ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮರದ ಮರ್ಮರವನ್ನು ಕೇಳುವವರಾರು ?

ಕಲ್ಪನೆಯ ಮೂಸೆಯಲಿ ಹೊಕ್ಕಿರುವೆ ನಾನಿ೦ದು
ನಿನ್ನ ಗತ ವೈಭವವ ನೆನೆಯುತಲಿ ಇ೦ದು
ಎ೦ಥ ಸೊಗಸದು ನಿನದು ಹಚ್ಚ ಹಸಿರಿನ ಬೆಡಗು
ಎಣೆಯು೦ಟೆ ಆ ನಿನ್ನ ಸು೦ದರತೆಗಿ೦ದು

ತಳಿರುತು೦ಬಿದ ಸೊಗಸು ಹಸಿರುಹೊನ್ನಿನ ಓಡಲು
ನಿಡುಸುಯ್ವ ಬಿಸಿಲಲ್ಲೂ ನೆರಳ ನೀಡುವ ಮಡಿಲು
ಸೊಗಯಿಸುತ ಸ೦ಭ್ರಮಿಪ ದಿನಗಳಲಿ ನೀನಿದ್ದೆ
ಸಿ೦ಗರಿಸಿ ಕ೦ಗೊಳಿಪ ಮದುವಣಿಗನ೦ತೆ

ಒಣಗಿದ ಮರವ ಕಂಡು ನಕ್ಕರೆ..!?

ಒಣಗಿ ಹೋದ ನನ್ನನ್ನು ಕಂಡು ನಗುತ್ತಿರುವೆಯಾ
ಹೇಳು ಮಗು ನೀ ನನ್ನಂತೆ ಮತ್ತೆ ಚಿಗುರಬೆಲ್ಲೆಯಾ?

ವಿಚಿತ್ರವೇನಲ್ಲ ನಮ್ಮ ಜೀವನ ಚಕ್ರವಿರುವುದೇ ಹೀಗೆ
ಒಣಗಿದಷ್ಟೂ ಮತ್ತೆ ಚಿಗುರುತ್ತೇವೆ ಮೊದಲಿನ ಹಾಗೆ

ನಿಮ್ಮ ಜೀವನ ಹಾಗಲ್ಲ ಒಣಗುತ್ತಾ ಸಾಗುತ್ತಿರುವಿರಿ
ಮತ್ತೆಲ್ಲೂ ಕಾಣದಂತೆ ಮಾಯವಾಗಿಯೇ ಬಿಡುವಿರಿ

ಸೋತ ನಮ್ಮನ್ನು ಕಂಡು ನಗಲು ಅವಕಾಶ ನಿಮಗೆ

ಶುಭೋದಯ!

ಶುಭೋದಯ!

ನಮ್ಮ ಜೀವನದಲ್ಲಿ ಆಪ್ತ ಸ್ನೇಹಿತರ ಪ್ರಾಮುಖ್ಯತೆ ನಮ್ಮ ಹೃದಯ ಬಡಿತಗಳಂತೆ

ಅಪ್ರತ್ಯಕ್ಷರಾಗಿ ಮೌನವಾಗಿದ್ದು ಸದಾ ನಮ್ಮ ಇರುವಿಗೆ ಉಳಿವಿಗೆ ಸಹಾಯಕರಂತೆ

ಶುಭದಿನ!

ಬರಿ ಕೈಯಲ್ಲ ಪ್ರೀತಿ

ಬರಿ ಕೈಯಲ್ಲ ಪ್ರೀತಿ
ಅಲ್ರಿ ಬರಿಕೈಯಲ್ಲಿ ಬಂದಿದ್ದಿರಲ್ಲ ?
ಬರುವಾಗ ಏನಾದರೂ ತರಬಾರದೆ ,.
ಯೇನ್ಮಾಡೋದೇ ಯಾವ್ದಕ್ಕೂ ಹಣ ಅಥವಾ ಅದೃಷ್ಟ ಬೇಕು,
ಹೋಗ್ಲಿ ಪುಕ್ಕಟೆ ಸಿಕ್ಕಿದಾದರು ಏನಾದರೂ ತರಬಹುದಿತ್ತಲ್ಲ
ಒಂದಷ್ಟು ಪ್ರೀತಿಯಾದರು ನಿಮ್ಮ ಬಳಿ ಇರಲಿಲ್ಲವಾ ,
ಅದಕೆಂದೇ ನಾನು ಇವಳನ್ನು ಕರೆ ತಂದದ್ದು !
ಯಾರ್ರಿ ಇವಳು ? ಪ್ರೀತಿ ಅಂತ ನಮ್ಮ ಆಫೀಸ್ನಲ್ಲಿ

ನೆನಪಿನ ಬುತ್ತಿಯಿಂದ ಒಂದಷ್ಟು-೩ :)

ಪ್ರಥಮ "ಪಿಯುಸಿ"ಯ ಪ್ರಥಮ ದಿನ
*********************

ಕಾಲೇಜಿನ ಪ್ರಥಮ ದಿನ. ಬೇಗನೆ ಎದ್ದಿದ್ದೆ. ಇನ್ನೇನು ಸಮಸ್ತ್ರ ಆ ಕೆಂಪು ಲಂಗ, ರವಿಕೆ ಹೋಗಿ ನೀಲಿ ಬಿಳಿ ಬಣ್ಣದ ಚೂಡಿದಾರದಲ್ಲಿ ನಾನು ರೆಡಿ. ಎರಡು ಜಡೆ ಕಟ್ಟೋದು, ಅಮ್ಮ ಕಟ್ಟುತ್ತಿರಬೇಕಾದರೆ ಸರಿ ಕೂತ್ಕೊ, ಎಂದು ಕುಟ್ಟೋದು, ಎಲ್ಲದಕ್ಕೂ ಪೂರ್ಣವಿರಾಮ. :)

ಸ್ಪಂಜಿನ ಹೊಡೆತ

ಸ್ಪಂಜಿನ ಹೊಡೆತ
ಸ್ಪಂಜಿನ ಹೊಡೆತ ,.,.,..,.,.,.,
ಪರೇಶ್ ಇಂದೆನಾಯಿತೋ ಹೊಸದು, ಹೌದು ಪರೇಶ್ ಹುಟ್ಟಿದ್ದು ಬೆಳೆದದ್ದು ಧಾರವಾಡ ಆದರೆ ಈಗ ಇರುವುದು ಶಿವಮೊಗ್ಗ. ಅದೆಂದರೆ ಅವನು ೭ ತರಗತಿ ವರೆಗೆ ಓದಿದ್ದಾನಂತೆ . ಆದರೆ ಇವನ ಮಾತು ಕೆಲಸ ಎಲ್ಲ ಹೊಡೆತ ತಿನ್ನುವಂತದೆ ಆದರೆ ಇವನ ಮನಸ್ಸು ತುಂಬ ಒಳ್ಳೆಯದು, ಜನ ಮನಸ್ಸು ನೋಡೋದಲ್ಲ, ಇವನ ಕೆಲಸ ಅಂತಹುದು.

ಸ್ಪಂಜಿನ ಹೊಡೆತ

ಸ್ಪಂಜಿನ ಹೊಡೆತ
ಸ್ಪಂಜಿನ ಹೊಡೆತ ,.,.,..,.,.,.,
ಪರೇಶ್ ಇಂದೆನಾಯಿತೋ ಹೊಸದು, ಹೌದು ಪರೇಶ್ ಹುಟ್ಟಿದ್ದು ಬೆಳೆದದ್ದು ಧಾರವಾಡ ಆದರೆ ಈಗ ಇರುವುದು ಶಿವಮೊಗ್ಗ. ಅದೆಂದರೆ ಅವನು ೭ ತರಗತಿ ವರೆಗೆ ಓದಿದ್ದಾನಂತೆ . ಆದರೆ ಇವನ ಮಾತು ಕೆಲಸ ಎಲ್ಲ ಹೊಡೆತ ತಿನ್ನುವಂತದೆ ಆದರೆ ಇವನ ಮನಸ್ಸು ತುಂಬ ಒಳ್ಳೆಯದು, ಜನ ಮನಸ್ಸು ನೋಡೋದಲ್ಲ, ಇವನ ಕೆಲಸ ಅಂತಹುದು.

ಬಣ್ಣ ಕಳೆದುಕೊಂಡ ಬದುಕು

ಕಪ್ಪು ಕಪ್ಪಾಗಿಹ ಎಸಳು
ಉದುರಿ ಹೋಗಿಹ ಎಲೆಯು
ಮುರುಟಿ ಹೋಗಿಹ ದಂಟು
ಕೈಯಲ್ಲಿದೆ ಮುದುರಿ ಹೋಗಿಹ ಹೂವು

ಕೋಟುಗಳ ನಡುವೆ ನರಳಿ
ಸಭಾಂಗಣದ ನೆಲದಲ್ಲಿ ಹೊರಳಿ
ಅಲ್ಲಲ್ಲಿ ಚೆಲ್ಲಾಡಲ್ಪಟ್ಟಿಹ ಸುಮವು
ನರಳುತಿಲ್ಲವೇನು?

ಮುಂಜಾವ ಹೊತ್ತಿನಲ್ಲಿ
ಮಂಜಿನ ಮಳೆಯಲ್ಲಿ
ನಳ ನಳಿಸುತ್ತಿರಲಿಲ್ಲವೇನು ?
ತಂಗಾಳಿಗೆ ಮುಖವೊಡ್ಡಿ ನಗುತ್ತಿರಲಿಲ್ಲವೇನು?

ಬಣ್ಣ ಕಳೆದುಕೊಂಡ ಬದುಕು

ಕಪ್ಪು ಕಪ್ಪಾಗಿಹ ಎಸಳು
ಉದುರಿ ಹೋಗಿಹ ಎಲೆಯು
ಮುರುಟಿ ಹೋಗಿಹ ದಂಟು
ಕೈಯಲ್ಲಿದೆ ಮುದುರಿ ಹೋಗಿಹ ಹೂವು

ಕೋಟುಗಳ ನಡುವೆ ನರಳಿ
ಸಭಾಂಗಣದ ನೆಲದಲ್ಲಿ ಹೊರಳಿ
ಅಲ್ಲಲ್ಲಿ ಚೆಲ್ಲಾಡಲ್ಪಟ್ಟಿಹ ಸುಮವು
ನರಳುತಿಲ್ಲವೇನು?

ಮುಂಜಾವ ಹೊತ್ತಿನಲ್ಲಿ
ಮಂಜಿನ ಮಳೆಯಲ್ಲಿ
ನಳ ನಳಿಸುತ್ತಿರಲಿಲ್ಲವೇನು ?
ತಂಗಾಳಿಗೆ ಮುಖವೊಡ್ಡಿ ನಗುತ್ತಿರಲಿಲ್ಲವೇನು?

ಬೋಳು ಮರ ಮತ್ತು ನಾನು.

ಮೇ ೨ ರಂದು ಸಿದ್ಧರಬೆಟ್ಟಕ್ಕೆ ಹೋಗಿದ್ದಾಗ ನನ್ನ ಕ್ಯಾಮೆರಾದಲ್ಲಿ ಹರಿ ಸೆರೆಹಿಡಿದ ಚಿತ್ರ ಇದು.

ಚಿತ್ರದಲ್ಲಿರುವ ವಿಷಯಕ್ಕೆ ಸಂಬಂಧಿಸಿದಂತೆ ನಿಮಗೆ ಹೊಳೆಯುವ ಕಥೆ/ಕವನ/ಚುಟುಕ ಏನಾದರೂ ಬರೆಯಿರಿ.