ಸತ್ತು –ಶಾಶ್ವತ ಬದುಕಿರುವವರು; ಬದುಕಿಯೂ-ದಿನಃಪ್ರತಿ ಸಾಯುತ್ತಿರುವವರು

ಸತ್ತು –ಶಾಶ್ವತ ಬದುಕಿರುವವರು; ಬದುಕಿಯೂ-ದಿನಃಪ್ರತಿ ಸಾಯುತ್ತಿರುವವರು

ಬರಹ

ಇನ್ನು ಕೆಲವೇ ನಿಮಿಷಗಳಲ್ಲಿ ಸತ್ಯಕ್ಕಾಗಿ ಸಾಯಲು ಹಸನ್ಮುಖಿಯಾಗಿ ನಿಂತಿರುವ ತತ್ವಙಾನಿ ಸಾಕ್ರೆಟಿಸ್ ಒಂದು ಕಡೆ. ರಾಜಪ್ರಭುತ್ವದ ವಿರುದ್ಧ ಸಿದ್ಧಾಂತ ಪ್ರತಿಪಾದಿಸಿದ ಸಾಕ್ರೆಟಿಸ್ ಗೆ ರಾಜದ್ರೋಹದ ಆಪಾದನೆ ಮೇರೆಗೆ ಸಾರ್ವಜನಿಕವಾಗಿ ’ಹೆಮಲಾಕ್” ಎಂಬ ವಿಷಪ್ರಾಸನ ಮಾಡಿಸಿ ಹತ್ಯೆಗೆಯ್ಯುವ ಉದ್ಧೇಶದಿಂದ ಮಂತ್ರಿಮಾಧಿಂಗರು, ಸೈನಿಕರೊಂದಿಗೆ ಸನ್ನಧರಾಗಿರುವ ಗ್ರೀಕ್ ನ ದೊರೆ ಮತ್ತೊಂದು ಕಡೆ. ರಾಜಪರಿವಾರದವರು ಮತ್ತು ಸಾಕ್ರೆಟಿಸನ ಆಪ್ತರು ತನ್ನ ಅಭಿಪ್ರಾಯವನ್ನು ಹಿಂದಕ್ಕೆ ಪಡೆದು ಪ್ರಾಣ ಉಳಿಸಿಕೊಳ್ಳುವಂತೆ ಸಾಕ್ರೆಟಿಸನಿಗೆ ಒತ್ತಾಯ ಆದರೆ ಸತ್ಯದ ಪ್ರತಿಪಾಧನೆಗಾಗಿ ಸಾಯಲು ಸಿದ್ಧನಿರುವ ಸಾಕ್ರೆಟಿಸನಿಂದ ಬಂದ ಉತ್ತರವೆಂದರೆ:-

“ಸಾಕ್ರೆಟಿಸನ ಪ್ರಾಣ ಸತ್ಯಕ್ಕಿಂತಲೂ ಮಹತ್ವದ್ದಲ್ಲ, ಸತ್ಯಕ್ಕೋಷ್ಕರ ಸಾಕ್ರೆಟಿಸ್ ಸಾಯಲು ಸಿದ್ಧ, ಆದರೆ ಆತ್ಮಸಾಕ್ಷಿಗೆ ವಿರುದ್ಧವಾಗಿ ಅಸತ್ಯವನ್ನೆಂದಿಗೂ ಒಪ್ಪಿಕೊಳ್ಳಲಾರೆ” ಎಂಬುದಾಗಿ ವಿಷಪ್ರಾಸನದಿಂದ ಪ್ರಾಣವನ್ನೇ ಬಲಿಕೊಡಲು ಸಂತೋಷದಿಂದ ಒಪ್ಪಿಕೊಳ್ಳುತ್ತಾನೆ ಸತ್ಯಕ್ಕಾಗಿ ಸಾಯುತ್ತಾನೆ. ಜೀವನದ ಒಂದೇ ಒಂದು ಸಂಧಭ೯ದಲ್ಲಿಯೂ ಅಸತ್ಯ ನುಡಿಯದೆ ಸತ್ಯಕ್ಕೋಷ್ಕರ ಪ್ರಾಣವನ್ನೇ ಬಲಿಕೊಟ್ಟ ಸಾಕ್ರೆಟಿಸ್ ಎಲ್ಲಿ ! ಸುಳ್ಳಿನಿಂದಲೇ ಬದುಕುತ್ತಿರುವ ಇಂದಿನ ಜನರೆಲ್ಲಿ ಎತ್ತಂದೆತ್ತಣ ಸಂಬಂಧ.