ಹೊರಟೆ ನಾ 'ಶಿಲ್ಪ-ಕಲೆ'ಗಳ ತವರಿಗೆ :)

ಹೊರಟೆ ನಾ 'ಶಿಲ್ಪ-ಕಲೆ'ಗಳ ತವರಿಗೆ :)

ಅಬ್ಬಾ!! ಏನೋ ಒಂತರ ಖುಷಿ ಆಗಿತ್ತು ನಿನ್ನೆ ಸಂಜೆ, ಬಹುಷಃ ಇಂಜಿನಿಯರಿಂಗ್ನಲ್ಲಿ ಕಡೆ exam ಮುಗಿಸಿದ ದಿನ ಸಿಕ್ಕಿತ್ತಲ್ಲ ಅಂತದೆ ಖುಷಿ, ನೆಮ್ಮದಿ.೨-೩ ತಿಂಗಳಿಂದ ಹಗಲು-ರಾತ್ರಿಯ ಪರಿವೆ ಇಲ್ಲದೆ ಕೆಲಸವನ್ನು ಮೈ ಮೇಲೆ ಎಳೆದು ಕೊಂಡು ಮಾಡಿದ್ದೆವಲ್ಲ , ನಿನ್ನೆ ಕುಂಬಳಕಾಯಿ ಹೊಡೆದ ದಿನ :) (Project Release)
ನಿನ್ನೆ ಸಂಜೆ ಜೋರು ಮಳೆ-ಗಾಳಿ ಬೇರೆ ಬರ್ತಾ ಇತ್ತು. ವಾವ್ ನಾನಂತೂ ಫುಲ್ ತೇಲಾಡ್ತಾ ಇದ್ದೆ ಬಿಡಿ, ಹೇಗಿದ್ರು ಸಂಪದದಲ್ಲಿ ಬ್ಲಾಗ್ ಬರೆಯದೇ ಬಹಳ ದಿನಗಳೇ ಆಯಿತು, ಇದೆ ಖುಷಿಯಲ್ಲಿ ಏನಾದ್ರೂ ಬರೆಯೋಣ ಅಂತ ಕೂತರೆ, ಏನು ಹೊಳಿತಾನೆ ಇಲ್ಲ :)

ನಾಳೆ ಹಾಸನಕ್ಕೆ ಹೊರಟಿದ್ದೇನೆ , ೨-೩ ತಿಂಗಳಾಯಿತು ಮನೆ ಕಡೆ ಹೋಗಿ, ಆ ಖುಷಿ ಬೇರೆ, ಹೋದ ತಕ್ಷಣ, ಅಪ್ಪ ,ಅಮ್ಮ ,ಅಣ್ಣ - ಅಕ್ಕನ ಮಕ್ಕಳು , ನನ್ನ ಮುದ್ದು 'ಚಿಂಕಿ' (ನಮ್ಮನೆ ನಾಯಿ), ಚಿಂಕಿಯ ಮಕ್ಕಳು ;) ನನ್ನ ಹಳೆ ಪೋಲಿ ಪಟಾಲಮ್ಮು ;), ಕಾಲೇಜು , ಸ್ಕೂಲು ಎಲ್ಲಾ ನೋಡಿ ಮಾತಾಡಿ, ಕುಣಿದು ಕುಪ್ಪಳಿಸಬೇಕು.ಬೆಂಗಳೂರಲ್ಲೇ ಇಷ್ಟು ಮಳೆ ಹಾಗು ತಂಡಿ ಇದೆ ಅಂದ್ರೆ ಇನ್ನ ಹಾಸನದಲ್ಲಿ ಕೇಳ್ಬೇಕಾ , ಇನ್ನು ಸೂಪರ್ರ್ ಚಳಿ ಇರುತ್ತೆ :).ಹಾಸನದಿಂದ ಬಂದ ಮೇಲೆ , ಹತ್ತು ದಿನ ರಜೆ ಪಡೆದು ಬೆಂಗಳೂರಿಂದ ಕಳೆದು ಹೋಗಬೇಕೆನ್ನಿಸಿದೆ , ಸ್ವಲ್ಪ ಕಾಡು-ಮೇಡು ಅಲೆದು, ನೀರಿನಲ್ಲಿ ಬಿದ್ದು ಒದ್ದಾಡಿ ಬರಬೇಕು.

ನಾನಂತೂ ಹೊರಟೆ ಹಾಸನಕ್ಕೆ , ನೀವು ಬನ್ರಿ ಹೋಗೋಣ , ಈಗಾಗಲೇ ಅಲ್ಲೇ ಇದ್ರೆ ಭೇಟಿ ಮಾಡೋಣ , ಏನಂತಿರಾ? ;)

ರಾಕೇಶ್ ಶೆಟ್ಟಿ :)
'ಎಲ್ಲರೊಳಗೊಂದಾಗು - ಮಂಕು ತಿಮ್ಮ||'

Rating
No votes yet

Comments