ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮನವು ಹೀಗೇಕೆ ಗೆಳತಿ ?!!

ತಿಳಿ ನೀರ ಕೊಳದಂತೆ ನಿನ್ನ
ಮನವು ಹೀಗೇಕೆ ?! ಬಾಡಿ
ರವಿ ಕಾಣದ ಕಮಲದಂತಾಯಿತು ||
ಅಂತರಾಳದ ಭಾವನೆ ಹೃದಯದಲ್ಲೇ
ಅಡಗಿಸಿಟ್ಟು ಹೊರಗೇಕೆ ನಗುವ
ಮುಖವಾಡ ತೊಟ್ಟಿರುವೆ ||
ಎದೆಯೊಳಗೆ ಬಣ್ಣ ತುಂಬಿ
ಮತ್ತೇಕೆ ಕನಸನ್ನು ಕತ್ತಾಗಿಸಿ
ಕೊರಗಿ ನೀರಾಗಿ ಬತ್ತುತ್ತಲಿರುವೆ ||
ಹೇಳಬೇಕು ಎನ್ನುವ ಮಾತು
ಗಂಟಲಲ್ಲೇ ನುಂಗಿ ಯಾರಿಗೂ
ತಿಳಿದಿಲ್ಲ ಎಂದು ಹೇಳುತ್ತಿರುವೆ ||

ಸತ್ತು –ಶಾಶ್ವತ ಬದುಕಿರುವವರು; ಬದುಕಿಯೂ-ದಿನಃಪ್ರತಿ ಸಾಯುತ್ತಿರುವವರು

ಇನ್ನು ಕೆಲವೇ ನಿಮಿಷಗಳಲ್ಲಿ ಸತ್ಯಕ್ಕಾಗಿ ಸಾಯಲು ಹಸನ್ಮುಖಿಯಾಗಿ ನಿಂತಿರುವ ತತ್ವಙಾನಿ ಸಾಕ್ರೆಟಿಸ್ ಒಂದು ಕಡೆ.

ವಿಧವಾ ವಿವಾಹ

ಹಿಂದೆ ಬಾಲ್ಯ ವಿವಾಹ ಪದ್ಧತಿ ಇದ್ದ ಕಾಲದಲ್ಲಿ ಇನ್ನೂ ದೈಹಿಕ ಹಾಗು ಮಾನಸಿಕವಾಗಿ ಬೆಳೆದಿರದ ಪುಟ್ಟ ಹುಡುಗಿಯರಿಗೆ ತನ್ನ ಮದುವೆ ಯಾಕಾಯಿತು? ಹೇಗಾಯಿತು? ಒಂದೂ ತಿಳಿಯುತ್ತಿರಲಿಲ್ಲ. ಅಂತಹ ಪುಟ್ಟ ಬಾಲೆಯರಿಗೆ ತನ್ನ ಅಣ್ಣನೋ ಅಥವಾ ಅಪ್ಪನ ವಯಸ್ಸಿನವನನ್ನೋ ಮದುವೆಯಾದಾಗ ಯಾವ ಭಾವನೆಗಳೂ ಇರ್ತಾ ಇರಲಿಲ್ಲ. ಮುಖ್ಯವಾಗಿ ಮದುವೆ ಎಂದರೇನು?

ನೀವೇ ಅಲ್ಲವೇ ನನ್ನನ್ನು ದೂರ ಮಾಡಿದ್ದು

ನಾನೇನು ಮಾಡಿದ್ದೆ ,.,.
ನೀವೇ ಅಲ್ಲವೇ ನನ್ನನ್ನು ದೂರ ಮಾಡಿದ್ದು , ನೀವಲ್ಲವೇ ಸೃಷ್ಟಿಸಿದ್ದು ಈ ಅಂತರ ,
ನನ್ನದಲ್ಲದ ಯಾಂತ್ರಿಕ ದೋಣಿಯನ್ನು ನೀವಲ್ಲವೇ ತಂದ್ದಿದ್ದು , ನಾನಾದರೋ
ನೀವು ಬರಿ ಪ್ರೀತಿಯಲ್ಲಿ ಜೀಕಿದರೆ ಸಾಕು ನಿಮ್ಮನ್ನು ಎಲ್ಲಿಗೆ ಬೇಕಾದರೂ ಕರೆದೊಯುತ್ತೇನೆ ,.
ಏನು ಮಾಡಲಿ ನೀವೇ ನನ್ನ ದೂರ ಮಾಡಿದಿರಿ,
ನನಗೆ ಇಂದನ ಬೇಕಾಗಿಲ್ಲ - ವಿದ್ಯುತ್ ಬೇಕಾಗಿಲ್ಲ ,.

"ಸಂಪದ" ಸಹೃದಯರೇ

ಬಂದಿಹೆನು "ಸಂಪದ" ಕೆ
ಬರಮಾಡಿಕೋ ಎನ್ನ
" ಬರವಣಿಗೆ " ತಂದಿಹೆನು
ಓದಿ ಹರಸೆನ್ನ.

ಸಂಪಿಗೆಯ ಗುಂಪೊಂದು
"ಸಂಪದ"ವೇ ಆಗಿಹುದು
ಆಗ ಬಯಸುವೆ ನಾನು
ಆ ಗುಂಪೊಂದರ "ಹೂ "ವ.

ಆಕ್ಕರೆಯ ನಗೆಯವರೇ
ಸಕ್ಕರೆಯ ಮಾತಿನವರೇ
ತಪ್ಪಿದರೆ ತಿದ್ದುವ
ಸಹೃದಯ ಓದುಗರೇ.

ನನಗಿಂತ ಕಿರಿಯರಿಲ್ಲ
ನಿಮಗಿಂತ ಹಿರಿಯರಿಲ್ಲ
ನನ್ನ ತಿದ್ದಿ ಹರಸುವ ಭಾರ
ಹಿರಿಯರದೇ ಎಲ್ಲಾ.

ಸಿರಿಗನ್ನಡಂ ಗೆಲ್ಗೆ

ಮೋಹದ ಬಲೆ

ಚಿಮ್ಮಿತು ಚಿಮ್ಮಿತು
ಪ್ರೀತಿಯ ಒರತೆ
ಹೊಮ್ಮಿತು ಹೊಮ್ಮಿತು
ಚಿಗುರಿ ಪ್ರೇಮಲತೆ

ಸೇರಿತು ಹಾಡಿತು
ಭಾವಗಳ ಸಂತೆ
ಬೆರೆಯಿತು ಮರೆಯಿತು
ಜೀವ ಎಲ್ಲ ಚಿಂತೆ.

ಮಿಡುಕಿತು ನುಡಿಯಿತು
ಮೋಹನ ವೀಣೆ
ಆದಿಯೋ ಅಂತ್ಯವೋ
ಅರಿಯೆನು ಜಾಣೆ.

ಸರಿಯಿತು ತೆರೆಯಿತು
ಮೋಹದ ಬಲೆ
ಮೈಮರೆಸಿ ಮನತೆರೆಸಿತು
ನಿಸರ್ಗದ ಕಲೆ.

ಎಂಥ ಮನುಷ್ಯರಿವರು?

* ಎಲ್.ಕೆ.ಅಡ್ವಾಣಿ ’ಉಕ್ಕಿನ ಮನುಷ್ಯ’.
* ಅರ್ಜುನ್ ಸಿಂಗ್ ’ತುಕ್ಕಿನ ಮನುಷ್ಯ’.
* ಬಾಳ್ ಠಾಕ್ರೆ ’ಸೊಕ್ಕಿನ ಮನುಷ್ಯ’.
* ಅಬ್ದುಲ್ ಕರೀಂ ತೆಲಗಿ ’ಠಕ್ಕಿನ ಮನುಷ್ಯ’.
* ರಾಮೇಶ್ವರ ಠಾಕುರ್ ’ಸುಕ್ಕಿನ ಮನುಷ್ಯ’.
* ರಾಹುಲ್ ಗಾಂಧಿ ’ಲುಕ್ಕಿನ ಮನುಷ್ಯ’.
* ಜನಾರ್ದನಸ್ವಾಮಿ ’ಲಕ್ಕಿನ ಮನುಷ್ಯ’.
* ಅರವಿಂದ ಅಡಿಗ ’ಬುಕ್ಕಿನ ಮನುಷ್ಯ’.
* ಮುಖೇಶ್ ಅಂಬಾನಿ ’ಚೆಕ್ಕಿನ ಮನುಷ್ಯ’.

ಪ್ರವಾಹ ನಿರೋಧ ಅಕ್ಕಿ ತಳಿ-’ಸ್ವರ್ಣ’, ಈಗ ಭಾರತ, ಮತ್ತು ಬಂಗ್ಲಾದೇಶದ ರೈತರಿಗೆ ಲಭ್ಯ !

ಅಮೆರಿಕದ ’ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ,” ಕೀಟಶಾಸ್ತ್ರಜ್ಞೆ, ಪಮೇಲಾ ರೋನಾಲ್ಡ್, ಈಗ ಭಾರತಕ್ಕೆ ಬಂದಿದ್ದಾರೆ. ಪ್ರತಿವರ್ಷವೂ ಸುಮಾರು ೪ ಮಿಲಿಯನ್ ಅಕ್ಕಿ, ಪ್ರವಾಹದಿಂದಾಗಿ ನಾಶವಾಗುವುದನ್ನು ತಪ್ಪಿಸಲು ಆಕೆ ಸಂಶೋಧನೆ ನದೆಸಿ, ಪ್ರವಾಹ ನಿರೋಧಕ ಅಕ್ಕಿ ತಳಿಯನ್ನು ಕಂಡುಹಿಡಿದು, ಭಾರತದ ರೈತರಿಗೆ ಬಿಡುಗಡೆಮಾಡಲು ತಯಾರಾಗಿದ್ದಾರೆ.