ಭರತ್‌ ಪಿ. ಭಟ್‌ ಒಂದು ಪರಿಚಯ

ಭರತ್‌ ಪಿ. ಭಟ್‌ ಒಂದು ಪರಿಚಯ

ಭರತ್‌ ಪಿ. ಭಟ್‌, ಎರಡು ವರ್ಷಗಳ ಹಿಂದೆ ಕೇಳಿದ ಹೆಸರು. ಪಿ.ಯು.ಸಿ. ಹಾಗೂ ಸಿ.ಈ.ಟಿ. ಯಲ್ಲಿ ರಾಜ್ಯಕ್ಕೆ ಪ್ರಥಮರೆನಿಸಿದ್ದವರು. ಇದೀಗ ಪಶ್ಚಿಮ ಬಂಗಾಳದ ಕರಕ್‌ ಪುರದಲ್ಲಿ ಐಐಟಿಯಲ್ಲಿ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ವಿದ್ಯಾರ್ಥಿ. ಇವರು ಪ್ರೋಜೆಕ್ಟ್‌ ಒಂದಕ್ಕಾಗಿ ಕಾಲೇಜಿನಿಂದ ಇಂದು ಕ್ಯಾಲಿಫೋರ್ನಿಯಾಕ್ಕೆ ತೆರಳುತ್ತಿದ್ದಾರೆ. ಈಗಾಗಲೇ ಇವರು ಹೋಂಡ್ಯಾ ನವರು ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ೩೦೦೦ ಡಾಲರ್‌ಗಳ ವಿದ್ಯಾರ್ಥಿವೇತನಕ್ಕೆ ಭಾಜನರು, ಮತ್ತು ದಿನಾಂಕ ೧೬-೫-೦೯ರಂದು ನಡೆದ ಜಿಆರ್‌ಈ ಪರೀಕ್ಷೆಯಲ್ಲಿ ಶೇ.೯೬ಕ್ಕೂ ಹೆಚ್ಚು (೧೬೦೦ ಅಂಕಗಳಿಗೆ ೧೫೪೦) ಅಂಕಗಳಿಸಿದ್ದಾರೆ . ಇವರು ಸಿದ್ದಾಪುರ ತಾಲ್ಲೂಕಿನ ಮನಮನೆ ಪಂಚಾಯ್ತ್‌ ವ್ಯಾಪ್ತಿಯ ಅತಿ ಹಿಂದುಳಿದ ಗ್ರಾಮದ ಪುಟ್ಟಭಟ್ಟ ಕೆ.ಆರ್‌. ಮತ್ತು ರೋಹಿಣಿ ಇವರ ಪ್ರಥಮ ಪುತ್ರ. ಇವರ ಸಾಧನೆಗೆ ಹೆಚ್ಚಿನ ಯಶಸ್ಸು ದೊರೆಯಲೆಂದು ಆಶಿಸುತ್ತಾ ತಮಗೆ ಕಿರು ಪರಿಚಯ ನೀಡಿರುತ್ತೇನೆ.

Rating
No votes yet

Comments