ಸ್ಟೇಟಸ್ ಕತೆಗಳು (ಭಾಗ ೧೦೦೩)- ಯಾವುದು?

ಸ್ಟೇಟಸ್ ಕತೆಗಳು (ಭಾಗ ೧೦೦೩)- ಯಾವುದು?

ಇನ್ನು ಸರಿಯಾಗಿ ಬೆಳಕಾಗಿರ್ಲಿಲ್ಲ. ಸೂರ್ಯ ಎದ್ದಿರ್ಲಿಲ್ಲ ಅಂತ ಅನ್ಸುತ್ತೆ. ಆಗಲೇ ಮನೆಯ ಬಾಗಿಲ ಮೇಲೆ ಜೋರಿನಿಂದ ಯಾರೋ ಬಡಿಯುತ್ತಾ ಇದ್ದರು. ಯಾರೂ ಅಂತ ಬಾಗಿಲು ತೆಗೆದರೆ, ಅವರನ್ನು ಈವರೆಗೆ ನಾನು ಕಂಡಿಲ್ಲ, ಹಾಗಾಗಿ ಅವರು ಯಾಕೆ ಇಷ್ಟು ಬೇಗ ಬಂದ್ರು ಅಂತ ಅವರನ್ನೇ ಕೇಳಿದ್ದಕ್ಕೆ, ಅವರು ತಮ್ಮ ಪರಿಚಯ ಹೇಳಿಕೊಂಡ್ರು. ನಾನು ಮಳೆರಾಯ, ಇನ್ನೊಬ್ಬ ಬಿಸಿಲು ರಾಯ. ಸರಿ ನಿಮ್ಮಿಬ್ಬರ ಪರಿಚಯ ಒಪ್ಪಿಕೊಳ್ಳುತ್ತೇನೆ ನನ್ನ ಮನೆಗೆ ಬಂದಿರುವುದು ಏನಕ್ಕೆ? ಅದಕ್ಕೆ ಅವರಿಬ್ಬರು ತಮ್ಮ ಕಥೆಯನ್ನು ಹೇಳೋದಕ್ಕೆ ಆರಂಭ ಮಾಡಿದರು. ಭಗವಂತ ನಮಗೆ ಸಮಯ ನಿಗದಿ ಮಾಡಿರುತ್ತಾರೆ, ಆಗ ನಾವು ಭೂಮಿಗೆ ಹೋಗಿ ಮಳೆನೋ ಬಿಸಿಲೋ ಕೊಡಬೇಕು. ಆದರೆ ನಿನ್ನನ್ನ ಮೊನ್ನೆಯಿಂದ ಗಮನಿಸ್ತಾ ಇದ್ದೇನೆ ಹೆಚ್ಚು ಬಿಸಿಲು ಬಂದ ಕೂಡಲೇ ಏನು ಕರ್ಮ ಬಿಸಿಲೂ ಮಳೆ ಬರೋದಿಲ್ಲ ಅಂತೀಯಾ ? ಮಳೆ ಬಂದರೆ ಏನು ಕರ್ಮ ಮಳೆ ನಿಲ್ಲೋದೇ ಇಲ್ಲಾ? ಬಿಸಿಲು ಯಾವಾಗ ಬರುತ್ತೋ ಅಂತೀಯಾ? ನೀನು ನಮ್ಮಿಬ್ಬರಿಗೂ ಕೂಡ ನಾವು ಕೆಟ್ಟವರು ಅನ್ನೋ ರೀತಿಯಲ್ಲಿ ಬೈತಿಯಾ? ಹಾಗಿರುವಾಗ ನಮಗೊಂದು ನ್ಯಾಯ ಸಿಗಲೇಬೇಕು. ಅನಗತ್ಯವಾಗಿ ನಿನ್ನ ಕರ್ಮವನ್ನು ಹೊತ್ತುಕೊಳ್ಳುವುದಕ್ಕೆ ನಾವು ತಯಾರಿಲ್ಲ. ನಮ್ಮಿಬ್ಬರಲ್ಲಿ ಯಾರು ಬೇಕು? ಅಥವಾ ನಾವಿಬ್ರೂ ಬೇಕೋ. ಅದರ ಮೇಲೆ ನಿನ್ನ ಊರಿಗೆ ಮಳೆ ಬರಬೇಕೋ ಬಿಸಿಲು ಬರಬೇಕೋ ಅನ್ನೋದನ್ನ ನಾವು ನಿರ್ಧಾರ ಮಾಡುತ್ತೇವೆ ಅಂತ ಹೇಳಿ ಹೊರಟೆ ಹೋದರು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ