ಸವಿಯಲು ಕರೆದಿದೆ

ಸವಿಯಲು ಕರೆದಿದೆ

ಕವನ

ಹಲಸಿನ ಹಣ್ಣಿನ ಸವಿಯನು ಮೆಚ್ಚಿದ

ಗಿಡವನು ನಾಟಿದ ಹಿತ್ತಲಲಿ

ನೀರಿನ ಜೊತೆಯಲಿ ಗೊಬ್ಬರ ನೀಡಿದ

ಫಲವನು ನೀಡಿತು ವರ್ಷದಲಿ

 

ಬುಡದಲಿ ಬಿಟ್ಟಿದೆ ಕಾಯ್ಗಳು ಮೂರಿವೆ

ಒಡೆಯನು ನೋಡಲು ಮರೆತಿಹನೆ?

ಸುಮ್ಮನೆ ಕುಳಿತರೆ ಕೊಳೆಯುವ ಸಂಭವ

ಬಿರಿಯಿತು ಕಾಯಿಯು ತನ್ನನ್ನೆ

 

ಹಲಸಿನ ಹಣ್ಣಿನ ಒಳಗಿನ ಸೊಳೆಗಳ

ತೋರುತಲಿರುವುದು ಎದೆ ಬಿಚ್ಚಿ

ಘಮ್ಮನೆ ಪರಿಮಳ ಹೊಮ್ಮಿಸಿ ಕರೆದಿದೆ

ಮೆಲ್ಲುತ ನುಡಿಯಿರಿ ಸವಿ ಮೆಚ್ಚಿ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್