ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

"ಕೈ ಬೀಸಿ ಕರೆದ"

" ಕೈ ಬೀಸಿ ಕರೆದ"
***************

ಸುಂದರವಾದ ಸಂಜೆಯಲಿ
ನನ್ನ ಕನಸಿನ ಉದ್ಯಾನವನದಲಿ
ತಣ್ಣಗಿನ ಗಾಳಿಗೆ ಮೈಯ್ಯೊಡ್ಡಿ
ನಾ ಮುಂದೆ ಹೋಗುತಿರಲು,

ಹಕ್ಕಿಗಳ ಹಾಡಿನ ಸ್ವಾಗತ
ಕಾರಂಜಿ ಪನ್ನೀರನು ಚಿಮುಕಿಸಿ
ಮರಗಳು ಬಣ್ಣದಿಂದ ಬಾಗಿ
ಹೂಗಳು ದಾರಿಯುದ್ದ ಹಾಸಿ,

ಎಲೆಗಳೇ ಚಾಮರವ ಬೀಸಿ
ಆಶ್ಚರ್ಯದಿ ನಾ ಎದುರೆ

ಇದ್ನೋಡಿ! 'ಸ್ಪಿರಿಚುವಲಿಸಮ್ಮ್'ನ ಮಾರುಕಟ್ಟೆಯ ಬಗ್ಗೆ :)

ಈಗ್ತಾನೇ ಇದ್ನ ಓದ್ತಾ ಇದ್ದೆ. ಹಂಚ್ಕೋಬೇಕನ್ಸ್ತು, ಇಗೋ ತಗಳಿ!
ಸ್ಪಿರಿಚುವಲಿಸಮ್ ಅನ್ನೋದನ್ನಾ ನಮ್ಮೋರು ಹೇಗೆ ಒಳ್ಳೇ ಮಾರಾಟದ್ವಸ್ತು ಮಾಡ್ಬಡ್ದಿದಾರೇಂತಾ ಜಾವೇದ್ ಅಖ್ತರ್ರ ಅನಿಸಿಕೆ.

ಸ್ವಲ್ಪ ಹಳೇದೇ, ಆದ್ರೂ ಈಗಿನ್ಕಾಲಕ್ಕನ್ವಯ ಆಗತ್ತೆ. ಮೊದ್ಲೇ ಹೇಳ್ತಿದೀನಿ, ಕೊಂಚ ಉದ್ದ ಇದೆ!

ಬದುಕು ಭಾವ ಮತ್ತು ನಾನು - ೬ ( ನಾ ಕಂಡ ಮೊದಲ ಸಾವು , ದುರ್ದೈವ್ಯ ನನ್ ಅಣ್ಣನದ್ದೇ )

                        ಅತ್ತಿಂದಿತ್ತ ಓಡಾಡುತಿದ್ದ ನೆಂಟರಿಸ್ಟರು , ಮಾತಿಗೊಮ್ಮೆ ಪಾಪು ಎನ್ನುತಿದ್ದ ಅಪ್ಪ , ಅಡಿಗೆಮನೆಕಡೆ ಹೋದಾಗಲೆಲ್ಲ ಏನು ಬೇಕು ಅಪ್ಪು ಎನ್ನುತಿದ್ದ ಅಮ್ಮ ,ಹೀಗೆ ಅಲ್ಲಿ ಬರಿ ಸಡಗರವೆ . ಹೋದ ತಿಂಗಳು ನಡೆದ ನಮ್ಮ ಮನೆಯ ಗೃಹ ಪ್ರವೇಶದ ಒಂದು ನೋಟ ಇದು ( ನವೀಕರಣಗೊಳಿಸಿದ್ದೆವು).

ಹೀಗೊಂದು ಎಸ್.ಎಂ.ಎಸ್

ನನಗೆ ಬಂದ ಎಸ್.ಎಂ.ಎಸ್ ನ್ನು ಯಥಾವಥ್ ಇಲ್ಲಿ ಬ್ರೆಯುತ್ತಿದ್ದೇನೆ.

Don't buy American products like pepsi, coke, intel, ge, ford, gm, puma, levis, lee, nike, transcend, apple etc until obama take back his new policies of outsourcing to India, Indian job cuts in America. Think about country, not fashion or status. If we buy Indian products it will create 5 crore jobs in our country and makes Indian economy strong. We will develop. Every Indian student will get job. If you are a true Indian promote Indian products. Forward this SMS to all.

ಈ ಬಗ್ಗೆ ನಿಮ್ಮ ಅನಿಸಿಕೆಗಳು.

-ನಾಸೋ

ಮತ್ತೆ ಹಿಂದಿರುಗಿದ್ದೇನೆ.

ಕಳೆದ ೨೦ ದಿನಗಳಿಂದ ನಾವು ಉತ್ತರ ಭಾರತದ (ಜಮ್ಮು ಕಾಶ್ಮೀರ, ಧರ್ಮಶಾಲ, ಅಮೃತಸರ್, ಚಂಡೀಗಢ, ಕೇದಾರನಾಥ್, ಬದರೀನಾಥ್, ಹರಿದ್ವಾರ್, ರಿಶಿಕೇಶ್, ದೆಹಲಿ) ಪ್ರವಾಸದಲ್ಲಿದ್ದುದರಿಂದ, ಸಂಪದದಲ್ಲಿ ಕಣ್ಮರೆಯಾಗಿದ್ದೆ. ಈಗ ಮತ್ತೆ ಹಿಂದಿರುಗಿದ್ದೇನೆ.

ದೇವರು, ದೆವ್ವಗಳು ಮೈ ಮೇಲೆ ಬರುತ್ತವೆಯೆ?

ದೇವರು, ದೆವ್ವಗಳು ಮೈ ಮೇಲೆ ಬರುತ್ತವೆಯೆ? 

ಮನುಷ್ಯನಿಗೆ, ಮನುಷ್ಯ ಎಂಬ ಹೆಸರು ಬರಲು ಕಾರಣ, ಮನಸ್ಸು. ಇತರ ಯಾವ ಜೀವರಾಶಿಯಲ್ಲೂ ಕಂಡುಬರದ ವಿಶಿಷ್ಠ ಹಾಗೂ ಅದ್ಭುತ ಮನಸ್ಸು ಮನುಷ್ಯನಲ್ಲಿದೆ. ವಾಸ್ತವದಲ್ಲಿ ಮನುಷ್ಯನೂ ಒಂದು ಪ್ರಾಣಿ. ಮನುಷ್ಯನು ತನ್ನ ಮನಸ್ಸಿನ ನೆರವಿನಿಂದ, ಮನಸ್ಸಿಗೆ ಕಾರಣವಾದ ಬುದ್ಧಿಶಕ್ತಿಯ ನೆರವಿನಿಂದ ವಿಚಾರ ಮಾಡಿದನು.  ದೇವರನ್ನು ಹಾಗೂ ದೆವ್ವವನ್ನು ಸೃಜಿಸಿದನು.

ಅಗ್ನಿಪರ್ವತಗಳಿಂದ ಭುಗಿಲೇಳುವ ಜ್ವಾಲೆ. ಕಲ್ಲುಮಣ್ಣು ಕರಗಿ ಹರಿಯುವ ಲಾವಾರಸ. ನೀಲ ಬಾನ ತುಂಬ ಕಪ್ಪು ಮೋಡ. ಗುಂಡಿಗೆ ಮಿಡಿತವೇ ನಿಲ್ಲುವಂತಹ ಗುಡುಗು. ಫಳಿಫಳಿರೆಂದು ಬಾನಿನಿಂದ ಭುವಿಯತ್ತ ಎರಗಿ ಎಲ್ಲವನ್ನು ಸುಟ್ಟುಹಾಕುವ ಸಿಡಿಲು. ಮುಸಲಧಾರೆಯ ಮಳೆ. ತುಂಬಿ ಹರಿಯುವ ನದಿ. ಭೋರ್ಗರೆಯುವ ಸಾಗರ...ಎಲ್ಲವೆಲ್ಲವನ್ನು ಬೀಸಿ ಒಗೆಯುವ ಚಂಡಮಾರುತ...

ಈ ಪ್ರಾಕೃತಿಕ ರೌದ್ರ ಶಕ್ತಿಗಳನ್ನು ನೋಡಿದ ನಮ್ಮ ಪೂರ್ವಜರಲ್ಲಿ ಭೀತಿ ಮೂಡಿತು. ಇವನ್ನೆಲ್ಲ ನಡೆಸುವ, ನಿಯಂತ್ರಿಸುವ ಯಾವುದೋ ಒಂದು ಶಕ್ತಿ ಇರಬೇಕು ಎಂದು ಗ್ರಹಿಸಿದರು.

ನೀವು ಕೇಳದಿರಿ - 9

* ಬಿಜೆಪಿ ನೇತೃತ್ವದ ಎನ್‌ಡಿಎ ದಿಢೀರನೆ ಒಗ್ಗಟ್ಟು ಪ್ರದರ್ಶಿಸ್ತಾ ಇದೆ! ಮುಂದೆ?

- ರಾಷ್ಟ್ರಮಟ್ಟದಲ್ಲಿ ’ಆಪರೇಷನ್ ಕಮಲ್’!

+++

* ’ಆಪರೇಷನ್ ಕಮಲ’ದಿಂದ ಜನತೆಗೆ ಏನು ಲಾಭ?

- (ಕಮಲದ) ದಂಟು!
ನಾಗರಿಕರಿಗೆ ಬೇಕಾಗಿರೋದು ಸರ್ಕಾರಿ ಅಧಿಕಾರಿಗಳ ಕೋ-ಆಪರೇಷನ್.
ಬಡವರಿಗೆ ಬೇಕಾಗಿರೋದು ರೇಷನ್.

+++

ಹೀಗೊಂದು ಜೀವನಚರಿತ್ರೆ

ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು. ನಾನಾಗ ಐದನೇ ತರಗತಿಯಲ್ಲಿ ಓದುತ್ತಿದ್ದಿರಬಹುದು. ಇಡೀ ಬಯಲು ಸೀಮೆಯಲ್ಲಿ ಬರಗಾಲದ ಕರಾಳ ಛಾಯೆ ಆವರಿಸಿತ್ತು. ಇತ್ತ ಸುಭಿಕ್ಷವೂ ಅಲ್ಲ; ಅತ್ತ ದುರ್ಭಿಕ್ಷವೂ ಅಲ್ಲದ ಪರಿಸ್ಥಿತಿ. ಆದರೂ ನಾಳೆ ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತಿತ್ತು. ಬಹುತೇಕ ಎಲ್ಲಾ ವರ್ಗದ ರೈತರೂ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದರು.

ಕಪ್ಪು ಹಣವೂ ಕಂಗಾಲು ನಾಯಕರೂ...

ಈ ಲೋಕಸಭಾ ಚುನಾವಣೆಯಲ್ಲಿ ಭಾರಿ ಸುದ್ದಿಯಾಗುತ್ತಿರುವುದೆಂದರೆ ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ಭಾರತಕ್ಕೆ ತಂದೇ ಸಿದ್ಧ ಎಂದು ರಾಜಕೀಯ ಪಕ್ಷವೊಂದು ಪಣತೊಟ್ಟಿದೆ!

ಮಾಧ್ಯಮಗಳಲ್ಲಿ ಈ ಬಗ್ಗೆ ಭಾರಿ ಚರ್ಚೆಯೂ ಆಗಿದೆ. ಪರ-ವಿರೋಧ ಮಾತನಾಡುವವರ ಮೂತಿಗೆ ಮೈಕ್ ತಿವಿದು ಅವರು ಉದುರಿಸಿದ್ದನ್ನೆಲ್ಲ ನಮಗೆ ರವಾನಿಸಿಯೂ ಆಗಿದೆ!

ಹಾಲು ಮಾರುವ ಹುಡುಗಿ

ಹಾಲು ಮಾರುತಾ ಬರುವಳು
ಹಾಲಿನಂತೆ ನಗುವ ಚಲುವೆ
ಬೆಳ್ಳಿ ತಂಬಿಗೆಯಲ್ಲಿ ನೊರೆ ಹಾಲು ತರವಳು
ಒಮ್ಮೆ ತಿರುಗಿ ನಗುವ ಅವಳ ಒಲವೆ||
ಮುಂಜಾನೆ ಮಂಜಿನ ಮೇಲೆ
ಗೆಜ್ಜೆ ಕಾಲಿನ ಹೆಜ್ಜೆ ಇಡುತ್ತಾ
ಹೊಂಬಣ್ಣದ ಮೇಘದ ಮೇಲೆ
ಮೇಘಧೂತನಂತೆ ತಾ ಬಳಕುತ್ತಾ||
ಹಸಿರು ಪೈರುಗಳ ಮೇಲೆ
ಕೈಯಾಡಿಸಿ 'ಕಿಲ ಕಿಲ' ನಗುತ್ತಾ
ದೂರದ ಬೆಟ್ಟದ ಮೇಲೆ
ಹಕ್ಕಿ ಹಾಡಿನಂತೆ ನಾ ಹಾಡುತ್ತಾ||