ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪದಬಂಧದಲ್ಲಿ ಕರ್ನಾಟಕ ದರ್ಶನ

ನಮ್ಮ ಕನ್ನಡ ನಾಡನ್ನು ಪದಬಂಧ ಬಿಡಿಸುತ್ತ ಒಮ್ಮೆ ವಿಹರಿಸಿ ಆ ಸ್ಥಳಗಳಿಗೆ ಭೇಟಿ ನೀಡಿದಾಗ ಆದ ಅನುಭವಗಳನ್ನೂ ನೆನಪಿಸಿಕೊಳ್ಳೋಣ ಬನ್ನಿ !

ಎಡದಿಂದ-ಬಲಕ್ಕೆ

೧. ಕರ್ನಾಟಕವನ್ನು ಕುರಿತು ಹೀಗೆ ಒಂದು ಹಾಡಿದೆ ’ನಾವಿರುವಾ ತಾಣವೇ ..’ (೫)
೩. ಬೇಲೂರಿನಲ್ಲಿದ್ದಂತೆ ಹೊಯ್ಸಳರ ಕಾಲದಲ್ಲಿ ಕಟ್ಟಿದ ಹಲವಾರು ದೇವಸ್ಥಾನಗಳು ಇಲ್ಲಿಯೂ ಇವೆ (೪)
೭. ಸಾವಿರ ಕಂಬದ ಬಸದಿ ಇತ್ಯಾದಿ ಹೊಂದಿರುವ ಇದು ’ಜೈನರ ಕಾಶಿ’ ಎಂದೇ ಪ್ರಸಿದ್ದಿ (೪)
೮. ’ಕನ್ನಡದ ಕಬೀರ್’ ಶರೀಫ಼ರ ಜನ್ಮಸ್ಥಳ (೪)
೧೦. ಈ ಊರಿನ ರಸ್ತೆಯ ಒಂದೆಡೆ ಅರಬ್ಬಿ ಸಮುದ್ರ ಮತ್ತೊಂದೆಡೆ ಸೌಪರ್ಣಿಕಾ ನದಿ (೪)
೧೨. ಅತ್ಯಂತ ಹೆಚ್ಚು ದಿನಗಳ ಕಾಲ ಪ್ರದರ್ಶನಗೊಂಡ ’ಶೋಲೆ’ ಚಿತ್ರೀಕರಿಸಿದ್ದು ಇಲ್ಲಿ (೫)
೧೩. ಮದ್ದೂರಿನ ಬಳಿ ಇರುವ ಈ ಊರು ಕೊಕ್ಕರೆ ಹಾಗೂ ಕಬ್ಬಿನ ಹೊಲಕ್ಕೆ ಹೆಸರುವಾಸಿ (೬)

ಸುಪ್ರಸಿದ್ಧ ಭಾವಗೀತೆಗಳ ಗಾಯಕಿ, ಸಂಗೀತ ಬಾಲಚಂದ್ರ, ಮುಂಬೈನಲ್ಲಿ !

ಹೆಸರಾಂತ  ಭಾವಗೀತೆಗಳ ಗಾಯಕಿ, ಸಂಗೀತ ಬಾಲಚಂದ್ರ, ರವರ ಗಾಯನ, ’ಕರ್ನಾಟಕ ಸಂಘದ ಸಮಾರೋಪ ಉತ್ಸವ ’ ಕ್ಕೆ, ಬೆಳ್ಳಿಯ ಮೆರುಗನ್ನು ಕೊಟ್ಟಿದೆ !

ಮುಂಬೈ ನಗರದ, ’ಕರ್ನಾಟಕ ಸಂಘದ ಅಮೃತೋತ್ಸವದ ಸಮಾರೋಪಣೆಯ ಉತ್ಸವ ’ ದ ಶುಭಸಮಯದಲ್ಲಿ, ನಾಲ್ಕನೆಯದಿನ, (೬, ಜೂನ್ ೨೦೦೯ ರಂದು,) ಸಾಯಂಕಾಲ ೪-೩೦ ಕ್ಕೆ ಸರಿಯಾಗಿ, ಸುಪ್ರಸಿದ್ಧ ಗಾಯಕಿ, ಸಂಗೀತ ಬಾಲಚಂದ್ರ ಉಡುಪಿ, ಹಾಗೂ ಅವರ ಸಂಗಡಿಗರು ನಡೆಸಿಕೊಟ್ಟ ' ಭಾವಸಂಗಮ,' (ಭಾವಗೀತೆಗಳ ಕಾರ್ಯಕ್ರಮ) ಸಂಗೀತಕಾರ್ಯಕ್ರಮ ಬಹಳ ಸೊಗಸಾಗಿ ಮೂಡಿಬಂತು.

ಗಾಂಧಿ ಬಜಾರ್

೨೦೦೩, ಇಂಜಿನಿಯರಿಂಗಿನ ಕೊನೇಯ ವರ್ಷ ಪ್ರಾಜೆಕ್ಟಿಗಾಗಿ ಬೆಂಗಳೂರಿಗೆ ಬಂದಾಗ ಮೊದಲು ಇಳಿದು ಕೊಂಡಿದ್ದು ಆಶ್ರಮದ ಸಮೀಪದ ಒಂದು ಮನೆಯಲ್ಲಿ. ೨ ಬೆಡ್ ರೂಂ ಮನೆ ೩೫೦೦ ರೂ ಬಾಡಿಗೆ, ೬ ಜನ ಮನೆಯ ಪಾಲುದಾರರು. ಅಂದಿನಿಂದ ನಾ ಮೆಚ್ಚಿದ ನನ್ನ ನೆಚ್ಚಿನ ತಿರುಗಾಟದ ತಾಣ ಗಾಂಧಿ ಬಜಾರ್. ಛಾಯಾಗ್ರಹಣದಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆಂದು ಎಂದೂ ಕನಸು ಕಂಡಿರಲಿಲ್ಲ. ಇಂಜಿನಿಯರಿಂಗ್ ಮುಗಿಸಿ ಕೆಲಸದ ನಿಮಿತ್ತ ಮೈಸೂರಿಗೆ ಹೋದಾಗ, ನಮ್ಮ ಕಂಪೆನಿಯ ಪ್ರಾಜೆಕ್ಟಿನ ಕೆಲವು ಚಿತ್ರಗಳಿಗೆ ಸಹೋದ್ಯೋಗಿಯ ಜೊತೆ ಹೋದದ್ದಲ್ಲದೇ ಬೇರಾವ ಅನುಭವವೂ ಇರಲಿಲ್ಲ. ನಂತರ ಬೆಂಗಳೂರಿಗೆ ಬಂದು ಕೆಲಸ ಬದಲಾಯಿಸಿ, ಕೈಯಲ್ಲಿ ಸ್ವಲ್ಪ ಕಾಸು ಬಂದ ಮೇಲೆ ಮೊದಲು ಕೊಂಡು ಕೊಂಡಿದ್ದೇ ನನ್ನ ಸೋನಿ ಡಿ.ಎಸ್.ಸಿ ಎಚ್೨ ಕ್ಯಾಮರಾ. ನನ್ನ ಅದರ ಸಂಬಂಧ ಸುಮಾರು ೩.೫ ವರ್ಷಗಳಷ್ಟು. ೨೦೦೬ರ ಪ್ರವಾಸದಲ್ಲಿ ಗೆಳೆಯನಾದ ಪವನ್ ಜೊತೆಗೂಡಿ ಮಾಡಿದ ಕೇರಳದ ಪ್ರವಾಸದಲ್ಲಿ, ಆತನ ಚಿತ್ರ ನೋಡಿ ತುಂಬಾ ಮೆಚ್ಚುಗೆ ವ್ಯಕ್ತ ಪಡಿಸಿದ್ದೆ. ಪ್ರತ್ಯಕ್ಷವಾಗಿ ಛಾಯಾಗ್ರಹಣದ ಬಗ್ಗೆ ಯಾವ ಸಲಹೆ ಕೊಟ್ಟಿಲ್ಲವಾದರೂ ನನ್ನ ಅಭಿರುಚಿ ಕೆರಳಿಸುವಲ್ಲಿ ಆತನ ಚಿತ್ರಗಳು ತುಂಬಾ ಸಹಾಯಕವಾದವು. ಮುಂದೆ ಹನಿವೆಲ್ಲಿನಲ್ಲಿ ನನ್ನ ಸಹೋದ್ಯೋಗಿಯಾಗಿದ್ದ "ಅರವಿಂದ್" ತಮ್ಮ ಅನುಭವ, ಪುಸ್ತಕಗಳನ್ನು ಹಂಚಿಕೊಂಡು ಇನ್ನಷ್ಟು ನೆರವಾದರು. ಹೀಗೆ ಒಂದು ದಿನ ನನಗೆ ಬೇಕಾದ ಯಾವುದೋ ಛಾಯಾಗ್ರಹಣದ ವಿಷಯದ ಬಗ್ಗೆ ಹುಡುಕಾಡುತ್ತಿತ್ತಾಗ ಕಣ್ಣಿಗೆ ಬಿದ್ದಿದ್ದು "ಡಿಜಟಲ್ ಫೋಟೋಗ್ರಫಿ ಸ್ಕೂಲ್" ಎಂಬ ತಾಣ. ಇಲ್ಲಿ ಬರೀ ಪಾಟಗಳಷ್ಟೇ ಅಲ್ಲದೇ ನೀವು ತೆಗೆದ ಚಿತ್ರವನ್ನು ಹಾಕಿದರೆ, ಆ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಪ್ರಪಂಚದ ನಾನಾ ಭಾಗದ ವೃತ್ತಿನಿರತ/ಹವ್ಯಾಸೀ ಛಾಯಾಚಿತ್ರಕಾರರಿಂದ ಬರುತ್ತದೆ. ಇಲ್ಲಿಯೇ ಭೇಟಿಯಾದ ವೃತ್ತಿಯಿಂದ ಚಿತ್ರಕಾರರಾಗಿರುವ "ಜಿಮ್" ಆರಂಭದಿಂದ ನನಗೆ ಸಲಹೆ ಸೂಚನೆ ನೀಡುತ್ತಾ ಇಲ್ಲಿಯವರೆಗೆ ತಂದು ಬಿಟ್ಟಿದ್ದಾರೆ. ಅದೂ ಅಲ್ಲದೇ ಯಾಹೂವಿನ ಫ್ಲಿಕರ್ ಕೂಡ ನನ್ನ ಅಭಿರುಚಿಯನ್ನು ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಈ ಚಿತ್ರದ ವಿಶೇಷತೆ ತಿಳಿಸುತ್ತೀರಾ..

ಈ ಚಿತ್ರವನ್ನು ನೋಡಿ... ಗಮನವಿಟ್ಟು ನೋಡಿ... ಸಂದೇಹವಿದ್ದರೆ ಮತ್ತೊಮ್ಮೆ ನೋಡಿ... ನೋಡಿದ್ದು ಆದಮೇಲೆ ಈ ಚಿತ್ರದ ವಿಶೇಷತೆ ಏನು ಎಂದು ತಿಳಿದರೆ ತಿಳಿಸಿ.... ತಿಳಿದವರು...? ತಿಳಿಸುವ ಅಗತ್ಯವಿಲ್ಲಾ... :)
ತಿಳಿಯದಿದ್ದವರು ತಿಳಿದು ತಿಳಿಸಿ.... :) ತಿಳಿಸಿದವರಿಗೆ ಸೂಕ್ತ ಬಹುಮಾನವುಂಟು. :)

ಜೆರ್ಮನ್ ಕವಿಯ ಮುನ್ನುಡಿ

ಆತನೊಬ್ಬ ಪ್ರಸಿದ್ಧ ಜೆರ್ಮನ್ ಸಾಹಿತಿ.
ಆರಂಭದವಲಭ ಸಿಗದೆ ಹೋಗಿದ್ದ ಜೀವನ ಸಾರಥಿ.
ಆತನ ಅಪ್ರತಮ ಹಾಸ್ಯದುಗಮ ಸಂಪತ್ತು,
ಮಾತುಮಾತಿಗೆ ಮಾತಿನ ಸರಕಸ್ಸು ಆತನ ಪುರಾವತ್ತು!

"ಹೈನ್‍ಸ್ ಎರ್ಹಾರ್ಡ್" ನಾಮ ಧರಿಸಿ
ಸಕಲ ಲಲಿತ ಕಲಾರಂಗಗಳಲಿ ಕುಶಲತೆ ಮೆರೆಸಿ
ಪಾಲ್ಗೊಂಡ ಕಲಾಮಂಟಪದೆಲ್ಲೆಡೆ ಕೊಂಡಾಟವೆದ್ದು
ಪ್ರೇಕ್ಷಕರೆಲ್ಲ ನಕ್ಕು ನಲಿದಾಡುತಿದ್ದರು ಬಿದ್ದುಬಿದ್ದು.

ಮುಗುಳ್ನಗೆಯ-ಮುನ್ನುಡಿ

ಮತ್ತು ಇಲ್ಲಿ ಬರುವುದು ಮಹಾ ಅಚ್ಚರಿಯ ನಿಗೂಡ: ಈ ಪುಸ್ತಕದಲ್ಲಿ ಓದಬಹುದು ಕೂಡ!
ಕಪ್ಪು ಬಣ್ಣದಲ್ಲಿರುವುದೆಲ್ಲ ಆಕ್ಷರಗಳು.
ಯುಕ್ತವಾಗಿ ಓದಬಹುದು ಎಡದಿಂದ ಬಲಕ್ಕೆ ಸಾಲುಸಾಲಾಗಿ.
ಏಕೆಂದರೆ, ಬಲದಿಂದ ಎಡಕ್ಕೆ ಓದಿದರೆ: (ಕನ್ನಡವೆನೆ ಮನ ಕುಣಿಯುವುದು!):
"!ಉದುವುಯಿಣುಕ್ ಅನಮ್ ಎನೆವಡನ್ನಕ್" (ಳತಿನ್ ಅಕ್ಷರಗಳು) ಅಗುವುದು ಕಮಂಗಿ ಭಾಷೆಯಾಗಿ!

ವಾಯುವಿಹಾರಿ

೩೦.
ವಾಯುವಿಹಾರಿ

ಮುಗ್ಗಲು ಮುಂಜಾನೆಯಲಿ ಎಲ್ಲರಿನ್ನೂ ನಿದ್ರಿಸುವಾಗ
ಇತರ ಇನ್ನೆಲ್ಲಾವು ನಿಶ್ಶಬ್ದಭದ್ರವಾಗಿರುವಾಗ
ಮನೆಬಿಟ್ಟೋಗುವನು ನಡೆದು ಅಲೆದಾಡಲು
ದೂರದೊಂದು ಗುರಿ ತಲುಪಿ ಸೇರಲು,
ತರುವಾಯ ಹಿಂತಿರುಗಿ ಬರಲು;
ಅಲ್ಲಾಡದೇನು ಹೊರಗೆ, ತೂರಾಡಿ,
ಗಾಳಿಕೂಡ ಇನ್ನೂ ಎದ್ದಿಲ್ಲ ನಿದ್ದೆಮಾಡಿ
ವಿಶ್ರಮಿಸುವಂತೆ ವಿರಾಮದಾಶಯನ ಕೂಡಿ

ನಾನು ಉಬುಂಟು ೯.೦೪ ಹಾಕ್ಕೊಂಡಿದ್ದು

ನಾನು ಉಬುಂಟು ೮.೦೪ ಹಾಕ್ಕೊಂಡಿದ್ದೆ . ೯.೦೪ ರ ಆವೃತ್ತಿಗೆ ಅಪ್ಗ್ರೇಡ್ ಮಾಡೂವ ಮೊದಲು ೮.೧೦ ರ ಆವೃತ್ತಿಗೆ ಅಪ್ಗ್ರೇಡ್ ಮಾಡಬೇಕಂತೆ . ಹಾಗಾಗಿ ನೆಟ್ ಮೂಲಕ ಅಪ್ಡೇಟ್ ಮಾಡ್ಕೊಂಡೆ . ಸುಮಾರು ಸಾವಿರ ಎಂಬಿ ಅಂದರೆ ಸುಮಾರು ಸಾವಿರ ರೂಪಾಯಿ ಖರ್ಚು ಆಯ್ತು ಅನ್ನಿ . ೯.೦೪ ಗೆ ನೆಟ್ ಮೂಲಕ ಅಪ್ಡೇಟ್ ಮಾಡೋದು ಬೇಡ .

ಅಜ್ಜಿ ಮನೆಯ ಗೋಡೆ ಬೀರು

ಬಹಳ ಸುಂದರವಾದ ಅಜ್ಜಿ ಮನೆಯ ಗೋಡೆ ಬೀರು ಇದನ್ನು ನಾನು M o C/Abu Dhabi Art Galary ಯಲ್ಲಿ ನೋಡಿದೆ ಅಂದರೆ ಇದು ನಿಜವಾದ ಬೀರು ಅಲ್ಲ .
ಇದು ಪೇಂಟಿಂಗ್ ಇದನ್ನು ನೀವು ಎಷ್ಟೇ ಹತ್ತಿರದಿಂದ ನೋಡಿದರು ದೂರದಿಂದ ನೋಡಿದರು ಇದು ನ್ಯಾಚುರಲ್ ಆಗಿ ಕಾಣುತ್ತದೆ. ಈ ಪೇಂಟಿಂಗ್ ನನಗೆ ತುಂಬ ಇಷ್ಟವಾಯ್ತು ನಿಮಗೂ ಇಷ್ಟವಾಗಬಹುದು .