ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭರತ್‌ ಪಿ. ಭಟ್‌ ಒಂದು ಪರಿಚಯ

ಭರತ್‌ ಪಿ. ಭಟ್‌, ಎರಡು ವರ್ಷಗಳ ಹಿಂದೆ ಕೇಳಿದ ಹೆಸರು. ಪಿ.ಯು.ಸಿ. ಹಾಗೂ ಸಿ.ಈ.ಟಿ. ಯಲ್ಲಿ ರಾಜ್ಯಕ್ಕೆ ಪ್ರಥಮರೆನಿಸಿದ್ದವರು. ಇದೀಗ ಪಶ್ಚಿಮ ಬಂಗಾಳದ ಕರಕ್‌ ಪುರದಲ್ಲಿ ಐಐಟಿಯಲ್ಲಿ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ವಿದ್ಯಾರ್ಥಿ. ಇವರು ಪ್ರೋಜೆಕ್ಟ್‌ ಒಂದಕ್ಕಾಗಿ ಕಾಲೇಜಿನಿಂದ ಇಂದು ಕ್ಯಾಲಿಫೋರ್ನಿಯಾಕ್ಕೆ ತೆರಳುತ್ತಿದ್ದಾರೆ.

ನನ್ನವಳು ನನ್ನ ಜೊತೆಗಿಲ್ಲ ಎಂದರಿತು ಬಂದೆಯಾ?!

ಸೀತಾ ಸೀತಾ ಸೀತಾ ಬಾಯ್ಬಿಟ್ಟು ಹೇಳೇ ಸೀತಾ
ನೀನ್ಯಾಕೆ ನನ್ನ ಈ ತರಹ ಸತಾಯಿಸ್ತೀಯಂತಾ

ನನ್ನವಳು ನನ್ನ ಜೊತೆಗಿಲ್ಲ ಎಂದರಿತು ಬಂದೆಯಾ
ನನ್ನ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದಿರುವೆಯಾ

ನನ್ನ ತಲೆ ಭಾರವಾಗುತಿದೆ, ಕಣ್ಣುಗಳು ಉರಿಯುತಿವೆ
ನಿನ್ನಿಂದಾಗಿ ನನಗೆ ಈಗ ಉಸಿರುಗಟ್ಟುವಂತಾಗುತಿದೆ

ನಿನ್ನ ನಾ ಕರೆಯದೇ ನೀನ್ಯಾಕೆ ಬಂದೆನ್ನ ಕಾಡುತಿಹೆ

ಕಾಣದ ಕ್ಯೆ

ಎಲ್ಲವೂ ನನ್ನಿಂದಲೇ - ನನ್ನಿಂದಲೇ ಎಲ್ಲವೂ ಎಂದು ಭಾವಿಸಿರುವ ನಾವುಗಳು ಕೆಲವು ಸ್ವಂತ ಅನುಭವಗಳನ್ನು ತೆರೆದ ಕಣ್ಣಿನಿಂದ ನೋಡಿದಾಗ ನಮ್ಮ ಕುಬ್ಜತನದ ಅರಿವಾದೀತು. ಕಷ್ಟಗಳು, ಸಮಸ್ಯೆಗಳು ಎಲ್ಲರಿಗೂ ಬಂದೇ ಬರುತ್ತದೆ. ಅಂತಹ ಕ್ಐ ಮೀರಿದ ಅನೇಕ ಸಂದರ್ಭಗಳಲ್ಲಿ ನಮಗೆ ಅನಿರೀಕ್ಷಿತವಾದ ಜಾಗದಿಂದ, ಅಪರಿಚಿತ ವ್ಯಕ್ತಿಯಿಂದ ಇಲ್ಲವೇ ಕಾಣದ ಒಂದು ಶಕ್ತಿಯಿಂದ ಸಹಾಯ ಒದಗಿ ಬಂದಿರುತ್ತದೆ. ಅಂತಹ ಸಂದರ್ಭಗಳನ್ನು ನಾವೆಂದೂ ಮರೆಯಬಾರದು. ಆ ಉಪಕಾರ ಸ್ಮರಣೆ ಕಾಣುವ ಮತ್ತು ಕಾಣದಿರುವ ಶಕ್ತಿಗಳಿಗೂ ನಮ್ಮಿಂದ ಸಲ್ಲಿಕೆಯಾಗಬೇಕು. ತೆಗೆದುಕೊಂಡ ಸಹಾಯವನ್ನು ಮತ್ತು ಉಪಕಾರವನ್ನು ನೆನೆಯದಿರುವವನು8 ಮಹಾ ದ್ರೋಹಿಯೇ ಸರಿ. ಇಂತಹ ಒಂದು ನನ್ನ ಸ್ವಂತ ಅನುಭವವನ್ನು ಇಲ್ಲಿ ಎಲ್ಲರೊಂದಿಗೆ ಹಂಚಿಕೊಳ್ಳಬಯಸುತ್ತೇನೆ.

ಹೊರಟೆ ನಾ 'ಶಿಲ್ಪ-ಕಲೆ'ಗಳ ತವರಿಗೆ :)

ಅಬ್ಬಾ!! ಏನೋ ಒಂತರ ಖುಷಿ ಆಗಿತ್ತು ನಿನ್ನೆ ಸಂಜೆ, ಬಹುಷಃ ಇಂಜಿನಿಯರಿಂಗ್ನಲ್ಲಿ ಕಡೆ exam ಮುಗಿಸಿದ ದಿನ ಸಿಕ್ಕಿತ್ತಲ್ಲ ಅಂತದೆ ಖುಷಿ, ನೆಮ್ಮದಿ.೨-೩ ತಿಂಗಳಿಂದ ಹಗಲು-ರಾತ್ರಿಯ ಪರಿವೆ ಇಲ್ಲದೆ ಕೆಲಸವನ್ನು ಮೈ ಮೇಲೆ ಎಳೆದು ಕೊಂಡು ಮಾಡಿದ್ದೆವಲ್ಲ , ನಿನ್ನೆ ಕುಂಬಳಕಾಯಿ ಹೊಡೆದ ದಿನ :) (Project Release)

ಭಾವಾನುವಾದಿಸಿದ ಸಂದೇಶಗಳು!!!

ಹೂವುಗಳಂತೆ ನಗುತಿರಲು ಅದುವೇ ಜೀವನ
ನಕ್ಕು ದುಃಖವನು ಮರೆಯುತಿರುವುದೇ ಜೀವನ
ಗೆಲುವಿನಿಂದ ದೊರೆವ ಸಂತಸ ಎಷ್ಟಿದ್ದರೇನಂತೆ
ಈ ಹೃದಯ ಯಾರಿಗಾದರೂ ಸೋತರೆ ಸಿಗುವ ಸಂತಸವೇ ಜೀವನ

ಕನಸುಗಳು ನಮ್ಮನ್ನು ನಿದ್ರೆಯಲೇ ಸಂದರ್ಶಿಸುತ್ತವೆ ನಿಜ
ಆ ದೇವರು ಪ್ರತೀ ಮುಂಜಾನೆ ನಮ್ಮನ್ನೆಬ್ಬಿಸಿ ಹೊಸ
ದಿನವನ್ನು ನೀಡುತ್ತಾನೆ ಆ ಕನಸುಗಳನ್ನು ಆಗಿಸಲು ನಿಜ

"ಭವದ ಎಲ್ಲೆ ಮೀರಿ....?"

"ಭವದ ಎಲ್ಲೆ ಮೀರಿ .......?"

ಇಳಿ ಸಂಜೆ ಹೊತ್ತಲ್ಲಿ ಸೌಗಂಧಿತ ವನ ಪಾರ್ಕಿನ ಮೂಲೆಯಲ್ಲಿ ಕೂತು ’ ಏನ್ ಅನ್ಕೊಂಡಿದ್ದಾರೆ ನನ್ನ.... ಕೈಲಾಗದವನು ಅಂತಾನಾ..... ಥೂ... ದರಿದ್ರದವರು....’ ಹೀಗೆ ತನ್ನಷ್ಟಕ್ಕೆ ತಾನು ಮಣಮಣ ಅಂತ ಗೊಣಗಿಕೊಳ್ಳುತ್ತಿರುವವನು ಎಲ್ಲರಿಂದ ವಿಬು ಎನಿಸಿಕೊಂಡರೂ ನಿಜನಾಮದಲ್ಲಿ ವಿಭವನಾಗಿದ್ದ....

ಜಾತಕ

ಹುಟ್ಟಿದ ದಿನ, ಗಂಟೆ, ಘಳಿಗೆಗಳ
ಪಟ್ಟಿ ಮಾಡಿ ಹೆಸರಿಡುತ್ತಾರೆ -
ಇರುತ್ತವೆ ನಮ್ಮ ಹಣೆ ಬರಹದ
ರಹಸ್ಯಗಳು ಜಾತಕದ
ರೂಪದಲ್ಲಿ ಎಂದು
ಹೇಳುತ್ತಾರೆ - ಹಿರಿಯರು..

ರೂಪವಿಲ್ಲದ ಕುರೂಪಿಯ
ಹಣೆಬರಹವೂ ಕೂಡಾ ಇರುತ್ತದೆ
ಇಲ್ಲಿ ಚೆನ್ನಾಗಿ !..
ಬಲ್ಲವರಾರು? ಒಮ್ಮೊಮ್ಮೆ
ಹೀಗಾಗುವುದೂ ಉಂಟು..
ಆಗುವುದು ಬಹುಭಾಗ
ಹೀಗೇ.....!

ಕೆಟ್ಟದಲ್ಲದ ಜಾತಕದಲ್ಲಿ

ಒಂದು ನಗುಮುಖ ಮತ್ತೈದು ಪೂರ್ಣ ವಿರಾಮ!!!

ನನ್ನದೇನಿದ್ದರೂ ಇನ್ನು ಒಂದು ನಗುಮುಖ ಮತ್ತೈದು ಪೂರ್ಣ ವಿರಾಮ
ಶಬ್ದ ಬರೆದು ಪ್ರತಿಕ್ರಿಯಿಸುವುದಕ್ಕೆ ಕೊಡಬೇಕೆಂದಿದ್ದೇನೆ ನಾನು ವಿರಾಮ

ಯಾವ ಶಬ್ದ ಯಾವ ಅರ್ಥ ಪಡೆದು ಯಾರ ಮನಸ ನೋಯಿಸುವುದೋ
ಯಾವ ಕ್ಷಣ ಯಾರಲ್ಲಿ ವೈರಾಗ್ಯ ಮೂಡಿಸಿ ಇಲ್ಲಿಂದಾಚೆ ದೂಕಿಬಿಡುವುದೋ

ಬರೇ ನಗುಮುಖ, ವ್ಯಕ್ತ ಪಡಿಸಲು ನಿಮ್ಮ ಬರಹಕ್ಕೆ ನನ್ನ ಸಹಮತವೆಂದು