ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತಾಯಿ

------***** ತಾಯಿ *****-------
ಧರೆಯುಕ್ಕಿ ಬಂದ ಗಂಗೆಯ
ಸ್ವಾಗತ ಪೂಜೆಯಿಂದಿಡಿದು
ವಾಸ್ಥುಪುರುಷನಿಗೆ ಪ್ರಸಾದವಿಡುವವರೆಗೆ
ನಿಂತು ನೊಂದವಳು ಎನ್ನಮ್ಮ

ಹಿಂದೆ ಅಪ್ಪನಿದ್ದರೂ
ಹತ್ತಾರು ತಿಂಗಳು ಎದುರು ನಿಂತು
ಮನೆಯ ಹೆತ್ತು ಕೊಟ್ಟವಳು ಎನ್ನಮ್ಮ
ಕಾಡುವ ಮಧುಮೇಹದ ನಡುವೆ
ಸುಡುವ ಉರಿಬಿಸಿಲ ಕೆಳಗೆ
ಕಾಲನಿಗೆ ಎದುರು ನಿಂತು ಸಾಧಿಸಿದ ಧೀಮಂತೆ
ಎನ್ನ ತಾಯಿ ಇವಳು ಧೀಮಂತೆ

ಆನಂದರಾಮನ್ ಸತ್ತ ಸುದ್ದಿ

’ರಾಮನ್ ಸತ್ತ ಸುದ್ದಿ’. ಇದು ಕವಿ ಕೆ.ಎಸ್.ನಿಸಾರ್ ಅಹಮದ್ ಅವರ ಅತ್ಯಂತ ಪ್ರಸಿದ್ಧ ಕವನಗಳಲ್ಲೊಂದು. ತಾವು ಬರೆದ ಕವನಗಳ ಪೈಕಿ ತಮಗೆ ಎಲ್ಲಕ್ಕಿಂತ ಹೆಚ್ಚು ಇಷ್ಟವಾದ ಕವನ ಇದೆಂದು ಸ್ವಯಂ ನಿಸಾರರೇ ಹೇಳಿದ್ದಾರೆ.

ನೀವು ಕೇಳಿದಿರಿ - ೧. ೧

*ಸೋನಿಯಾ ,ಕುಮಾರಣ್ಣ ಕಳ್ಳ ಭೇಟಿ ಅಂತೆ !

-ಚಿಕ್ಕನ್ನಿದಿಂದಲೂ ಅವನಿಗೆ 'ಇಲಿ' ಜೊತೆ ಆಡೋದು ಅಂದ್ರೆ ಇಷ್ಟ ಅಂತಿದ್ರು ಗೌಡ್ರು . :D
+++++++++++

*ಏನ್ ಗುರು ಖೇಣಿ ಆಪರೇಷನ್ ಕೊಳೆಗೇರಿ ಶುರು ಮಾಡಿಬಿಟ್ಟಿದ್ದಾರೆ .

-ಅವರಿಗೆ ಗೊತ್ತು ಕಮಲ ಅರಳೋದು ಅಲ್ಲೇ ಅಂತ .
+++++++++++

*ಮಹಾಸಂಗ್ರಾಮದ ಅಂತಿಮ ಲೆಕ್ಕಾಚಾರ ಶುರು .

ಧರೆಯ ಕರೆ

ಮಾತೆಯೆ೦ದು ಮಾತಿನಲ್ಲಿ ನೀವು ನನ್ನ ಕರೆವಿರಿ
ಮರುಕ್ಷಣದಲಿ ನನಗೆ ಜೀವವಿರುವುದ ಮರೆವಿರಿ
ಹಣದ ಮೋಹದಿ೦ದ ನನ್ನ ಒಡಲನ್ನೇ ಬಗೆವಿರಿ
ನಾ ತೊಟ್ಟ ಹಸಿರು ಉಡುಗೆಯ ಕಿತ್ತು ಬಿಸುಟಿರಿ
ನನ್ನ ನರನಾಡಿ ನದಿಗಳನ್ನು ಮಲಿನಗೊಳಿಸಿದಿರಿ
ಸೂರ್ಯನಿ೦ದ ನನ್ನ ರಕ್ಷಿಸಿದ್ದ ಸೂರಿಗೆ ಕನ್ನ ಕೊರೆದಿರಿ

ಬರಿ ಮಾತಲಿ ಮಾತೆಯ ಪಟ್ಟ ಕಟ್ಟದಿರಿ
ನನಗೂ ಜೀವವಿರುವುದ ನೆನೆಯಿರಿ
ಹಸಿರು ಉಡುಗೆಯ ಮತ್ತೆ ನನಗೆ ತೊಡಿಸಿರಿ
ಲೋಭವನ್ನು ತೊರೆಯಿರಿ ಮಾಲಿನ್ಯವ ಅಳಿಸಿರಿ
ನಿಜ ಅರ್ಥದಲಿ ಈ ಮಾತೆಯನ್ನು ಗೌರವಿಸಿರಿ
ನೀವೆಲ್ಲ ಸುಖದಿ೦ದ ಬಾಳಿರಿ
-amg

ನಾನು ನಾಟಕ ಮಾಡ್ತಿದೀನಿ ದಯವಿಟ್ಟು ಬನ್ನಿ.

ಆಧುನಿಕ ನಾಟಕಕಾರರೆಂದೇ ಪ್ರಸಿದ್ಧರಾದ ದಿ. ಟಿ ಪಿ ಕೈಲಾಸಂ ಅವರ ಅಮ್ಮಾವ್ರ ಗಂಡ ನಾಟಕವನ್ನು ವಟಿಕುಟೀರ ತಂಡ ಪ್ರಸ್ತುತಪಡಿಸುತ್ತಿದೆ. ಇದೇ ಭಾನುವಾರ ದಿನಾಂಕ : ೧೭-೦೫-೨೦೦೯ ರಂದು ಸಂಜೆ ೭.೩೦ಕ್ಕೆ ಶೊ.

ಸ್ಥಳ : ಡಾ. ಎಚ್ ಎನ್ ಕಲಾಕ್ಷೇತ್ರ ಜಯನಗರ. (ಜಯನಗರ ನ್ಯಾಶನಲ್ ಕಾಲೇಜ್).

ನೆನಪಾಗುವವಳು- ಪ್ರೀತಿಗೆ ಐದು, ಮರೆವಿಗೆ ಒಂದು

ನೆನಪಾಗುವಳ ಪದೇ ಪದೇ

ಅದೇ ಪದಗಳ ಮೆಲುಕು ಹಾಕುವಾಗ

ನಗೆಬೀರುತ ನನ್ನೆಡೆಗೆ

ಬರುವಾಗ, ನಾನಾಗಿದ್ದೆ 

ಪ್ರಪಂಚವನ್ನೇ ಗೆದ್ದೆನೆಂಬ ಭಾಸದಲ್ಲಿ

 

ಪ್ರೀತಿಯ ಮಧುರತೆಯ ಕಡಲಿನಲಿ

ಮುಳುಗಿ ನಲಿದಾಡಿದೆ,

ನಾಲ್ಕು ವರುಷಗಳ ಹೋರಾಟ ಸರಿಸಮ

ಯಾರಿಗೆ ಯಾರೆಂದು ?

ಅದೇ ಮೇ ೧೩ರ ೨೦೦೫ರಂದು

 

ವಿಪರ್ಯಾಸ..........,

ನಾಟಕ : ಅಮ್ಮಾವ್ರ ಗಂಡ

ವಟಿಕುಟೀರ ತಂಡವು ಕನ್ನಡದ ಪ್ರಸಿದ್ಧ ನಾಟಕಕಾರ ಟಿ ಪಿ ಕೈಲಾಸಂ ಅವರ ಅಮ್ಮಾವ್ರ ಗಂಡ ನಾಟಕವನ್ನು ಇದೇ ಭಾನುವಾರ(೧೭ ಮೇ ೨೦೦೯) ಸಂಜೆ  ೭.೩೦ಕ್ಕೆ ಜಯನಗರದ ಡಾ. ಎಚ್ ಎನ್ ಕಲಾಕ್ಷೇತ್ರ(ಜಯನಗರ ನ್ಯಾಶನಲ್ ಕಾಲೇಜ್) ದಲ್ಲಿ ಪ್ರಸ್ತುತಪಡಿಸುತ್ತಿದೆ. ದಯವಿಟ್ಟು ಬನ್ನಿ.

ನಿರ್ದೇಶನ : ಕಿರಣ್ ವಟಿ.

ರಂಗಸಜ್ಜಿಕೆ : ವೀಳ್ಯ ರಾಘವೇಂದ್ರ 

ಅಮ್ಮಾವ್ರ ಗಂಡ

ವಟಿಕುಟೀರ ತಂಡವು ಕನ್ನಡದ ಪ್ರಸಿದ್ಧ ನಾಟಕಕಾರ ಟಿ ಪಿ ಕೈಲಾಸಂ ಅವರ ಅಮ್ಮಾವ್ರ ಗಂಡ ನಾಟಕವನ್ನು ಇದೇ ಭಾನುವಾರ(೧೭ ಮೇ ೨೦೦೯) ಸಂಜೆ ೭.೩೦ಕ್ಕೆ ಜಯನಗರದ ಡಾ. ಎಚ್ ಎನ್ ಕಲಾಕ್ಷೇತ್ರ(ಜಯನಗರ ನ್ಯಾಶನಲ್ ಕಾಲೇಜ್) ದಲ್ಲಿ ಪ್ರಸ್ತುತಪಡಿಸುತ್ತಿದೆ. ದಯವಿಟ್ಟು ಬನ್ನಿ.

ನಿರ್ದೇಶನ : ಕಿರಣ್ ವಟಿ.

ಸುದ್ದಿ ತಿಳಿದ ಕರಾವಳಿಯ ಹೆಣ್ಣು ಆತ ಹೊರ ಬರುವತನಕ ಕಾದಳು!!!

ಕತ್ತಲಾದ ಮೇಲೆ ಪರಸ್ತ್ರೀಯ ಭೇಟಿಗೆ ಯಾರೇ ಮುಖ ಮುಚ್ಚಿಕೊಂಡು ಹೋದರೆ
ಜನ ಸುಮ್ಮನಿರದೇ ಎಲ್ಲಾ ಅವರ ಮೇಲೆ ಅಪವಾದಗಳ ಸುರಿಮಳೆ ಗೈಯುವವರೇ

ಅಪ್ಪ ಹೇಳುತ್ತಿದ್ದಾನೆ ನನ್ನದು ಅದೇ ಮಾತು ನಮ್ಮದೊಂದೇ "ತರ್ಡ್ ಫ್ರಂಟೂ"
ಮಗನೂ ಆ ಮನೆಯಿಂದೀಚೆಗೆ ಬಂದು ಅನ್ನುತ್ತಿದ್ದಾನೆ ನನ್ನದೂ "ತರ್ಡ್ ಫ್ರಂಟೂ"

ಅದುವೊಂದನುೞಿದು ಅಕಾರದ ಸರ್ವನಾಮದ ರೂಪಂಗಳ ಕೊನೆಗೆ ಎಕಾರ ಸೇರ್ದೊಡೆ ಕ್ರಿಯಾರೂಪಂಗಳಕ್ಕುಂ. ಅದುವೆಂಬುದರ್ಕೆಯೈತೆಯೆಂಬುದು ಕ್ರಿಯಾರೂಪಂ ಗಾವಿಲದೊಳ್

ಅವನು, ಅವಳು, ಅವು, ಅವರು ಇವುಗಳಿಗೆ ಕೊನೆಯಲ್ಲಿ ಎಕಾರ ಸೇರಿಸಿದರೆ ತೆಂಗನ್ನಡಿಗರ ಗಾವಿಲದ(ಹಳ್ಳಿಗರ ಅಥವಾ ಗ್ರಾಮ್ಯ) ಕ್ರಿಯಾರೂಪಗಳಾಗುತ್ತವೆ.ಅಂದರೆ ಅವನೆ/ಅವ್ನೆ, ಅವಳೆ/ಅವ್ಳೆ, ಅವೆ, ಅವರೆ/ಅವ್ರೆ ಇವು ಕ್ರಮವಾಗಿ ಆ ಸರ್ವನಾಮಗಳಿಗೆ ಅಥವಾ ಏಕವಚನ ಬಹುವಚನದಲ್ಲಿ ನಾಮಪದಗಳಿಗೆ ಕ್ರಿಯಾರೂಪಗಳು. ಅದು ಎಂಬುದಕ್ಕೆ ಮಾತ್ರ ಐತೆ ಎಂಬ ರೂಪ.