ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬರೆಯುವವನು ಬರೆಯುತಿರಬೇಕು-ಕೊರೆಯವವನು ಕೊರೆಯುತಿರಬೇಕು

ಬರೆಯುವವನು ಬರೆಯುತಿರಬೇಕು
ಕೊರೆಯವವನು ಕೊರೆಯುತಿರಬೇಕು

ಬರೆಯುವವನ ಬರೆಯಬೇಡ ಎಂದರೆ
ಕೊರೆಯುವವನ ಕೊರೆಯಬೇಡ ಎಂದರೆ

ಬರೆಯುವವನು ಕೊರೆಯತೊಡಗಿದರೆ
ಕೊರೆಯುವವನು ಬರೆಯತೊಡಗಿದರೆ

ಅಧ್ವಾನವೋ ಆಧ್ವಾನ ಯಾರು ಸಹಿಸುವವರು
ಓದುಗರ ಬವಣೆಯ ಯಾರು ಅರಿಯುವವರು

ಪ್ರತಿಕ್ರಿಯೆಗಳಭ್ಯಾಸ ಆಗಿಬಿಟ್ಟಿದೆ ಸಂಪದಿಗರಿಗೆ
ಯಾವ ಕಟ್ಟಳೆಯೂ ಇಲ್ಲದಿರಲೀ ಬಂಧುಗಳಿಗೆ

ಮೂರು ಕಾಲ!!!

ಸಖೀ,

ಈ ಬೆಂಗಳೂರಿನ ಹವೆ
ಬೆಳಗು ಬೈಗಿನ ನಡುವೆ
ತೋರಿಸಿ ಬಿಡುವುದು
ನಮಗೆ ಮೂರು ಕಾಲ;

ಮುಂಜಾನೆ ಛಳಿ,
ಮಧ್ಯಾಹ್ನ ಸೆಕೆ,
ಮತ್ತೆ ಸಂಜೆ
ನೀ ನೋಡು
ಮಳೆಗಾಲ!
*-*-*-*-*-*

ರಕ್ಕಸನ ಪ್ರೇಮಕಥೆ !!! -೩

ಮೊದಲ ಕಂತು : http://www.sampada.net/blog/thesalimath/19/05/2009/20427
ಎರಡನೆಯ ಕಂತು : http://www.sampada.net/blog/thesalimath/21/05/2009/20507
ದಿಂದ ಮುಂದುವರಿದಿದೆ ...

ಅವಳ ಅಣ್ಣ ನನ್ನ ಕೈಗೆ ಲಗ್ನ ಪತ್ರಿಕೆ ಇಡುತ್ತಿದ್ದಂತೆ ನನ್ನ ಮನಸ್ಸು ಯಾಕೋ ನಾಲ್ಕು ತಿಂಗಳ ಹಿಂದೆ ಸರಿಯಿತು.

ಎಂದಿನಂತೆ ಮುಂಗೈ ಬೆರಳ ಲಟಿಕೆ ತೆಗೆಯುತ್ತಾ ಕೇಳಿದ್ದಳು "ನಾನು ನಿನ್ನ ಕನಸಲ್ಲಿ ಬರುತ್ತೀನಾ?"

"ಇಲ್ಲ"

ತುರಿ, ತುಱಿ

ತುರಿ= ಕೊಱೆ, ಟೊಳ್ಳಾಗುವಂತೆ ತೋಡು, ತುರಿದಿಟ್ಟ ವಸ್ತು.
ಉದಾಹರಣೆ: ಕಾಯನ್ನು ತುರಿ, ತರಕಾರಿಯನ್ನು ತುರಿ, ಕಾಯ್ತುರಿ.

ತುಱಿ=ಕಡಿತ, ಕಡಿ.
ಉದಾಹರಣೆ: ಕಂಬಳಿ ಹುೞು ಬಿದ್ದ ಕಡೆ ಮೈ ತುಱಿಸುತ್ತದೆ.
ತುಱುಚೆಗಿಡ= ಮುಟ್ಟಿದರೆ ತುಱಿಯುಂಟಾಗುವ ಗಿಡ.

ಮನದ ಕೂಗು

ಅರಿವು ತಿಳಿವುಗಳೆಂದು
ಅಲುಗಾಡದಿರು ಓ ಮನವೇ
ಅರಿತಾಗಲೇ ಬರುವುದು ನಿನಗೆ
ತಿಳಿವಳಿಕೆಯ ಅರಿವು

ಅವ ಜ್ಞಾನಿ ನಾ ಜ್ಞಾನಿ
ಎಂದು ಆಗದಿರು ನೀ
ಅಜ್ಞಾನಿ ಅರಿತುಕೋ ಒಮ್ಮೆ ಓ ಮನವೇ,
ಉಳೂವವನಿಗೆ ಗೊತ್ತು ಉಳುವ ಜ್ಞಾನ
ಆಳುವವನಿಗೆ ಆಡಲಿತದ ಜ್ಞಾನ
ಅವರವರ ಕರ್ಮದಲ್ಲಿ ಅವರು ಜ್ಞಾನಿಯೇ ಎಂದು

ಸರ್ವರ ಮುಂದೆ ಎಂದಿಗೂ
ಹೇಳದಿರು ನಾ ಸರ್ವಜ್ಞನೆಂದು
ಅರಿತುಕೋ ಓ ಮನವೇ

ಭಾರತವಲ್ಲ "ಮಹಾಭಾರತ"

ವೇದ ವ್ಯಾಸರು
ಬರೆದರು
ಬರೀ ಭಾರತವಲ್ಲ
"ಮಹಾ" ಭಾರತ.
ಸತ್ಯ-ಅಸತ್ಯವನ್ನು,
ಕುರುಡರು-ಕಣ್ಣಿದ್ದೂ ಕುರುಡರು,
ಹೆಂಡತಿ ಇಬ್ಬರಿದ್ದರೂ,
ಪುತ್ರರನ್ನು ಪಡೆಯಲಾಗದವನು.
ಸಾವು ಗೊತ್ತಿದ್ದರೂ
ಇಚ್ಚಾ ಮರಣದವನು.
ಕ್ಷತ್ರೀಯನಾದರೂ,
ಸೂತ ಪುತ್ರನೆನಿಸಿಕೊಂಡವನು.
ಮನ ಸಾಕ್ಷಿ ಇದ್ದರೂ,
ಅನ್ನದ ಬಾರಕ್ಕೆ ಬಿದ್ದವರು.
ಒಂದು ಕಡೆ ಧರ್ಮದ,
ಪಾಂಡವರ ದಂಡು.
ಮತ್ತೊಂದು ಕಡೆ ಅಧರ್ಮದ,

ಭಾರತವಲ್ಲ "ಮಹಾಭಾರತ"

ವೇದ ವ್ಯಾಸರು
ಬರೆದರು
ಬರೀ ಭಾರತವಲ್ಲ
"ಮಹಾ" ಭಾರತ.
ಸತ್ಯ-ಅಸತ್ಯವನ್ನು,
ಕುರುಡರು-ಕಣ್ಣಿದ್ದೂ ಕುರುಡರು,
ಹೆಂಡತಿ ಇಬ್ಬರಿದ್ದರೂ,
ಪುತ್ರರನ್ನು ಪಡೆಯಲಾಗದವನು.
ಸಾವು ಗೊತ್ತಿದ್ದರೂ
ಇಚ್ಚಾ ಮರಣದವನು.
ಕ್ಷತ್ರೀಯನಾದರೂ,
ಸೂತ ಪುತ್ರನೆನಿಸಿಕೊಂಡವನು.
ಮನ ಸಾಕ್ಷಿ ಇದ್ದರೂ,
ಅನ್ನದ ಬಾರಕ್ಕೆ ಬಿದ್ದವರು.
ಒಂದು ಕಡೆ ಧರ್ಮದ,
ಪಾಂಡವರ ದಂಡು.
ಮತ್ತೊಂದು ಕಡೆ ಅಧರ್ಮದ,

ನನ್ನವಳ ಮೌನ ಮಾತು

ಇವತ್ತು ನನಗಿಷ್ಟವಾದ ಡ್ರೆಸ್ಸನ್ನೇ ಹಾಕಿದ್ದೀಯಾ.ವಾವ್ ಈ ತಿಳಿ ಹಸಿರು ಬಣ್ಣದ ಚೂಡಿ ನೀನ್ ಹಾಕ್ಕೊಂಡಮೇಲೇನೇ ಚ೦ದ
ಕಾಣ್ಸಿಲಿಕ್ಕೆ ಶುರುವಾದದ್ದು.ಹಲೋ!, ಇದು ಹೊಗಳಿಕೆ ಮಾತೇನಲ್ಲ ಆಯ್ತಾ .ಒ೦ದೂ ಮಾತಾಡದೆ ನನ್ನ ಜೊತೆ ಇರ್ತೀಯಲ್ಲ ಅದು ಹೇಗೆ