ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಪ್ಪು ಹಣವೂ ಕಂಗಾಲು ನಾಯಕರೂ...

ಈ ಲೋಕಸಭಾ ಚುನಾವಣೆಯಲ್ಲಿ ಭಾರಿ ಸುದ್ದಿಯಾಗುತ್ತಿರುವುದೆಂದರೆ ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ಭಾರತಕ್ಕೆ ತಂದೇ ಸಿದ್ಧ ಎಂದು ರಾಜಕೀಯ ಪಕ್ಷವೊಂದು ಪಣತೊಟ್ಟಿದೆ!

ಮಾಧ್ಯಮಗಳಲ್ಲಿ ಈ ಬಗ್ಗೆ ಭಾರಿ ಚರ್ಚೆಯೂ ಆಗಿದೆ. ಪರ-ವಿರೋಧ ಮಾತನಾಡುವವರ ಮೂತಿಗೆ ಮೈಕ್ ತಿವಿದು ಅವರು ಉದುರಿಸಿದ್ದನ್ನೆಲ್ಲ ನಮಗೆ ರವಾನಿಸಿಯೂ ಆಗಿದೆ!

ಹಮ್ ಹೋಂಗೆ ಕಾಮಯಾಬ್...

ಹಮ್ ಹೋಂಗೆ ಕಾಮಯಾಬ್...

 

ನಾವ್ ಬಂದೇ ಬರ್ತೇವೇ

ನಾವ್ ಬಂದೇ ಬರ್ತೇವೇ

ನಾವ್ ಬಂದೇ ಬರ್ತೇವ್ ನಿಮ್ಮುಂದೇ

ಓಹೋ ಮತದಾರರೇ,

ವೋಟು ಕೇಳೋಕೇ

ನಾವ್ ಬಂದೇ ಬರ್ತೇವ್ ನಿಮ್ಮುಂದೇ|

 

ಕಾಸೇನೂ ಬೇಕಿಲ್ಲಾ

ಕಾರಣಾನೂ ಬೇಕಿಲ್ಲಾ

ಭರವಸೆ ಕೊಡೊಕೇನಂತೇ

ಓಹೋ ನಾಚಿಕೆ ಬಿಟ್ಟೂ,

ಮಾನ ಮರ್ಯಾದೆ ಬಿಟ್ಟೂ

ನಾವ್ ಬಂದೇ ಬರ್ತೇವ್ ನಿಮ್ಮುಂದೇ|

 

ದೂರ್ ಹೇಳೋಕೇನಂತೇ

ಸಾವಿರಾನೂ ಹೇಳ್ತಾರೇ

ಚಿಂತೆಬಿಡಿ ವಿರೋಧಿಗಳ್ದೂ

ಆಹಾ ನಿಮ್ಗೇ ಗೊತ್ತಿದೇ,

ಅವ್ರ್ನಮ್ಗಿಂತ್ ದೊಡ್ಡ್ ಕಳ್ರೂ

ಆದ್ರಿಂದ್ ಬಂದೇ ಬರ್ತೆವ್ ನಿಮ್ಮುಂದೇ|

 

ಮತದಾರ ಬಾರಪ್ಪಾ

ವಿವಿಧತೆಯಿಂದ ಕೃಷಿ ಸಮೃದ್ಧ (ರೈತರೇ ಬದುಕಲು ಕಲಿಯಿರಿ-೧೬)

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ಜಗತ್ತಿನಲ್ಲಿ ಎಷ್ಟೊಂದು ವೈವಿಧ್ಯತೆ ಇದೆ. ಬರೀ ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಉತ್ತರ ಕರ್ನಾಟಕದ ತುತ್ತತುದಿಯಲ್ಲಿರುವ ವಿಜಾಪುರದಲ್ಲಿ ಹಣ್ಣಿನ ಗಿಡಗಳು ಸಮೃದ್ಧವಾಗಿ ಬೆಳೆಯುತ್ತವೆ. ನಿಂಬೆ, ಅಂಜೂರ, ದ್ರಾಕ್ಷಿಯಂತಹ ಬೆಳೆಗಳು ಇಲ್ಲಿ ಚೆನ್ನಾಗಿ ಬರುತ್ತವೆ. ಕೊಂಚ ಕೆಳಕ್ಕೆ ಬಂದರೆ ನೀರಾವರಿ ಆಶ್ರಯದಲ್ಲಿ ಕಬ್ಬು ಮುಖ್ಯ ಬೆಳೆಯಾಗುತ್ತದೆ. ಕೊಪ್ಪಳದಂತಹ ಕಡಿಮೆ ಮಳೆ ಬೀಳುವ ಕಡೆ ಮೆಕ್ಕೆಜೋಳ (ಗೋವಿನಜೋಳ), ಜೋಳ, ಸಜ್ಜೆ ಮತ್ತು ನವಣೆಗಳ ಜತೆಗೆ ಹಣ್ಣಿನ ಬೆಳೆಗಳಾದ ದಾಳಿಂಬೆ ಮತ್ತು ಅಂಜೂರ ಮುಖ್ಯವಾಗುತ್ತವೆ.

ಪಕ್ಕದ ರಾಯಚೂರು ಮತ್ತು ಬಳ್ಳಾರಿಯ ಕಡೆ ನೀರಾವರಿ ಆಶ್ರಯದಲ್ಲಿ ಬತ್ತ ಮುಖ್ಯ ಬೆಳೆ. ಗದಗ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಹತ್ತಿ, ಉಳ್ಳಾಗಡ್ಡಿ, ಮೆಣಸಿನಕಾಯಿ ಮುಖ್ಯ ಬೆಳೆಗಳಾದರೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಂಬಾರ ಬೆಳೆಗಳು, ಅಡಿಕೆ, ಮೆಣಸು, ಏಲಕ್ಕಿ ಮುಖ್ಯ ಬೆಳೆಗಳು. ಇಂಥವೇ ಬೆಳೆಗಳು ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರದಲ್ಲಿಯೂ ಕಾಣಸಿಗುತ್ತವೆ. ಇನ್ನು ಪೂರ್ವದ ಜಿಲ್ಲೆಗಳಾದ ದಾವಣಗೆರೆ ಮತ್ತು ಚಿತ್ರದುರ್ಗಗಳಲ್ಲಿ ಮತ್ತೆ ಮೆಕ್ಕೆಜೋಳ, ಜೋಳ, ರಾಗಿಯಂತಹ ಬೆಳೆಗಳು ಪ್ರಮುಖವಾಗಿ ಕಂಡರೆ ಕೋಲಾರದಂತಹ ಬರಪೀಡಿತ ಜಿಲ್ಲೆಯಲ್ಲಿ ತರಕಾರಿ ಮತ್ತು ಹಣ್ಣಿನ ಬೆಳೆಗಳು ವಿಜೃಂಭಿಸುತ್ತವೆ.

ಮಾತಾಪಿತರಿಗೆ ಎಲ್ಲಿವೆ ಇನ್ನು ಇದಕ್ಕಿಂತ ಖುಷಿಯ ದಿನಗಳು!!!

ಅಂದಿತ್ತು ನನಗೆ ಓದುಗರೇ ನಿಮ್ಮೆಲ್ಲರ ಹರಕೆಯ ನಿರೀಕ್ಷೆ*
ಏಕೆಂದರೆ ಶುರುವಾಗಿತ್ತಂದು ಮಗಳು ಸ್ಮಿತಾಳಿಗೆ ಪರೀಕ್ಷೆ

ಮಗಳು ಜಯಿಸಿದ್ದಾಳೆ ನಮ್ಮ ನಿರೀಕ್ಷೆಯ ಸುಳ್ಳಾಗಿಸದೇ
ಇಂದು ಹೇಗೆ ಸುಮ್ಮನಿರಲಿ ಖುಷಿಯ ನಾ ಹಂಚಿಕೊಳ್ಳದೇ

ನಿನ್ನೆ ೨೧ನೇ ವರುಷಕ್ಕೆ ಕಾಲಿಡ್ತು ನಮ್ಮ ದಾಂಪತ್ಯ ಜೀವನ
ಒಂದು ದಿನ ಮೊದಲೇ ಸಿಕ್ತು ಮಗಳಿಂದೆಮಗೆ ಬಹುಮಾನ

ವೂಲ್ಫಾಮ್ ಆಲ್ಫಾ ಎಂಬ ಸರ್ವಜ್ಞ

ಗೂಗಲ್ ಶೋಧ ಸೇವೆಯನ್ನು
ಬಳಸದವರೇ ಇಲ್ಲ. ಒಂದು ಪದಗುಚ್ಚ ನೀಡಿದಾಗ
, ಅಂತ ಪದಗುಚ್ಚ ಇರುವ ಅಂತರ್ಜಾಲ ಪುಟಗಳ ಪಟ್ಟಿಯನ್ನು ನೀಡುವ
ಮಾಯಕವನ್ನದು ಕ್ಷಣಮಾತ್ರದಲ್ಲಿ ಮಾಡುತ್ತದೆ. ನಿಮಗೆ ಬೇಕಾದ ಮಾಹಿತಿಯು ಪಟ್ಟಿಯ ಮೊದಲಿಗೇ ಇರುವ ಸಾಧ್ಯತೆಯೇ

ಗ್ರಾಹಕನ ಸ್ಥಿತಿ-ಗತಿ, ’ಗ್ರಾಹಕ ಸಂಸ್ಕೃತಿ’

ಈಚೆಗಷ್ಟೇ ’ವಿಶ್ವ ಗ್ರಾಹಕ ಹಕ್ಕುಗಳ ದಿನ’ವನ್ನು ದೇಶಾದ್ಯಂತ ಆಚರಿಸಲಾಯಿತು. ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪತ್ರಿಕೆಗಳಲ್ಲಿ ಆಕರ್ಷಕ ಜಾಹಿರಾತುಗಳನ್ನು ಪ್ರಕಟಿಸಿದವು. ಸರ್ಕಾರಿ ಮಟ್ಟದಲ್ಲೂ ಮತ್ತು ವಿವಿಧ ಸ್ವಯಂಸೇವಾ ಸಂಸ್ಥೆಗಳ ವತಿಯಿಂದಲೂ ಸಮಾರಂಭಗಳನ್ನು ನಡೆಸಲಾಯಿತು.

ಸುಪ್ರಸಿದ್ಧ ಗಾಯಕ, ಶ್ರೀ. ಪುತ್ತೂರ್ ನರಸಿಂಹ ನಾಯಕ್, ಹಾಗೂ ಬಳಗದವರ " ಭಕ್ತಿ ಲಹರಿ, " ಸಂಗೀತ ಕಾರ್ಯಕ್ರಮ, ಮುಂಬೈನಲ್ಲಿ !

ಮೇ ೧೦ ರಂದು, (ರವಿವಾರ) ಮುಂಬೈನಗರದ ’ಸಾಂತಾಕೃಝ್ (ಪೂ) ಪ್ರಭಾತ್ ಕಾಲೋನಿ ’ ಯಲ್ಲಿರುವ, " ಪೇಜಾವರ ಸ್ವಾಮಿಗಳಮಠ " ದ ವಿಶಾಲ ಸಭಾಗೃಹದಲ್ಲಿ, ಸಾಯಂಕಾಲ ೬-೩೦ ಕ್ಕೆ, ’ ಭಕ್ತಿ ಲಹರಿ ಸಂಗೀತ ಕಾರ್ಯಕ್ರಮ ’ ವನ್ನು ನಡೆಸಿಕೊಟ್ಟವರು, ಶ್ರೀ. ಪುತ್ತೂರ್ ನರಸಿಂಹ ನಾಯಕ್, ಹಾಗೂ ಬಳಗದವರು. ನಾಯಕರಿಗೆ, ಸಮರ್ಥ ಪಕ್ಕ-ವಾದ್ಯ ಸಹಾಯವನ್ನು ನೀಡಿದ ಕಲಾವಿದರು :

ಶ್ರೀ ಜಯತೀರ್ಥ- ತಬಲಾ

ಊರ ಮದುವೆ ಭಾಗ-೩

ಮೇಲಿನ ಶೀರ್ಷಿಕೆಯಡಿಯಲ್ಲಿ ಎರಡು ಲೇಖನಗಳು ಈಗಾಗಲೇ ಪ್ರಕಟವಾಗಿವೆ. ಕಳೆದ ಮೇ ೬ ರಂದು ಈ ಮದುವೆ ಯಶಸ್ವಿಯಾಗಿ ನಡೆದಿದೆ.ಮದುವೆಯ ಕೆಲವು ವಿಶೇಷಗಳು ಸಂಪದಿಗರಿಗಾಗಿ.

* ಊರಜನರೇ ನಿಮಿಸಿದ ಪೆಂಡಾಲಲ್ಲಿ ಮದುವೆ

* ಕೆಲವು ತರುಣರು ಬಾಳೆಕಂದು ಮಾವಿನ ಸೊಪ್ಪು ಗಳಿಂದ ನಿರ್ಮಿಸಿದ್ದ ಮದುವೆ ಮಂಟಪ ಜನರ ಮನ ಸೆಳೆದಿತ್ತು