ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯಾರೆದುರು ಹೊಗಳಿಕೊಳ್ಳಬೇಕು?

ಬಲ್ಲವರೆದುರು ಹಿರಿಮೆಯ ಹೇಳದಿರು
ಅರಿತೇ ಅರಿಯುವರು ತಾವಾಗೇ;
ಹೇಳದಿರು ಹಿರಿಮೆಯ ಹುಂಬರೆದುರು
ಅರಿತವರ ನುಡಿಯ ಕೇಳದವರಿಗೆ!

 

ಸಂಸ್ಕೃತ ಮೂಲ:

ಬುಧಾಗ್ರೇ ನ ಗುಣಾನ್ ಬ್ರೂಯಾತ್ ಸಾಧು ವೇತ್ತಿ ಯತಃ ಸ್ವಯಂ
ಮೂರ್ಖಾಗ್ರೇSಪಿ ಚ ನ ಬ್ರೂಯಾತ್ ಬುಧಪ್ರೋಕ್ತಂ ನ ವೇತ್ತಿ ಸಃ||

-ಹಂಸಾನಂದಿ

ಚೆನ್ನೈ ಊರು

ರವಿವಾರ ಯಾವುದೋ ಕಾರಣಕ್ಕೆ ಚೆನ್ನೈಗೆ ಹೋಗಬೇಕಾಯಿತು.. ನಗಗೋ‌ ಭಯಾ ಒಂಥರ... ಅಲ್ಲಿ ಜನಕ್ಕೇ ತಮಿಳು ಬಿಟ್ಟರೆ ಬೇರೆ ಭಾಷೆ ಬರಲ್ಲ ಅಂತ ಕೇಳಿದ್ದು... ಯೇನ್ ಮಾಡೋದು ಅನ್ನುವಷ್ಟರಲ್ಲೇ ವಾದಿ [friend] ನನ್ ಜೊತೆ ಬರೋಕೆ ತಯಾರಾದಾ. ಅಬ್ಬಾ ಅವನಿಗೆ ಹರಕು ಮುರುಕು ತಮಿಳ್ ಬರ್ತಿತ್ತು...
ನನಗೆ ಚೆನ್ನೈ ಅಂದ್ರೆ ಏನೋ ಕಲ್ಪನೆ ಇತ್ತು....

೧. ತುಂಬಾ ದೊಡ್ಡ ಊರು...

ಲಿನಕ್ಸಾಯಣ - ೫೯ - ಮ್ಯಾಟ್ರಿಕ್ಸ್ ಆಡೋಣ್ವಾ?

ಮ್ಯಾಟ್ರಿಕ್ಸ್ ಅಂತಂದ್ರೆ ಗೊತ್ತಲ್ಲ ನಿಮ್ಮ ಟಿ.ವಿ ಸ್ಕ್ರೀನ್ ಮೇಲೆಲ್ಲಾ ನಂಬರ್ರು, ಅಕ್ಷರಗಳು ಇತ್ಯಾದಿ.. _ರಾಘವ_ ಮ್ಯಾಟ್ರಿಕ್ಸ ನ ಕನ್ನಡ ವಾಲ್ಪೇಪರ್ ಕೂಡ ಮಾಡಿದ್ದ ಈ ಹಿಂದೆ.

ಇರ್ಪಮೆಂಬುದಱ ನಡುರೂಪಮಾದ ಇಹದಿಕಾರಲೋಪಂ ಹಕಾರದ ಕೊನೆಯ ಅಕಾರಕ್ಕೆ ದೀರ್ಘಂ ಕೊನೆಯೊಳಕಾರಂ ಸೇರ್ಗುಂ ಬೀದರ್ಗನ್ನಡದೊಳ್

ಹೞಗನ್ನಡದ ಇರ್ಪ ಇದು ನಡುಗನ್ನಡದಲ್ಲಿ ಇಹ ರೂಪವಾದಾಗ ಅದು ಬೀದರಿನ ಕನ್ನಡದಲ್ಲಿ ಇಕಾರ ಲೋಪವಾಗಿ ಹಕಾರದ ಮುಂದಿನ ಅಕಾರ ದೀರ್ಘವಾಗಿ ಕೊನೆಯಲ್ಲಿ ಅಕಾರ ಸೇರುವುದು. ಇದನ್ನು ಈ ಕೆೞಗಿನ ಕೋಷ್ಟಕದಲ್ಲಿ ವಿವರಿಸಲಾಗಿದೆ. ಉದಾಹರಣೆಗೆ: ನಮ್ಮಪ್ಪ ಪ್ರಿನ್ಸಿಪಾಲ್ ಹಾರ. ನಮ್ಮವ್ವ ಟೀಚರ್ ಹಾಳ. ನಮ್ಮಣ್ಣ ಡಾಕ್ಟ್ರ ಹಾನ.

ಬೆಂಗಳೂರು ನಗರ ಸಾರಿಗೆಯಲ್ಲಿ ಕನ್ನಡವನ್ನು ಅಳಿಸುತ್ತಿರುವುದು ಯಾರು?

ಈ ಚರ್ಚೆಯನ್ನು ಓದುತ್ತಿದ್ದೀರ ಅಂದರೆ ನೀವು ಕನ್ನಡಿಗರೇ. ಬೆಂಗಳೂರಿನ ಬಗ್ಗೆ ಒಂದು ಚರ್ಚೆ ನಡೀತಿದೆ, ಪಾಲ್ಗೊಳ್ಳಣ ಅಂತ ಇಲ್ಲಿಗೆ ಬಂದು ಚರ್ಚೆಯಲ್ಲಿ ಭಾಗವಹಿಸುತ್ತಿದ್ದೀರಿ ಅಂದರೆ ನಿಮಗೆ ಬೆಂಗಳೂರಿನ ಬಗ್ಗೆ ಅದ್ಯಾವುದೋ ಒಂದು ಬಗೆಯ ಕಾಳಜಿಯಂತೂ ಇದೆ ಅನ್ನುವುದು ಖಂಡಿತ.

ಮರಗಳ ವೇದನೆ

ಮರಗಳ ಆಲಾಪ

(1) ಮರಗಳ ಆಲಾಪ

ಇಂಗಾಲವ ಉಗುಳುವ
ವಾಹನಗಳಿಗಾಗಿ
ಆಮ್ಲಜನಕ ಕೊಡುವ
ಮರಗಳಿಗೆ ಎರಗಿ,
ನಗರದ ನಾಗರೀಕರು
ಕುಳಿತವರೆ ಸಾವಿಗೆ
ಒರಗಿ:
ಅಕಾಲೀಕ ಸಾವಿಗೀಡಾದ
ಮರಗಳೆಲ್ಲಾ ಮೊರೆಯಿಟ್ಟವೆ
ಜವರಾಯನ ಹತ್ತಿರ ಹೋಗಿ,
ಹೋಗು ಭೂಮಿಗೆ ನಮ್ಮಪ್ಪ
ಹೋಗಿ ಹಸಿರ ಕೊಂದವರ
ತಲೆಯ ತೆಗಿ,
ಎಂದು ಆಲಾಪಿಸಿ ಬೇಡುತ್ತಿವೆ
ತಲೆಯ ಬಾಗಿ.
------000-----
ಶಿವಶಶಿ

(2)ಮಾನವ ಮಾಯ