ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜಯ್ ಹೋ ಸುಕುಮಾರ್ ಸೇನ್ !!

ಈಗಷ್ಟೇ ಫಲಿತಾಂಶ ಹೊರಬಿದ್ದಿದೆ. ಯಾವ ಪಕ್ಷಕ್ಕೂ ಬಹುಮತ ನೀಡದೆ, ಹಾಗೆಂದು ಸ್ಥಿರ ಸರ್ಕಾರ ರಚನೆಗೆ ತೊಂದರೆಯೂ ಆಗದಂತೆ ಮತದಾರ ಬುದ್ದಿವಂತಿಕೆಯಿಂದ ಮತ ಚಲಾಯಿಸಿದ್ದಾನೆ. ಪ್ರಜಾಪ್ರಭುತ್ವದ ಗಜಗಮನಕೆ ಚುನಾವಣೆಯೇ ಅಂಕುಶ ಎಂಬುದನ್ನು ಅವನು ಅರ್ಥ ಮಾಡಿಕೊಂಡಿರುವುದಕ್ಕೆ ಸಾಕ್ಷಿ ಇದು.

ನಾ ಸತ್ತಂತೆ ನಟಿಸಿದಾಗ!

ನಾನೊಮ್ಮೆ ಯೋಚಿಸಿದ್ದುಂಟು 
ನಾನು ಸತ್ತಂತೆ ನಟಿಸ ಬೇಕು| 
ಹಾರ ತುರಾಯಿಗಳ ಭಾರದಿಂದ ಬಳಲಿ ಹೋಗ ಬೇಕು| 
ನನ್ನ ಬಂಧುಬಳಗ,ಸ್ನೇಹಿತರು,ಹಿತಚಿಂತಕರು, 
ಸಾಹಿತ್ಯ ಕ್ಷೇತ್ರದ ಮಿತ್ರರು ಜಾತ್ರೆ ಯೋಪಾದಿಯಲಿ ಸೇರುವುದ ಕಿರಿಗಣ್ಣಿನಿಂದಲೇ  ನೋಡಬೇಕು|
ಅಣ್ಣ ತಮ್ಮ, ಅಕ್ಕ ತಂಗಿಯರು
ಪತ್ನಿ ಪುತ್ರರು-ಮಿತ್ರರು
ಬಿಕ್ಕಿ ಬಿಕ್ಕಿ ಅಳುವಾಗ
ಎದ್ದು ಚಕಿತಗೊಳಿಸಬೇಕು!!
-೨-

ಅಮೃತವರ್ಷಿಣಿ

ಸ್ವಲ್ಪ ದಿವಸಗಳ ಹಿಂದೆ ಉದಯ ಟೀವೀನಲ್ಲಿ ಈಚೆಗೆ ತೆರೆಕಂಡ ಒಂದು ಸಿನಿಮಾ ತಂಡದವರ ಜೊತೆ ಮುಖಾಮುಖಿ ಮಾತುಕತೆ ಬರ್ತಾ ಇತ್ತು. ನಿರೂಪಕಿ ನಡುವೆ ಈಗ ಒಂದು ಹಾಡು ಕೇಳೋಣ್ವಾ ಅಂತ ಒಂದು ಹಾಡು ಹಾಕಿದರು. ಆ ಹಾಡು ನನಗಂತೂ ಕೂಡಲೆ ಹಿಡಿಸಿಬಿಡ್ತು.

ಏ(ಇ)ರಿದ ಬಿಸಿಲಿನ ತಾಪ; ಪುನಗು ಮರಿ ‘ನೆಲ’ಕ್ಕೊ(ಕೊ)ರಗಿತು.

ಏಳು ಗುಡ್ಡಗಳು ಹಾಗು ಏಳು ಕೆರೆಗಳಿಂದ ಆವೃತವಾಗಿದ್ದ, ಒಂದು ಕಡೆ ಮಲೆನಾಡಿನ ಹಸುರಿಗೆ ಸೆರಗೊಡ್ಡಿ ಮತ್ತೊಂದೆಡೆಗೆ ಬಯಲು ಸೀಮೆಗೆ ಆಸರೆ ಇತ್ತಿದ್ದ ‘ಛೋಟಾ ಮಹಾಬಳೇಶ್ವರ’ ಖ್ಯಾತಿಯ ಧಾರವಾಡದಲ್ಲಿ ಈಗ ನೆತ್ತಿಯ ನೆತ್ತರು ಸುಡುವಷ್ಟು ಬಿಸಿಲು. ಉಸಿರಾಡಲು ಆಗದಷ್ಟು ಪ್ರಳಯಾಂತಕ ಬಿಸಿ ಗಾಳಿ ಜೀವ ಹಿಂಡುತ್ತಿದೆ. ಧಾರವಾಡಿಗರು ಕಳೆದ ಐದು ದಶಕಗಳ ಇತಿಹಾಸದಲ್ಲೇ ಈ ಪರಿಯ ಬಿಸಿಲಿನ ಝಳ ಅನುಭವಿಸಿರಲಿಲ್ಲ.

ಇದ್ದ ಗುಡ್ಡಗಳನ್ನು, ಕೆರೆಗಳನ್ನೆಲ್ಲ ಬಡಾವಣೆ ನಿರ್ಮಿಸುವ ಹಣವುಳ್ಳವರು ನುಂಗಿ ನೀರು ಕುಡಿದಿದ್ದಾರೆ. ಅಭಿವೃದ್ಧಿಯ ಹೆಸರಿನ ರಸ್ತೆಗೆ ನೂರಾರು ವರ್ಷಗಳಷ್ಟು ಹಿರಿದಾದ ಮರಗಳು ಆಹುತಿಯಾಗಿವೆ. ಧಾರವಾಡ ಮನುಷ್ಯರು ತಮ್ಮ ಸುಖಕ್ಕಾಗಿ ಮಾಡಿದ ಈ ಎಲ್ಲ ಅಧ್ವಾನಗಳಿಗೆ ಈಗ ಇಲ್ಲಿನ ಪ್ರಾಣಿಗಳು ಪರಿತಪಿಸುವಂತಾಗಿದೆ. ಕಾರಣ ನಮಗೆಲ್ಲ ಸೂರಿದೆ ಅವುಗಳಿಗೆ? ಈ ಕಾಂಕ್ರೀಟ್ ನಾಡಿನಲ್ಲಿ ಅವುಗಳಿಗೆ ಬಾಯಾರಿಕೆಯಾದರೆ ಒಂದು ತೊಟ್ಟು ನೀರು ಸಹ ಸಿಗದಂತೆ ನೀರಿನ ಟ್ಯಾಂಕ್ ಅಟ್ಟದ ಮೇಲೇರಿಸಿ, ಹಳೆಯ ಬಾಯ್ದೆರೆದ ಟ್ಯಾಂಕ್ ಗಳಿಗೆ ಟೆರೆಸ್ ಸೋರಿಕೆ ಕಾರಣ ನೀರು ತುಂಬಿಸುವುದನ್ನು ನಿಲ್ಲಿಸಿ ತಿಲಾಂಜಲಿ ನೀಡಲಾಗಿದೆ.

ಟೆಕ್ ಸುದ್ದಿ - ೪ - ಅಲ್ಲಾವುದ್ದೀನನ ಹಾರುವ ಹಾಸಿಗೆ

ಅಲ್ಲಾವುದ್ದೀನನ ಹಾರೋ ಹಾಸಿಗೆ ಗೊತ್ತಿರ್ಬೇಕಲ್ವಾ? ಅದು ಇನ್ನು ಇದೆ ಅಂದ್ರೆ ನಂಬ್ತೀರಾ? ನಂಬ್ಲೇ ಬೇಕು ಅಂತ ಸುದ್ದಿ ಬಂದಿದೆ. ಹೌದು.. ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇದರ ಮೇಲೆ ಕುಳಿತು ಸವಾರಿ ಕೂಡ ಮಾಡಿರೋದನ್ನು ಜಪಾನ್ ನ ಸ್ಪೇಸ್ ಏಜನ್ಸಿ ತಿಳಿಸಿದೆ.

"ಆ ದಿನಗಳ ನೆನೆಪು!"

" ಆ ದಿನಗಳ ನೆನಪು!"
****************

ಮರದ ಅಡಿಯಲಿ
ಸುಕ್ಕುಗಟ್ಟಿ ಉದುರಿದ
ಎಲೆಗಳು..

ಬಿಸಿಲಿನ ಕಾವಿಗೆ
ಆವಿಯಾಗುತ್ತಿದ್ದ
ಮಳೆಹನಿಗಳು..

ಕಡಲ ತೆರೆಯಲ್ಲಿ
ಮರೆಯಾಗುತ್ತಿದ್ದ
ಸಂಜೆ ರವಿಯು..

ಸಾರಿ ಸಾರಿ ನೆನಪಿಸುತ್ತಿದ್ದವು
ಮಾಸಿ ಹೋಗುತ್ತಿದ್ದ,
ನಮ್ಮ ಆ ದಿನಗಳನು...!!

ರಕ್ಕಸನ ಪ್ರೇಮಕಥೆ !!!!!

ಪಡುವಣವನ್ನು ಕೆಂಪಗೆ ಕಾಯಿಸಿ ವಿದಾಯ ಹೇಳುತ್ತಿದ್ದ ಸೂರ್ಯ, ಹರಿತ್ತಿನಿಂದ ಬೀಗುತ್ತಿದ್ದ ಮರಗಳನ್ನು ತೊಯ್ದಾಡಿಸಿ ಸಣ್ಣಕೆ ಸದ್ದು ಮಾಡುತ್ತಿದ್ದ ತಂಗಾಳಿ ಆ ಸಂಜೆಗೆ ವಿಶೇಷ ರೊಮ್ಯಾಂಟಿಕ್ ಕಳೆಯನ್ನೇ ತಂದು ಕೊಟ್ಟಿದ್ದವು. ಎದುರಿಗೆ ಹರಿಯುತ್ತಿದ್ದ ಝರಿಯನ್ನು ಹೇಗೆ ದಾಟಬೇಕೆಂದು ದಾರಿ ಕಾಣದೆ ಯೋಚನೆಗೆ ಬಿದ್ದಿದ್ದಳು ನೇತ್ರಾ.

ಎಲೆಕ್ಟ್ರಾನಿಕ್ ಮತಯಂತ್ರಗಳ ವಿರುದ್ಧ ಕೇಸು

 ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಗಳು ನಂಬಲರ್ಹವಲ್ಲ. ಅವನ್ನು ಬದಲಿಸಿ ಅಥವಾ ಪ್ರೋಗ್ರಾಮಿಸಿ ಚುನಾವಣೆಯ ಫಲಿತಾಂಶವನ್ನು ಬದಲಿಸಬಹುದು ಎಂದು ಪ್ರೊಫೆಸರ್ ಒಬ್ಬರು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯನ್ನು ಹೂಡಿದ್ದಾರೆ. ವಿಸ್ತ್ರುತ ವರದಿ