ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅರಿತುಕೋ ಓ ಮನವೇ

ಅರಿತುಕೋ ಮನವೇ
ನಿನ್ನ ಎಲ್ಲೆಯ
ತಿಳಿದುಕೋ ಮನವೇ
ನಿನ್ನೊಂದು ಮಾತಿನ ಅಪಾರ್ಥವ

ಇರುವುದೆಂದು ನಾಲಿಗೆ
ಹರಿಹಾಯಬಿಡದಿರು
ಕಟ್ಟದಿರು ಬಣ್ಣದ ರೆಕ್ಕೆಯ
ತೋಚಿದ ವಿಷಯಕ್ಕೆಲ್ಲ

ಇರಲೇಬೇಕೆಂದಿಲ್ಲ ಎಲ್ಲವೂ
ನೀ ಚಿಂತಿಸಿದಹಾಗೆ
ಇರಬಾರದೆನೆಂದಿಲ್ಲ ಎಲ್ಲವೂ
ನೀ ತರ್ಕಿಸದಹಾಗೆ

ತುಸು ನಕ್ಕು ಕೈ ಕುಲುಕಿದಕ್ಕೆ
ಅಂದುಕೊಳ್ಳಬೇಡ, ಅರಿತೆ ನಾ

ಎಲ್ಲ ಬಲ್ಲವನ ಹುಡುಕಾಟದಲ್ಲಿ

ಅರಿಯದ ವಿದ್ಯೆಗಳೆಷ್ಟೋ
ಏನೂ ಅರಿಯದವರಿನ್ನೆಷ್ಟೋ..
ಅರಿತು ಅರಿಯದವರಂತೆ ನಟಿಸುವವರ್ ಮತ್ತೆಷ್ಟೋ..
ಎಲ್ಲವನರಿತ ನೀನೆಲ್ಲೊ?

ಬಾಲ್ಯ

ಮರಳಿ ಬಾ ಬಾಲ್ಯವೇ
ನೀ ಒಮ್ಮೆ ಮಧುರ
ಸವಿನೆನಪ ಹೊತ್ತು
ಹಾರ ಬೇಕೆನಿಸಿದೆ ಒಮ್ಮೆ ನಾ ಈ ಭುವಿಯ ಬಿಟ್ಟು

ಸಿಕ್ಕ ಸಿಕ್ಕ ಮರವ ಹತ್ತಿ
ಕಂಡಿದ್ದೆಲವ ತಿಂದು
ಅರಗಿಸಿಕೊಳ್ಳಲಾಗದೆ ಕಕ್ಕಿದ್ದು
ನಾ ಆ ಬಾಲ್ಯದಲ್ಲೇ

ಮುಂಗಾರ ಮಳೆಯಲ್ಲಿ
ಪಟ ಪಟನೆ ಬಿದ್ದ
ಆಲಿಕಲ್ಲು ಹೆಕ್ಕಿ ತಿಂದಿದ್ದು
ನಾ ಆ ಬಾಲ್ಯದಲ್ಲೇ

ಕಾಲ್ ಎಡವಿ ಬಿದ್ದಾಗ
ನಿಮಿಷ ನಿಮಿಷಕ್ಕೆ

ಯಾರೋ ಅವಳು

ಯಾರೋ ಬಂದು ಮನಸ್ಸನ್ನು ಕದಡಿದಂತಿದೆ

ಇದುವರೆಗೂ ಇಲ್ಲದ್ದಿದ್ದ ಕನಸುಗಳು ಮೈದಳೆಯುತ್ತಿವೆ

ಎಲ್ಲೋ ಮನ ಹಾಳಾಗ ಬೇಡವೆನುತಿದೆ

ಮಾಯೆಯ ನೆರಳಲ್ಲಿ ಮನೆಮಾಡಲೇ  ನಾನು?

ಬಾ ಗೆಳತಿ

ನನ್ನೀ ಉಸಿರಿಗೆ
ನಿನ್ನ ಬಿಸಿ ಉಸಿರ ಬೆರೆಸಿ
ಈ ಹಸಿರಲಿ
ಒಂದಾಗೋಣ ಬಾ

ಬೆಳದಿಂಗಳ ಚಂದ್ರಮನ
ಬೆಳಕಲ್ಲಿ ಒಮ್ಮೆ
ಬಿಳಿ ಹಾಲ ನೊರೆಯಂತೆ
ಉಕ್ಕೋಣು ಬಾ

ಆ ನದಿಯ ದಡದಲ್ಲಿ
ನೀರಿನ ಬುಗ್ಗೆಯ ನಡುವೆ ಕುಳಿತು ,
ಆ ಜ್ವಾಲಾಮುಖಿ
ಲಾವಾರಸದಂತಾಗೋಣೂ ಬಾ

ಆ ಹೂವಿನ ತೋಟದಲಿ
ಹೂವೊಳಗೆ ಹೊಕ್ಕು
ಮಕರಂದ ಹೀರುವ ಜೇನಾಗೋಣೂ ಬಾ

ಜಗದ ಎಲ್ಲೆಯ ಮರೆತು
ಬಾನಂಚಿಗೆ ಚುಂಬಿಸುವ

ಟೆಕ್ ಸುದ್ದಿ - ಎಂ.ಎಂ.ಸಿ - ಮಲ್ಟಿಮೀಡಿಯಾ ಮೆಮೋರಿ ಕಾರ್ಡ್

೧) ದಿನಾ ಪೂರ ಇದು ನನ್ನ ಮೊಬೈಲ್ನಲ್ಲಿರಬೇಕು.

೨) ನಂತರ ಕಣ್ಣಿಗೆ ಸುಂದರ ಚಿತ್ರ ಕಂಡ್ರೆ ಇದು ನನ್ನ ಕ್ಯಾಮೆರಾದಲ್ಲಿರಬೇಕು.

೩) ಕಾರ್ ಡ್ರೈವ್ ಮಾಡ್ಬೇಕಿದ್ರೆ, ಇದರಲ್ಲಿರೋ ಹಾಡುಗಳನ್ನ ಕಾರಿನ ಮ್ಯೂಸಿಕ್ ಪ್ಲೇಯರ್ ನಲ್ಲಿ ಪ್ಲೇ ಮಾಡ್ಬೇಕು (USB ಮೂಲಕ)

ಮಣ್ಣಲ್ಲಿ ಮಣ್ಣಾಗುವ ತನಕ

ಇಂದು ಹುಟ್ಟಿ ನಾಳೆಮಣ್ಣಾಗುವ ಈ ಜೀವಕೆ
ಏನೆಲ್ಲಾ ಬೇಕು

ಮಣ್ಣಲ್ಲಿ ಮಣ್ಣಾಗುವ ತನಕ ಈ ಜೀವ ಹಪಹಪಿಸುತ್ತಾ ಇರುತ್ತದೆ
ಒಬ್ಬ ಒಳ್ಳೆಯ ವ್ಯಕ್ತಿಯ್ಯಾಗುವಾಸೆ
ಒಂದು ಸುಂದರ ಸಮಾಜ ಕಟ್ಟುವಾಸೆ
ಒಂದು ಸುಂದರ ಸಮಾಜದೊಂದಿಗೆ ಬೆರೆಯುವಾಸೆ
ನಮ್ಮ ಅನುಭವವನ್ನು ಇನ್ನೊಬ್ಬರ ಹತ್ತಿರ ಹೇಳ ಬೇಕೆನ್ನುವಾಸೆ