ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತುಪ್ಪ , ಚಾರ್ವಾಕ ಮತ್ತು ಲೋಕಾಯತ ಪಂಥ

(ಹಿಂದೊಮ್ಮೆ ಈ ಬಗ್ಗೆ ಬರೆದಿದ್ದೆ ; ಅದೇಕೋ ಅಲ್ಲಿ ತಲೆಬರಹ ಅಷ್ಟೇ ಉಳಿದಿದೆ . ಸಂಬಂಧ ಪಟ್ಟ ಪುಸ್ತಕ ಊರಲ್ಲಿತ್ತು ; ಈ ಸಲ ತಂದು ಮತ್ತೊಮ್ಮೆ ಕುಟ್ಟಿರುವೆ . ಹೇಗೂ ಈ ಬಗ್ಗೆ ಹೆಚ್ಚು ಜನಕ್ಕೆ ಗೊತ್ತಿಲ್ಲ; ಮತ್ತು ತುಪ್ಪ ಮತ್ತು ಚಾರ್ವಾಕ ಬಗ್ಗೆ ಹಂಸಾನಂದಿ ಅವರ ಅನುವಾದ ಕುರಿತು ಟಿಪ್ಪಣಿ ಮತ್ತು ಮರುಟಿಪ್ಪಣಿಗಳು ನಡೆದಿವೆ)

ಸಂಪದ ನಾಟಕ ರಂಗ--೪

ಸಂಪದ ನಾಟಕರಂಗದ ಸದಸ್ಯರಲ್ಲಿ ಕ್ಷಮೆ ಕೋರುತ್ತಾ....
ನಾಟಕದ ಮೊದಲ ಸಭೆ ಕೊನೆ ಹಂತದಲ್ಲಿ ಪ್ರಕಟಿಸಿದ ಕಾರಣದಿಂದಾಗಿ ಸದಸ್ಯರಿಗೆ ಬರಲು ಅನಾನುಕೂಲವಾಗುತ್ತಿದೆಯೆಂದು ತಿಳಿದು ಸಭೆಯನ್ನು ಒಂದು ವಾರ ಮುಂದೂಡಲಾಗಿದೆ. ಮುಂದಿನ ಭಾನುವಾರ ಸಭೆಯನ್ನು ನಡೆಸಲಾಗುವುದು.

ದಿನಾಂಕ : 14-ಜೂನ್-2009
ಸ್ಠಳ : ರವೀಂದ್ರ ಕಲಾಕ್ಷೇತ್ರದ ಹಿಂಬಾಗದಲ್ಲಿರುವ ಸಂಸ ಬಯಲು ರಂಗಮಂದಿರ

ನೋಡು ಬಾ ನಮ್ಮೂರ!..............೧೦

ಸಲಿನಾಸ್ ವ್ಯಾಲಿಯ ಒಂದು ದೃಶ್ಯ: ದೂರದಲ್ಲಿ ಕಾಣುತ್ತಿರುವ ಬೆಟ್ಟದ ಸಾಲು "ಎಲ್ ಗ್ಯಾಬಿಲಾನ್ ಪರ್ವತ ಶ್ರೇಣಿ ,ತಪ್ಪಲಲ್ಲಿ ಮರಗಿಡಗಳು, ಬೆಳೆಯುವ ಭೂಮಿಯ ಚೌಕಗಳು, ರಸ್ತೆ ಮತ್ತು ಮನೆಗಳು. ನೀಲಿಯಾಗಸ ಮತ್ತು ಮೋಡಗಳು ಚಿತ್ರದಲ್ಲಿದೆ. ಚಿತ್ರ ತೆಗೆದಿದ್ದು ನಾವಿರುವ ಜಾಗದ ಮೇಲಿಂದ.

ನಿಮ್ ಬೇಬಿ ಅವರು ತಗೊಂಡ್ರು...

ಇವತ್ತು ಅಪ್ಪ ಮನೆಗೆ ಬೇಗ ಬಂದಿದ್ರು. "ಕಾರ್ ಓಡಿಸೋದು ಕಲಿಯುವಿಯಂತೆ ನಡಿ ಹೋಗೋಣ" ಅಂದ್ರು (ನನ್ ಬಳಿ LL ಇದೆ). ಸರಿ ಹೊರಟೆ. ಮಳೆ ಶುರುವಾಯ್ತು. "ಇನ್ನೊಂದು ದಿನ ಹೋಗೋಣ. ಈಗ ಹೊರಗೆ ಊಟಕ್ಕೆ ಹೋಗೋಣ" ಅಂದ್ರು. ಸರಿ ವಿಜಯನಗರದಲ್ಲಿರೋ ಇಂದ್ರಪ್ರಸ್ಥಕ್ಕೆ ಹೋದ್ವಿ. ನಾವು ಇತರೆ ತಿಂಡಿಗಳ ಜೊತೆ ಬೇಬಿ ಕಾರ್ನ್ ಮಂಚೂರಿಯನ್ ಕೂಡ ಹೇಳಿದ್ವಿ.

ಮಳೆಗೆ ಮಗು ಬಲಿಯಾಯಿತು.

ಇತ್ತೀಚೆಗೆ ಬೆಂಗಳೂರಿನಲ್ಲಿ ಮಳೆಯ ನೀರನ್ನು ನಿಯಂತ್ರಣ ಮಾಡುವ ವ್ಯವಸ್ಥೆ ಸರಿಯಿಲ್ಲವಾಗಿ ಸಾವು ನೋವು ಸಾಮಾನ್ಯವಾಗಿದೆ. ಈ ರೀತಿಯ ಸಾವುಗಳನ್ನು ಗಮನಿಸಿದಾಗ ನಮ್ಮೂರ ಅಂದರೆ ಮದ್ದೂರಿನ ಹೊಳೆ ಅಂದರೆ ಶಿಂಷಾ ನದಿಯ ಕುರಿತ ನನ್ನ ಬಾಲ್ಯದ ನೆನೆಪುಗಳು ಬರುತ್ತವೆ. ನನಗೆ ಬಾಲ್ಯ ಅಂದರೆ ಅದು 50--ರ ದಶಕದ ಮಾತು.

ನಾನು ಓದಿದ ಪುಸ್ತಕ-ಮತಸಂತೆ-ಕುರಿತು

ಸಾಮಾನ್ಯವಾಗಿ ರಾಜಕಾರಣಿಯು ಅದೆಷ್ಟೋ ಸಿಹಿ ಕಹಿಗಳನ್ನು ಅನುಭವಿಸಿದ್ದರೂ ಮೂಖನೊಬ್ಬನ ಭಾವನೆಗಳಂತೆ ಸಮಾಜದ ಅರಿವಿಗೆ ವ್ಯಕ್ತವಾಗದೆ ಅಳಿದುಹೊಗುತ್ತದೆ. ಆದರೆ ಸಂಸದರಾದ H.ವಿಶ್ವನಾಥರು ಬರೆದ ಪುಸ್ತಕ ಹಳ್ಳಿ ಹಕ್ಕಿಯ ಹಾಡು ತದನಂತರ ಮತಸಂತೆ. ನನಗೆ ಪ್ರಸ್ತುತವಾಗಿರುವುದು ಚುನಾವಣೆಗಳ ಅವಲೋಕನ ಮಾಡಿರುವ ಮತಸಂತೆ.

ನೀನೇ ಹೀಗೆ ಮುನಿದರೆ ಹೇಗೆ?

ನೀನೇ ಹೀಗೆ ಮುನಿದರೆ ಹೇಗೆ?
ವೀಣೆಯಮೇಲೆ ತಂತಿ ತಾ ಮುನಿದಂತೆ
ನಾನೇ ವೀಣೆ,ನೀನೇ ತಂತಿ
ಕೋಪ ತಾ ವೈಣಿಕನಂತೆ.

ನೀ ಮುನಿಯದಿರು ,ಮುನಿದೇನ್ನದಿರು
ಹಿಂಡದಿರು ಮಲ್ಲಿಗೆಯ ಯಸಳಿನಂತಿರುವ
ನನ್ನ ಮನಸನ್ನ

ನೀ ಮುನಿಯದಿರು
ಮುನಿದು ಯೇನೆನ್ನದಿರು
ನೋವಾಗದು ನನಗೆ
ನನ್ನಾ ಹೂವಿನಂತಾ ಮನಸಿಗೆ
ಯಾಕೆಂದರೆ
ನನ್ನಾ ಮನಸಿಲ್ಲುರುವದು
"ನೀನೇ."

********************
ಎಮ್.ಡಿ.ಎನ್.ಪ್ರಭಾಕರ್

ಬೆಂಗ್ಳೂರಲ್ಲಿ ಮಳೆ ಬಂದಾಗ ಚರಂಡಿ ನೀರು ರಸ್ತೆಗೆ!!!

ನಮ್ಮೂರ ಕಡೆ ಮಳೆ ಬಂದಾಗ ರಸ್ತೆಯ ನೀರೆಲ್ಲಾ ಚರಂಡಿಗೆ
ಬೆಂಗ್ಳೂರಲ್ಲಿ ಹಾಗಲ್ಲ ಮಳೆ ಬಂದಾಗ ಚರಂಡಿ ನೀರು ರಸ್ತೆಗೆ

ಅಲ್ಲಿ ಮಳೆ ಬಂದಾಗ ಅಂಗಳದ ನೀರು ಬೈಲಿಗೆ ಹರಿಯುತ್ತದೆ
ಇಲ್ಲಿ ಮಳೆ ಬಂದರೆ ಅಂಗಳದ ನೀರು ಮನೆಯೊಳಕ್ಕೆ ನುಗ್ಗುತ್ತದೆ

ಕರಾವಳಿಯ ಮಳೆಯಲ್ಲಿ ಜನ ಬೈಕು ಓಡಿಸಿ ತೊಳೆಯುತ್ತಾರೆ
ಜನ ಇಲ್ಲಿ ನೀರು ತುಂಬಿ ಓಡಿಸಲಾಗದ ಬೈಕನ್ನು ತಳ್ಳುತ್ತಾರೆ