ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೋಡು ಬಾ ನಮ್ಮೂರ!............೯

ಇಲ್ಲಿ ಡ್ರೈ ಫ್ರೂಟ್ಸ್ - ಬಾದಾಮಿ, ವಾಲ್ನಟ್, ಹೇಸಲ್ನಟ್ ಮುಂತಾದವುಗಳನ್ನೂ ಬೆಳೆಯುತ್ತಾರೆ. ಚಿತ್ರದಲ್ಲಿರುವುದು, ಬಾದಾಮಿ ಮರ - ಬಾದಾಮಿಗಳು (ಕಾಯಿಗಳು) ಮರದಲ್ಲಿ ಬಿಟ್ಟಿರುವುದು ಕಾಣಿಸುತ್ತಿದೆ. ಈ ಕಾಯಿಗಳು ರೈಪ್ ಆದಮೇಲೆ ಅದನ್ನು ಒಣಗಿಸಿ ಅದರ ಕರಟ ಒಡೆದು ಬಾದಾಮಿ ತೆಗೆಯುತ್ತಾರೆ. ಕಾಯಿಗಳು ಬಾದಾಮಿ ಆಕಾರದಲ್ಲೇ ಇರುವುದು ನೋಡಬಹುದು.

ಬೆಂಗಳೂರು ಮಳೆ ಮತ್ತು ಆಟೋ ಸವಾರಿ

ಬೆಂಗಳೂರಿಗೆ ಮುಂಗಾರು ಕಾಲಿಟ್ಟಿದೆ. ಮುಂಗಾರು ಕಾಲೂರುವುದೇ ತಡ ಅದೆಷ್ಟೋ ಸಾವು ನೋವುಗಳು ಸಂಭವಿಸಿಯೂ ಆಯ್ತು. ಮಳೆ ಬಂದಾಗ ಯಾತ್ರೆ ಎಷ್ಟು ಕಷ್ಟಕರ ಎಂಬುದನ್ನು ಅನುಭವಿಸುತ್ತಾ ಇದ್ದೇನೆ. ಸೋರುವ ಬಿಎಂಟಿಸಿ ಬಸ್ ಒಂದೆಡೆಯಾದರೆ ರಸ್ತೆಯಲ್ಲಿ ತುಂಬಿ ಹರಿಯುತ್ತಿರುವ ನೀರು ಬೇರೆ. ಏನು ಹೇಳಿದರೂ ಇದು ಮಹಾನಗರವಲ್ಲವೇ? ಆದುದರಿಂದ ರಸ್ತೆಯಲ್ಲೇ ನೀರು ಹರಿಯುವುದು ಸಾಮಾನ್ಯ ಅನ್ನಬಹುದು.

ಮಳೆ 'ಧೋ' ಎಂದು ಸುರಿದರೆ ಸಾಕು ನಮ್ಮ ಆಟೋ ಚಾಲಕರಿಗೆ ಸುಗ್ಗಿಕಾಲ. ನಾವೇನೋ ಮಳೆಯಿಂದ ರಕ್ಷಣೆ ಪಡೆಯಲು ಆಟೋವನ್ನು ಆಶ್ರಯಿಸುತ್ತೇವೆ, ಅವರು ಕೇಳಿದಷ್ಟು ಹಣ ನೀಡಿ ನಮ್ಮ ಯಾತ್ರೆ ಮುಂದುವರಿಸುತ್ತೇವೆ. ಆದರೆ ಅದು ಸುಖವಾಗಿರಬೇಕಲ್ವಾ? ಮಳೆ ಆರಂಭವಾಗಿದ್ದರೂ ಇಲ್ಲಿನ ಆಟೋಗಳಿಗೆ ಟಾರ್ಪೋಲಿನ್ ಇಲ್ಲ. ರಸ್ತೆಯೇ ನೀರಿನಲ್ಲಿ ಮುಳುಗಿರುವಾಗ ಆ ಕಡೆ ಈ ಕಡೆಯಿಂದ ಇನ್ನೊಂದು ವಾಹನ ಚಿಮುಕಿಸುವ ನೀರು ಪ್ರಯಾಣಿಕರನ್ನು ಒದ್ದೆ ಮಾಡಿದರೂ ಪರ್ವಾಗಿಲ್ಲ ಎನ್ನುವ ಆಟೋ ಚಾಲಕರಿವರು.

ನಾನಾದರೆ ಹ್ಯಾರಿ ಪಾಟರ್

ಇದು ರಷ್ಯನ್ ಬ್ಲೂ ನೋಸಸ್ ಎಂಬ ಕಲಾವಿದರ ತಂಡ ಮಾಡಿರುವ ವಿಡಿಯೋ... ನೋಡಿ ಅರ್ಥ ಆದ್ರೆ ಅರ್ಥ ಮಾಡ್ಕೊಳ್ಲಿ, ಅರ್ಥ ಆಗ್ಲಿಲ್ಲಾ ಅಂದ್ರೆ ನೋಡಿ ಎಂಜಾಯ್ ಮಾಡಿ.. ನೋಡಿದ್ ಮೇಲೂ ಎಂಜಾಯ್ ಮಾಡಕ್ಕಾಗ್ಲಿಲ್ಲಾ ಅಂದ್ರೆ.. ಕ್ಷಮಿಸಿ ನಾನೇನೂ ಮಾಡಕ್ಕಾಗಲ್ಲ..
;) ಯಾಕಂದ್ರೆ ನಾನಿನ್ನೂ ಹ್ಯಾರಿ ಪಾಟರ್ ಆಗಿಲ್ಲಾ.. :-D

ನೀ ನಕ್ಕಾಗ!

ಸಖೀ,
ದಾರಿಯುದ್ದಕ್ಕೂ
ಹುಸಿಗೋಪ
ತೋರುತ್ತಿದ್ದ
ನೀನು,
ಕೊನೆಗೂ
ದಯೆತೋರಿ,
ನನ್ನತ್ತ
ವಾರೆನೋಟ ಬೀರಿ,
ನಸು ನಗೆ
ತೋರುವುದಕ್ಕೂ,
ನನ್ನ ಊರು
ಬರುವುದಕ್ಕೂ
ಸರಿ ಹೋಗಬೇಕೆ?!
*-*-*-*-*-*

ಹೇಗಿದೆ ನೋಡಿ ಈ ಭೂಪನ ಸಾಹಸ .

ಏನೋ ಮಾಡಲು ಹೋಗಿ ಮತ್ತಿನ್ನೇನೋ ಆಗಿದ್ದಲ್ಲ ಇದು , ತಾ ಅಂದುಕೊಡ್ಡಿದ್ದನ್ನೇ ಮಾಡಿದ್ದಾನೆ ನೋಡಿ ಇಲ್ಲೊಬ್ಬ ."ಯಲ್ಲಾರು ಮಾಡುವುದು ಹೊಟ್ಟೆಗಾಗಿ , ತುಂಡು ಬಟ್ಟೆಗಾಗಿ "

 

 

 

ಬಾ ಸಖಿ

ಹುಸಿ ಮುನಿಸು ತೋರದಿರು ಸಖಿ
ನಿನ್ನ ಹಸನಾದ ಮುಖಕ್ಕಲ್ಲ
ಅದು ಭೂಷಣ ಕಿಸಿ ಕಿಸಿ ಅಂತೊಮ್ಮೆ ನಕ್ಕು
ಖುಷಿಯ ಅಲೆಯನ್ನೊಮ್ಮೆ ನನ್ನ ಬಾಳಲಿ ತಾ

ಬಾಳ ದಾರಿಯಲಿ ಇರಬಹುದು
ನೂರೆಂಟು ಕಲ್ಲುಗಳು ಅಂದ ಮಾತ್ರಕ್ಕೆ
ಬಿಡುವುದೇ ನಡೆಯುವುದನ್ನೇ ?
ಸರಿಸಿ ನೋಡೊಮ್ಮೆ ಆ ಕಲ್ಲುಗಳ
ನೀ ಕಾಣುವೆ ಮೆತ್ತಗಿನ ಹೂವು ಹಾಸಿನ ದಾರಿಯ

ನಾ ಇಡುವ ಪ್ರತಿ ಹೆಜ್ಜೆಯಲೂ ಕಂಡಿಹೆನು

ನನ್ನದಲ್ಲದ ನನ್ನ ಕಥೆ

ಯಾಕೋ ಮೊನ್ನೆಯಿಂದ ಒಂದೇ ಸಮನೆ ಊರಿಗೆ ಹೋಗಿಬರುವ ಹಂಬಲ ಹೆಚ್ಚಾಗುತ್ತಿತ್ತು. ಅವ್ವ ಊರಿಂದ ಫೋನ ಮಾಡಿದಾಗ ಹೇಳಿದ ವಿಷಯ ಕೇಳಿದಾಗಿಂದ ಯಾವುದರ ಮೇಲು ಮನಸು ನಿಲ್ಲವಲ್ಲದು.