ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರವಾಸ ಕಥನ - ೨

೯ನೇ ತಾರೀಖು ಬೆಳಗಿನ ಜಾವ ೨ ಘಂಟೆಗೆ ಅಲಾರಾಂ ಹೊಡೆದಾಗ ದಡಬಡಿಸಿ ಎದ್ದೆವು. ಯಾತ್ರೆಗೆ ಹೊರಡುವ ಮುನ್ನವೇ ವಿಘ್ನ ಎದುರಾಗಿತ್ತು. ನಾವು ಗಂಗಾದೇವಿಯನ್ನು ಹೋಡಲು ಹೊರಟಿದ್ದರೆ, ನಮ್ಮ ಎರಡೂ ಸ್ನಾನದ ಮನೆಯ ನಲ್ಲಿಯಲ್ಲಿ, ಕಾವೇರಿ, ಮುಷ್ಕರ ಹೂಡಿದ್ದಳು.

ನಾ ಕಂಡ ಸೃಷ್ಠಿ- ಎ.ಬಿ.ವಿ.ಪಿ.ಕಾರ್ಯಕ್ರಮ

ನಮ್ಮ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಎ.ಬಿ.ವಿ.ಪಿ ಹಮ್ಮಿಕೊಂಡ "ಸೃಷ್ಠಿ-೨೦೦೯"
*******************************************************************

ದೇವಸ್ಥಾನ ಮತ್ತು ಹೋಮಕುಂಡ

ಕನಕಪುರ ರಸ್ತೆಯಲ್ಲಿ, ಯೆಡಿಯೂರು ಕೆರೆಯ ಸ್ವಲ್ಪ ಮುಂದೆ ಒಂದು ಅತಿ ಚಿಕ್ಕದಾದ ಅಷ್ಟ ಲಕ್ಷ್ಮಿ ಮತ್ತು ನರಸಿಂಹ ದೇವರ ದೇನಸ್ಥಾನ ಇದೆ. ಇದರ ಮಹಡಿಯ ಮೇಲೂ ಕಟ್ಟಿದ್ದಾರೆ. ಹೋಮ ಕುಂಡವನ್ನು, ಟಾರ್ ಹಾಕಿದ ರಸ್ತೆ ಅಗೆದು, ಮಾಡಿದ್ದಾರೆ. ಇದು ತೀರಾ ರಸ್ತೆಯ ಒಂದು ಪಕ್ಕದಲ್ಲಿರುವುದರಿಂದ, ಓಡಾಡುವ ಜನರ ಕಾಲು ಈ ಹೋಮ ಕುಂಡಕ್ಕೆ ತಗುಲುತ್ತದೆ.

ಮೈಸೂರು ಅರಮನೆಯ ಸೊಬಗು

ಕಳೆದ ಫೆಬ್ರವರಿಯಲ್ಲಿ ಮೈಸೂರಿಗೆ ಹೋಗಿ ಅರಮನೆಯನ್ನು ಮನತಣಿಯುವಷ್ಟು ಒಳಗೆಲ್ಲಾ ನೋಡಿ ಹೊರಬಂದು ಒಂದಿಷ್ಟು ಫೋಟೋ ತೆಗೆದೆವು. ಸಂಪದಿಗರಿಗಾಗಿ ಪೇರಿಸಿದ್ದೇನೆ.ಇನ್ನು ಬರೆಯುವುದೇನಿದೆ,ಎಲ್ಲವನ್ನೂ ಚಿತ್ರವೇ ಹೇಳುವಾಗ.

 

ಗಜ-ಹಂಸ

ಕೆಳದಿ ರಾಮೇಶ್ವರ ದೇವಾಲಯ ಒಂದು ಪ್ರಸಿದ್ಧವಾದ ಹಳೆಯ ದೇವಾಲಯ. ಕೆಳದಿ ಅರಸರು ನಿರ್ಮಿಸಿದ ಈ ದೇವಾಲಯದ ಪ್ರಮುಖ ದೇವರುಗಳೆಂದರೆ ರಾಮೇಶ್ವರ (ಲಿಂಗ), ವೀರಭದ್ರದೇವರು ಮತ್ತು ಪಾರ್ವತಿ ದೇವಿ. ಈ ದೇವಾಲಯವನ್ನು ಭಾರತ ಸರ್ಕಾರದ ಪ್ರಾಚ್ಯವಸ್ತು ಇಲಾಖೆಯವರು ಸಂರಕ್ಷಿಸಿದ್ದಾರೆ. ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ.

ದಾರಿಯಲ್ಲಿ ಸಿಕ್ಕ ಕಾಮಣ್ಣನ ಮಕ್ಕಳು

ಸಿದ್ಧರ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಸಿಕ್ಕ ಒಂದು ಮನೆ ಮತ್ತು ಬೋರ್ಡ್‌ ಬಗ್ಗೆ ಹೇಳಲೇಬೇಕು.

ತುಮಕೂರು ದಾಟಿ ಮುಂದೆ ಹೋಗುತ್ತಿದ್ದಾಗ, ದಾರಿಯಲ್ಲಿ ಒಂದೆಡೆ ಮಾವಿನ ಹಣ್ಣುಗಳಿಗಾಗಿ ನಿಂತೆವು. ಆ ಸ್ಥಳ ಇತ್ತ ಊರೂ ಅಲ್ಲ, ಅತ್ತ ಬಯಲೂ ಅಲ್ಲ. ಅಲ್ಲೊಂದು ಇಲ್ಲೊಂದು ಮನೆಗಳು, ಕುರಿ ಕಾಯುವ ಹುಡುಗರು ಮತ್ತು ಖಾಲಿ ಹೊಲಗಳು.

ನಮ್ಮ ಶಿಕ್ಷಕರು

ಮೊನ್ನೆ ಬಿ. ಎಡ್. ನ ಪ್ರವೇಶ ಪರೀಕ್ಷೆ ಗೆ invigilator ಆಗಿ ಕೆಲಸ ಮಾಡಬೇಕಾಗಿ ಬಂದಿತ್ತು.
ಅಲ್ಲಿ ತಮ್ಮ roll number ಅನ್ನು ಶಬ್ದಗಳಲ್ಲಿ ಬರೆಯಲು ಅಭ್ಯರ್ಥಿಗಳು ಪಟ್ಟ ಪಾಡು ಹೇಳತೀರದು.
ಒಬ್ಬ ಹುಡುಗಿಯಂತೂ thri jiro fore fiw nin (30459) ಎಂದು ಬರೆದಿದ್ದಳು.
ಅಂದಿನ ದಿನವನ್ನು Saterday ಎಂದು ಬರೆದವರ ಸಂಖ್ಯೆಯಂತೂ ಬಹಳವೇ ಇತ್ತು.

ಸಿದ್ಧರ ಬೆಟ್ಟಕ್ಕೆ ಲಗ್ಗೆ !

’ಐದೂವರೆಗೆ ಅನಿಲ್‌ ಬಂದು ನಿಮ್ಮನ್ನು ಪಿಕ್‌ ಮಾಡುತ್ತಾರೆ’ ಎಂದು ಹರಿ ಹೇಳಿದ್ದು ಹಿಂದಿನ ದಿನ ರಾತ್ರಿ ಹನ್ನೆರಡು ಗಂಟೆಗೆ.

’ನೀವು ಎಷ್ಟು ಗಂಟೆಗೆ ಏಳುತ್ತೀರಿ?’ ಎಂದು ಅಪನಂಬಿಕೆಯಿಂದ ಕೇಳಿದ್ದೆ. ’ನೀವೇ ಎಬ್ಬಿಸಿ. ನಾಲ್ಕೂವರೆಗಾದರೆ ಉತ್ತಮ’ ಅಂದಿದ್ರು ಹರಿ.

ಖ೦ಡವಿದಕೋ ಮಾ೦ಸವಿದಕೋ.....!

ಖ೦ಡವಿದಕೋ ಮಾ೦ಸವಿದಕೋ
ಗು೦ಡಿಗೆಯ ಬಿಸಿರಕ್ತವಿದಕೋ
ಚ೦ಡವ್ಯಾಘ್ರನೇ ನೀನಿದೆಲ್ಲವ
ಉ೦ಡು ಸ೦ತಸದಿ೦ದಿರು!....

ಈ ಪುಣ್ಯಕೋಟಿ ಗೋವಿನ ಹಾಡನ್ನು ಕೇಳಿ ಕರಗದ ಕನ್ನಡಿಗರಾರು?