ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೇಶದ ಪ್ರಥಮ ಮಾದರಿ ಗ್ರಾಮ ಚಿಕ್ಕಜೋಗಿಹಳ್ಳಿಯ ಕಥೆ-ವ್ಯಥೆ

೫೦ರ ದಶಕದಲ್ಲಿ ದೇಶದಲ್ಲಿಯೇ ಮಾದರಿ ಗ್ರಾಮವೆಂದು ಹೆಸರಾಗಿದ್ದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಇಂದು ಅಭಿವೃದ್ಧಿ ಪಥವನ್ನೇ ಕಾಣದೇ ನರಳುತ್ತಿದೆ. ಗ್ರಾಮವನ್ನು ಸಂಪೂರ್ಣವಾಗಿ ಮಾದರಿಯನ್ನಾಗಿಸಬೇಕೆಂದು ಆಗ ಅವಿರತ ಶ್ರಮಿಸಿದ ಕೆ.ವೆಂಕಟಸ್ವಾಮಿ ಚಿಕ್ಕಜೋಗಿಹಳ್ಳಿಯ ರೂವಾರಿ.

ಟ್ರಾಫಿಕ್ ಜಾಮ್

ಟ್ರಾಫಿಕ್ ಜಾಮು ಬಲು ಪ್ರಾಬ್ಲೆಮ್ಮು
ಹೊಗೆಯ ಘಮ್ಮು ಬಿಗಿಯುತಿದೆ ದಮ್ಮು
ಪ್ರಯಾಣಿಕರಿಗೆ ನಿತ್ಯವೂ ನೆಗಡಿ ಕೆಮ್ಮು
ದಿನದಿನಕ್ಕೆ ಆಗುತಿದೆ ಆಯಸ್ಸು ಕಮ್ಮು
-amg

ಡೈರಿಯ ಪುಟಗಳಿಂದ...

ನಮ್ಮ ಸರ್ ಪಾಠದ ಶೈಲಿಯ ಒಂದು sample ನಿಮಗೆ ಈಗಾಗಲೆ ತೋರ್ಸಿದ್ದೀನಿ. ಇಲ್ಲಿ ಇನ್ನೊಂದಷ್ಟಿದೆ. ಸರ್ ಪಾಠ ಮಾಡುವಾಗ ಅಲ್ಲಲ್ಲಿ ಅವರು ಹೇಳಿದ ಕೆಲವು ಅಣಿಮುತ್ತುಗಳನ್ನು ಬರೆದಿಟ್ಟುಕೊಂಡಿದ್ದೆ. ಈಗ ಅವೆಲ್ಲವನ್ನೂ ಸೇರಿಸಿ ಒಂದು ಕಥೆ ತರ ಮಾಡಿದ್ದೀನಿ.. ಇದು ತುಂಬಾ ಅಸಂಬದ್ಧ ಅನ್ನಿಸಿದ್ರೂ ಅವ್ರು ಪಾಠ ಮಾಡೋದು ಹೀಗೆನೇ..

ಯುಗಾವತಾರಿಯ ಬಿಡುಗಡೆ ಸಂಭ್ರಮ

ಸಂಪದಿಗರೇ, ನಿಮ್ಮನ್ನೆಲ್ಲಾ ನಾನು ನನ್ನ ತಂಗಿ ಕರೆದೂ ಕರೆದೂ ಸಾಕಾಯ್ತು. ನೀವ್ಯಾರೂ ಬರಲಿಲ್ಲ. ಇರಲಿ... ಮೊನ್ನೆ ಹತ್ತನೇ ತಾರೀಖಿನಂದು ಸಂಜೆ ಆರು ಗಂಟೆಗೆ ಮಂಡ್ಯದ ಕಲಾಮಂದಿರದಲ್ಲಿ ಡಾ.ಪ್ರದೀಪಕುಮಾರ ಹೆಬ್ರಿಯವರ ಮಹಾಕಾವ್ಯ.. ’ಯುಗಾವತಾರಿ’ ಶ್ರೀ ಬಸವ ದರ್ಶನ ಕಾವ್ಯದ ಬಿಡುಗಡೆ ಸಮಾರಂಭ ಬಹಳ ವಿಜೃಂಬಣೆಯಿಂದ ನೆರವೇರಿತು.

ನೀವು ಕೇಳದಿರಿ - 10

* ಮತ ಎಣಿಕೆಯ ದಿನವಾದ ಇದೇ ದಿನಾಂಕ 16 ಹಿಂದು ತಿಥಿ ಪ್ರಕಾರ ’ಶ್ರೀರಾಮ ಪಟ್ಟಾಭಿಷೇಕ’ದ ದಿನ.

- ಅದಕ್ಕೇ ಅಡ್ವಾಣಿ, ’history repeats’, ಅಂತ ಕನಸು ಕಾಣುತ್ತಿದ್ದಾರೆ!

+++

* ವರುಣ್ ಗಾಂಧಿ ಪ್ರಧಾನಿಯಾದರೆ ದೇಶದಲ್ಲಿ ಕುಟುಂಬಯೋಜನೆ ಕಡ್ಡಾಯವಂತೆ?

- ಹೌದು. ರಾಹುಲ್ ಗಾಂಧಿ ಪ್ರಧಾನಿಯಾದರೆ (ಸ್ವ)ಕುಟುಂಬ ಕಲ್ಯಾಣ ಕಡ್ಡಾಯ.
ಮನಮೋಹನ್ ಸಿಂಗ್ ಪ್ರಧಾನಿಯಾದರೆ ಅವರಿಗೆ ಈ ದೇಶಕ್ಕಿಂತ ಸೋನಿಯಾ ಮೇಡಂ ಆದೇಶ ಕಡ್ಡಾಯ.
ಅಡ್ವಾಣಿ ಪ್ರಧಾನಿಯಾದರೆ ದೇಶಾದ್ಯಂತ ಪ್ರತಿನಿತ್ಯ ರಾಮ(ಮಂದಿರ)ಭಜನೆ ಕಡ್ಡಾಯ.
ಮೋದಿ ಪ್ರಧಾನಿಯಾದರೆ ದೇಶದ ಎಲ್ಲೆಡೆ (ಮಾತಿನ) ಮೋಡಿ ಪ್ರದರ್ಶನ ಕಡ್ಡಾಯ.
ಲಾಲೂ ಪ್ರಧಾನಿಯಾದರೆ ಭ್ರಷ್ಟಾಚಾರ ಕಡ್ಡಾಯ.
ಪಾಸ್ವಾನ್ ಪ್ರಧಾನಿಯಾದರೆ ಬಿಹಾರಿಗಳಿಗೆ ರೈಲ್ವೆ ಫ್ರೀ ಪಾಸ್ ಕಡ್ಡಾಯ.
ಮಾಯಾವತಿ ಪ್ರಧಾನಿಯಾದರೆ ದೇಶಾದ್ಯಂತ ತನ್ನ ಬರ್ತ್‌ಡೇ (with gifts) ಕಡ್ಡಾಯ. (ಕಜ್ಜಾಯ.)
ಮುಲಾಯಂ ಪ್ರಧಾನಿಯಾದರೆ ಗೂಂಡಾಗಿರಿ ಕಡ್ಡಾಯ.
ಪವಾರ್ ಪ್ರಧಾನಿಯಾದರೆ ಮಗಳು ಸುಪ್ರಿಯಾಗೆ ಮಂತ್ರಿಗಿರಿ ಕಡ್ಡಾಯ.
ಕರಟ್ ಪ್ರಧಾನಿಯಾದರೆ ಜನರ ಕೈಗೆ ಕರಟ ಕಡ್ಡಾಯ.
ದೇವೇಗೌಡರು ಪ್ರಧಾನಿಯಾದರೆ ದೇಶಾದ್ಯಂತ ರಾಗಿಮುದ್ದೆ ಊಟ ಕಡ್ಡಾಯ.

+++

ಚು.ಜೈ!

ಆ ಕಾಲವೊಂದಿತ್ತು.

ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ಹರಟುತ್ತ ಒಂದೊಂದೇ ಖಾದ್ಯವನ್ನು ಸವಿಯುತ್ತ ವಿಮರ್ಶಿಸುತ್ತ ನಿಧಾನವಾಗಿ ಸರಕು ಒಳಗಿಳಿಸುತ್ತಿದ್ದ ಭವ್ಯ ಭೋಜನದ ದಿವ್ಯ ಕಾಲ ಅದಾಗಿತ್ತು. ಈಗ ಗಡಿಬಿಡಿಯಲ್ಲಿ ’ಟೂ ಮಿನಿಟ್ಸ್ ನೂಡಲ್ಸ್’ ನುಂಗಿ ಎದ್ದೇಳುವ ಕಾಲ ಬಂದಿದೆ. ಇನ್ನೂ ಅರ್ಜೆಂಟ್ ಇರುವವರು ಬ್ರೆಡ್ಡಿನ ತುಣುಕುಗಳನ್ನು ಬಸ್ಸಿನಲ್ಲೋ ತಮ್ಮ ಕಾರಿನಲ್ಲೋ ತಿಂದು ಮುಗಿಸಿ ಡ್ಯೂಟಿಗೆ ಹಾಜರಾಗುತ್ತಾರೆ. ಮಧ್ಯಾಹ್ನ ಕಚೇರಿಯ ಬಿಡುವಿನ ವೇಳೆಯಲ್ಲಿ ಕ್ಯಾರಿಯರ್ ತಂಗಳನ್ನು ಗಬಗಬನೆ ಮುಕ್ಕಿ ನೀರು ಕುಡಿಯುತ್ತಾರೆ. ಊಟ ಚುಟುಕಾಗಿದೆ. ಎರಡು ಹೊತ್ತಿನ ಊಟಕ್ಕಾಗಿ ಜೀವನವಿಡೀ ಕಷ್ಟಪಡುವ ನಾವು ಆ ಊಟವನ್ನು ಆನಂದಿಸುವಷ್ಟು ಸಮಯ ಹೊಂದಿಲ್ಲ!

ಹಿಂದೆಲ್ಲ ಗಂಡಸರು ಮನೆ ಜಗಲಿಯ ಮೇಲೋ ಊರ ಅರಳಿಕಟ್ಟೆಯ ಮೇಲೋ ಕುಳಿತು ಗಂಟೆಗಟ್ಟಲೆ ಹರಟುತ್ತಿದ್ದರು. ಹೆಂಗಸರು ದೇವಸ್ಥಾನದಲ್ಲೋ ತಂತಮ್ಮ ಮನೆಗಳ ತುಳಸಿಕಟ್ಟೆಗಳೆದುರೋ ಮುಖಾಮುಖಿಯಾಗಿ ಕೇರಿ ಸುದ್ದಿಯೆಲ್ಲ ಸುದೀರ್ಘವಾಗಿ ಮಾತಾಡುತ್ತಿದ್ದರು. ಈಗೇನಿದ್ದರೂ ’ಹಾಯ್, ಬಾಯ್, ಆರಾಮಾ?, ಹ್ಞೂಂ, ಕೆಲ್ಸ ಆಯ್ತಾ, ಇನ್ನೂ ಇಲ್ಲ’, ಇಷ್ಟೆ. ಹೆಚ್ಚೆಂದರೆ ದೂರವಾಣಿಯಲ್ಲಿ - ಅವರು ಹತ್ತಿರದಲ್ಲೇ ಇದ್ದರೂ - ಒಂದೆರಡು ಮಾತು, ಫಿನಿಷ್. ಕೆಲವರಿಗೆ ಅದಕ್ಕೂ ಸಮಯವಿಲ್ಲ ಅಥವಾ ಮನಸ್ಸಿಲ್ಲ, ಅವರದು ಬರೀ ಎಸ್‌ಎಂಎಸ್! ಮಾತು ಚುಟುಕಾಗಿದೆ. ಪಶುಪಕ್ಷಿಗಳಿಗಿಂತ ನಾವು ಭಿನ್ನವಾಗಿರುವುದೇ ನಮ್ಮ ನಡೆ’ನುಡಿ’ಯಿಂದಾಗಿ ಎಂಬ ಅರಿವಿದ್ದೂ ಸುಸೂತ್ರ ನಾಲ್ಕು ಮಾತಾಡುವಷ್ಟು ನಮಗಿಂದು ವ್ಯವಧಾನವಿಲ್ಲ ಅಥವಾ ಮನಸ್ಸಿಲ್ಲ!

ನೀವು ಕೇಳಿದಿರಿ

ಮೊದಲನೆಯದಾಗಿ ಶಾಸ್ತ್ರಿಯವರಲ್ಲಿ ಕ್ಷಮೆ ಯಾಚಿಸುತ್ತ ನನಗನ್ನಿಸಿದ ಕೆಲವು , ನೀವು ಕೇಳಿದಿರಿ ಅನ್ನು ಇಲ್ಲಿ ಬಿತ್ತರಿಸಿದ್ದೇನೆ .
+++++++++++++

*ನನ್ನ ಕಿಡ್ನಿ ಹಾಳಾಗಿವೆ ಇನ್ನು ಮುಕ್ತ ಜೀವನ ನಡೆಸುವೆ ಅಂದಿದ್ದಾರೆ ಅಮರಸಿಂಗ್ !

-ಮುಕ್ತ ಅಂದ್ರೆ Full open ಅಂತನ ಗುರುವೇ ? :D

+++++++++++++++
*ಶ್ರುತಿ ವಿರುದ್ದ ಚಕ್ರವರ್ತಿ ಹೆಂಡ್ತಿ ಸಿಡಿಮಿಡಿ ಅಂತೆ ?

ದಾದಿಯರೇ... ನಿಮಗಿದೋ ನಮ್ಮ ನಮನ

ಈ ದಿನ ದಾದಿಯರ ದಿನ ... ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನ ... ತನ್ನ ಹದಿನೇಳನೇ ವಯಸ್ಸಿಗೆ ಬಡಜನರ , ನಿರ್ಗತಿಕರ, ರೋಗಿಗಳ ಸೇವೆಗಾಗಿ ಆಕೆ ದಾದಿಯ ವೃತ್ತಿಯನ್ನ ಹಿಡಿದು ಸೇವೆ ಸಲ್ಲಿಸಿದಳು... ಅವಳನ್ನು ನೆನೆಯುತ್ತಾ, ಅವಳ ಆದರ್ಶಗಳನ್ನು ಪಾಲಿಸುತ್ತಾ, ರೋಗಿಗಳ ಶುಶ್ರೂಷೆಗಾಗಿ ತಮ್ಮ ಜೀವನವನ್ನು ಮುಡುಪಿಟ್ಟ ಎಲ್ಲಾ ದಾದಿಯರಿಗೂ ಶುಭಾಶಯವನ್ನು ತಿಳಿಸೋಣ...