ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕುಸುಮಬಾಲೆಯೇ ನಿನಗೆ ಮುನಿಸು ತರವೇ ?

ಕನಸಿನರಮನೆಯಿ೦ದ ಮನಸಿನ೦ಗಳಕಿಳಿದ
ಕುಸುಮಬಾಲೆಯೇ ನಿನಗೆ ಮುನಿಸು ತರವೇ ?
ನೋವುನಲಿವಿನ ಸರದಿ ಬೆಳಗು-ಬೈಗಿನ ತೆರದಿ
ಜೀವನದ ಯಾತ್ರೆಯಿದು ನೀರ ಅಲೆಗಳ ಶರಧಿ

ನಿನ್ನೆಯನು ಮರೆತುಬಿಡು ನಾಳೆಯೆಡೆ ದೃಷ್ಟಿಯಿಡು
ಚಿಂತೆಗಳ ಸ೦ತೆಯಲಿ ಎ೦ದೆ೦ದೂ ಕೊರಗದಿರು
ನಾಳೆ ಹೇಗೋ ಎ೦ದು ಇ೦ದೇಕೆ ಚಿ೦ತಿಸುವೆ
ನಲುಗದಿರು ಮರುಗದಿರು ಕುಲುಮೆಯಲಿ ಬೆ೦ದು

ಅಮ್ಮ

ನಿನ್ ಒಡಲ
ಗರ್ಭದೊಳಗೆ ಪರಿ ಪರಿಯಾಗಿ
ನಾ ಹೊರಳಾಡಿದಾಗ
ನೋವಾಗಲಿಲ್ಲವೇ ನಿನಗೆ .

ಹೊರ ಜಗವ ನಾ
ನೋಡ ಅವಸರದಲ್ಲಿ
ನಿನ್ನುಸಿರೆ ನಿಲ್ಲುವನ್ತಾದಾಗ
ನೋವಾಗಲಿಲ್ಲವೇ ನಿನಗೆ

ಹಸಿದ ಹೊಟ್ಟೆಗೆ
ಅಮೃತದ ಹನಿ ನೀ
ಉಣಬಡಿಸ ಹೊರಟಾಗ
ನಾ ಮಾಡಿದ ಗಾಯದಿಂದ
ನೋವಾಗಲಿಲ್ಲವೇ ನಿನಗೆ

ನಾ ಮಾಡಿದ ತಪ್ಪಿಂದ
ಅಪ್ಪ ಹೊಡೆಯ ಬಂದಾಗ
ಅಡ್ಡ ಬಂದು ,ಆ ಪೆಟ್ಟು ನೀ ತಿಂದಾಗ

ಸಾಧಕರು

ಪ್ರತಿಬೆ ಅನ್ನೋದು ಇದ್ರೆ.. ಅವಕಾಶಕ್ಕಾಗಿ ಕಾಯ್ತಾ ಕೂರೋದಿಲ್ಲಾ.. ಅವರೇ ಅವಕಾಶಗಳನ್ನು ಸೃಷ್ಟಿಸಿಕೊಳ್ತಾರೆ. ಅಂತ ಯಾರೋ ಹೇಳಿದ್ದನ್ನ ಕೇಳಿದ ನೆನಪು.. ಅದೇ ರೀತಿ ಈ ವಿಡಿಯೋದಲ್ಲಿರುವ ಸಾಧಕರು ತಮ್ಮ ಸಂಗೀತ ಸಾದನೆಗಾಗಿ ಗೃಹಪಯೋಗಿ ವಸ್ತುಗಳನ್ನೇ ಬಳಸಿ ಮಾಡುತ್ತಿರು ಸಂಗೀತ ಸಾಧನೆ ನೋಡಿ ...

ಎಲೆ ಮರೆಯ ಕಾಯಿಗಳು

ಬೆಂಗಳೂರಲ್ಲಿ ಬುದ್ದಿವಂತರಿಗೆ ಕೊರತೇನೆ ಇಲ್ಲಾ.. ಇಲ್ಲಿ multi talented personalities ಅಂತೂ ಬೇಕಾದಷ್ಟು ಜನ ಇದ್ದಾರೆ. ಅವರ ಫುಲ್ ಟೈಂ ಕೆಲ್ಸದ ಮದ್ಯೆನೂ ಎಂಟರ್ಟೈನ್ಮೆಂಟ್ ಗೋಸ್ಕರನೋ ಹಾಬಿಗೋಸ್ಕರಾನೋ ಸಣ್ಣ ಪುಟ್ಟ ಸಾದ್ನೆ ಮಾಡ್ತಾ ಇರ್ತಾರೆ.. ಅಂತಾ ಒಂದು ಸಾದನೆ ಈ ವಿಡಿಯೋಗಳು.. ಇದು ಯಾರನ್ನು ಉದ್ದೇಶಿಸಿ ಮಾಡಿರೋದಲ್ಲಾ.. ;)

ಒಂದು ಬುಡುಬುಡಿಕೆ ಪ್ರಸಂಗ

ನಿನ್ನೆ ರಂಗಾಯಣದ ಭೂಮಿಗೀತದಲ್ಲಿ ನಾಟಕ ನೋಡಿ ಸುಖಿಸಿದ ಶಶಿಯವರ ಬ್ಲಾಗ್ ಓದಿ ನನಗೆ ಹೊಟ್ಟೆಕಿಚ್ಚಾಯಿತು. ಮೈಸೂರಿನ ಸಾಂಸ್ಕೃತಿಕ ವಾತಾವರಣದಲ್ಲಿ ಸುಖಿಸುವ ನನ್ನ ಹಳೆಯ ಗೆಳೆಯರನ್ನು ಕಂಡರೆ ನನಗೆ ಸ್ವಲ್ಪ ಹೊಟ್ಟೆಕಿಚ್ಚೇ..!

ಆಕಾಶವಾಣಿ ನಿರ್ದೇಶಕರಾದ ಸಂಗೀತಕಲಾನಿಧಿಯೋರ್ವರ ಅನುಭವ

ಒಂದೆರಡು ತಿಂಗಳ ಹಿಂದೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ಹಿಂಬಾಗದಲ್ಲಿ ಒಂದು ಪುಸ್ತಕ ಪ್ರದರ್ಶನ ಹಾಗೂ ಮಾರಾಟ ನಡೆದಿತ್ತು. ಅಲ್ಲಿಗೆ ಹೋಗಿದ್ದಾಗ ತುಂಬಾ ಒಳ್ಳೆಯ ಪುಸ್ತಕಗಳು ಕಾಣುತ್ತಿರಲಿಲ್ಲ. ಬೇಸರದಿಂದಲೇ ಹಿಂದಿರುಗುತ್ತಿದ್ದಾಗ ‘ಸಂಗೀತ ಸಮಯ’ ಎಂದೊಂದು ಪುಸ್ತಕ ಕಣ್ಣಿಗೆ ಬಿತ್ತು. ಸಂಗೀತ ಎಂದು ನೋಡಿದಕೂಡಲೇ ಅದನ್ನು ಒಮ್ಮೆ ತಿರುವಿ ಹಾಕಿದೆ. ಅದನ್ನು ನೋಡಿ ನನ್ನವರು, “ಸಂಗೀತಕ್ಕೆ ಸಂಬಂಧಪಟ್ಟ ಎಷ್ಟೋ ಪುಸ್ತಕಗಳು ನಿನ್ನ ಬಳಿ ಇದೆಯಲ್ಲ. ಸಾಲದೇ?” ಎಂದು ಕೇಳಿದರು. ಅವರ ಮಾತಿನ ಕಡೆ ನನಗೆ ಗಮನವೇ ಇಲ್ಲ ಎನ್ನುವಷ್ಟು ಆ ಪುಸ್ತಕ ನನ್ನ ಗಮನ ಸೆಳೆದಿತ್ತು. ನನಗೆ ನಿಧಿ ಸಿಕ್ಕಷ್ಟು ಸಂತೋಷ ಆಗಿತ್ತು. ಅಪರೂಪದ ಪುಸ್ತಕ ಎನ್ನಿಸಿ ಅದನ್ನು ಕೊಂಡುಕೊಂಡೆ. ಅದನ್ನು ಬರೆದವರು ವಾಗ್ಗೇಯಕಾರರಾದ ಶ್ರೀ ವಾಸುದೇವಾಚಾರ್ಯರ ಮೊಮ್ಮಗ ಸಂಗೀತ ಕಲಾರತ್ನ ಎಸ್.ಕೃಷ್ಣಮೂರ್ತಿಯವರು. ಅದರಲ್ಲಿ 20ನೇ ಶತಮಾನದ ಅನೇಕ ಮಹಾನ್ ಸಂಗೀತ ಮೇದಾವಿಗಳ ಜೀವನ ಶೈಲಿ ಮತ್ತು ಸಾಧನೆಗಳನ್ನು ಸರಳ ಸುಂದರ ಭಾಷೆಯಲ್ಲಿ ವಿವರಿಸಿದ್ದಾರೆ.

ಮದುವೆ ಎಂದರೆ ಹೀಗೆನಾ?

ಮದುವೆ ಎಂದಾಗ ಮದುವೆ ಆಗದವರಿಗೆ ಮೈ ಮನದಲ್ಲಿ ಪುಳಕ ತಂದರೆ ಈಗಾಗಲೇ ಮದುವೆ ಆದವರ ಮುಖದಲ್ಲಿ ಅದಕ್ಕೆ ವಿರುದ್ದವಾದ ಭಾವನೆ ಹುಟ್ಟಬಹುದು. ಇದರಲ್ಲಿ ಪ್ರೇಮ ವಿವಾಹ, ಆದರ್ಶ ವಿವಾಹ, ನಿಶ್ಚಯಿಸಿದ ವಿವಾಹ ಹಾಗು ಇತ್ತೀಚೆಗೆ ಕಂಡುಬರುವ ಇಂಟರ್ ನೆಟ್ ವಿವಾಹ ಹೀಗೆ ಇದರ ವಿಧಗಳು ಬೆಳೆಯುತ್ತಾ ಹೋಗುತ್ತದೆ. ನೀವು ಕೂಡ ಇದಕ್ಕೆ ಸೇರಿಸಬಹುದು.