ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಾಚ್-ಮನ್

"ಥುತ್ ತೇರಿಕಿ, ಬೆಳಗಾತು,ಸುರು ಹಚ್ಕೊ೦ಡೈತಿ ಅರಚಲಿಕ್ಕ, ಯಾ ರಾಜನ ಅರಮನಿ ಕಳ್ಳತನ ಆಗಾಕತ್ತೈತಿ ಅ೦ತೀನಿ, ಆದ್ರರ ನಾ ಹೋಗೇನ ಕಿಶಿಯುದದ ಅಲ್ಲಿ"

ನೀವು ಕೇಳದಿರಿ - 8

* ಮೊಯ್ಲಿ ಪದಚ್ಯುತರಾದರು. ಚುನಾವಣೆಯಲ್ಲೂ ಸೋತರೆ ಆಗ?

- ’ರಾಮಾಯಣ ಮಹಾನ್ವೇಷಣಂ’ ಮಹಾಕಾವ್ಯ ಬರೆದು ಮುಗಿಸಿರುವ ಮಹಾಕವಿ ’ಮಹಾಭಾರತ ಮಹಮಹಾನ್ವೇಷಣಂ’ ಮಹಮಹಾಕಾವ್ಯ ಆರಂಭಿಸಬಹುದು!

+++

* ಮೊಯ್ಲಿ ತಮ್ಮದು ಪದಚ್ಯುತಿ ಅಲ್ಲ ಅಂತಾರೆ?!

- ಹಾಗಾದರೆ ಅದು ರಾಮಾಯಣ!

+++

* ಮೊಯ್ಲಿ ಸಾಹೇಬರದು ಅಂದು ಟೇಪ್ ಹಗರಣ, ಇಂದು?

- ಟ್ರ್ಯಾಪ್ ಹಗರಣ!

+++

ಕರ್ನಲ್ ಪ್ಯಾನಿಕ್

ನೀವು ವಿಂಡೋಸ್ OS use ಮಾಡ್ತೀರಾ? ಹಾಗಿದ್ದ್ರೆ ನಿಮಗೆ ವಿಂಡೋಸ್ ನ famous BSOD ಬಗ್ಗೆ ಗೊತ್ತಿರಲೇಬೇಕು. ನೀವು ಲಿನಕ್ಸ OS ನು use ಮಾಡ್ತೀರಾ? ಲಿನಕ್ಸ ನ BSOD ಯಾವುದು ಗೊತ್ತಾ?

ಮಡಿವಾಳ

ತಲೆಬರಹ ಓದಿ, ಬೆಂಗಳೂರಿನ ಮಡಿವಾಳದ ಬಗ್ಗೆ ಬರೆಯಲಿಕ್ಕೆ ಹೊರಟೆ ಅಂದುಕೊಳ್ಳಬೇಡಿ. ಮಡಿವಾಳ ಹಕ್ಕಿಯ ಕೆಲವು ಚಿತ್ರಗಳನ್ನ ತೋರಿಸೋಣ ಅಂತ. ಕಳೆದವಾರ ಊರಿಗೆ ಹೋಗಿದ್ದಾಗ ಮಧ್ಯಾಹ್ನ ಗಡದ್ದಾಗಿ ಪತ್ರೊಡೆ ತಿಂದು, ಹಾಗೇ ತೂಕಡಿಸ್ತಾ ಇರಬೇಕಾದರೆ ಕಿಟಕಿಯಿಂದ ಹಳೇ ದೋಸ್ತಿಗಳ ಕಿರುಚಾಟ. ಕಿಟಕಿಯಿಂದ ನೋಡಿದಾಗ ಮಡಿವಾಳದ ದಂಪತಿಗಳಿಬ್ಬರು ತುಂಬಾ ಸಂತೋಷದಿಂದ ತನ್ನ ಹೊಸ ಹೆಣ್ಣು ಮಗಳನ್ನು ತೋರಿಸ್ತಾ ಇದ್ವು. ನಾನೂ ನೋಡಿ ಹೀಗೇ ವಾಪಾಸ್ ಬಂದು ಮಲಗಿಕೊಳ್ಳೋಣ ಅಂತಿದ್ದೆ.

ಅಷ್ಟರಲ್ಲಿ ಅಪ್ಪ ಹಕ್ಕಿ ಬಂದು "ಕೆಲಸಕ್ಕೆ ಬಾರದ ಕೀಟಗಳ ಫೋಟೋ ಎಲ್ಲಾ ತೆಗೀತೀಯ, ನನ್ನ ಮಗಳ ಫೋಟೋ ತೆಗೆಯೋದಿಲ್ವ ಅಂತ ಕೇಳ್ತು". ಅದಕ್ಕುತ್ತರವಾಗಿ ನಾನು "ದಿನ ಪೂರ್ತಿ ಆರಿಸ್ಕೊಂಡು ಹೊಟ್ಟೆ ತುಂಬ ತಿಂದು ತೇಗೋ ಕೀಟಗಳು ನಿನಗೆ ಕೆಲಸಕ್ಕೆ ಬರದೇ ಇರೋವಾ" ಅಂತ ಗದರಿಸಿದೆನಾದರೂ ಕ್ಯಾಮರಾ ಹಿಡಿದುಕೊಂಡು ಹೊರಗೆ ಹೋದೆ.

ಇವ್ರೇ ನಂಜೊತೆ ಮಾತಾಡಿದ ತಂದೆ ಹಕ್ಕಿ

ಊಟದ ಸಮಯ

ಏನ್ ಜನಾನೋ ಯಪ್ಪಾ...  ಊಟ ಮಾಡೋ ಟೈಮ್ ಅಲ್ಲಿ ಇಡ್ಲಿ ತಿಂತಾ ಕೂತಿದಾರೆ... ಅಂತ ಯೋಚಿಸುತ್ತಾ ಅಲ್ಲಿ ತಿನ್ನುತ್ತಾ ಕುಳಿತವ್ರನ್ನ ನೋಡ್ತಾ  ವೆಜ್ ಪಾರ್ಕ್ ಒಳಗೆ ಹೋದೆ.

ಬದುಕು ಭಾವ ಮತ್ತು ನಾನು - ೫ ( ನನ್ನ ಮೊದಲ ಪ್ರೀತಿ (ಪ್ಯಾರ್ ,ಮೊಹಬ್ಬತ್ ) ಹಾಗೂ ಅದು ಮುರಿದು ಬಿದ್ದಿದ್ದು )

ಊರಿಗೆ ಹೋದಾಗಲೆಲ್ಲ ತೀರ್ಥಹಳ್ಳಿಯ ರಸ್ತೆಗಳಲ್ಲಿ ಒಂದು ಸುತ್ತು ಹೋಗಿಬರುವುದು ನನ್ನ ಅಭ್ಯಾಸ .ಈ ಸಲ ಸ್ವಲ್ಪ ಕೆಲಸ ಇದ್ದಿದ್ದರಿಂದ ಬೆಳಿಗ್ಗೆ ಬೇಗನೆ ಹೊರಡಲನುವಾದೆ . ೮.೩೦ ಕ್ಕೆ ಬಸ್ , ನಮ್ಮ ಕಡೆ ಸಾಮಾನ್ಯವಾಗಿ ೭.೩೦ ರಿಂದ ೯.೩೦ ರ ವರೆಗೆ ಬರುವ ಎಲ್ಲ ಬಸ್ಸುಗಳಿಗೆ ಕಾಲೇಜ್ ಬಸ್ ಎಂದೇ ನಾಮಕರಣ (ವಿಶೇಷ ಅಂದ್ರೆ ಆ ಸಮಯದಲ್ಲಿ ಬರೋದು ೩ ಬಸ್ ಮಾತ್ರ ).

೨೨ನೇ ಮೇ ೨೦೦೯ಱಂದು ಕುಜಚಂದ್ರಯುತಿ

೨೨ನೇ ಮೇ ೨೦೦೯ಱಂದು ಬೆಳಿಗ್ಗೆ ೪.೧೫ಱಿಂದ ಸೂರ್ಯೋದಯಕ್ಕೆ ಮುನ್ನ ೬.೦೦ಱವರೆಗೆ ಕುಜಚಂದ್ರಯುತಿ ನೋಡಿ. ಪೊನ್ನಂಪೇಟೆಯಲ್ಲಿ ಅಂದು ಆಗಸ ಈ ಚಿತ್ರದಲ್ಲಿರುವಂತಿದೆ.

೨೧ನೇ ಮೇ ೨೦೦೯ಱಂದು ಶುಕ್ರಚಂದ್ರಯುತಿ

೨೧ನೇ ಮೇ ೨೦೦೯ಱಂದು ಬೆಳಿಗ್ಗೆ ೪.೧೫ಱಿಂದ ೬.೦೦ಱವರೆಗೆ ಮೂಡಣದಲ್ಲಿ ಸೂರ್ಯೋದಯಕ್ಕೆ ಮುನ್ನ ಚಂದ್ರಶುಕ್ರಯುತಿ ನೋಡಿ. ಪೊನ್ನಂಪೇಟೆಯಲ್ಲಂದು ಆಕಾಶ ಈ ರೀತಿ ಇದೆ.

ಗುರುಚಂದ್ರಯುತಿ

೧೭ನೇ ಮೇ ೨೦೦೯ಱಂದು ರಾತ್ರಿ ೧.೨೭ಱಿಂದ ಬೆಳಿಗ್ಗೆ ೬.೦೦ಱವರೆಗೆ ಗುರುಚಂದ್ರರು ನೆತ್ತಿಯ ಮೇಲೆ ಬರುವ ತನಕ ಸೂರ್ಯೋದಯಕ್ಕೆ ಮುನ್ನ ಗುರುಚಂದ್ರಯುತಿ ನೋಡಿ.