ನಾನು ಉಬುಂಟು ೯.೦೪ ಹಾಕ್ಕೊಂಡಿದ್ದು

ನಾನು ಉಬುಂಟು ೯.೦೪ ಹಾಕ್ಕೊಂಡಿದ್ದು

ನಾನು ಉಬುಂಟು ೮.೦೪ ಹಾಕ್ಕೊಂಡಿದ್ದೆ . ೯.೦೪ ರ ಆವೃತ್ತಿಗೆ ಅಪ್ಗ್ರೇಡ್ ಮಾಡೂವ ಮೊದಲು ೮.೧೦ ರ ಆವೃತ್ತಿಗೆ ಅಪ್ಗ್ರೇಡ್ ಮಾಡಬೇಕಂತೆ . ಹಾಗಾಗಿ ನೆಟ್ ಮೂಲಕ ಅಪ್ಡೇಟ್ ಮಾಡ್ಕೊಂಡೆ . ಸುಮಾರು ಸಾವಿರ ಎಂಬಿ ಅಂದರೆ ಸುಮಾರು ಸಾವಿರ ರೂಪಾಯಿ ಖರ್ಚು ಆಯ್ತು ಅನ್ನಿ . ೯.೦೪ ಗೆ ನೆಟ್ ಮೂಲಕ ಅಪ್ಡೇಟ್ ಮಾಡೋದು ಬೇಡ . ಎಲ್ಲಾದ್ರೂ ಸೀಡೀ ಸಿಕ್ಕೇ ಸಿಗುತ್ತದೆ , ಕಾದು ನೋಡೋಣ ಅಂತ ಬಿಟ್ಟೆ .
ಮೊನ್ನೆ ಉಬುಂಟು.ಕಾಂ ನಲ್ಲಿ ಸೀಡಿಯನ್ನು ಆರ್ಡರ್ ಮಾಡಿದೆ . ಸಂಜೆಯೇ ಲಿನಕ್ಸ್ ಫಾರ್ ಯೂ ಮ್ಯಾಗಝೀನ್ ಜತೆಗೆ ಉಬುಂಟು ಸೀಡಿ ಕೊಟ್ಟಿರೋದು ನೋಡಿ ೧೦೦ ರೂಪಾಯಿ ಕೊಟ್ಟು ಖರೀದಿ ಮಾಡಿದೆ .
ಮನೆಯಲ್ಲಿ ಸೀಡಿಯಿಂದ ಅಪ್ಗ್ರೇಡ್ ಮಾಡಲು ಹೋದೆ . ಏನೋ ಎರರ್ ಬಂತು . ಹೋಗಲಿ ಅಂತ ಸೀಡಿ ತೆಗೆದು ಮೊದಲಿನಂತೆ ಬೂಟ್ ಮಾಡಲು ಪ್ರಯತ್ನಿಸಿದೆ . ೮.೧೦ ಕ್ಕೆ ಬೂಟ್ ಆಗಲಿಲ್ಲ . ಏನೋ ಎರರ್ ಬಂತು . ಅಯ್ಯೋ ಈಗೇನು ಮಾಡೋದು ? ನನ್ನ ಕಡತಗಳ ಬ್ಯಾಕಪ್ ಬೇರೆ ಇಟ್ಟುಕೊಂಡಿಲ್ಲ . ಮೊದಲು ವಿಂಡೋಸ್ ಎಕ್ಸ್ ಪಿ ಶುರು ಆಗುತ್ತೋ ಅಂತ ನೋಡಿದೆ. ಅದಕ್ಕೇನು ತೊಂದರೆ ಇರಲಿಲ್ಲ . ಅರ್ಧ ಜೀವ ಬಂತು . ಆಮೇಲೆ ಬೂಟ್ ಆಯ್ಕೆ ಬದಲಿಸಿ ಸೀಡಿಯನ್ನು ಬೂಟ್ ಡ್ರೈವ್ ಮಾಡಿ , ಉಬುಂಟು ಸೀಡಿ ಅಲ್ಲೇ ಇಟ್ಟು ಬೂಟ್ ಮಾಡಿದೆ . ಅದನ್ನ ಲೈವ್ ಸೀಡೀ ಅಂತಾರೆ ಅಲ್ವೇ ? ಇನ್ಸ್ಟಾಲ್ ಮಾಡದೇ ಉಬುಂಟು ಪ್ರಯತ್ನಿಸೋದು. ಅದು ನನ್ನ ಹಿಂದಿನ ಉಬುಂಟು ಡ್ರೈವ್ ಮತ್ತೆ ಅಲ್ಲಿನ ಕಡತಗಳನ್ನ ತೋರಿಸ್ತಾ ಇತ್ತು . ನೇರವಾಗಿ ೯.೧೦ ಅನ್ನು ಇನ್ಸ್ಟಾಲ್ ಮಾಡೋಣ ಅಂದ್ರೆ ಈ ಪಾರ್ಟೀಶನ್ ಫಾರ್ಮ್ಯಾಟ್ ಕಡತಗಳೆಲ್ಲ ಕಳೆದು ಹೋಗುವವೋ ಏನೋ ? ಬ್ಯಾಕಪ್ ಈಗಲಾದ್ರೂ ತಕ್ಕೊಳ್ಳೋಣ ಅಂದ್ರೆ ಯೂ ಎಸ್ ಬಿ ಪೆನ್ ಡ್ರೈವ್ ಕcಏರಿಯಲ್ಲಿ ಬಿಟ್ಟು ಬಂದಿದೀನಿ. ಹೋಗಲಿ ವಿಂಡೋಸ್ ಪಾರ್ಟಿSಅನ್ ಗೆ ಕಾಪಿ ಮಾಡೋಣ ಅಂತ ಪ್ರಯತ್ನ ಮಾಡಿದೆ . ಎಲ್ಲ ಕಡತ ಕಾಪಿ ಆಗುತ್ತಾ ಇಲ್ಲ ; ಪರ್ಮಿಷನ್ ಇಲ್ಲ ಅಂತ ಎರರ್ . ಕೊನೆಗೆ ಎಲ್ಲಾ ಪರ್ಮಿಶನ್ (777- read , write, execute ) ಗಳನ್ನು ಎಲ್ಲಾ ಕಡತಗಳಿಗೆ , ಕಡತಕೋಶಗಳಿಗೆ , ಒಳಗೊಂಡ ಎಲ್ಲವಕ್ಕೂ chmod ಆದೇಶ ಬಳಸಿ ಕೊಟ್ಟೆ . ಆಮೇಲೆ ಕಾಪಿ ಮಾಡಿದೆ . ಆಯಾ ಕಡತಕೋಶಗಳ ಗಾತ್ರ ನೋಡಿಕೊಂಡೆ . ಮ್ಯಾಚ್ ಆಗುತ್ತಿದ್ದವು . ಸದ್ಯ , ನಿಟ್ಟುಸಿರು ಬಿಟ್ಟೆ . ಆಮೇಲೆ ಹಳೇ ಉಬುಂಟು ಪಾರ್ಟಿಶನ್ ಮೇಲೆ ಯೇ (ಸ್ವಲ್ಪ ಗಾತ್ರ ಹೆಚ್ಚಿಸಿ ) ಇನ್ಸ್ಟಾಲ್ ಮಾಡಿದೆ ಬೇಗ ಆಯ್ತು . ವಿಂಡೋಸ್ ನಿಂದ ಆ ಕಡತಕೋಶಗಳನ್ನು , ಕಡತಗಳನ್ನು ಉಬುಂಟುಗೆ ವರ್ಗಾಯಿಸಿದೆ .
ಇದಕ್ಕೆಲ್ಲ ಸುಮಾರು ಎರಡು ಗಂಟೆಯೇ ತಕೊಂಡ್ತು . ರಾತ್ರಿ ೧೧.೩೦ ಆಗಿತ್ತು . ಏನ್ ಮಾಡ್ತಾ ಇದ್ರಿ ಅಂತ ಹೆಂಡತಿ ಕೇಳಿದಳು ; ನಿನಗದೆಲ್ಲ ತಿಳಿಯೋದಿಲ್ಲ ಬಿಡು ; ನಿನಗೆ ಉಬುಂಟು ಗೊತ್ತಲ್ಲಾ , ಅದರ ಹೊಸ ವರ್ಶನ್ ಹಾಕಿದೆ . ಅಂತ ಹೇಳಿದೆ. 'ನೀವೊಬ್ರು , ಪ್ರಮೋಶನ್ ಅಭ್ಯಾಸ ಮಾಡೋದು ಬಿಟ್ಟು ... ' ಅಂತ ಗೊಣಗಿದಳು.

Rating
No votes yet

Comments