂಬಾ ಚೆನ್ನಾಗಿದೆ. ಆಹ್ಲಾದಕರವಾಗಿದೆ. ಒಂದು ಕಡೆ ಮೋಡ , ಮಳೆ, ಮುಂಗಾರಿನ ಗದ್ದಲ, ರಾತ್ರಿಯಾಯ್ತೆಂದರೆ ಅದೇ ಮೋಡಗಳ ನಡುವೆ ಆಗೊಮ್ಮೆ ಈಗೊಮ್ಮೆ ತನ್ನ ಇರವನ್ನು ತೋರುವ ಚಂದಾದ ಚಂದ್ರಾಮ.... ಕವಿತೆ ಹುಟ್ಟದಿದ್ದೀತೆ ? ಹಾಗೇ ಸುಮ್ಮನೆ ಬರೆದ ಸಾಲುಗಳಿವು ನಿಮಗಾಗಿ ...

ನಗುತಿರುವ ಚಂದಿರನು
ಹಾಲ್ಗಡಲನುಕ್ಕಿಸಿ
ಹರಿಸಿ ಬೆಳಕಿನ ಹೊನಲ

ಭೂಮಿ -ಆಕಾಶ

ದೂರ ತೀರವ ದಾಟಿ
ತಿರುಗಿ ನೋಡದೆ
ಮುಂದೆ ಹೋಗುವ
ಪಯಣಿಗ ನೀನು.

ನಿಂತಲ್ಲೇ ನಿಲುವ
ನಿಶ್ಚಲ ತೀರ ನಾನು.

ಕನಸುಗಳ ಕೈಬಿಟ್ಟು
ಭಾವಗಳ ಬದಿಗಿಟ್ಟು
ಭಾನಿನೆತ್ತರದಲ್ಲಿ
ಹಾರಿಹೋಗುವ ಚಲುವೆ
ಮರೆಯದಿರು
ನಾನಿರುವದು ಇಲ್ಲೇ
ಈ ಭೂಮಿಯಲ್ಲಿ.
-----ಸತ್ಯಾತ್ಮ ------

ಶುಭೋದಯ!

ಶುಭೋದಯ!

ನಮ್ಮ ಜೀವನದಲ್ಲಿ ಎಲ್ಲಾ ದಿನಗಳೂ ಒಂದೇ ತೆರನಾಗಿರುವುದಿಲ್ಲ

ಕೆಲವು ದಿನ ಭಾವನೆಗಳಿದ್ದರೂ ವ್ಯಕ್ತಪಡಿಸಲು ಶಬ್ದಗಳಿರುವುದಿಲ್ಲ!!!

ಶುಭದಿನ!

೭೫ ವಸಂತಗಳ ಸಫಲ,-ಜೀವನ-ಸಂಭ್ರಮದ " ಮುಂಬೈನ ಕರ್ನಾಟಕ ಸಂಘ " !

ಒಂದು ಸಂಸ್ಥೆಯಾಗಲೀ ಅಥವಾ ಒಬ್ಬ ವ್ಯಕ್ತಿಯಾಗಲೀ ೭೫ ವರ್ಷಗಳನ್ನು ತನ್ನ ಜೀವಿತದಲ್ಲಿ ಸಮರ್ಥವಾಗಿ, ಅರ್ಥಪೂರ್ಣವಾಗಿ, ಕಳೆದನೆಂದರೆ, ಅದರಿಂದ ಸಿಕ್ಕುವ ಆನಂದಕ್ಕೆ ಎಣೆಯೆಲ್ಲಿದೆ ? ಈಗ ಅಂತಹದೇ ಒಂದು ಸುಂದರ ಸನ್ನಿವೇಷವನ್ನು ನಾವು ಮುಂಬೈನ ಒಂದು ಕನ್ನಡ ಸಂಘದ ಇತಿಹಾಸದಲ್ಲಿ ಕಾಣುತ್ತಿದ್ದೇವೆ.