ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೋಡು ಬಾ ನಮ್ಮೂರ!..............೮

ಮಾಂಟೆರೇ -ಸಲಿನಾಸ್ ಏರಿಯಾದಲ್ಲಿ ವಿಧ-ವಿಧವಾದ ಸುಂದರ ಲ್ಯಾಂಡ್-ಸ್ಕೇಪ್ ಗಳನ್ನೂ ನೋಡಬಹುದು. ಮನೆಗಳ ಲ್ಯಾಂಡ್ ಸ್ಕೇಪ್ ಕೂಡಾ ಬೇರೆ ಪಟ್ಟಣಗಳಿಗಿಂತ ಭಿನ್ನವಾಗಿರುತ್ತದೆ. ನನ್ನ ಮೆಚ್ಚಿನ ಒಂದು ಚಿತ್ರ ಇಲ್ಲಿದೆ. ಈ ಮನೆಯ ಮುಂದೆ ಸುತ್ತಲೂ ಹೂವಿನ ಗಿಡಗಳಿವೆ. ಇದು ನನ್ನ ಕಛೇರಿಗೆ ಹೋಗುವ ಮಾರ್ಗದಲ್ಲಿದೆ. ಹಾಗಾಗಿ ದಿನವೂ ನೋಡಿ ಅನುಭವಿಸಿ ಸಂತೋಷಪಟ್ಟಿದ್ದೇನೆ.

ನೀ ಬರೆದ ಕಾದಂಬರಿ

ನೀ ಬರೆದ ಕಾದಂಬರಿ ಹಾಡುವಾ ಬಯಕೆಯು
ಕಿವಿಗೊಟ್ಟು ಕೇಳುವೆಯಾ ಹಕ್ಕಿಮರಿಯೇ
ನೂರು ಚುಕ್ಕಿಗಳ ನಡುವೆ ನಗುವ ಚಂದಿರ ಮೊಗವ
ಮನದೊಳಿರಿಸಿ ಹಾಡಿರುವೆ ಕೇಳು ಸಿರಿಯೇ

ದಿಕ್ಕು ದಿಕ್ಕುಗಳ ದಾಟಿ ಹಾರಿಬಂದೆವು ನಾವು
ಸೇರಿದೆವು ತಂಪಾದ ತಂಗುದಾಣ
ಬೆರೆಯದಾ ಅರಿಯದಾ ನೂರು ಮೊಗಗಳ ನಡುವೆ
ಹಬ್ಬದ ಹೋಳಿಗೆ ಬಡಿಸಿದ್ದು ನಿನ್ನ ನಗುವ ಹೂರಣ

ಉರಿದು ಬಿದ್ದ ಉಲ್ಕೆ-ಕಮಲಾ ದಾಸ್

“I was child, and later they
Told me I grew, for I became tall, my limbs
Swelled and one or two places sprouted hair.
When I asked for love, not knowing what else to ask
For, he drew a youth of sixteen into the
Bedroom and closed the door, He did not beat me
But my sad woman-body felt so beaten.
The weight of my breasts and womb crushed me.
I shrank Pitifully.
Then … I wore a shirt and my
Brother’s trousers, cut my hair short and ignored
My womanliness. Dress in sarees, be girl
Be wife, they said. Be embroiderer, be cook,
Be a quarreler with servants. Fit in. Oh,
Belong, cried the categorizers.”
ಹೀಗೆ ಧಡಲ್ ಧಡಲ್ ಎಂದು ಗುಡುಗಿನಂತೆ ಗುಡು ಗುಡುಸುತ್ತಾ ಆರ್ಭಟಿಸುತ್ತಾ ಸಾಗಿ ಬಂದು ಒಮ್ಮೆಲೆ ಸಿಡಿದು ಬೆಚ್ಚಿ ಬೀಳಿಸುವಂಥ ಸಾಲುಗಳನ್ನು ಬರೆಯುವ ತಾಕತ್ತಾದರು ಬೇರೆ ಯಾರಿಗಿತ್ತು-ಕಮಲಾ ದಾಸ್ನ್ನು ಬಿಟ್ಟರೆ? ಅವರ ಓರಿಗೆಯ ಲೇಖಕಿಯರೆಲ್ಲಾ ಇನ್ನೂ ಕಟಿಬದ್ಧ ಸಂಪ್ರದಾಯಸ್ಥ ಸಮಾಜದ ಮರ್ಯಾದೆಯ ಮುಸುಕಿನಡಿಯಲ್ಲಿಯೇ ಕುಳಿತುಕೊಂಡು ಸಾಮಾನ್ಯ ಸ್ತ್ರೀ ಸಂವೇದನೆಯಂಥ ವಿಷಯಗಳ ಬಗ್ಗೆ ಬರೆಯಲೂ ಸಹ ಮೀನ ಮೇಷ ಎಣಿಸುತ್ತಿರುವ ಸಂದರ್ಭದಲ್ಲಿ ಕಮಲಾ ದಾಸ್ ಅವರಿಗಿಂತ ಎಷ್ಟೋ ಹೆಜ್ಜೆ ಮುಂದೆ ಹೋಗಿ ಯಾರ ಮುಲಾಜಿಲ್ಲದೆ ಅತ್ಯಂತ ನಿರ್ಭಿಡೆಯಿಂದ ಸ್ತ್ರೀ ಲೈಂಗಿಕ ಸ್ವಾಂತಂತ್ರ್ಯದ ಬಗ್ಗೆ ಮೈ ಚಳಿ ಬಿಟ್ಟು ಬರೆದರು. ಆ ಮೂಲಕ ಬೆತ್ತಲಾದರು. ಹಾಗೆ ನೋಡಿದರೆ ಕಮಲಾ ದಾಸ್ ಬರಹದಲ್ಲಿ ಯಾವಾಗಲೂ ಬೆತ್ತಲಾದವರೇ! ಅವರಲ್ಲಿ ಮುಚ್ಚುಮರೆ ಎನ್ನುವದೇ ಇರಲಿಲ್ಲ!

ಕರ್ಣಕುಂಡಲ

ಸುಮಾರು ಹತ್ತು ತಿಂಗಳು ಹಿಂದಿನ ಮಾತು . ಅಣ್ಣ ಕೊಟ್ಟ ಐಪೋಡನ್ನು ಕಿವಿಗೆ ಸಿಕ್ಕಿಸಿಕೊಂಡು ದೊಡ್ಡ ವೋಲ್ಯುಂ ನಲ್ಲಿ ಹಾಡು ಕೇಳುತ್ತಾ ಆಫೀಸಿಗೆ ತೆರಳುವುದು ನನ್ನ ಅಭ್ಯಾಸ .

ಜೆ.ಪಿ.ಪಾರ್ಕ್

ಸೆಂಟ್ರಲ್ ಜೈಲ್ ಪಾರ್ಕ್ ಬಗ್ಗೆ ಹಿಂದೆ ಬರೆದಿದ್ದೆ. ಈಸಲ ಜೆ.ಪಿ.ಪಾರ್ಕ್

 

ಸುತ್ತೋಣ ಬನ್ನಿ.

ಮತ್ತಿಕೆರೆ ಸಮೀಪವಿರುವ ಚೌಡೇಶ್ವರಿ ಬಸ್ ನಿಲ್ದಾಣಕ್ಕೆ ಮೆಜೆಸ್ಟಿಕ್‌ನಿಂದ ನೇರ ಬಸ್‌ಗಳಿವೆ.

ಹಕ್ಕಿ ಅಲ್ಲ ಅಕ್ಕಿ

ಸಂಪದದ ಸ್ನೇಹಿತರೆ,
ನನ್ನ ಚೊಚ್ಚಲ ಬರಹ "ಅ""ಹ"ಕಾರಕ್ಕೆ ಸ್ಪಂದಿಸಿದ್ದೀರಿ ಧನ್ಯವಾದಗಳು. ಸರಿಯಾಗಿ ಯುನಿಕೋಡ್ ಬಳಸಲು ಬಾರದ ನನಗೆ ಕೆಲವೊಂದು ಟಿಪ್ಸ್ ನೀಡಿರುವ ವಿನಯ ಮತ್ತು ಶ್ಯಾಮಲ ಅವರಿಗೆ ಚಿರರುಣಿ.
ಇದೀಗ ನನ್ನ ಎರಡನೇ ಬರಹ ಬರೆದಿದ್ದೀನಿ.... ಖಂಡಿತಾ ಇದಕ್ಕೂ ಹೀಗೆ ಸ್ಪಂದಿಸ್ತೀರ ಅಂತ ನಂಬಿದ್ದೀನಿ....
ಇಂತಿ ನಿಮ್ಮ ತೇಜಸ್ವಿನಿ.

ನನ್ನ ಒಲವು

ನನ್ನ ಒಲವು

 

ಹಾಡುತಿರುವೆ ನನ್ನ ಪ್ರೇಮಿಕೆ,

ನಿನ್ನ ಹೃದಯ ಬಡಿತದ ತಾಳಕೆ.

ಇನ್ನೂ ಕೇಳದೆ ನಿನ್ನ ಮನಕೆ

ಬಡ ಪ್ರಿಯಕರನೀ ಕೋರಿಕೆ.

 

ಹುಟ್ಟುವನು ಆ ಸೂರ್ಯನಲ್ಲಿ,

ನಿನ್ನ ಕಣ್ಣ ಬಾಂದಳದಲ್ಲಿ.

ಮೋಹಕವದು ಪ್ರೇಮ ಪರಿಮಳವಲ್ಲಿ,

ನಿನ್ನ ಬಿಸಿ ಉಸಿರಿನಲ್ಲಿ.

 

ನಿನ್ನ ಧ್ವನಿಯದು ಗುಡುಗು,

ತಿರುಗಿ ನೋಡಿದವರೆಲ್ಲಾ ಬೆರಗು.

ಏನು ಮೈಮಾಟದ ಚೆಲುವು,

ಮೂಡದೇ ಮತ್ತೆ, ನಿನ್ನಲ್ಲಿ ಒಲವು?

 

ಕುದಿಯುವನೋ ಏನೋ ನನ್ನ ಕಂಡು,

ಪ್ಲೇನನ್ನೇ ಓಡಿಸುವ ಪೈಲೆಟ್ಟು.

ನನಗೆ ನಿನ್ನಯ ಸಖ್ಯದ ಗುಂಡು,

ಓ ನನ್ನ ಪ್ರೀತಿಯ ಬುಲೆಟ್ಟು.

 

ವಿಶ್ವನಾಥ್.ಡಿ.ಎ

ಕರಗಿಹೋಗಲಿ ನಿರಾಶೆಯ ಕಾರ್ಮೋಡ

ಮತ್ತೆ ಹುಟ್ಟಿಬರಲಿ ನವಜೀವನೋತ್ಸಾಹ
ಕರಗಿಹೋಗಲಿ ನಿರಾಶೆಯ ಕಾರ್ಮೋಡ

ಆಗದೆಂದೆನುವ ಮಾತು ನೀನಾಡಬೇಡ
ನೀ ಮಾಡದ ಹೊರತು ಸಾಗದು ಕೆಲಸನೋಡ

ನಿನ್ನ ಕನಸುಗಳಿಂದು ಗರಿಬಿಚ್ಚಿ ಹಾರಲಿ
ಕೀಳುರಿಮೆಯ ಕೊಳೆ ತೊಳೆದುಹೊಗಲಿ

ಮುಂದೆಸಾಗಲಿ ಹೀಗೆ ಗುರಿಯೆಡಗೆ ಪಯಣ
ತಿರುಗಿ ನೋಡದಿರು ಹಿಂದೆ,ನಡೆ ಮತ್ತದೇ ಪಯಣ

ಸೋಲಿನಲಿ ಗೆಲುವಿನಲಿ ಆ ದೇವ ಜೊತೆಗುಂಟು