ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಿರಾಶೆ ಹರಿಯಿತು

ಮತದಾನದ ಮುಂಚೆ ಅದೆಂತಹಾ ಆತಂಕ! ಇನ್ನು ಈ ದೇಶಕ್ಕೆ ಭವಿಷ್ಯ ವಿಲ್ಲ
ಯಾವ ಪಕ್ಷಕ್ಕೂ ಗದ್ದುಗೆ ಸುಲಭವಲ್ಲ! ಎನ್ಡಿಏ,ಯುಪಿಏ,ಮೂರನೇಕೂಟ, ನಾಲ್ಕನೇ ಕೂಟ!! ಈ ಭಾರೀ ನಮ್ಮ ದೇಶವನ್ನು ಆ ದೇವರೇ ಕಾಪಾಡಬೇಕು!!
ಎಲ್ಲಾ ಚಿಂದಿ ಚಿಂದಿ!!

ಜೀವನ "?"

ಜೀವನವೆ೦ಬುದು ಗೆಳೆಯ, ಪ್ರಶ್ನೆಗಳ ಸ೦ತೆ |
ಉತ್ತರಿಸು ನೀನದನು ಒ೦ದೊ೦ದರ೦ತೆ ||

ಒ೦ದೆ ಪ್ರಶ್ನೆಗೆ ಇಹುದು ನೂರಾರು ಉತ್ತರ |
ಆರಿಸು ನೀನದರಲ್ಲಿ ಯಾವುದದು ಹತ್ತಿರ ||

ಹತ್ತಿರದ ಉತ್ತರವ ನೀನೀಗ ಜೋಡಿಸಲು |
ಉದ್ಭವಿಸುತಿಹುದಲ್ಲಿ ಇನ್ನೂರು ಪ್ರಶ್ನೆಗಳು ||

ಎ೦ಥವಿವು ಗೊ೦ದಲಗಳೆ೦ದು ಕೊರಗಲು ಬೇಡ |
ಸೂಕ್ಷ್ಮತೆಯಿ೦ ನೀನೋಡು, ಪ್ರಶ್ನೆಗಿದೆ ಉತ್ತರ ||

ಜಂಗ್ಲಿ ಏನ್ಮಾಡ್ಕಳ್ಲೊ

ಎಸ್ಸೆಮೆಸ್ ಮಾಡ್ಕಳ್ಳೊ ಮೈಲ್ ಮಾಡ್ಕಳ್ಳೊ..
ಆಫ್ಲೈನ್ ಹೋಗ್ಬಿಟ್ಟು ಚಾಟನ್ನೇ ಮಾಡ್ಕಳ್ಳೊ
ಫೇಸ್ ಬುಕ್ ನೋಡ್ಕಳೊ ಪಿಕಾಸ ನೋಡ್ಕಳೊ..
ಬರ್ದಿದ್ರೂನೂ ನೀ ಬ್ಲಾಗ್ ಬರ್ಕಳೋ....

ಒಂದು ಉತ್ತಮ ಕೆಲಸ

ಮ೦ಗಳೂರಿನವರಾದ ಅನಿವಾಸಿ ಉದ್ಯಮಿ ಶ್ರೀ ರೊನಾಲ್ಡ್ ಕುಲಾಸೊ ಅವರು ಮಂಗಳೂರಿನ ಮುಳಿಹಿತ್ಲು ಎಂಬಲ್ಲಿ ೧೧೦೦ ಫೀಟ್ ಅಗಲದ ರಸ್ತೆಯನ್ನು ತಮ್ಮ ಸ್ವ೦ತ ಖಚಿ೯ನಿಂದ ನಿಮಿ೯ಸಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ.

ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿಯನ್ನು ಕುಟುಕಿಸಿ.
http://www.mangalorean.com/news.php?newstype=local&newsid=125200

ಕನ್ನಡ ಚಿತ್ರರಂಗ "ಅಭಿಮಾನ್ " ರಾಜ್ಕುಮಾರ್...

ಈ ಲೇಖನ ಬರೆಯಬೇಕೆಂದು ತುಂಬಾ ದಿನಗಳಿಂದ ಅನ್ಕೊಳ್ತಾ ಇದ್ದೆ.. ಆದ್ರೆ ಬರಿಯಕ್ಕಾಗಿರಲಿಲ್ಲಾ.. ಅಂತೂ ಇಂದು ಸಾದಸಿದೆ.

ನನಗೆ ಬಾಲಣ್ಣ ನವರ ಕನಸಿನ ಕೂಸಾದ ಅಭಿಮಾನ್ ಸ್ಟುಡಿಯೋಗೆ ಹೋದಾಗಲೆಲ್ಲಾ ತುಂಬಾ ಭಾವುಕನಾಗುತ್ತೇನೆ.

ಇರಬೇಕಲ್ಲವೇ ನಾನಾಗ?

ಸಖೀ,
ಹೀಗಾಗಬೇಕಿತ್ತು, ಆಗಿದೆ ಅಷ್ಟೆ,
ಆಗಬಾರದ್ದೇನೂ ಆಗಿಲ್ಲವಷ್ಟೆ?
ಮೇಲಕ್ಕೇರಿದವರು ಕೆಳಗಿಳಿಯಲೇ ಬೇಕು,
ಇದು ಲೋಕ ನಿಯಮ;
ಆದರೇನು ಮಾಡೋಣ, ಇದ ಅರಿಯುವಷ್ಟು
ನಮಗಿಲ್ಲ ಸಂಯಮ.
ಅಂದು ನನ್ನ ಪ್ರತಿಯೊಂದು ಮಾತಿಗೂ
ಹೊಸ ಹೊಸ ಅರ್ಥವ ನೀಡಿ,
ನನ್ನನ್ನೇ ನಿನ್ನ ಪಾಲಿನ ದೇವರೆಂದು
ಮೇಲಕ್ಕೇರಿಸಿದೆ ನೀನು,
ಇಂದು ನನ್ನ ಮಾತುಗಳ ಹಿಂದಡಗಿರುವ
ನನ್ನ ಭಾವನೆಗಳ, ಆಶಯಗಳ

ಗೆಳೆಯ....

ಗೆಳೆಯ....

ನಿನ್ನ ಕೋಪದ ತಾಪ

ಸುಟ್ಟಿ ಬೂದಿಮಾಡಿದರು....

ಚಿ೦ತೆ ಇಲ್ಲ ನನ್ನ....

ಆದರೆ ಅದು,

ತಾಗದಿರಲಿ ಚಿನ್ನ....

ನನ್ನೊಳಗಿನ ನಿನ್ನ....

(ನನ್ನ ವಿವೇಕ್ ಗಾಗಿ.....ನನ್ನ ವಿವೇಕ್ ಗಾಗಿ..... ನನ್ನ ವಿವೇಕ್ ಗಾಗಿ.....)

ನಲ್ಲಾ.....ನಾ ತಪ್ಪು ಮಾಡಿದರೆ...

ನಲ್ಲಾ.....

ನಾ ತಪ್ಪು

ಮಾಡಿದರೆ,

ನಿಜ...

ನೀ ಕೊಡು.... ಬೇಕಾದ ಸಜ

ನಿನ್ನ ಮೌನದ ಹೊರತು.....

ನಿನ್ನ ಪ್ರೀತಿಯ ಪಿಸು ಮಾತಿಲ್ಲದೆ...

ಕಾಡುವ ಹುಸಿ ಛೇಡಿಕೆ ಇಲ್ಲದೆ....

ಬದುಕು ಬರಡು ಬಯಲೆನಿಸುವುದು....

ಒಣಗಿ ಮರಳಾದ ಕಡಲೆನಿಸುವುದು...

ಮಾತೊ೦ದನುಸುರಿ....

ಉಲ್ಲಾಸವ ಹೊಮ್ಮಿಸು ಬಾ....

ಬದುಕ ಹಸಿರಾಗಿಸು ಬಾ...

ಅ೦ತರಾಳದಲಿ ಒಲವ ಜಿನುಗಿಸು ಬಾ...

ಕಿರಣ

 

ಬದುಕು ಬರುಡಾಗಿ
ಜೀವ ಬೆತ್ತಲ್ಲಾಗಿ
ಬೆಲೆ ತೆತ್ತಲಾಗದಿದ್ದಾಗ
ಮೂಡಿದೆ ಈ ಕಿರಣ

ತೆರ ತೆರನಾಗಿ
ಮನಸ ಕೊರಯಹತ್ತಿದ
ತರ ತರದ ಚಿಂತೆಗಳಲೊಂದಾಗಿ
ಮೂಡಿದೆ ಈ ಕಿರಣ .

ಬಂಧು ಮಿತ್ರರ
ವಿಧ ವಿಧದ ಟೀಕೆಯ
ಎದುರುಸುತ್ತಿರುವಾಗಲೇ
ಬಾನಂಚಿನಲೆಲ್ಲೋ
ಮೂಡಿದೆ ಈ ಕಿರಣ