ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಹಾತ್ಮಾ ಸಾಯುವಾಗ ಹೇಳಿದ್ದೇನು..."ಹೇರಾಮ್" ಅಥವಾ "ಓ ಗಾಡ್"?

ರಿಚರ್ಡ್ ಅಟೆನ್ಬರೋ ನಿರ್ದೇಶಿತ "ಗಾಂಧಿ" ಚಲನ ಚಿತ್ರವನ್ನು ಹತ್ತಾರು ಬಾರಿ ನೋಡಿದ್ದೇನೆ.
ಆದರೆ ಅದಷ್ಟೂ ಬಾರಿಯೂ ಹಿಂದಿ ಚಿತ್ರವನ್ನೇ ನೋಡಿದ್ದಾಗಿತ್ತು.
ಆದರೆ ೧೦-೧೫ ದಿನಗಳ ಹಿಂದೆ ಟಿವಿಯಲ್ಲಿ ಆಂಗ್ಲಭಾಷೆಯ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು.
ಅದರಲ್ಲಿ ಮಹಾತ್ಮಾಗಾಂಧಿಗೆ ಗುಂಡೇಟು ಬಿದ್ದಾಗ ಅವರ ಬಾಯಿಯಿಂದ "ಓ ಗಾಡ್" ಅನ್ನುವ ಉದ್ಘಾರ ಹೊರಡುತ್ತದೆ.

ದೇವರು ಮತ್ತು ನಂಬಿಕೆ

ಇಂದು ಒಂದು ನೈಜ ಘಟನೆ ಅಂತೆ :

ಆಗತಾನೆ ಸೇರ್ಪಡೆ ಆದ ಒಬ್ಬ ವಿದ್ಯಾರ್ಥಿಗೆ ಫಿಲಾಸಫಿ ಪ್ರೊಫೆಸರ್ ದೇವರ ಬಗ್ಗೆ ಕೇಳುವ ಪ್ರಶ್ನೆಗಳು ಮತ್ತು ಅವನ ಉತ್ತರ :

ಪ್ರೊಫೆಸರ್ :ನೀನು ದೇವರನ್ನು ನಂಬುತ್ತಿಯ?
ವಿದ್ಯಾರ್ಥಿ :ಖಂಡಿತವಾಗಿಯೂ
ಪ್ರೊ :ಹಾಗಾದರೆ ದೇವರು ಒಳ್ಳೆಯವನ ?
ವಿ :ಹೌದು
ಪ್ರೊ :ದೇವರು ಶಕ್ತಿವಂತನ ?
ವಿ :ಹೌದು

ನಮ್ಮಕ್ಕ ಇದ್ಧಾಗೇ ಇದ್ದಾರಲ್ಲಾ!

ಇವತ್ತು ನನ್ನ ವಂಶವೃಕ್ಷದ ಬಗ್ಗೆ ಒಂದು ಬರಹ ಇಲ್ಲೇ ಸಂಪದದಲ್ಲಿ ಹಾಕಿದೆ. ಬಹುಶ: ಅದನ್ನು ಓದಿದ ಮಿತ್ರ ಶ್ರೀಕಾಂತ್  "ವಂಶ ವೃಕ್ಷ?" ಕುಟುಕು ಬರಹ ಹಾಕಿದ್ರು. ಪರವಾಗಿಲ್ಲ.ನಾವೆಲ್ಲಾ ಮೂಲದಲ್ಲಿ ಮಂಗನಿಂದ ಮಾನವ ರಾಗಿದ್ದೇವೆಂದು ಓದಿದ್ದೇವೆ. ಕೆಲವರು ಇನ್ನೂ ಹಾಗೆಯೇ ಉಳಿದಿದ್ದೇವೆ. ಇರಲಿ....

ನಾನೇಕೆ  ವಂಶವೃಕ್ಷ ಬರೆಯಲು ಹೊರಟಿರುವೆ? ಅದರ ಹಿನ್ನೆಲೆ ಸ್ವಲ್ಪ ತಿಳಿಸಿದರೆ ಉತ್ತಮ ಅಲ್ವಾ?

ಘಟನೆ-೧:-

ಸತ್ತವನು (ನಾಟಕ) ಭಾಗ ೪

http://sampada.net/article/20790

http://sampada.net/article/20847

http://sampada.net/article/20982

ದ್ರಶ್ಯ ೪
ಹಳ್ಳಿಯಲ್ಲಿ ಮತದಾನ ನಡೆಯುತ್ತಿರುತ್ತದೆ ಒ೦ದಿಬ್ಬರು ಆ ಸ್ಠಳಕ್ಕೆ ಬರುತ್ತಾರೆ
ವ್ಯಕ್ತಿ ೧ : ಅಗ್ಗಳಪ್ಪ, ಆಗ್ಲೇ ರೇಸನ್ ಬ೦ದುಬಿಡ್ತಾ?
ವ್ಯಕ್ತಿ ೨ : ಲೇ ಅದು ರೇಸನ್ ಅಲ್ಲಲೆ ಇವತ್ತು ಓಟಿ೦ಗ್ ಅಲ್ಲೇನಲೆ

ನಿನಗಾಗಿ 'ನಾ' ನೋಯುವದಿಲ್ಲ

ಕೊರಗುವದಿಲ್ಲ ಮರಗುವದಿಲ್ಲ
ನಿನಗಾಗಿ ನಾ ಹಂಬಲಿಸುವದಿಲ್ಲ
ಕಾಯುವದಿಲ್ಲ ನೋಯುವದಿಲ್ಲ
ನಿನಗಾಗಿ ನಾ ಹಲುಬುವದಿಲ್ಲ.

ಸೋಲುವದಿಲ್ಲ ಸಾಯುವದಿಲ್ಲ
ನಿನಗಾಗಿ ನಾ ದುಃಖಿಸುವದಿಲ್ಲ
ನನಗಾಗಿ ನೀ ಬದುಕದಿದ್ದಾಗ
ನಿನಗಾಗಿ ನಾ ಕುರುಬುವದಿಲ್ಲ .

ಪ್ರೀತಿಯ ಹಂಗನು ತೊರೆಯುವೆನೆಲ್ಲಾ
ನಿನ್ನನೇ ಮರೆತು ಬಾಳುವೆನೆಲ್ಲಾ
ನಿನ್ನ ಹತ್ತಿರ ಸುಳಿಯುವನಲ್ಲ

ರಾಟೆ

ವರಗಳ ಪೆಟ್ಟಿಗೆಯ ಬಳಿ ಕುಳಿತು ನುಡಿದ ದೇವ
ಮೊದಲು ಮಾನವನ ಮಾಡಿದಾಗ
ಜಗದ ಸೊಬಗೆಲ್ಲ ಇವನ ಬಳಿ ಬಿದ್ದಿರಲಿ
ಕೊಡುವೆ ಎಲ್ಲ ವರಗಳನಿವಗೆ ನನಗಿರುವ ಶಕ್ತಿಯಲಿ

ಶಕ್ತಿಯಿತ್ತನು ಮೊದಲು, ಸೌಂದರ್ಯ ಹಿಂದೆ, ಬುದ್ದಿ ಮತ್ತೆ ಗೌರವ
ಜತೆಗಷ್ಟು ಸಂತಸ ಹೀಗೆ ಕೊಟ್ಟನು ದೇವ ಎಲ್ಲವನ್ನೂ,
ಕೊನೆಯದೊಂದನು ಕೊಡುವ ಮುನ್ನ ಸ್ವಲ್ಪ ನಿಂತನು .

ಏನಿರಲೇಕೆ ಸಖೀ?

ಸಖೀ,
ನೀನಿಲ್ಲದ ಮೇಲೆ ಏನಿರಲೇಕೆ?

ನಿನ್ನ ಮುಖವ ನೋಡಲಾಗದ
ನನ್ನೀ ಕಣ್ಣುಗಳಿರಲೇಕೆ?

ನಿನ್ನ ಸವಿ ಮಾತುಗಳನು
ಆಲಿಸಲಾಗದ,
ನನ್ನೀ ಕಿವಿಗಳಿರಲೇಕೆ?

ನೀನಿರುವೆಡೆ ಕೊಂಡೊಯ್ಯದ
ನನ್ನೀ ಕಾಲುಗಳಿರಲೇಕೆ?

ನಿನ್ನನ್ನೊಮ್ಮೆ ಸ್ಪರ್ಶಿಸಲಾಗದ
ನನ್ನೀ ಕೈಗಳಿರಲೇಕೆ?

ನಿನಗರ್ಪಿಸಲಾಗದ ಈ ಹೃದಯ
ನನ್ನೊಳಗಿರಲೇಕೆ?

ನಿನ್ನ ದರುಶನವಾಗದ ದಿನ,
ಆ ಸೂಯ೯ನಿರಲೇಕೆ?

ಶುಭೋದಯ!

ಶುಭೋದಯ!

ನಾನು ಅನ್ಯರ ಸಂತಸಕ್ಕೆ ಕಾರಣನಾಗಬಲ್ಲೆ, ಪಾಲುದಾರನಲ್ಲ;

ನಾನು ಅನ್ಯರ ದುಃಖದಲ್ಲಿ ಪಾಲುದಾರನಾಗಬಲ್ಲೆ, ಕಾರಣನಲ್ಲ!

ಶುಭದಿನ!!!

ಮೂಲಭೂತ ಪ್ರಶ್ನೆ

ಎಲ್ಲೋ ಮರದ ಕೆಳಗೆ
ಒ೦ಟಿಯಾಗಿ ಕೂತು
ಬರೆದ ಕವಿತೆಗೆ
ಉಸಿರಿದೆ ಹೆಸರಿಲ್ಲ

ಒ೦ದರ ಹಿ೦ದೊ೦ದು
ನುಗ್ಗಿ ಬರುವ ಪದಗಳು
ಪುಟಗಳನ್ನು ತು೦ಬಿಸಿದವು
ಮನಸು,ಖಾಲಿ ಖಾಲಿ

ಬರೆಯಲು ಮತ್ತೇನಿಲ್ಲ
ಅಸ೦ಖ್ಯ ಗೆರೆಗಳ ನಡುವೆ
ನಿರ್ಭಾವುಕ ಮನ
ಸುತ್ತ ಹಸಿರು
ಕೋಗಿಲೆಯ ಹಾಡು
ನನ್ನವಳ ನಗು
ಮಗುವಿನ ಚೆಲುವು
ಎಲ್ಲವೂ ಕಾಣೆಯಾಗಿದೆ

ತಾಸುಗಟ್ಟಲೆ
ಧೇನಿಸಿದರೂ
ವಸ್ತುವೂ ಇಲ್ಲ,