ಊರ ಮದುವೆ ಭಾಗ-೩

ಊರ ಮದುವೆ ಭಾಗ-೩

ಬರಹ

ಮೇಲಿನ ಶೀರ್ಷಿಕೆಯಡಿಯಲ್ಲಿ ಎರಡು ಲೇಖನಗಳು ಈಗಾಗಲೇ ಪ್ರಕಟವಾಗಿವೆ. ಕಳೆದ ಮೇ ೬ ರಂದು ಈ ಮದುವೆ ಯಶಸ್ವಿಯಾಗಿ ನಡೆದಿದೆ.ಮದುವೆಯ ಕೆಲವು ವಿಶೇಷಗಳು ಸಂಪದಿಗರಿಗಾಗಿ.

* ಊರಜನರೇ ನಿಮಿಸಿದ ಪೆಂಡಾಲಲ್ಲಿ ಮದುವೆ

* ಕೆಲವು ತರುಣರು ಬಾಳೆಕಂದು ಮಾವಿನ ಸೊಪ್ಪು ಗಳಿಂದ ನಿರ್ಮಿಸಿದ್ದ ಮದುವೆ ಮಂಟಪ ಜನರ ಮನ ಸೆಳೆದಿತ್ತು

*ಹೊಳೆನರಸೀಪುರದ ಅಧ್ಯಾತ್ಮಪ್ರಕಾಶ ಕಾರ್ಯಾಲದಿಂದ ಬಂದಿದ್ದ ವಿದ್ಯಾರ್ಥಿಗಳಿಂದ ವೇದ ಪಠಣ ಜನರ ಮನ ಸೆಳೆದಿತ್ತು

* ಮದುವೆಯ ಹಿಂದಿನದಿನ ಸಂಜೆ ೫ ಗಂಟೆಗೆ ಮದುವೆಯ ಮಂಟಪದಲ್ಲೇ ತುಮಕೂರಿನ ರಾಮಕೃಷ್ಣ-ವಿವೇಕಾನಂದಾಶ್ರಮದ ಪೂಜ್ಯ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರಿಂದ ನಡೆದ " ಸಾರ್ಥಕ ಬದುಕು" ಉಪನ್ಯಾಸ ಅವಿಸ್ಮರಣೀಯ.

* ಮೇ ೫ ರ ರಾತ್ರಿ ೮.೦೦ ಗಂಟೆ ಸುಮಾರಿಗೆ ಹರಿಹರಪುರ ತಲುಪಿದ ವರನಕಡೆಯವರಿಗೆ ಊರಿನ ಜನರಿಂದ ಸಡಗರದ ಸ್ವಾಗತ.ಮಂಗಳವಾದ್ಯ ಸಮೇತ ಆಕರ್ಶಣೀಯ ಮೆರವಣಿಗೆ.

* ಪೆಂಡಾಲಿನಲ್ಲಿ ನೆಲದ ಮೇಲೆ ಕುಳಿತು ಊಟಮಾಡುವಂತೆ ಸಮತಟ್ಟಾಗಿರದ ಕಾರಣ ಟೇಬಲ್ ವ್ಯವಸ್ಥೆ ಇತ್ತು. ಆದರೆ ಸಂಪ್ರದಾಯಸ್ಥರು ನೆಲದ ಮೇಲೆ ಊಟ ಮಾಡ ಬಯಸಿದಾಗ ಅಕ್ಕ ಪಕ್ಕದ ಮನೆಗಳಲ್ಲಿ ಊಟ ಬಡಿಸುವಾಗ ಊರ ತರುಣರು ಪಟ್ಟ ಕಷ್ಟ ಹೇಳತೀರದು.ಚಪ್ಪಲಿ ಹಾಕಿಕೊಂಡು ಊಟ ಬಡಿಸುವಂತಿಲ್ಲ. ಚಪ್ಪಲಿ ಇಲ್ಲದೆ ಓಡಾಡಲು  ಯೋಗ್ಯವಲ್ಲದ ರಸ್ತೆ. ಆದರೂ ಹಸನ್ಮುಖಿಗಳಾಗಿದ್ದುಕೊಂಡು ಅವರು ಮಾಡಿದ ಸೇವೆಗೆ ಬೆಲೆ ಕಟ್ಟಲಾಗದು.

* ವಿವಾಹ ವಿಧಿಗಳು ಮುಗಿದ ಮೇಲೆ ಶ್ರೀ ಚಂದ್ರಮೌಳಿ ಅವಧಾನಿಗಳಿಂದ ವಿವಾಹ ಸಂಸ್ಕಾರದ ಬಗ್ಗೆ ಒಂದು ಉಪನ್ಯಾಸ.

* ಚಿತ್ರಪುಟದಲ್ಲಿ ಇನ್ನೂ ಕೆಲವು ಚಿತ್ರಗಳಿವೆ.