ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೊದಲ ಪ್ರೇಮ

ಮೊದಲ ಪ್ರೇಮ

ನಿನ್ನ ಮೊಗದ ಮೊದಲ ನೋಟ
ನಾಟಿ ನನ್ನ ಮನದ ತೋಟ
ಏರಿ ಹೃದಯ ಬಡಿತದೋಟ
ಅದುವೆ ಮೊದಲ ಪ್ರೇಮ ಮಾಟ

ಕಣ್ಣ ಬಳಸಿ ಸಲಹೋ ರೆಪ್ಪೆ
ಹಣ್ಣ ಬಳಸಿ ಕಾಯೋ ಸಿಪ್ಪೆ
ನಿನ್ನ ಬಳಸಿ ನಾನು ನಿಲ್ಪೆ
ಮೊದಲ ಪ್ರೇಮ ಸಾಕ್ಷಿಯಂತೆ

ದಡವು ನದಿಗೆ ಉಗಮದಿಂದ
ಕಡಲ ಸೇರೋ ವರೆಗೂ ಕಾಯುವಂತೆ
ನನ್ನ ಮೊದಲ ಪ್ರೇಮವನ್ನು
ಕೊನೆಯವರೆಗೂ ಕಾಯೋ ಆಸೆ
-ಮೋಹನ.ಕೆ

ಕಣ್ಣ ಆ ಮಿಂಚು

ನಿನ್ನ ನಯನದ ಅಂಚಿನಿಂ, ಹೊರಹೊಮ್ಮುತಿಹ ಆ ಕಿರಣವು
ಭಿನ್ನ ಭಿನ್ನದಿ ಭಿಕ್ಷೆ ಬೇಡಿ ಅದ, ಪಡೆದ ಗಗನದ ಅರುಣನು
ತನ್ನ ಬೆಳಕಿಗೆ ತುಲನವಿಲ್ಲದೇ, ಬೀಗುತೀರ್ವಡೆ ಗರ್ವದಿ
ಸಣ್ಣ ಶಯನವ ನೀನು ಮಾಡಿಹೆ, ಕತ್ತಲಾಯಿತು ನಭದಲಿ.
-ಮೋಹನ.ಕೆ

=====================================================

ನೀರಿನಿ೦ದ ಕರೆ೦ಟ್ ಯಾಕೆ ತೆಗೀತಾರೆ

ಸರ್ದಾರ್-೧: ಅಪ್ಪಾ ’ನೀರಿನಿ೦ದ ಕರೆ೦ಟ್ ಯಾಕೆ ತೆಗೀತಾರೆ ?’
ಸರ್ದಾರ್-೨: ’ಮಗನೇ, ನೀರಿನಿ೦ದ ಕರೆ೦ಟ್ ತೆಗೀದೇ ಇದ್ರೆ ನೀರು
ಕುಡಿಯುವಾಗ ಶಾಕ್ ಹೊಡೆದು ಸತ್ಹೋಗ್ತೀವಿ
ಅದಕ್ಕೆ !!!
-ಮೋಹನ.ಕೆ

ನಿಜವಾದ ಕನ್ನಡ ಅಭಿಮಾನಿ

ಕನ್ನಡ ಟೀಚರ್ : ನಿಜವಾದ ಕನ್ನಡ ಅಭಿಮಾನಿ ಯಾರು ಮಕ್ಕಳೆ ?

ಹುಡುಗ : ಇಂಗ್ಲೀಷ್ ಪರೀಕ್ಷೆಯಲ್ಲಿ ಯಾರು ಫೇಲ್ ಆಗುತ್ತಾರೊ ಅವರು !!!
-ಮೋಹನ.ಕೆ
-----------------------------------------------------------------------------------------------------------

ಓದಿ

XHYZAYI

NZAYANYU

XONXDUZ

KZUXRYI

ಗೊತ್ತಾಗ್ಲಿಲ್ವಾ ?

XYZ ತೆಗೆದು ಓದಿ...
-ಮೋಹನ.ಕೆ
=============================

ಮೊಬೈಲ್ ಯಾಕಪ್ಪ ಕೊಟ್ಟೆ

ಓ ದೇವರೆ ಬೇಡರ ಕಣ್ಣಪ್ಪನಿಗೆ 'ಕಣ್ಣು' ಕೊಟ್ಟೆ,

ಭಕ್ತ ಕುಂಬಾರನಿಗೆ 'ಕೈ' ಕೊಟ್ಟೆ,

ಮೆಸೇಜ್ ಮಾಡದೆ ಇರೋರಿಗೆ ಮೊಬೈಲ್ ಯಾಕಪ್ಪ ಕೊಟ್ಟೆ !!!

ಮೋಹನ.ಕೆ
***************************************************

ಭೂಮಿ ಮತ್ತು ಸ್ನೇಹ

ಭೂಮಿ ಎಂಬ ಎರಡು ಅಕ್ಷರದಲ್ಲಿ ಹುಟ್ಟಿ,

ಜೀವವೆಂಬ ಎರಡು ಅಕ್ಷರ ಪಡೆದು,

ವಿಧ್ಯೆ ಎಂಬ ಎರಡು ಅಕ್ಷರ ಕಲಿತು,

ಸಾವು ಎಂಬ ಅಕ್ಷರ ಬರುವ ತನಕ,

ಸ್ನೇಹ ಎಂಬ ಎರಡು ಅಕ್ಷರ ಮರೆಯಬೇಡಿ !

=======================================
ಮೋಹನ.ಕೆ

ಎಚ್ಚರಿಕೆಯ ಏಳು ಗಂಟೆಗಳು


ಚಿತ್ರ ಕೃಪೆ:ಶ್ರೀಶಾರದಾ ಪೀಠಮ್ ವೆಬ್ಸೈಟ್.
ಬರಹ ಆಧಾರ:ವೇದ ತರಂಗ ಮಾಸ ಪತ್ರಿಕೆ

ಶ್ರೀ ಶಂಕರಾಚಾರ್ಯರು ಮಾನವರಿಗೆ ಎಚ್ಚರಿಕೆಯ ಏಳು ಗಂಟೆಗಳನ್ನು ಭಾರಿಸುತ್ತಾರೆ.

-೧-

ನಿನ್ನ ಭಾವನೆಯೇ ನಿನಗೆ ಗುರು


ಚಿತ್ರ ಕೃಪೆ: ಶ್ರೀ ರಮಣ ವೆಬ್ ಸೈಟ್

ನಿನ್ನೆ ಸತ್ಸಂಗದಲ್ಲಿ ನಮ್ಮ ಗುರುಗಳಿಗೆ ನನ್ನ ಮಿತ್ರ ನೊಬ್ಬ ಒಂದು ಉತ್ತಮ ಪ್ರಶ್ನೆ ಕೇಳಿದ. ಅವನು ಕೇಳಿದ ಪ್ರಶ್ನೆ ,ಅದಕ್ಕೆ ನಮ್ಮ ಗುರುಗಳ ಉತ್ತರವನ್ನು ಯಥಾವತ್ತಾಗಿ ತಿಳಿಸುವ ಪ್ರಯತ್ನ ಮಾಡುವೆ.