ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸವಿನೆನಪೊಂದೆ ಸಾಕು!

ನಿನ್ನ ಸವಿನೆನಪೊಂದೆ
ನೀ ಕೊಟ್ಟ ಕಾಣಿಕೆ|
ಹತ್ತು ಹಲವು ಕನಸುಗಳು
ಗರಿಗೆದರಿ ಹಾರಿದವು
ಅಂದಿನ ಆ ದಿನಗಳಲ್ಲಿ||
ಗಲ್ಲಕ್ಕೆ ಅಚ್ಚೊತ್ತಿದ್ದ ಸಿಹಿ ಮುತ್ತಿನ
ರಸಾನುಭವದ ಪುಳಕವು
ಮೈ ಮನದಲ್ಲಿ||
ಕೈ ಕೈ ಸಂಗಮದ ಸಮಯ
ಹರಿದ ರೊಮಾಂಚನದ ಮಿಂಚು
ಈಗಲೂ ಮಿಂಚುತ್ತಿದೆ ಆದರೆ ಬೆಳಕಿಲ್ಲ||
ಮರಳನಲ್ಲಿ ಕಟ್ಟಿದ ಗೋಪುರ
ನೀರ ಅಲೆಗೆ ಕುಸಿದು ವ್ಯಥೆಯಾಗಿದೆ,

ಹಿರಿಯರು

ಹಿರಿಯರು

ಹಿರಿಯರು ಬಹಳ ಕೊರೆಯುವರು
ಏಕೆಂದರೆ ಅವರು ಬಹಳ ಅನುಭವವಿರುವವರು
ಹಾಗಂತ ಕಿರಿಯರ ಮೇಲೆ ತಮ್ಮೆಲ್ಲಾ ಅನುಭವಗಳನ್ನೇಕೆ ಹೇರುವರು

ನಿಮ್ಮ ಸಲಹೆಗಳು ನಮಗೆ ಬಹು ಮುಖ್ಯ
ನಿಮ್ಮ ಮಾತುಗಳು ನಮಗೆ ವೇದ ವಾಕ್ಯ

ಇನ್ನೊಬ್ಬರಿಗೆ ಮಾದರಿಯಾಗಿ ನೀವು
ಅದರೆ ಅವರನ್ನು ಮಾದರಿ ವ್ಯಕ್ತಿಗಳನ್ನಾಗಿ ಮಾಡಲು
ಮಾತ್ರ ಪ್ರಯತ್ನಿಸಬೇಡಿ

ಮನಸ್ಸಿದ್ದರೆ ಮಾರ್ಗ

ನನ್ನ ಹಳ್ಳಿಯಲ್ಲಿ ನಮಗೊಂದು ಹಿತ್ತಲು. ಅದರಲ್ಲಿ ಒಂದು ಚಿಕ್ಕ ಮನೆ ಕಟ್ಟಿ ಅದರಲ್ಲಿ ಅದರಲ್ಲಿ ಹಸು ಸಾಕುವ ಯೋಜನೆ ಮಾಡಿ ವಿಫಲವಾಯ್ತು. ಹತ್ತಾರು ವರ್ಷಗಳಿಂದ ಹಾಗೆಯೇ ಪಾಳು ಬಿತ್ತು. ಊರ ಜನರಿಗೆ ತೆರೆದ ಶೌಚಾಲಯವಾಯ್ತು. ನಾನು ಊರಿಗೆ ಹೋದಾಗಲೆಲ್ಲಾ ಅದರಮುಂದೆ ನಿಂತು ದು:ಖಿಸುವುದೊಂದೇ ದಾರಿಯಾಗಿತ್ತು. ಅಂತೂ ಅದಕ್ಕೂ ಇದ್ದಕ್ಕಿದ್ದಂತೆ ಮೊಕ್ಷ ಸಿಕ್ಕಿತು. ತಮ್ಮನ ಮಗಳ ಮದುವೆ ನಿಶ್ಚಯವಾಯ್ತು. ಅದೇ ಜಾಗದಲ್ಲಿ ಮಗಳ ಮದುವೆ ಮಾಡಬೇಕೆಂದು ಸಂಕಲ್ಪ ಮಾಡಿದೆ. ಮುಂದೆ ಮೂರು ವಾರಗಳಲ್ಲಿ ಆದ ಪರಿವರ್ತನೆಯ ಚಿತ್ರ ಹಾಕಿರುವಿ ನೋಡಿ.

ಯಶವಂತಪುರ ಮೇಲ್ಸೇತುವೆ

ಕಡೆಗೂ ರಾಷ್ಟ್ರೀಯ ಹೆದ್ದಾರಿ-೪ ಯಶವಂತಪುರದ ಬಳಿ ನಿರ್ಮಿಸಲಾಗುತ್ತಿದ್ದ ಫ್ಲೈಓವರ್ ಸಿದ್ದವಾಗಿ ಉಪಯೋಗಕ್ಕೆ ಲಭ್ಯವಿದೆ. 

yeshwantpur

ನೆನ್ನೆ ನಾನು ಹರಿ ಐ.ಐ.ಎಸ್.ಸಿ ಬಳಿ ಹೊಗುತ್ತಿರಬೇಕಾದರೆ ತೆಗೆದ ಚಿತ್ರ. ಮುಖ್ಯಮಂತ್ರಿ ಯಡಯೂರಪ್ಪ ನೆನ್ನೆ ಇದನ್ನು ಉದ್ಘಾಟನೆ ಮಾಡಿದರು. 

ನೋಡು ಬಾ ನಮ್ಮೂರ!..............೪

ಇದುವರೆಗೆ ತರಕಾರಿ ಚಿತ್ರಗಳನ್ನು ಹಾಕಿದ್ದೆ. ಇಲ್ಲಿ ಕೆಲವು ಹಣ್ಣುಗಳನ್ನೂ ಬೆಳೆಯುತ್ತಾರೆ. ಅದರಲ್ಲಿ ಮುಖ್ಯವಾಗಿ ಸ್ಟ್ರಾಬೆರಿ, ಬುಶ್ಬೆರಿ, ಬ್ಲೂಬೆರಿ, ಚೆರಿ, ದ್ರಾಕ್ಷಿ, ಪೀಚ್, ಪ್ಲಮ್, ಏಪ್ರ್ರಿಕಾಟ್ ಮುಂತಾದವು.

ಪ್ರಮಾಣ ವಚನ

ಗುರುವಾರ ಶುಕ್ರವಾರ ಸೌದಿ ಅರೇಬಿಯದಲ್ಲಿ ವಾರಾಂತ್ಯ. ಅಪರಾಹ್ನದ ವಿಶೇಷ ಪ್ರಾರ್ಥನೆ (ಜುಮ್ಮಾ) ಮುಗಿಸಿ ಊಟದ ನಂತರ ಮನೆಯವರಿಗೆ ಫೋನಾಯಿಸಿ ಕುಶಲೋಪರಿ ವಿಚಾರಿಸಿಕೊಂಡು ಅಕ್ಕ ಪಕ್ಕದಲ್ಲಿರುವ ಮಿತ್ರರ ಮನೆಗೋ ಅಥವಾ ಬೇರೆಲ್ಲಾದರೋ ಒಂದು ಸುತ್ತು ಹೊಡೆದು ದಿನ ಕಳೆಯುವುದು ವಾಡಿಕೆ. ನನ್ನ ವಾಸ್ತವ್ಯದ ಸಮೀಪದಲ್ಲೇ ಕಿರಿಯ ಸೋದರಿಯ ವಿಲ್ಲಾ. ಈ ಶುಕ್ರವಾರ ವಿಶೇಷ ದಿನ.

ಕನಸಿನ ನೀರೆ

ಓ ಕನಸೇ ನಿನಗಾರು ಸಾಟಿ ?
ಏಕೆ ಬ೦ದೆ ನನ್ನೆದೆಯ ಮೀಟಿ ||

ಏಕೆ ತೋರಿಸಿದೆ ಅವಳನ್ನು ?
ನಾನೆಲ್ಲೂ ಕಾಣದವಳನ್ನು |
ಹೇಗೆ ಮರೆಯಲಿ ಕಣ್ಣನ್ನು ?
ಹೊಳೆವ ಮಿ೦ಚಿನ ಅ೦ಚನ್ನು ||

ಯಾವುದಾ ಮೈಮಾಟ ?
ಬಳುಕುವ ಬಳ್ಳಿಗೇ ಪಾಠ !
ಆಡಬೇಡವೇ ಜೂಟಾಟ..
ಕೊನೆವರೆಗುಳಿಸುತ್ತ ಹುಡುಕಾಟ ||

ಓ ನೀರೆ, ನೀನಾರೆ.. ?
ಏಕೆ ಇರುವೆ ಕನಸಲ್ಲೆ..|
ಬರಬಾರದೇ ಬಳಿಗಿಲ್ಲೇ..
ಅರಸುತ್ತಲಿರುವೆ ನಿನ್ನನ್ನೇ..|| :)

ಸಂಸಾರೊಂದಿಗರೋ? ಮನೆಗಾವಲಿನರೋ?

ದೂರದಿಂದಾರ ಮನೆಗೆ
ಅತಿಥಿಗಳು ಸಂತಸದಿ
ಬರುವರೋ - ಅವನೀಗ 
ದಿಟದಿ ಸಂಸಾರೊಂದಿಗ.

ಮಿಕ್ಕವರಿಗೆ ಏನೆನಬೇಕು
ಎಂದು ಕೇಳುವೆಯಾ?
ಅಲ್ಲವೇ ಅವರು ಬರಿಯ
ಮನೆಯ ಕಾವಲಿನವರು?

ಭೂತಾಯಿ

ಮುಸ್ಸಂಜೆಯ ಸಮಯದಲಿ
ಮುಂಗಾರಮಳೆಯೊಂದಿಗೆ
ಭುವಿಗೆ ಕಣ್ಣು ಹೊಡೆಯುತ್ತಿರುವನಲ್ಲ
ಆ ಮೇಘರಾಜ .

ನಾಚಿ ನವೀರಾದ ಭೂತಾಯಿ
ಸರಿಯುತ್ತಿರುವಳು ಅವನ
ತೆಕ್ಕೆಗೆ ,ಕತ್ತಲಾಗುತ್ತಿರುವ ಈ ಹೊತ್ತಿಗೆ

ತಮ್ಮಿಬ್ಬರ ಮಿಲನಕ್ಕೆ
ಅಡ್ಡಿಬರದಿರೆಂದು ಗುಡುಗಿ
ಎಚ್ಚರಿಸುತ್ತಿಹನು ಮೇಘರಾಜ
ಈ ಜೀವ ಸಂಕುಲಕ್ಕೆ

ಹತ್ತಿರ ಬಂದ ನಲ್ಲೆಯ
ಹಸಿರ ಹಾಸಿಗೆಯ ಮೇಲೆ