ನಿನಗಾಗಿ 'ನಾ' ನೋಯುವದಿಲ್ಲ

ನಿನಗಾಗಿ 'ನಾ' ನೋಯುವದಿಲ್ಲ

ಕೊರಗುವದಿಲ್ಲ ಮರಗುವದಿಲ್ಲ
ನಿನಗಾಗಿ ನಾ ಹಂಬಲಿಸುವದಿಲ್ಲ
ಕಾಯುವದಿಲ್ಲ ನೋಯುವದಿಲ್ಲ
ನಿನಗಾಗಿ ನಾ ಹಲುಬುವದಿಲ್ಲ.

ಸೋಲುವದಿಲ್ಲ ಸಾಯುವದಿಲ್ಲ
ನಿನಗಾಗಿ ನಾ ದುಃಖಿಸುವದಿಲ್ಲ
ನನಗಾಗಿ ನೀ ಬದುಕದಿದ್ದಾಗ
ನಿನಗಾಗಿ ನಾ ಕುರುಬುವದಿಲ್ಲ .

ಪ್ರೀತಿಯ ಹಂಗನು ತೊರೆಯುವೆನೆಲ್ಲಾ
ನಿನ್ನನೇ ಮರೆತು ಬಾಳುವೆನೆಲ್ಲಾ
ನಿನ್ನ ಹತ್ತಿರ ಸುಳಿಯುವನಲ್ಲ
ನಿನ್ನನೇ ನಾನು ಮರೆಯುವೆನಲ್ಲಾ .

ನಿನ್ನನೇ ನೆನಸಿ ಕಾಯುವದಿಲ್ಲ
ನನ್ನದೇ ಯೋಚನೆ ನನಗಿಹುದಲ್ಲಾ
'ನೀ ಕೈ ಕೊಟ್ಟವಳೆಂದು' ಕರೆಯುವದಿಲ್ಲ
ನಿನ್ನನೇ ಮನಸಿಂದ ಅಟ್ಟುವನೆಲ್ಲಾ.

ಕೊರುಗುವದಿಲ್ಲ ಮರಗುವದಿಲ್ಲ
ನಿನಗಾಗಿ ನಾ ಹಂಬಲಿಸುವದಿಲ್ಲ
ಕಾಡುವದಿಲ್ಲ ಬೇಡುವದಿಲ್ಲ
ನಿನಗಾಗಿ 'ನಾ' ನೋಯುವದಿಲ್ಲ.

Rating
No votes yet

Comments