ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾಲ್ಕು ಹನಿ

ಗೆಳತಿ ಮಹಾಭಾರತದ
ಶ್ರೀಕೃಷ್ಣನಂತೆ ನಾನು
ಎನ್ನುವ ನಿನಗೆ!
ಅದೇ ಮಹಾಭಾರತದಲ್ಲಿ
ದೌಪಧಿಯು ಇದ್ದಾಳೆ
ಎನ್ನುವುದು ತಿಳಿದಿಲ್ಲವೇ?!

----------------

ಇದ್ದಿದ್ದು ಇಲ್ಲದಂತೆ
ಇಲ್ಲದಿರುವುದು ಬೇಕೆನ್ನುವಂತೆ
ಬೇಕೆನ್ನುವುದು ಹೇಗಾದರೂ
ಪಡೆಯುವುದೇ ಬದುಕು!!

------------------

ರಾಮಾಯಣದಲ್ಲಿ
ಶ್ರೀರಾಮನೇ
ಸೀತೆಯನ್ನು ವನದಲ್ಲಿ
ಬಿಟ್ಟನಂತೆ!
ಪ್ರೀಯೆ ನಾನೇನು

ಚಂದನ ಮತ್ತು ಸಾವು

ನಾನಾಗ ಒಂಬತ್ತನೆ ಇಯತ್ತಿನಲ್ಲಿದ್ದೆ, (ಆಗ ದೇಹ ಬೆಳ್ದಿತ್ತಷ್ಟೆ ಬುದ್ದಿ ಬೆಳ್ದಿರ್ಲಿಲ್ಲ ಅಂತ ಈಗನ್ಸುತ್ತೆ.) ಚಂದನ ಅಂತ ಒಬ್ಬಳು ಹೊಸ ಹುಡುಗಿ ನಮ್ಮ ಶಾಲೆಗೆ ನಮ್ಮ ವಿಭಾಗಕ್ಕೆ ಸೇರಿದಳು ನಾವೆಲ್ಲ ಬೇಗ ಸ್ನೇಹಿತರಾದೆವು..........ಆದರೆ ಅವಳ ಸ್ನೇಹಿತರ ಗುಂಪು ಮಾತು ಕಥೆ ಬೇರೆಯೆ ಆಗಿತ್ತು ಅವಳು ಕ್ರಿಶ್ಚಿಯನ್ ಪಂಗಡಕ್ಕೆ ಸೇರಿದವಳಾಗಿದ್ದಳು............ಆದರೆ ಎಲ್ಲರೊಂದಿಗು

ಮೂರು ಹನಿ

ತೊದಲುತ್ತಾ
ಮಾಡುತ್ತಿದ್ದನು
ಉದ್ದ ಉದ್ದ
ಭಾಷಣ!
ಸಭಿಕನೊಬ್ಬ
ಎದ್ದು ನಿಂತು ಹೇಳಿದ
ನಿಮಗಲ್ಲ ಈ ರಾಜಕೀಯ
ಭೂಷಣ!!

---------------

ಚುನಾವಣೆ ಬಂತೆಂದರೆ
ಹಾವು ಮೂಂಗುಸಿ
ಇವರು!
ಜೇಬು ತುಂಬಲು
ಕಾಗೆ ಹಿಂಡಿನಂತೆ
ಸೇರುವರು!!

--------------

ಇಲ್ಲದವರು
ಬೇಡುವರು
ಹೊಟ್ಟೆ ತುಂಬಲು!
ಇದ್ದವರು
ಬೇಡುವರು
ಜೇಬು ತುಂಬಲು!!

ಹನಿ ಕವನ

ಹಾಸ್ಯ

ಇನ್ಸೆಪೆಕ್ಟರ್: "ಏನ್ರೀ ಕರಿಯಪ್ಪ ಸೌತ್ ಆಫ್ರಿಕಾಗೆ ಟ್ರಾನ್ಸ್ಫರ್ ಕೇಳಿದೀರಾ!"
ಕಾ.ಕ: "ಅಲ್ಲ ಸಾ, ಲಾಸ್ಟ್ ಇಯರ್ರು ಚೀರ್ ಲೀಡರ್ಸ್ ಪಕ್ಕದಾಗೇ ಡ್ಯೂಟಿ ಹಾಕಿದ್ರಿ. ಈ ವರ್ಸ ಬುಟ್ಬುಟ್ರಲ್ಲಾ ಸಾ. ಅದಕ್ಕೆ!"

ನೀವು ಕೇಳಿದಿರಿ ೧.೨

*ಮಗನ ಕಳ್ಳ ಭೇಟಿಗೆ ಅಪ್ಪನ ಸಮರ್ಥನೆ .

-ಎಷ್ಟಾದರೂ ಅವರೇ ಹಾಗಿದ ಆಲದಮರ ಅಲ್ವೇ
(ಓತಿಕೆತಕ್ಕೆ ಬೇಲಿಗೂಟ ಸಾಕ್ಷಿ ಎಂದ್ರಂತೆ ಯಡ್ಡಿ ). :D
+++++++

*ಪಾಸ್ವಾನ್ ಮನೆಯಲ್ಲಿ ಬೆಂಕಿ, 'ಡ್ರಾ'ಯಿಂಗ್ ರೂಂ ಭಸ್ಮ ವಂತೆ !

-ಇದಕ್ಕೆಲ್ಲ ಅವರ 'ವೈ'ರಿಂಗಿನ ಶಾರ್ಟ್ ಸರ್ಕೀಟ್ ಕಾರಣವಂತೆ .
+++++++++

*ಕಸಬ್ ಗೆ ಓದಲು ದಿನ ಪತ್ರಿಕೆ ಬದಲು ಕಥೆ ಪುಸ್ತಕವಂತೆ !

ರಿಟರ್ನ್ ಟಿಕೆಟ್

ನನ್ ಸೆಲ್ನಲ್ಲಿರೋ ನಾಲ್ಕು ಜಿ.ಬಿ ತುಂಬಾ ಇರೋದು ಒಳ್ಳೆ ಕನ್ನಡ ಹಾಡ್ಗಳು, ಕೆಲವು ಕಿಶೋರ್ ಕುಮಾರ್, ಲತಾ, ಮುಖೇಶ್ ಹಾಡ್ಗಳು ಮತ್ತೆ ಕೆಲ್ವು ನಂಗರ್ಥಾ ಆಗೋ ಸ್ಪಾನಿಷ್ ಹಾಡ್ಗಳು. ಮನೆಯಿಂದ ಆಫೀಸ್, ಆಫೀಸಿಂದ ಮನೆ ಓಡಾಡುವಾಗ ಬಸ್ಸಲ್ಲಿ ಕೇಳ್ತಿರ್ತೀನಿ. ಇಲ್ಲಿ ಎಫ್.ಎಂನಲ್ಲಿ ಬರೋದು ಬರೇ ಸ್ಪಾನಿಷ್ ಹಾಡ್ಗಳು.

ಮುಗ್ಧತೆಯ ಮೋಡಿ

ಅಜ್ಜಿಯವರ ಹಠಾತ್ ನಿಧನದ ವಾರ್ತೆ ಕೇಳಿ ಕೂಡಲೇ ಭಾರತಕ್ಕೆ ಬಂದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ನನ್ನ ಪ್ರಥಮ landing. ಹೊಚ್ಚ ಹೊಸ ನಿಲ್ದಾಣ. ಆದರೆ ಆಗಲೇ ನಿರ್ವಹಣೆಯ ಬೇಜವಾಬ್ದಾರಿಯೋ ಏನೋ ಸೀಲಿಂಗ್ ನ ಲೈಟ್ ಫಿಟ್ಟಿಂಗ್ ಮೇಲೆ ಒಂದಿಂಚು ಧೂಳು ತುಂಬಿಕೊಂಡಿತ್ತು. ಸಾವಿರಾರು ಕೋಟಿ ಖರ್ಚು ಒಂದು ಒಳ್ಳೆ ವಿಮಾನ ನಿಲ್ದಾಣದ ನಿರ್ಮಾಣಕ್ಕೆ. ಆ ಹಣ ಪ್ರಜೆಗಳದು.

ಮರಳಿ ಮಣ್ಣಿಗೆ

ಮರಳಿ ಮಣ್ಣಿಗೆ

 

ಸಂಜೆ ತಲುಪಿದೆ ಕೇಳು

ಕತ್ತಲಪ್ಪುವ ವೇಳೆ

ಎಚ್ಚೆತ್ತು ನೋಡು

ಮರಳಿ ಮಣ್ಣಿನೆಡೆಗೆ.

 

ಹಿರಿತನದ ಬಾಳ್ಬಿಟ್ಟು

ಸಿರಿಯನದ ಕೂಡಿಟ್ಟು

ಜಗವ ಕೊಳ್ಳುವ ಭರದಿ

ಹೀಗೋಡಿದ್ದೇಕೆ.

 

ಹಳ್ಳಿಯಲ್ಲೇನಿದೆ ಮಣ್ಣು

ಹೀಗಳೆದು ಹೋದದ್ದು ನೀನು.

ರೈತನೇ ದೇಶದ ಕಣ್ಣು

ಎಂಬುದ ಮರೆತೆಯೇನು?

 

ಮೊಗ್ಗರಳುವುದ ಕಾಣು

ನಗರದಲ್ಲೇನಿದೆ ಮಂಕೆ?

ಸೂರ್ಯಾಸ್ತದಲ್ಲಿರಬೇಡ

ನಡೆ ಉದಯದೆಡೆಗೆ.

 

ಅನ್ನದಾತನ ನಾಡು

ವಿಶ್ವಮಾನವರ ಬೀಡು

ಹಳ್ಳಿಯೆಡೆ ಸಾಗೋಣ,

ನಡೆ ಗೆಳೆಯ ಮಣ್ಣಿಗೆ,

ಮರಳಿ ಮಣ್ಣಿಗೆ.