ಇನ್ನು ಸರಿಯಾಗಿ ಬೆಳಕಾಗಿರ್ಲಿಲ್ಲ. ಸೂರ್ಯ ಎದ್ದಿರ್ಲಿಲ್ಲ ಅಂತ ಅನ್ಸುತ್ತೆ. ಆಗಲೇ ಮನೆಯ ಬಾಗಿಲ ಮೇಲೆ ಜೋರಿನಿಂದ ಯಾರೋ ಬಡಿಯುತ್ತಾ ಇದ್ದರು. ಯಾರೂ ಅಂತ ಬಾಗಿಲು ತೆಗೆದರೆ, ಅವರನ್ನು ಈವರೆಗೆ ನಾನು ಕಂಡಿಲ್ಲ, ಹಾಗಾಗಿ ಅವರು ಯಾಕೆ ಇಷ್ಟು ಬೇಗ…
ಯಾರಿಗೂ ಸೇರದ ಜಾಗ, (ನೋ ಮ್ಯಾನ್ಸ್ ಲ್ಯಾಂಡ್ ) ಒಂದು ಭೂಪ್ರದೇಶದ ಕೆಲವು ಜಾಗಗಳನ್ನು ನೋ ಮ್ಯಾನ್ಸ್ ಲ್ಯಾಂಡ್ ಎಂದು ಕರೆಯಲಾಗುತ್ತದೆ. ಆ ಜಾಗ ಯಾರಿಗೂ ಸೇರಿರುವುದಿಲ್ಲ ಯಾರ ಅಧಿಪತ್ಯಕ್ಕೂ ಒಳಪಟ್ಟಿರುವುದಿಲ್ಲ. ಅದೊಂದು ಸ್ವತಂತ್ರ…
ಮನೆಯಲ್ಲಿ ದನ, ನಾಯಿ ಬೆಕ್ಕು ಇರುವುದರಿಂದ ನನಗೆ ನಿಮ್ಮ ಮನೆಯ ಕಾರ್ಯಕ್ರಮಕ್ಕೆ ಬರಲಾಗುವುದಿಲ್ಲ ಎಂದು ಖಂಡಾತುಂಡವಾಗಿ ಹೇಳಿದ ಅನೇಕರಿದ್ದಾರೆ. ಆಗ ನಾನು ಯೋಚಿಸಿದ್ದೆ, “ನನಗಿಂತ ಬೆಕ್ಕು ನಾಯಿ ದನ.... ಇತ್ಯಾದಿಗಳೇ ಇವರಿಗೆ ಹೆಚ್ಚಾಯಿತೇ?."…
ದೊಡ್ಡವರು ಯಾವತ್ತು ದೊಡ್ಡವರಾಗಿರಬೇಕು. ಸಣ್ಣವರಾಗೋಕೆ ಪ್ರಯತ್ನಿಸಬಾರದು.ಸಣ್ಣವರೂ ಕೂಡ ದೊಡ್ಡತನವನ್ನು ಆಗಾಗ ತೋರಿಸಬೇಕು. ದೊಡ್ಡವರು ಸಣ್ಣವರು ಆಗಿಬಿಟ್ಟರೆ ಅವರ ಇಷ್ಟು ದಿನದ ಪರಿಶ್ರಮಕ್ಕೆ ಅರ್ಥ ಇರೋದಿಲ್ಲ. ಅವರ ಜೀವನ ಸಾಗಿಸೋಕೆ ಇನ್ನೊಬ್ಬರ…
ಈಗ ಎಂಟು ಹತ್ತು ವರ್ಷಗಳ ಹಿಂದೆ ಎರಡ್ಮೂರು ವರ್ಷ ಮಳೆ ಇಲ್ಲದೆ ಅಂತರ್ಜಲ ಬತ್ತಿ ನೀರು ಹೋಗಿದ್ದರಿಂದ ನೀರಿಗಾಗಿ ಆ ಜಾಗದಲ್ಲಿ ಬೋರ್ವೆಲ್ ಹಾಕಿಸಲು ಪಾಯಿಂಟ್ ಮಾಡಿಸಿದ್ದೆ. ಬೋರ್ ಕೊರೆಯುವ ಗಾಡಿ ಇಪ್ಪತ್ತು ಮೂವತ್ತು ಅಡಿಯಷ್ಟು ಸಡಿಲವಾದ ಬರೀ…
ಒಂದು ಸಲ ಒಬ್ಬ ಕಾಡಿನ ಮೂಲಕ ನಡೆದುಕೊಂಡು ಹೋಗುತ್ತಿದ್ದ. ಆಗ ಮೂರು ಜನ ದರೋಡೆಕೋರರು ಅವನ ಮೇಲೆ ಆಕ್ರಮಣ ಮಾಡಿ, ಅವನಲ್ಲಿ ಇದ್ದುದನ್ನೆಲ್ಲ ಕಸಿದುಕೊಂಡರು. ಅವರಲ್ಲಿ ಮೊದಲನೇ ದರೋಡೆಕೋರ, "ಇವನನ್ನು ಉಳಿಸಿ ಏನು ಪ್ರಯೋಜನ” ಎಂದು ಹೇಳುತ್ತ…
ಯೌವನದ ಮೈಕಾಂತಿ ಹಾಗೂ ಶಾರೀರಿಕ ಸೊಬಗು ಉಳಿಸಿಕೊಳ್ಳಲು ಹೆಣ್ಣು-ಗಂಡೆಂಬ ಭೇದವಿಲ್ಲದೆ ಬಹುಪಾಲು ಜನರು ಹಾತೊರೆಯುತ್ತಾರೆ. ಯಾವುದೋ ಕ್ರೀಂ ಹಚ್ಚಿಕೊಂಡರೆ ಮುದಿತನ ತಮ್ಮ ಹತ್ತಿರ ಸುಳಿಯದೆಂದು ಭ್ರಮಿಸುತ್ತಾರೆ. ಆದರೆ ದುಬಾರಿ ಬೆಲೆಯ ಸೌಂದರ್ಯ…
ನೌಕಾದಳವೊಂದರ ಬೇಹುಗಾರಿಕೆ ನೌಕೆಗೆ ಸಮುದ್ರದ ಭಾಗವೊಂದರ ಜವಾಬ್ದಾರಿ ನೀಡಲಾಯಿತು. ನೌಕಾದಳವು ಸಾಗುತ್ತಿದ್ದ ದಿಕ್ಕಿನಲ್ಲೇ 70 ಮೈಲುಗಳ ದೂರದ ವರೆಗೆ ಬೇಹುಗಾರಿಕೆ ಮಾಡಲು ಆದೇಶ ಕೊಡಲಾಯಿತು. ನೌಕಾದಳವು ಗಂಟೆಗೆ 35 ಮೈಲುಗಳು ಚಲಿಸುತ್ತಿದ್ದರೆ,…
ತೊಟ್ಟಿಲಲ್ಲಿ ತೂಗುವ ಆಟಿಕೆ: ಎಳೆಮಕ್ಕಳಿಗೆ ಐದು ತಿಂಗಳು ವಯಸ್ಸಾದಾಗ ಕೈಗಳು ಮತ್ತು ಮಂಡಿಗಳನ್ನೂರಿ ಮೈ ಎತ್ತಲು ಶುರು ಮಾಡುತ್ತವೆ. ಆ ಸಮಯದಲ್ಲಿ ಎಳೆಮಕ್ಕಳ ಕೈಗೆ ಈ ತೂಗು ಆಟಿಕೆಗಳು ಎಟಕುತ್ತವೆ. ಎಳೆಮಗು ಅವುಗಳ ದಾರ ಜಗ್ಗಿದಾಗ ನೇತಾಡುವ ದಾರ…
ಬೆಂಗಳೂರಿನಿಂದ ಪ್ರಕಟವಾಗಿ ರಾಜ್ಯಾದ್ಯಂತ ಪ್ರಸಾರ ಹೊಂದಿದ್ದ ವಾರಪತ್ರಿಕೆ "ವಿಕ್ರಾಂತ ಕರ್ನಾಟಕ".
ಪ್ರಸ್ತುತ, ಕೆ. ಆರ್. ಎಸ್ ಪಕ್ಷದ ನಾಯಕರಾಗಿರುವ ರವಿಕೃಷ್ಣಾ ರೆಡ್ಡಿಯವರು ಆರಂಭಿಸಿ ಎರಡು ವರ್ಷಗಳ ಕಾಲ ನಡೆಸಿದ "ವಿಕ್ರಾಂತ ಕರ್ನಾಟಕ"ವನ್ನು…
ಆಟಿಕೆಗಳು ಬೇಕೆಂದು ಮಕ್ಕಳು ಹಟ ಮಾಡಿದಾಗ ತೆಗೆಸಿಕೊಡದಿರುವ ಹೆತ್ತವರುಂಟೇ? ಆದರೆ, ಮಕ್ಕಳಿಗೆ ಆಟಿಕೆ ತೆಗೆಸಿಕೊಟ್ಟೊಡನೆ ಹೆತ್ತವರ ಜವಾಬ್ದಾರಿ ಮುಗಿಯುವುದಿಲ್ಲ. ಆಟಿಕೆಗಳಿಂದ ಮಕ್ಕಳಿಗೆ ಅಪಾಯ ಆಗದಂತೆಯೂ ಹೆತ್ತವರು ಕಣ್ಣಿಟ್ಟು…
ಆಡು ಭಾಷೆಯಿಂದ ಬೀಜಗಣಿತದ ಸಂಕೇತಗಳಿಗೆ ಸುಲಭವಾಗಿ ಅನುವಾದವಾಗಬಲ್ಲ ಹಳೆಯ ಸಮಸ್ಯೆಯೊಂದು ಹೀಗಿದೆ:
ಭಾರವಾದ ಹೊರೆ ಹೊತ್ತ ಒಂದು ಕುದುರೆ ಮತ್ತು ಒಂದು ಕತ್ತೆ - ಇವೆರಡೂ ಅಕ್ಕಪಕ್ಕದಲ್ಲಿ ಹೋಗುತ್ತಿದ್ದವು. ಭಾರ ಹೆಚ್ಚಾಯಿತೆಂದು ಕುದುರೆ ಗೊಣಗಿತು…
ಔಷಧಿಗಳು ಮತ್ತು ಶಸ್ತ್ರಚಿಕಿತ್ಸೆಗಳು
ಶಾಶ್ವತವಾಗಿ ಉದುರಿ ಹೋದ ತಲೆಗೂದಲು ಮರು ಬೆಳೆಸಲಿಕ್ಕಾಗಿ ಗಂಡು-ಹೆಣ್ಣೆಂಬ ಭೇದವಿಲ್ಲದೆ ನಾವು ಏನು ಮಾಡಲಿಕ್ಕೂ ತಯಾರು, ಅಲ್ಲವೇ? ಇಂತಹ ಆಸೆಯಿರುವವರೆಲ್ಲ ಎರಡು ಸತ್ಯಾಂಶಗಳನ್ನು ತಿಳಿದಿರಬೇಕು:
1)…
ವಾಸನೆ ಹೆಚ್ಚಾಗುತ್ತಿದೆ. ಸಹಿಸಿಕೊಳ್ಳಲಾಗುತ್ತಿಲ್ಲ. ಇದು ಇತ್ತೀಚಿನವರೆಗೆ ಏನು ಇರಲಿಲ್ಲ. ಮೊನ್ನೆ ಮೊನ್ನೆ ಮನೆಗೆ ಒಂದಷ್ಟು ನೆಂಟರು ಬಂದಿದ್ದರು, ಅವತ್ತಿಂದಲೇ ಈ ವಾಸನೆ ಆರಂಭವಾಗಿದೆ. ಅವರು ನಮ್ಮ ಮನೆಯಲ್ಲಿ ಜಾಂಡ ಊರಿ ಬಿಟ್ಟಿದ್ದಾರೆ.…
ಬೋಳು ತಲೆಯ ವ್ಯಕ್ತಿಗಳು ತಮ್ಮ ನುಣುಪಾದ ತಲೆಯನ್ನು ಕೈಯಿಂದ ಸವರಿಕೊಳ್ಳುವಾಗ, ಅದೆಷ್ಟು ಹಿತವಾದ ಅನುಭವ ಎಂದು ನಮಗನಿಸಬಹುದು. ಆದರೆ ಅವರ ಸಮಸ್ಯೆ ಅವರಿಗೇ ಗೊತ್ತು.
ಆ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರಾಚೀನ ಕಾಲದಲ್ಲಿ ತಲೆ ಬೋಳಾಗದೆ…
ಈಗಾಗಲೇ ಅವಿದ್ಯ, ಅಸ್ಮಿತ, ಅಭಿನೀವೇಶ ಕ್ಲೇಶಗಳ ಬಗ್ಗೆ ತಿಳಿದು ಕೊಂಡಿದ್ದೇವೆ. ಈ ದಿನ ರಾಗ ಕ್ಲೇಶದ ಬಗ್ಗೆ ತಿಳಿದುಕೊಳ್ಳೋಣ. ಎಲ್ಲಾ ಕ್ಲೇಶಗಳಿಗೆ ಅವಿದ್ಯ ಮೂಲ. ಅವಿದ್ಯ ಇಲ್ಲ, ಕ್ಲೇಶ ಕ್ಷೀಣವಾಗಿ, ಪರಿಣಾಮ ಉಂಟುಮಾಡುವುದಿಲ್ಲ. ಅದಕ್ಕೆ…
ಕಿರುಜೇನು/ಪಿಟ್ ಜೇನು : ಹೆಸರೇ ಹೇಳುವಂತೆ ಹುಳುಗಳು ಮಾಮೂಲಿ ಜೇನುಹುಳುಗಳ ಗಾತ್ರದಲ್ಲೇ ಇದ್ದು ಇವು ನೇತಾಡುವ ಗಿಡ ಪೊದೆ ಬಳ್ಳಿ ಗೋಡೆ ಸಂದು ಪೈಪ್ ಟ್ಯಾಂಕ್ ಹೀಗೆ ಎಲ್ಲಿ ಬೇಕಾದರೂ ಗೂಡು ಕಟ್ಟುವ ಇವು ಹುಳುಗಳು ಅಂದಾಜು ಇನ್ನೂರು ಮುನ್ನೂರರಿಂದ…