ಜಾತಕ

ಜಾತಕ

ಬರಹ

ಹುಟ್ಟಿದ ದಿನ, ಗಂಟೆ, ಘಳಿಗೆಗಳ
ಪಟ್ಟಿ ಮಾಡಿ ಹೆಸರಿಡುತ್ತಾರೆ -
ಇರುತ್ತವೆ ನಮ್ಮ ಹಣೆ ಬರಹದ
ರಹಸ್ಯಗಳು ಜಾತಕದ
ರೂಪದಲ್ಲಿ ಎಂದು
ಹೇಳುತ್ತಾರೆ - ಹಿರಿಯರು..

ರೂಪವಿಲ್ಲದ ಕುರೂಪಿಯ
ಹಣೆಬರಹವೂ ಕೂಡಾ ಇರುತ್ತದೆ
ಇಲ್ಲಿ ಚೆನ್ನಾಗಿ !..
ಬಲ್ಲವರಾರು? ಒಮ್ಮೊಮ್ಮೆ
ಹೀಗಾಗುವುದೂ ಉಂಟು..
ಆಗುವುದು ಬಹುಭಾಗ
ಹೀಗೇ.....!

ಕೆಟ್ಟದಲ್ಲದ ಜಾತಕದಲ್ಲಿ
ಕೆಟ್ಟದಾಗುವುದೇ ಜಾಸ್ತಿ!?
ಅಂತಲೂ ಹೇಳುತ್ತಾರೆ
ಒಮ್ಮೊಮ್ಮೆ ಹಿರಿಯರು..

ಹೇಳುತ್ತೇನೆ ನಾನು
ಸರಿ - ತಪ್ಪು ಯಾವುದಾದರೇನು?
ಫಲವಿಲ್ಲ ನಮಗೆ..
ಹೇಳುತ್ತಾರೆ ಮಾತ್ರ ಈ
ಎರಡನ್ನು ಒಮ್ಮೊಮ್ಮೆ
ಹಿರಿಯರು - ಹೀಗೇ..!?