ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

"ಬೆಳಗಿನ ನಿದ್ದೆ"

"ಬೆಳಗಿನ ನಿದ್ದೆ
*********"

ಬೆಳಗಿನ ಕಿರಣ
ಭೂಮಿಯ ಸೋಕಿದಾಗ,
ಇಬ್ಬನಿಯ ಮಬ್ಬು
ಕಣ್ಮರೆಯಾದಾಗ,

ಹಕ್ಕಿಗಳು ಗೂಡನು
ಬಿಟ್ಟು ಹಾರಿದಾಗ,
ಹೂಗಳು ಅರಳಿ
ಕಂಪನು ಸೂಸಿದಾಗ,

ಜಗತ್ತೇ ಎದ್ದಿರಲು,
ನನಗಿನ್ನೂ ಗಾಢವಾದ,
ನಿದ್ದೆ!!!! :)

ಸ್ಪೆಲಿಂಗ್ ಬೀ ೨೦೦೯ - ಕಾವ್ಯ ಶಿವಶಂಕರ್

ಕನ್ನಡದಂಥ ಭಾಷೆಯಲ್ಲಿ ಪದಗಳನ್ನು ಬರೆಯುವುದೂ, ಉಚ್ಚರಿಸುವುದೂ ಸುಮಾರು ಒಂದೇ ರೀತಿ
ಇರುವಾಗ, ಅದರಲ್ಲಿ ಸ್ಪೆಲಿಂಗ್ ಪ್ರಶ್ನೆ ಅಷ್ಟಾಗಿ ಕಾಣಬರುವುದಿಲ್ಲ. ಆದರೆ, ಇಂಗ್ಲಿಷ್
ನಂತಹ ನುಡಿಗಳಲ್ಲಿ ಹಲವರಿಗೆ ಅದೊಂದು ತೊಡಕಿನ ವಿಷಯವೇ.

ಯುಎಸ್ಎ ನಲ್ಲಿ
ಪ್ರತಿವರ್ಷ ಸ್ಪೆಲಿಂಗ್ ಬೀ ರಾಷ್ಟ್ರ ಮಟ್ಟದಲ್ಲಿ ನಡೆಯುತ್ತೆ. ಕೆಳಗಿನ ಹಲವಾರು

ಜಯನಗರ ೪ನೇ ಹಂತಕ್ಕೆ ಹೇಗೆ ಹೋಗೋದು?

ನಮ್ಮ ಕಾಲೇಜಿಗೆ ಸ್ವಾಯತ್ತತೆ ಬಂದಾಗಿನಿಂದ ನಮಗೆ ಕೊನೆಗೆ ಫಲಿತಾಂಶ ಅಂತ ಕೊಡೋದು ಹತ್ತಕ್ಕೆ ಇಷ್ಟು ಅಂಕ ಅಂತ. ಅದರಲ್ಲಿ ೯ಕ್ಕಿಂತ ಜಾಸ್ತಿ ಬಂದವರಿಗೆ ಜಯನಗರದಲ್ಲಿರೋ ’ಬುಕ್ ಪ್ಯಾರಡೈಸ್’ ನಲ್ಲಿ ಪುಸ್ತಕ ಕೊಳ್ಳಲು ೧೦೦೦ ರೂಪಾಯಿಗಳ ಬಹುಮಾನ.

ಈಗ ಕನ್ನಡ ಬರೆಯಿರಿ ಯಾವುದೇ ವೆಬ್ ಸೈಟ್ನಲ್ಲಿ... ಇಚ್ಛೆ ಬಂದಲ್ಲಿ..

ಸ್ನೇಹಿತರೆ,

ಎಲ್ಲಾ ಕನ್ನಡಿಗರಿಗೆ...ವಿಶೇಷ ಸುದ್ದಿ..

ಇನ್ನೂ ಕನ್ನಡದಲ್ಲಿ ಪ್ರತಿಕ್ರಿಯಿಸುವುದು, ಲೇಖನ ಬರೆಯುವುದು, ವ್ಯಾಕರಣದ (spelling
ವಿಚಾರದಲ್ಲಿ) ತಪ್ಪನ್ನು ಕಡಿಮೆ ಮಾಡಿಕೊಂಡು ಬರೆಯುವುದು, ಇನ್ನೂ ಬಾಳೆಹಣ್ಣು
ಸುಲಿದಷ್ಟೇ ಸುಲಭ..

ಈ ಕೆಳಗಿನ ಲಿಂಕ್ ಗಮನಿಸಿ.. ಪೂರ್ಣ, ಸಂಪೂರ್ಣ ವಿವರವಾದ ಲೇಖನ ಇಲ್ಲಿದೆ..

ಈಗ ಕನ್ನಡ ಬರೆಯಿರಿ ಯಾವುದೇ ವೆಬ್ ಸೈಟ್ನಲ್ಲಿ... ಇಚ್ಛೆ ಬಂದಲ್ಲಿ..

ಸ್ನೇಹಿತರೆ,

ಎಲ್ಲಾ ಕನ್ನಡಿಗರಿಗೆ...ವಿಶೇಷ ಸುದ್ದಿ..

ಇನ್ನೂ ಕನ್ನಡದಲ್ಲಿ ಪ್ರತಿಕ್ರಿಯಿಸುವುದು, ಲೇಖನ ಬರೆಯುವುದು, ವ್ಯಾಕರಣದ (spelling ವಿಚಾರದಲ್ಲಿ) ತಪ್ಪನ್ನು ಕಡಿಮೆ ಮಾಡಿಕೊಂಡು ಬರೆಯುವುದು, ಇನ್ನೂ ಬಾಳೆಹಣ್ಣು ಸುಲಿದಷ್ಟೇ ಸುಲಭ..

ಈ ಕೆಳಗಿನ ಲಿಂಕ್ ಗಮನಿಸಿ.. ಪೂರ್ಣ, ಸಂಪೂರ್ಣ ವಿವರವಾದ ಲೇಖನ ಇಲ್ಲಿದೆ..

ಕಾರಣ!!

ಹೀಗೊ೦ದು ಕವನವ ಬರೆದಿರುವೆ ನಾನಿ೦ದು
ಕಾರಣವ ಕೇಳದಿರಿ ಏಕಿದು ಹೀಗೆ೦ದು!

ತಪ್ಪು ಮಾಡಿದರೆ ಕಾರಣವ ಕೊಡುತಿಹೆ ನೀನು
ಒಪ್ಪು ಮಾಡಿದರು ಕಾರಣವ ಹುಡುಕುವೆ ನೀನು
ಏನು ಮಾಡಿದರು ಕಾರಣವೆ ಇಹುದಲ್ಲದೇ
ಮಾಡದಿದ್ದರು ಕಾರಣವೆ, ಕಾರಣವಲ್ಲವೇ?

ಬಲ್ಲೆಯಾ ಹಗಲಿರುಳುಗಳಾಗುವ ಕಾರಣವ?
ಬಲ್ಲೆಯಾ ಮಾಸ ಋತುಗಳಾಗುವ ಕಾರಣವ?
ಬಲ್ಲೆಯಾ ಭುಮಿಜೆ ಸುತ್ತುವ ಕಾರಣವ?

ಮತ್ತದೇ ಬೇಸರ...

ಈಗೊಂದು ಆರು ವರ್ಷದ ಹಿಂದಿನ ತನಕ ಯಾವಾಗ ಬೇಸಿಗೆ ರಜ ಶುರವಾಗುತ್ತೆ ಅಂತ ಕಾಯ್ತಿದ್ದೆ.. ಅಜ್ಜಿ ಮನೆಗೆ ಅಂತ ಹೋಗಿದ್ದ ನೆನಪು ನನಗೆ ಯಾವತ್ತು ಇಲ್ದಿದ್ರು ನನಗಿಷ್ಟವಾದ ಕೆಲಸಗಳನ್ನ ಮಾಡಕ್ಕೆ ಬೇಸಿಗೆ ರಜದಲ್ಲಿ ಒಳ್ಳೆ ಅವಕಾಶ ಇರ್ತಿತ್ತು...

ವಸುದೇಂದ್ರ ರ ಕಥೆಗಳ ಪ್ರಭಾವ

ಒಂದಿವ್ಸಾ   ನನ್ನ ಸ್ನೇಹಿತನೊಬ್ಬ  "ರಿಸೆಷನ್ ಬಂತು" ಅಂತ ಒಂದು ಕಥೆಯ  pdf ಕಳಿಸಿದ್ದ. ಸುಮಾರು  ದೊಡ್ಡ ಇದೆ ಆಮೇಲೆ ಓದಣಾ ಅಂತ ಅಂದ್ಕೊಂಡು  ಹಾಗೇ ಬಿಟ್ಟಿದ್ದೆ, ಅವ್ನು  ನಂಗೆ  ಸಿಕ್ಕಿದಾಗೆಲ್ಲ ಕೇಳ್ತಿದ್ದ ಓದಿದ್ಯಾ? ಓದಿದ್ಯಾ? ಅಂತ. ಅರೆ ಇವ್ನೇನಪ್ಪ ಅಂದ್ಕೊಂಡು   ಓದೇ ಬಿಡೋಣ ಅಂತ  ಕುಳಿತೆ ಓದಕ್ಕೆ... ಅಬ್ಬಾ... ಎಷ್ಟು ನಕ್ಕಿದೀನಿ  ಅಂದ್ರೆ,.. ನೆನೆಸ್ಕೊಂಡ್ರೆ ಈಗ್ಲೂ ನಗ್ಬೋದು...  ಆಮೇಲೆ    ಫ್ರೆಂಡ್ ಗೆ  ನಗ್ತಾನೇ ಫೋನ್ ಮಾಡಿ ಓದಿ ಆಯ್ತು  ಅಂತ ಹೇಳಿದೆ. ಅಮೇಲೆ ನಂಗಂತೂ ಸುಮ್ನಿರಕ್ಕೇ ಆಗ್ಲಿಲ್ಲ... ಯಾರಿಗಾದ್ರು ಕಳಿಸ್ಲೇ ಬೇಕು ಅನ್ನಿಸ್ತು... ಯಾರು ಆನ್ಲೈನ್ ಇದಾರೆ  ಅಂತ ನೋಡಿದೆ, ಇದ್ದ  ಕೆಲವು ಫ್ರೆಂಡ್ಸ್ ಗೆಲ್ಲಾ ಕಳಿಸಿದೆ.. ಆದ್ರೂ ಸಮಾಧಾನ ಆಗ್ಲಿಲ್ಲ, ಓದಿದ್ರಾ ಹೆಂಗಿದೆ ಅಂತ ಫಾಲೋಅಪ್ ಕೂಡ ಮಾಡ್ತಿದ್ದೆ.

ಜೀವನ ರಥ

ಬದುಕು ಅನುಭವಗಳ ಕಣಜ
ನಾನಿಲ್ಲಿ ಜೀರ್ಜಿಂಬೆ...
ಕಷ್ಟ ಸುಖಗಳ ಮಧ್ಯೆ ಹುಡುಕಿ
ಸವಿಯುಣುವ ತವಕದಲಿ
ಸಾಗಿಹುದೆನ್ನ ಜೀವನ ರಥ..