ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪುಟ್ಟ ಲೇಖನವೆಂದರೆ ಹೀಗಿರುವುದೇ?

ತುಂಬಾ ದಿನಗಳಾಯಿತು ಬರೆಯದೆ..ಆದ್ರೆ ಬರೆಯದೆ ಇರೋಕ್ಕಂತು ಆಗಲ್ಲ. ಹೆಚ್ಚಿಗೆ ಬರೆಯದೆ ಹೋದ್ರು ಪರವಾಗಿಲ್ಲ ಸ್ವಲ್ಪವಾದರೂ ಬರೆದು ನಿಮ್ಮ ಸನ್ನಿಧಿಗೆ ಒಪ್ಪಿಸಬೇಕೆಂಬುದು ನನ್ನ ಮನದ ಪುಟ್ಟ ಆಸೆ.

ಟೆಡ್ ಟಾಕ್ ಗಳು ಈಗ ಕನ್ನಡ ಸಬ್-ಟೈಟಲ್ ನೊಂದಿಗೆ

ಇದೀಗ ಬಂದ ಸುದ್ದಿ. TED ಭಾಷಣಗಳು ಇನ್ನು ಮುಂದೆ ಕನ್ನಡವೂ ಸೇರಿದಂತೆ ೪೦ ವಿವಿಧ ಭಾಶೆಗಳಲ್ಲಿ ಸಬ್ ಟೈಟಲ್ ನೊಂದಿಗೆ ಬರಲಿವೆ. ಈಗಾಗಲೇ ಒಂದಿಷ್ಟು ಭಾಶಣಗಳು ಕನ್ನಡದಲ್ಲಿದ್ದು, ಮುಂದೆ ನಾವು-ನೀವು ಎಲ್ಲರೂ ಉಳಿದ ಭಾಷಣಗಳನ್ನು ಭಾಷಾಂತರ ಮಾಡಬಹುದಂತೆ.

ಸಮಾಧಾನದ್ವಿಷ್ಯ!

ಇದು ನಮ್ ಇಂಡಸ್ಟ್ರಿ ವಿಷ್ಯ. ಮತ್ತು ಒಳ್ಳೆಯ ವಿಷ್ಯ !

ಅನಲಾಗ್ ಇಂಡಸ್ಟ್ರಿ ಮತ್ತೆ ಸ್ಟಬಿಲೈಸಾಗ್ತಾ ಇದ್ಯಂತೆ !

http://www.solid-state.com/display_news/177860/5/none/iSuppli:_Demand_returns,_pricing_stabilizes_in_analogs,

ಕನ್ನಡ್ದಲ್ಲಿ ನಾನ್ ಬರೀತಿರೋ ಮೋದಲ್ನೆ ಪೋಸ್ಟ್!

ಹಾಯ್, ನಾನ್ ಶಶಿ ಅಂತ, ಶಿವು ಅವ್ರು ನಂಗೆ ಸಂಪದ.net ನ ಪರಿಚಯ ಮಾಡ್ಸಿದ್ರು, ತುಂಬಾ ದಿನದಿಂದ ನಂದೊನ್ದ್ ಕನ್ನಡ ಬ್ಲಾಗ್ ಬರೀಬೀಕು, ಬರೀಬೀಕು ಅಂತ ಆಸೆ ಇತ್ತು, ಅದು ಕೊನೆಗೂ ಇವತ್ತು ಪೂರ್ತಿ ಆಗ್ತಾ ಇದೆ :)

ನಿನ್ನ ಹೆಸರು

ಮೆಚ್ಚಿದ್ದೆ ನಾನ೦ದು,
ಇವಳ ನಗೆಯೊ೦ದನ್ನೆ|
ಬೆಚ್ಚಿ ಬಿದ್ದೆ ಇ೦ದು ನಾ,
ಓದಲು ಈ ಕಣ್ಣಲ್ಲೆ ||

ನಾನೇನ ಓದಿದೆ ?
ನಿನ್ನರ್ಥ ತಪ್ಪಿಹುದು|
ಮತ್ತೇನಲ್ಲ ಅವಳ ಆ..
ಬರಹಗಳೇ ಕಾಡುತಿಹುದು||

ಯಾರಾಕೆ ಯಾರಾಕೆ ?
ನೀ ನನ್ನ ಕೇಳದಿರು |
ಕೇಳಿದರು ಹೇಳೆನು ನಾ,
ದಯಮಾಡಿ ಕಾಡದಿರು ||

ಒಳಗಿರುವ ಕವಿಯ ನೀ,
ಕೆರಳಿಸಿದೆ ಓ ಗೆಳತಿ |
ಯಾರ ಬಳಿ ಹೇಳಲಿ ನಾ..
ಚ್ಚೊಚ್ಚಲ ಈ ಕವಿತೆ ||

ಸಿಟ್ಟು

ಇಂದೇಕೋ ಬೇಸರ
ಸೋತುಹೋದ ಅನುಭವ

ಇಂದಿನ ಈ ಬೇಸರ
ಹಿಂದಿನ ಸಿಟ್ಟಿನ ಪ್ರತಿಫಲ

ಸಿಟ್ಟದೇಕೋ ಬಂತು
ಅದರ ಪಾಡಿಗೆ ಅದು ಹೋಯ್ತು

ಬರುತಾ ತರಲಿಲ್ಲವೇನನ್ನೂ
ಬೇಸರವುಳಿಸದೇ ಹೋಗಲಿಲ್ಲವೆನ್ನು

ಬಂದ ಸಿಟ್ಟಿಗೆ ಬಯ್ದೆ ನನ್ನಾಕೆಗೆ
ಆಗ ಗೊತ್ತಗಲಿಲ್ಲ ಅದು ನನಗೇ

ಅವಳ ಗುಣ ದೊಡ್ಡದು
ಹೀರಿಕೊಳ್ಳುವುದದು ಕಷ್ಟಗಳನೆಂದೂ

ನನ್ನಾಕೆಯ ನಾ ಪ್ರೀತಿಸುವೆ

ಎಂದು ಜೀವಕೆ ಮುಕ್ತಿ

ಹುಳಿಯನು ಹಿಂಡಿ ರಸವ ತೆಗೆದಾಗ ಹಣ್ಣಿಗೆ ಮುಕ್ತಿ
ಒಳಿತಿನಿಂದ ಕೆಟ್ಟದೆಲ್ಲ ಕಿತ್ತೆಸೆದಾಗ ಬಾಳಿಗೆ ಮುಕ್ತಿ
ಅರಳಿದ ಹೂ ಹಣ್ಣಾದಾಗ ಹೂವಿಗೆ ಸಂತೃಪ್ತಿ
ಸಾಧನೆ ಮಾಡದೆ ಸಾಯುವ ವೇಳೆ ಜೀವಕೆ ಅತೃಪ್ತಿ

ವ್ರುದ್ದಾಪ್ಯದಲಿ ತಂದೆತಾಯಿಯ ಪೊರೆವುದೆ ಭಕ್ತಿ
ಜೀವನ ಚಕ್ರವ್ಯೂಹವ ಬೇಧಿಸಲು ಬೇಕು ಪ್ರೀತಿಯ ಶಕ್ತಿ
ಆಸೆಗಳು ನಾಗಾಲೋಟದಲಿ ಓಡುತಿವೆ ನೋಡು

ಅಮ್ಮ ನನ್ನ ಬಿಟ್ಟು

ಅಮ್ಮ ನನ್ನ ಬಿಟ್ಟು
ವಿಧಿ ವಶವಾದಾಗ
ನನ್ನಗಿನ್ನು ಲೋಕ ಅರಿಯದ
ಹರೆಯ!
ಕೆಂಪು ಸೀರೆ, ತಲೆ ಮುಂದೆ
ಹೊಗೆ ಬತ್ತಿ
ಕಾಲ ಬುಡದಿ ದೀಪ
ಆಗ ಪೂಜೆಯ ನೆನಪು!
ಅಪ್ಪ, ಅಕ್ಕನ ಕಣ್ಣಿರು
ಅಮ್ಮನ ಮುಖದಿ ಕಿರುನಗು
ಆಗ ನನ್ನ ಹಠಕ್ಕೆ
ಅಮ್ಮ ಹೊಡೆದ
ನೆನಪು!
ಅಪ್ಪನ ಕೇಳಿದರೆ ಉತ್ತರವಿಲ್ಲ
ಅಕ್ಕನ ಕೇಳಿದರೆ ಕಣ್ಣೀರ ಉತ್ತರ!!
ಕೆಂಪು ಸೀರೆಯವರು ಬಂದರೆ
ನನ್ನ ಆಸೆಯ ಕಣ್ಣು ಹೊಸ್ತಿನತ್ತ!